ನನ್ನ ಹೃದಯ ಆಳಿದೆ
ನನ್ನ ಹೃದಯ
ನಿನ್ನಿಂದ ಆಳಾಗಿದೆ
ನೆನಪುಗಳ ಸಂತೆಯಲ್ಲಿ
ನಿನ್ನ ಕೊಟ್ಟ ನೋವುಗಳ ಕಂತೆ-
ಯಲಿ ಚೂರು ಪಾರು ಉಳಿದಿದೆ ಪ್ರೀತಿ
ಅದುವೂ ಕಳೆದು ಹೋಗುವ ಭೀತಿ
ನನ್ನ ಉಸಿರಿರುವವರೆಗೆ
ನಿನ್ನ ಹೆಸರನ್ನೇ ಜಪಿಸುವೆ
ನಿಲ್ಲು !
ಮತ್ತೆಲ್ಲಿ ಮಾಯವಾಗುವೆ ?
Month: September 2014
ನೀನು ಎಂದರೆ…
ನನ್ನ ಕವನದ ಸಾಲು
ಹೃದಯದ ಬೆಳದಿಂಗಳು
ನಾ ಕಾಯುವ ದಾರಿ
ಹೃದಯ ಕಟ್ಟಿದ ಗೋರಿ
ಕನಸಿನ ಸಾಗರದ ತೀರ
ನನ್ನೊಲವಿನ ಆಕಾರ
ನಾನಿಡುವ ಕಣ್ಣೀರು
ಖುಷಿಯ ಪನ್ನೀರು
ಬಿಕ್ಕಳಿಸುವ ಮೌನ
ಮರಳಿ ಬಾರದ ದಿನ
ನೆನಪುಗಳ ಸಂತೆ
ನಿನ್ನ ನಗು
ನನ್ನ ಹೃದಯ ಆಳಿದೆ
ನನ್ನ ಹೃದಯ
ನಿನ್ನಿಂದ ಆಳಾಗಿದೆ
ನೆನಪುಗಳ ಸಂತೆಯಲ್ಲಿ
ನಿನ್ನ ಕೊಟ್ಟ ನೋವುಗಳ ಕಂತೆ
ಯಲಿ ಚೂರು ಪಾರು ಉಳಿದಿದೆ ಪ್ರೀತಿ
ಅದುವೂ ಕಳೆದು ಹೋಗುವ ಭೀತಿ.
ನನ್ನ ಉಸಿರಿರುವವರೆಗೆ
ನಿನ್ನ ಹೆಸರನ್ನೇ ಜಪಿಸುವೆ
ನಿಲ್ಲು
ಮತ್ತೆಲ್ಲಿ ಮಾಯವಾಗುವೆ ?

ನೀನು
ಅಮವಾಸ್ಯೆ ಹೃದಯಕ್ಕೆ
ಹುಣ್ಣಿಮೆ ಬೆಳಕನು ಚೆಲ್ಲಿ
ನನ್ನ ಬೆಳದಿಂಗಳಾದೆ
ಎದೆಯ ತೋಟದ
ಎಲೆಯ ತುದಿಗೆ
ಮುತ್ತಿಕ್ಕುವ ಇಬ್ಬನಿಯಾದೆ
ಕಣ್ತೆರದು ಕಾಣುವ
ಕನಸಿನ ಪರಿವಿಡಿ
ಪುಟದ ಸಾಲದೆ
ಕನಸಿನ ಮನಸಿಗೆ
ಬದುಕಿನ ಉಸಿರಿಗೆ
ಒಲವಿನ ಹೆಸರಾದೆ
ಹೇಳದ ಮಾತಿನ
ಮೌನದ ಮಾತದೆ
ನನ್ನ ದನಿಯಾದೆ
ಮೌನದ ಇನಿಯಾದೆ
ಒಬ್ಬ ಕವಿಯಾದೆ!
ಬದುಕೆಂಬ ಪ್ರಶ್ನೆಗೆ
ಉತ್ತರ ಹುಡುಕುತ
ನನಗೆ ನಾನೇ ಪ್ರಶ್ನೆವಾದೆ ..
ಬದುಕಿನ ಮೌನಕ್ಕೆ ಪದವಾದೆ
ಅದರ ತೀಕ್ಷ್ಣ ಮಾತಿಗೆ ಹದವಾದೆ
ಒಬ್ಬ ಕವಿಯಾದೆ
ಎಲ್ಲವ ಕಾಣುವ ರವಿಯಾದೆ
ನೆನಪಿನ ತುಪ್ಪ
ಅವಳನ್ನು ಮತ್ತೆ ಕಂಡಾಗ
ಹೃದಯದಲಿ ಉರಿಯುತ್ತಿದ್ದ
ಒಲವಿನ ಗಾಯಕ್ಕೆ
ಅವಳ ನೆನಪಿನ ತುಪ್ಪ ಸುರಿದಂತಾಯ್ತು
ಸೋಲಿನ ಬೆಂಕಿ
ಬಿಡದೇ ಸುಡುವ
ಸೋಲಿನ ಬೆಂಕಿಗೆ
ಕಣ್ಣೀರು ಹರಿಸಿ ನಂದಿಸಬೇಡಿ
ನಮ್ಮೊಳಗಿನ ‘ಅಸಾಧ್ಯ’ ಪದವನ್ನು
ಸುಡಲು ಬಿಡಿ
ಅಂಧನ ಕನಸು
ದೇವರು ಒಬ್ಬ ಅಂಧನಿಗೆ
ಕಣ್ಣು ಬೇಕೋ ? ಕನಸು ಬೇಕೋ ?ಎಂದು ಕೇಳಿದಾಗ
ಅವನು ಕನಸು ಬೇಡಿದ

ಒಂದು ಸುಂದರ ಸಂಜೆ
