Day: August 6, 2014

ಜಾತ್ಯಾತೀತ

ಹುಟ್ಟಿಗೆ ಗೊತ್ತಿಲ್ಲ
ನಾಮ ,ವಿಭೂತಿ, ದಾರ
ಸಾವಿಗೆ ಗೊತ್ತಿಲ್ಲ
ಗಂಧ , ಕುಂಕುಮ ,ಜನಿವಾರ
ಉಸಿರು ನಿಂತರೆ
ಹೆಸರಾಗುವುದು ‘ಶವ’
ಮಣ್ಣಲ್ಲೇ ಮಣ್ಣಾಗುವುದು ಜೀವ
ಈ ಸತ್ಯ ಗೊತ್ತಿದ್ದರೂ
ಧರ್ಮ, ಜಾತಿ , ಭಾಷೆಗಳಿಗೇಕೆ
ಹೊಡೆದಾಟ ,ಬಡಿದಾಟ
ನೆಲ ,ಜಲಗಳಿಗೇಕೆ
ಕಚ್ಚಾಟ ,ಕಿರುಚಾಟ ?