ಹಸಿವಿನ ಬೇನೆಗೆ ಕರುಳು ಸುಡುವಾಗ
ಬೇಡುವ ಕೈಗಳು ನಡಗುವಾಗ
ಎರಡೂ ಕಣ್ಣಿಂದ ಕಣ್ಣೀರು ಹರಿಯುವಾಗ
ಉಸಿರಾಡುವ ಗಾಳಿಗೂ ನಾ ಬೇಡವಾದಾಗ
ದೇವರೇ ,ನಾನೇಗೆ ನಿನ್ನ ಜಪಿಸಲಿ
ಗರ್ಭಗುಡಿಯಲಿ ನಿನ್ನ ಪೂಜೆಯಲಿ
ನೂರಾರು ನಾಣ್ಯ, ನಿನ್ನ ಆರುತಿ ತಟ್ಟೆಯಲಿ
ಚಳಿಯರಲಿ,ಸುಡುವ ಬಿಸಿಲಿರಲಿ
ನನ್ನ ಮುಖವೇ ಕಾಣುವುದು ನನ್ನ ಖಾಲಿ ತಟ್ಟೆಯಲಿ
ದೇವರೇ , ನೀನಿರುವುದು ನಾನೇಗೆ ನಂಬಲಿ
ಕೊನೆಗಳಿಗೆಯಲ್ಲೂ ಸಿಗಬಾರದೇ ಅಂಬಲಿ
ಸಾಯುವವರೆಗೆ ನಾನೇಗೆ ಬದುಕಲಿ
ನಾ ಬದಕಿದ್ದು ಸತ್ತಂತೆ ಈ ಜಗದಲಿ
ದೇವರೇ, ನಾನೆಂದು ನಿನ್ನ ಸೇರಲಿ ..?
#ಚಿತ್ರಕೃಪೆ :Google