Day: September 8, 2014

ಮುರುಡೇಶ್ವರ ದೇವಸ್ಥಾನ | Murudeshwara Gopuram

ಬದುಕಿನ ಬಂಡಿ

ಸಾವು

ಹುಟ್ಟಿ
ಒಂದು ಪ್ರಶ್ನೆಯ
ಉತ್ತರಕ್ಕೆ ಬೆನ್ನು ಹತ್ತಿ
ನೋವಿಗೆ ನಲುಗಿ
ನಲಿವಲಿ ಮುಳುಗಿ
ಸೋಲಿಗೆ ಬಿದ್ದು
ಗೆಲುವಿನೊಂದಿಗೆ ಎದ್ದು
ಸಿಹಿ ಕನಸುಗಳ ಹೊತ್ತು
ಕೊನೆಗೆ
ಪ್ರಶ್ನೆಯಾಗಿಯೇ ಸತ್ತು
ಉತ್ತರವಾಗುವೆವು
ನಮ್ಮ ಸಾವಿಗೆ

ಮರಳಿ ಬಾ

ಎದೆಯಲಿ ನೀನು
ಬಿಟ್ಟು ಹೋದ ಹೆಜ್ಜೆ ಗುರುತಿಗೂ
ಹೊಸ ಕನಸಿನ ಗೆಜ್ಜೆಕಟ್ಟಿರುವೆ
ಮರಳಿ ಬಾ
ನನ್ನ ಹೃದಯ ಮತ್ತೆ ಸದ್ದು ಮಾಡಲು