ಪುಸ್ತಕ : ಜುಗಾರಿ ಕ್ರಾಸ್
ಲೇಖಕರು : ಕೆ.ಪಿ.ಪೂರ್ಣಚಂದ್ರ ತೇಜಸ್ವಿ
ಪುಟಗಳು : ೨೧೦
ಬೆಲೆ : ೧೬೫ರೂ
ಜುಗಾರಿ ಕ್ರಾಸ್ ಒಂದು ಅವರೇ ಹೇಳುವಂತೆ ರೋಮ್ಯಾಂಟಿಕ್ ಥ್ರಿಲ್ಲರ್ ಕಥೆ. ೨೪ ಘಂಟೆಯಲ್ಲಿ ಆಗುವ ಒಂದು ಕಥೆಯನ್ನು ಅತ್ಯದ್ಭುತವಾಗಿ ಪದಗಳಲ್ಲಿ ಸೆರೆ ಹಿಡಿದಿದ್ದಾರೆ. ಸುರೇಶ ಮತ್ತು ಗೌರಿ ಈ ಕಥೆಯ ಮುಖ್ಯ ಪಾತ್ರಧಾರಿಗಳು.
ಜುಗಾರಿ ಕ್ರಾಸ್ ಎಂಬ ಊರಿನಲ್ಲಿ ನಡೆಯುತ್ತಿದ್ದ ರಹಸ್ಯ ಕಾಳ ಧಂಧೆಯ ಕುರಿತು ಹೇಳುತ್ತಾ ಒಬ್ಬ ಅಮಾಯಕ ಸುರೇಶ ತನಗೆ ಗೊತ್ತಿಲ್ಲದಂತೆ ಆ ಕಾಳ ಧಂಧೆಗೆ ಸೇರಿಬಿಡುತ್ತಾನೆ. ಹಾಗೆ ಸೇರುವ ಮುನ್ನ ಹಾಗೂ ತದನಂತರದ ಸರಣಿ ಕಥೆಗಳನ್ನು ಅತ್ಯಂತ ಕ್ರೀಯಾಶೀಲತೆಯಿಂದ ಹೆಣೆದಿದ್ದಾರೆ. ಸುರೇಶ ಮತ್ತು ಗೌರಿ ಆ ಕಾಳ ಧಂಧೆಗೆ ಆಕಸ್ಮಿಕ ವಾಗಿ ಸಿಕ್ಕು ಪಟ್ಟ ಕಷ್ಟಗಳು ಹಾಗೂ ಅದರಿಂದ ಹೊರಬಂದ ಪರಿ ಈ ಕಥೆಯ ಸಾರಾಂಶ
ಈ ಕಥೆಯು ನಡೆಯುವುದು ಸಯ್ಯಾದ್ರಿ ತಪ್ಪಲಿನಲ್ಲಿ ಆದರಿಂದ ಕಥೆಯ ಜೊತೆಗೆ ನಿಸರ್ಗದ ಸೊಬಗಿನ ಊಟವನ್ನು ಲೇಖಕರು ಉಣಬಡಿಸಿದ್ದಾರೆ. ಹಂತ ಹಂತವಾಗಿ ಕಥೆಯು ಎಲ್ಲಿಯೂ ತನ್ನ ಗಾಂಭೀರ್ಯತೆಯನ್ನು ಕಳೆದು ಕೊಳ್ಳದೇ ಓದುಗುಗರಿಗೆ ತಮ್ಮ ಸಮಯ ಹೋಗಿದ್ದೆ ಗೊತ್ತಾಗದಂತೆ ಸಾಗುತ್ತದೆ.
ನೀವೂ ಓದಿ !
Read S.L.Bhyrappa novels.. You’ll get subject to your poems… You wont get better subject to literature works as good as ‘Truth&Reality of life’
And those are the themes of his novels..
#NannaPuttaSalahe
(Nanna cell Kannada comment support maadtilla)
Yes Shankar am reading bhyrappa sir’s novels… Thanks for your suggestion 🙂 need your support too to improve my writing..:) keep suggesting and commenting on my post.. I appreciate ur time on my blog 🙂