ನೆನಪುಗಳ ಬುತ್ತಿ ಬಿಚ್ಚಿ
ಭಾವನೆಗಳಿಗೆ ಬಣ್ಣ ಹಚ್ಚಿ
ಒಂದೊಂದು ಬಣ್ಣದಲ್ಲೂ
ನೂರೆಂಟು ಕಾಮನಬಿಲ್ಲು
ಬಂದ ದಾರಿಯ ಮೆಲಕು
ಮಾಡಿದಾಗ ಸುಂದರ ಈ ಬದುಕು
ಹುಟ್ಟಿದ ಊರು
ಮೊದಲ ಗುರು
ಹಳೇ ಸ್ನೇಹ
ಅದೇ ಮೋಹ
ನೆನೆದರೆ ಕಣ್ಣು ಒದ್ದೆ
ಆ ನೆನಪೊಂದು ಸಿಹಿ ಮುದ್ದೆ.
ಬಲು ಸುಂದರ ಆ ನೆನಪು
ನೆನೆದಾಗ ಹೃದಯ ತಂಪು
ಅಮ್ಮ ಕೂಡುತ್ತಿದ್ದ ೧ ರೂಪಾಯಿ
ಅಪ್ಪ ಕೊಡಿಸುತ್ತಿದ್ದ ಮಿಠಾಯಿ
ಬೆನ್ನು ಹತ್ತುತಿದ್ದ ನಮ್ಮನೆ ನಾಯಿ
ಬಲು ಸುಂದರ ಆ ನೆನಪು
ನೆನೆದಾಗ ಹೃದಯ ತಂಪು
ಮತ್ತೆ ಬರುವುದೇ ಆ ಕಾಲ ?
ಬರಲು ಬಿಡುವುದೇ ಕಾಲ ?
ಮುಂಚೆಯೇ ಹಾಗೆ ಇರಬಹುದೇ ಎಲ್ಲರು
ಸೇರಬಹುದೇ ಈ ನೆನಪು ತನ್ನ ತವರು