Day: September 3, 2014

ಪ್ರವಾಹ

ಮುಗಿಲಿಗೆ ತೂತು ಬಿದ್ದಂತೆ

ಧೋ ಎಂದು ಮಳೆ ಸುರಿಯುತಿರುವಾಗ

ಮುಗಿಲಿಗೆನೆ ಹೊಲಿಗೆ ಹಾಕಲು ಹೊರಟವನದು

ಮತಿಭ್ರಮಣೆಯೋ ಅಥವಾ ಅಸಹಾಯಕತೆನೋ

ನೀನು

ನನ್ನ ಮಾತಿನ ಮೌನ
ನನ್ನ ಮೌನದ ಮಾತು

ನನ್ನ ಹೃದಯದ ಪಾಡು
ನಾ ಬರೆದ ಹಾಡು

ನನ್ನ ಜೀವದ ಉಸಿರು
ಈ ಉಸಿರಿನ ಜೀವ

ನನ್ನ ಪ್ರೀತಿಯ ನೆನಪು
ನೆನಪಿನ ಕಣ್ಣೀರು