Month: May 2014

ಕವಿತೆ

Image

ಕವಿಗೆ ಸಾವಿದೆ
ಆತನ ಕವನಕ್ಕಲ್ಲ
ಕವಿತೆ -ಎಂದೂ ಆರದ ಕವಿತೆ

ಅಸ್ತಿತ್ವ

Image

ಮೊತ್ತೊಬ್ಬರಂತೆ ನಾನಾಗಲು ಹೊರಟಾಗ
ನನ್ನ ಸೋಲು.
ನಾನು ನಾನಾಗಿರುವಾಗ ಮಾತ್ರ
ನನ್ನ ಗೆಲುವು.
ನನ್ನ ಗೆಲುವು – ನನ್ನ ಅಸ್ತಿತ್ವ

ಅಂಧ ಯಾರು ?

Image

ಒಬ್ಬ ಅಂಧ ತನ್ನ ಕನಸುಗಳನ್ನು ಬೆನ್ನಟ್ಟಿ ಯಶಸ್ವಿಯಾಗುತ್ತಾನೆ ..
ಎರಡೂ ಕಣ್ಣುಗಳಿರುವ ನಾವು ನಮ್ಮ ಕನಸುಗಳನ್ನೇ ಮರೆಯುತ್ತೇವೆ ..
ನಿಜವಾದ ಅಂಧ ಯಾರು ಎಂಬುದು ಈಗ ತೆರದಿಟ್ಟ ಸತ್ಯ

ತಿರುವು

Image

ಹಾದಿ ಬದಲಿಸಿದೆ ಮನ
ಹೊಸತು ಹುಡುಕುತಿದೆ
ಗುರಿ ಗೊತ್ತಿಲ್ಲ
ಗುರು ಹಿಂದಿಲ್ಲ
ಅಸ್ಪಷ್ಟ ಈ ಜೀವನ ..

ಅಮ್ಮ

Image

ನಿಮ್ಮನ್ನು ಹೆತ್ತು ಹೊತ್ತು ಸಾಕಿದ ಹೆತ್ತವರನ್ನು 
ನೀವು ಹೊತ್ತು ತಿರುಗದಿದ್ದರೂ ಪರವಾಗಿಲ್ಲ 
ಹೊರೆ ಎಂದು ಮನೆಯಿಂದ ಹೊರ ಹಾಕದಿರಿ 
ಯಾರೂ ಕೊಡದ ಪ್ರೀತಿ ಅವರದು 

ಹೆಸರು


ಉಸಿರು ಇರುವವರೆಗೆ ಮಾತ್ರ 
ನಮ್ಮ ಹೆಸರು ನಮ್ಮ ಜೊತೆ 
ಉಸಿರು ನಿಂತ ಬಳಿಕ 
ನಮ್ಮ ಹೆಸರು ‘ಶವ’ವಂತೆ!

ವಿಚಿತ್ರ ಜೀವನ..

Image

ರಸ್ತೆ ಬದಿ ಬೇಡುವ ತಟ್ಟೆಗಳಲ್ಲಿ
ಒಂದೂ ಅನ್ನದ ಅಗಳು ನಾ ಕಾಣಲಿಲ್ಲ
ಮದುವೆ ಮಂಟಪದ ನೆಲದ ಮೇಲೆ
ರಾಶಿ ರಾಶಿ ‘ಅಕ್ಕಿ’