Month: August 2014

ಐಟಿ ವಚನ

ಕೈ ತುಂಬಾ ಸಂಬಳ ನೀಡುವ ಕೆಲಸವಿರಲು
ಹೆಂಡತಿ ,ಮಕ್ಕಳು ಹೊರುವಷ್ಟು ಕಾರು ಇರಲು
ವಾಸ್ತು ಪ್ರಕಾರ ಒಂದು 2BHK ಮನೆಯಿರಲು
ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ
– ಐಟಿತಜ್ಞ

ಸೂರ್ಯನ ಮುಳುಗುವ ಮುನ್ನ

ಪ್ರಶ್ನೆ

ಬದುಕನ್ನು ಪ್ರಶ್ನಿಸಬೇಡ

ಉತ್ತರ ನಿನಗೆ ಸಿಗದು

ಬದುಕಿನ ಪ್ರಶ್ನೆಗೆ

ನೀನು ಉತ್ತರವಾಗು

ನಿದ್ದೆ

ನಿದ್ದೆ ಕಣ್ಣುಗಳಿಗಿರಲಿ
ಆದರೆ
ಕನಸುಗಳಿಗಲ್ಲ

ಕನಸು

ಯಾವ ಕನಸು ನಿಮ್ಮನ್ನು ನಿದ್ದೆ ಮಾಡಲು ಬಿಡುವುದಿಲ್ಲವೋ
ಅದು ಕನಸಲ್ಲ
ಯಾವ ಕನಸು ನಿಮ್ಮನ್ನು ನಿದ್ದೆಗೆ ತಳ್ಳುತ್ತದೆಯೋ
ಆ ಕನಸು ನನಸಾಗಲ್ಲ

‘ನಂಬಿಕೆ’ ರಹಿತ ಇರದು ಪ್ರೀತಿ ಶಾಶ್ವತ

ಸಿಗ್ನಲ್

ಕೆಂಪು ಸಿಗ್ನಲ್ ಬಿದ್ದು
ರಸ್ತೆಬದಿ ಭಿಕ್ಷೆ ಬೇಡುವವರಿಗೆ
ಗ್ರೀನ್ ಸಿಗ್ನಲ್ ಕೊಟ್ಟ ಹಾಗೆ
ಒಬ್ಬರಿಗೆ ಟ್ರಾಫಿಕ್ ಸಂಕಷ್ಟ
ಇನ್ನೊಬರಿಗೆ ಊಟಕ್ಕೆ ಸಂಕಟ

ಮಳೆಯೇ

ಬೆಂಡಾದ ಬೆನ್ನು
ನೊಂದ ಕಣ್ಣು
‘ಸಾಲ’ಗಳ ಕಂತೆ
ಸಾಲದು ಚಿಂತೆ
ಮುಗಿಯದ ಸಂತೆ
ಈ ಉಸಿರು ಬದುಕೋಕೆ
ಅದೆಷ್ಟು ಬೆವರು ಹರಿಸಲಿ

ನೀ ಬರೆದಿದ್ದಕ್ಕೆ ಬೆಳೆಯ
ಮುಂದೆ ಕಣ್ಣೀರಿಟ್ಟೆ
ಉಪ್ಪು ನೀರಿಗೆ ಅದೂ
ಕೊಡ ಬೆಳಯಲಿಲ್ಲ
ನಾಲ್ಕು ಹನಿಯಾದರೂ ಚೆಲ್ಲಿ
ನಿಲ್ಲಿಸು ನಿನ್ನ ಚೆಲ್ಲಾಟ
ಮಕ್ಕಳು ಕಾಯ್ತಿವೆ ನೀಡು
ಒಂದೊತ್ತಿಗೆಯಾದರೂ ಊಟ

ಕೈ ಮುಗಿದು ಬೇಡುವೆ
ಕೈ ಹಿಡಿ ನನ್ನನು
ಬಗೆ ಹರಿಸು ಈ ಒಗಟನು
ಹರಿಸು ನಾಲ್ಕು ಹನಿಯನು

ಕಪ್ಪು ಕಪ್ಪಾಗಿ ಒಟ್ಟಾಗಿ
ದಪ್ಪವಾಗಿ ಬಾ
ಧರೆಯ ಧಗೆಗೆ
ಹಸಿದ ಹೊಟ್ಟೆಗೆ
ಇಳೆಯಾಗಿ ಮಳೆಯಾಗಿ ಬಾ
ರೈತನ ಸ್ನೇಹಿತನಾಗಿ ಬಾ

ಕಾದಂಬರಿ

ಬದುಕೆಂಬ ಲೇಖನಿಗೆ
ನೆನಪುಗಳ ಶಾಯಿ ತುಂಬಿಸಿ
‘ಛಲ’ವೆಂಬ ಮುನ್ನುಡಿಯೊಂದಿಗೆ
‘ಸಾಧನೆ’ ಎಂಬ ಕಾದಂಬರಿ ಬರೆಯೋಣ

ದೈತ್ಯ ಅಲೆಗಳಿಗೆ ಎದೆ ಒಡ್ಡಿ ಮುಂದೆ ಸಾಗುವ ‘ಹಡಗು’