Month: November 2014

ಅಮ್ಮ ಹೇಳಿದ ಎಂಟು ಸುಳ್ಳುಗಳು |ಭಾವತೀರಯಾನ

ಪುಸ್ತಕ : ಅಮ್ಮ ಹೇಳಿದ ಎಂಟು ಸುಳ್ಳುಗಳು
ಲೇಖಕರು : ಎ. ಆರ್. ಮಣಿಕಾಂತ್
ಬೆಲೆ : ೧೨೦

ಪುಸ್ತಕ : ಭಾವತೀರಯಾನ
ಲೇಖಕರು : ಎ. ಆರ್. ಮಣಿಕಾಂತ್
ಪುಟಗಳು : ೧೬೪
ಬೆಲೆ : ೧೨೦

ಎ. ಆರ್. ಮಣಿಕಾಂತ್ ಅವರು ಬರೆದ ಈ ಎರಡೂ ಪುಸ್ತಕಗಳಲ್ಲಿ ಅದೆಷ್ಟೂ ಯಶೋಗಾಥೆಗಳಿವೆ. ಇಲ್ಲಿ ಮೂಡಿಬರುವ ಪ್ರತಿ ಕಥೆಯೂ ಮಲಗಿದ್ದ ನಮ್ಮ ಕನಸುಗಳನ್ನು ಬದಿದಬ್ಬಿಸುತ್ತವೆ. ಎಲ್ಲವೂ ಇದ್ದು ನಾವು ನಮ್ಮ ಗುರಿ ತಲುಪಲು ಎಡವುತ್ತೇವೆ ಇಲ್ಲವೇ ‘ನಮಗೆ ಅದೃಷ್ಟವಿಲ್ಲ’ ಎಂಬ ನೆಪ ಹೇಳಿ ನಮ್ಮ ಗುರಿಗಳನ್ನು ಗಾಳಿಗೆ ತೋರುತ್ತೇವೆ. ಆದರೆ ಇವೆರಡು ಪುಸ್ತಕಗಳಲ್ಲಿ ಬರುವ ಎಲ್ಲ ಕಥಾನಾಯಕ/ಕಥಾನಾಯಕಿ ಅನುಭವಿಸಿದ ಪಾಡು ಅಷ್ಟಿಷ್ಟಲ್ಲ.

ಊಟಕ್ಕೂ ಪರೆದಾಡಿದವರಿಂದ ಹಿಡಿದು ಬದುಕೋಕೆ ಸೂರಿಲ್ಲದೆ ಅಲೆಮಾರಿ ಜೀವನ ಸಾಗಿಸಿ ಇಂದು ಬದುಕಿನ ಉತ್ತುಂಗದ ಸ್ಥಾನ ತಲುಪಿದ್ದವರ ಮನ ಮುಟ್ಟುವ ಕಥೆ ಇದೆ .ಒಬ್ಬ ಸಾಧಾರಣ ಮನುಷ್ಯ ಯಾವ ಗಾಡ್ ಫಾದರ್ ಇಲ್ಲದೇ ಬರೀ ತನ್ನ ಪರಿಶ್ರಮದದಿಂದ ಸಮಾಜದಲ್ಲಿ ತನ್ನದೇ ಆದ ಒಂದು ಛಾಪು ಮೂಡಿಸಬಹುದು ಎಂದು ತೋರಿಸಿಕೊಟ್ಟವರ ಚರಿತ್ರೆವಿದೆ .

ಇಲ್ಲಿ ಬರುವ ಹಲವಾರು ಕಥೆಗಳನ್ನು ನೀವಿಗಾಗಲೇ ಸಾಮಾಜಿಕ ತಾಣಗಳಲ್ಲಿ ನೋಡಿರಬಹುದು ಅಥವಾ ಕೇಳಿರಬಹುದು. ಆದರೆ ಮಣಿಕಾಂತ್ ಅವರು ಪ್ರಸ್ತುತ ಪಡಿಸಿದ ರೀತಿ ಎಂಥಹ ಕಲ್ಲು ಹೃದಯವನ್ನು ಕೂಡ ಕರಗಿಸುತ್ತದೆ. ಇಲ್ಲಿ ಬರುವ ಹಲವು ಕಥೆಗಳು ನಮ್ಮನ್ನು ಘಾಡವಾದ ಚಿಂತನೆಗೆ ಹಚ್ಚುತ್ತವೆ. ಮಾನವಿಯತೆ ಮೆರೆಯುವ ಕಥೆಗಳ ಜೊತೆಗೆ ಸಾಮಾಜಿಕ ಕಳಕಳಿವಿರುವ ಕಥೆಗಳು ಇಲ್ಲಿ ಬಂದು ಹೋಗುತ್ತವೆ.

ಅಂಗವೈಫಲ್ಯ ,ಕಡುಬಡತನ,ಶೋಷಣೆ, ಅಲೆಮಾರಿ ಜೀವನ , ಸೋಲುಗಳ ಸರಮಾಲೆ,ನಂಬಿಕೆದ್ರೋಹ ಹೀಗೆ ಇಂತಹ ಅನೇಕ ಜಟಿಲ ಕಷ್ಟಗಳಿಗೆ ಎದೆಯೊಡ್ಡಿ ಜೀವನ ಸಾಗಿಸಿದವರ ಕಥೆ ಆಲಿಸಿದಾಗ ಕಣ್ಣಂಚಿನಲಿ ಹನಿ ಜಿನುಗದೆ ಇರದು.. ಅಂತಹ ಕಡುಕಷ್ಟ ಎದುರಿಸಿ, ಯಾವ ಸಮಾಜ ತಮ್ಮನ್ನು ಹಗುರವಾಗಿ ಕಂಡಿತ್ತೋ ಅದೇ ಸಮಾಜ ಇಂದು ಅವರಿಗೆ ಸಲಾಂ ಹೊಡೆಯುವಹಾಗೆ ಬದುಕಿದವರಿಗೆ ಹಾಗೂ ಅಂತಹ ಯಶೋಗಾಥೆಗಳನ್ನು ನಮಗೆ ಪರಿಚಯಿಸಿದ
ಎ. ಆರ್. ಮಣಿಕಾಂತ್ ಅವರಿಗೆ ನನ್ನದೊಂದು ದೊಡ್ಡ ಸಲಾಂ!

ನೀವೂ ಇವೆರಡು ಪುಸ್ತಕಗಳನ್ನು ಓದಿ..

https://sapnaonline.com/baavatirayana-ar-manikanth-neelima-prakashana-12929192

https://sapnaonline.com/amma-helida-entu-sullugalu-ar-manikanth-neelima-prakashana-4858345

ನಿದ್ದೆ

ಸಾವು

ಪ್ರಶ್ನೆ

ರೂಮಿ ಕವನಗಳು

೧  ಸಮುದ್ರದೊಳಗಿನ ಒಂದು ಹನಿಯಾಗಬೇಡ
ಒಂದು ಹನಿಯೊಳಗಿನ ಅಖಂಡ ಸಮುದ್ರವಾಗು

೨. ಒಂಟಿತನದ ಭಾವ ನಿನಗ್ಯಾಕೆ ?
ಈಡೀ ಭ್ರಂಹಾಂಡವೇ ಇರಲು ನಿನ್ನೊಳಗೆ..

೩. ನನ್ನೊಂದಿಗಿದ್ದ ಎಲ್ಲವನ್ನೂ ಕಳೆದುಕೊಂಡೆ
ಆಗ ನನ್ನನ್ನು ಕಂಡುಕೊಂಡೆ.

೪. ಪ್ರೀತಿಯ ಅಮಲಿನಲ್ಲಿ ತೇಲುತಿರು
ಏಕಂದರೆ ಜಗತ್ತಿನ ಎಲ್ಲ ಸೃಷ್ಟಿಯಲ್ಲಿಯೂ
ಪ್ರೀತಿ ಇದೆ

೫. ನೀ ಮಾತಾಡುವ ಪದಗಳಲಿ ಬೆಲೆಯಿದೆ ಹೊರತು
ನಿನ್ನ ಏರು ಧ್ವನಿಯಲಿಲ್ಲ
ಎಷ್ಟೇ ಗುಡುಗು ಸಿಡಿಲಿನ ಅಬ್ಬರವಿದ್ದರೂ
ಹೂವು ಅರಳೋದು ಮಳೆಹನಿಗಳಿಂದ ಮಾತ್ರ.

೬. ಒಂದು ಕಲ್ಲು ಬಂಡೆ ಎಷ್ಟೇ ಗಟ್ಟಿಯಿದ್ದರೂ
ಅದರ ಮೇಲೆ ಒಂದು ಹುಲ್ಲೂ ಹುಟ್ಟಲ್ಲ
ಮಣ್ಣಿನಷ್ಟೇ ಮೃದುವಾಗು
ಆಗ ಎಲ್ಲ ಹೂ ಬಳ್ಳಿಗಳು ನಿನ್ನಡೆಗೆ
ಹುಡುಕಿ ಬರುವುವು.

೭. ಪ್ರೀತಿಯು ಆತ್ಮದ ಬೆಳಕು..

೮.ಈ ಜಗದಲ್ಲಿ ಎಲ್ಲವೂ ನಶಿಸಿಹೋಗುತ್ತದೆ
ಪ್ರೀತಿಯ ಹೊರತು

೯. ಪ್ರೀತಿಯು ಪ್ರೀತಿಯನ್ನೇ ಉತ್ಪಾದಿಸುತ್ತದೆ

೧೦. ನನ್ನ ತಂದೆ ಒಂದು ಪ್ರೀತಿ
ನನ್ನ ತಾಯಿ ಒಂದು ಪ್ರೀತಿ
ನನ್ನ ಗುರು ಒಂದು ಪ್ರೀತಿ
ನನ್ನ ದೇವರು ಒಂದು ಪ್ರೀತಿ
ನಾನು ಪ್ರೀತಿಯ ಕುವರ
ನಾನು ಇಲ್ಲಿ ಬಂದಿರೋದು
ಪ್ರೀತಿಯ ಹಂಚಲು

೧೧. ಧೂಳಿಡಿದ ನಿಮ್ಮ ಆತ್ಮ ಹಾಗೂ ಹೃದಯವನ್ನು
ಜ್ಞಾನದ ತೇಜಸ್ಸಿನಲ್ಲಿ ತೊಳೆಯಿರಿ

೧೨.ಪದಗಳೇ ಇರದ ಧ್ವನಿಯೊಂದಿದೆ
ಅದಕ್ಕೆ ನಿನ್ನ ಕಿವಿಕೊಡು

ಮತ್ತೆ ಬಾ

ಮೌನ

ನಾನೊಬ್ಬ ಅನಾಥ

ನಾನು ಆರು ತಿಂಗಳು ಕೂಸಿದ್ದಾಗ ನನ್ನ ಹಡೆದವ್ವ ನನ್ನನ್ನು ಬಡತನದ ತೊಟ್ಟಿಲಲ್ಲಿ ನನ್ನ ತೂಗಲು ಇಚ್ಚಿಸದೆ ಮೆಜೆಸ್ಟಿಕ್ ಬಸ್ ನಿಲ್ದಾಣದ ಮೂಲೆಯಲ್ಲಿನ ಒಂದು ಕಸದ ತೂಟ್ಟಿಯಲ್ಲಿ ನನ್ನ ಬಿಟ್ಟು ಅವಳು ತನ್ನ ಜೀವವನ್ನೇ ಬಿಟ್ಟಳಂತೆ!.

ಕಂಕುಳಲ್ಲಿ ಎಂಟು ತಿಂಗಳ ಮಗಳಿದ್ದರೂ ಕಸದ ತೊಟ್ಟಿಲಲ್ಲಿ ಎಡಬಿಡದೆ ಅಳುತ್ತಿದ್ದ ನನ್ನ ಎತ್ತಿಕೊಂಡು ಮುದ್ದಿಸಿ ತನ್ನ ಎದೆ ಹಾಲು ಕೊಟ್ಟು ಸಂತೈಸಿ ತನ್ನ ಮಗನಂತೆ ಮೂರು ವರ್ಷಗಳ ಕಾಲ ನನ್ನ ಸಾಕಿದ ನನ್ನ ಸಾಕವ್ವನ ಹೆಸರು ಲಕ್ಷಮ್ಮ .ಅವಳದ್ದು ಬ್ರಾಹ್ಮಣ ಜಾತಿ. ಎಷ್ಟೇ ಆದರೂ ನಾನು ಬೀದಿ ಮಗುವಲ್ಲವೇ ಲಕ್ಷಮ್ಮನ ಗಂಡನಿಗೆ ನಾನೆಂದರೆ ಇಷ್ಟವಿರಲಿಲ್ಲ . ನನ್ನನ್ನು ಹೊಡೆಯುವುದು ,ಬೈಯುವುದು ಮಾಮೂಲಿ ಆಗಿತ್ತು. ಆದರೂ ಒಂದು ದಿನ ಅವನು ಲಕ್ಷಮ್ಮನ ಜೊತೆ ಜಗಳವಾಡಿ ಅವಳಿಗೆ ಹೊಡೆದು ನನಗೆ ನಿದ್ದೆ ಮಾತ್ರೆ ಕೊಟ್ಟು ಬೆಂಗಳೂರಿನಿಂದ ಚೆನ್ನೈಗೆ ಹೋಗುತ್ತಿದ್ದ ಬಸ್ಸಿನಲ್ಲಿ ನನ್ನ ಕೂರಿಸಿ ಹೊರಟು ಹೋಗಿದ್ದ .

ಕಣ್ಣು ಬಿಟ್ಟರೆ ಇಕ್ಬಾಲ್ ಎನ್ನುವರ ಮನೆಯಲಿದ್ದೆ . ಬಸ್ಸಿನಲ್ಲಿ ಸತ್ತಂತೆ ಮಲಗಿದ್ದ ನನ್ನನ್ನು ಎತ್ತುಕೊಂಡು ಮನೆಗೆ ತಂದಿದ್ದರು.ಇಕ್ಬಾಲ್ ಗೆ ಮಕ್ಕಳಿರಲಿಲ್ಲ ಹೆಂಡತಿ ತೀರಿಹೋಗಿದ್ದರು.ಆಟೋರಿಕ್ಷಾ ಅವರ ಜೀವನೋಪಾಯ.
ಅವರದ್ದು ಮುಸ್ಲಿಂ ಧರ್ಮವಾಗಿದ್ದರೂ ನನ್ನನ್ನು ಎಂದಿಗೂ ಮಸೀದಿಗೆ ಕರೆದುಕೊಂಡು ಹೋದವರಲ್ಲ. ಮನೆಯಲ್ಲಿಯೇ ಎಲ್ಲ ಧರ್ಮದ ದೇವರುಗಳ ಫೋಟೋ ಇಟ್ಟಿದ್ದರು. ಯಾವ ದೇವರ ಮೇಲಾದರೂ ನಂಬಿಕೆ ಇಡು ಆದರೆ ಮಾನವೀಯತೆ ಮಾತ್ರ ಮರಿಬೇಡ ಎಂಬ ಭೋದನೆ ಅವರದ್ದು. ನಿಜವಾದ ಅಪ್ಪನ ಪ್ರೀತಿ ಸಿಕ್ಕಿದ್ದು ಅವರಿಂದಲೇ.
ಆಗ ಆರು ವರ್ಷ ನನಗೆ .ಒಂದು ದಿನ ರಸ್ತೆ ಅಪಘಾತದಲ್ಲಿ ಅವರು ತೀರಿಹೋದರು. ನಾನಾಗ ಮತ್ತೆ ಅನಾಥ

ಇಕ್ಬಾಲ್ ಗೆಳೆಯರು ನನ್ನನ್ನು ‘ಗುರುನಾಥ ಸಿಂಗ್ ಬಾಲಶ್ರಮ’ಕ್ಕೆ ಸೇರಿಸಿದರು. ಸಿಖ್ ಧರ್ಮದ ಆಶ್ರಮವದು.
ಒಂದೇ ವರ್ಷದಲ್ಲಿ ನನಗೆ ಅಲ್ಲಿದ್ದ ಹಲವಾರು ಜನ ಗೆಳೆಯರಾಗಿದ್ದರು. ಅಷ್ಟೊಂದು ಅನಾಥರಿದ್ದಾರೆ ಈ ಸಮಾಜದಲ್ಲಿ ಎಂಬ ಸತ್ಯ ಗೊತ್ತಾಗಿದ್ದೆ ಅಲ್ಲಿ. ಆದರೆ ನಾವ್ಯಾರು ನಮ್ಮ ಅನಾಥರನ್ನಾಗಿಸಿದ ನಮ್ಮ ತಂದೆ ತಾಯಿಗೆ ನಿಂದಿಸಿದವರಲ್ಲ ,ಶಪಿಸಿದವರು ಅಲ್ಲ . ಬದಲಿಗೆ ನಮ್ಮ ಹೆತ್ತವರ ಮುಖದ ಪರಿಚಯವೂ ಇಲ್ಲದ ಬದುಕುತಿರುವ ನಮ್ಮ ಮೇಲೆ ನಮಗೆ ವಿಷಾದವಿತ್ತು. ಎಂದೂ ಅಳಿಸದ ನೋವಿತ್ತು.

ಅದೊಂದು ದಿನ ಆಶ್ರಮಕ್ಕೆ ಕಾರಿನಲ್ಲಿ ಬಂದ ಒಂದು ದಂಪತಿ ನನ್ನನ್ನು ದತ್ತು ತೆಗೆದುಕೊಂಡಿತು. ಅಂದಿಗೆ ಅವರೇ ನನಗೆ ಹೊಸ ಅಪ್ಪ ಅಮ್ಮ . ಅಪ್ಪ ಜೋಸೆಫ್ ಆಗರ್ಭ ಶ್ರೀಮಂತ. ಅಮ್ಮ ಎಲಿಸಬೆತ್. ನನ್ನನ್ನು ಕೊಲ್ಲುವಾಗೆ ನೋಡುತ್ತಿದ್ದ ಅವರ ಮೊದಲ ಮಗ ಆಂತೋನಿ. ಮೂರು ದಿನವಾದ ಮೇಲೆ ಗೊತ್ತಾಗಿದ್ದು ಅವರು ನನ್ನನ್ನು ದತ್ತಕ್ಕೆ ತೆಗೆದುಕೊಂಡವರಲ್ಲ ಅವರ ಮನೆಯ ಜೀತದಾಳಾಗಿ ಎಂದು . ಅವರ ಮನೆಯ ಕಸದಿಂದ ಹಿಡಿದು ಅವರ ಮನೆಯ ಕಕ್ಕಸ ರೂಮನ್ನು ನಾನೇ ತೊಳೆಯಬೇಕಿತ್ತು. ಆದರೆ ಬೇರೆ ವಿಧಿ ಇರಲಿಲ್ಲ.ನೋವು ನುಂಗುತ್ತ ಹೇಗೋ ಒಂದು ವರ್ಷ ಕಳೆದೆ. ಜೀವಕ್ಕೆ ಅಲ್ಲಿರಲಾಗಲಿಲ್ಲ. ಸ್ವಾಭಿಮಾನ ಕೇಳಲಿಲ್ಲ . ಅವರ ಮನೆಯಿಂದ ಓಡಿ ಬಂದೆ.

ಆಗ ನನಗೆ ಎಂಟು ವರ್ಷ. ಮತ್ತೆ ಅನಾಥಾಶ್ರಮ ಸೇರಿದೆ. ನಾನು ಕೇವಲ ಊಟ ನಿದ್ದೆಗೆ ಮಾತ್ರ ಆಶ್ರಮಕ್ಕೆ ಹೋಗುತ್ತಿದ್ದೆ. ಈಡೀ ದಿನ ಕಾರ್ಮಿಕನಾಗಿ ಇಟ್ಟಿಗೆ ಹೊರಲು,ಪಾನಿಪೂರಿ ಅಂಗಡಿಯಲ್ಲಿ ,ಪೇಪರ್ ಮತ್ತು ಹಾಲು ಹಾಕುವ ಕೆಲಸ ಮಾಡುತ್ತಾ ಮಾಡುತ್ತಾ ಹಣ ಕೂಡಿಡುತ್ತಾ ಬಂದೆ. ನಾನು ಎಂದಿಗೂ ಸಾಯುವ ಯೋಚನೆ ಮಾಡಿದವನಲ್ಲ. ನನಗೆ ಅರಿವಿತ್ತು ನನಗೆ ನಾನೊಬ್ಬನೇ ಈ ಜಗದಲ್ಲಿ ಎಂದು. “ನಾ ಸಾಯುವ ಮುನ್ನ ನನ್ನನ್ನು ಹೊರಲು ನಾಲ್ಕು ಜನವನ್ನಾದರೂ ಗಳಿಸಬೇಕೆಂಬ ಛಲವಿತ್ತು. ಅನಾಥನಾಗಿ ಬೆಳೆದ ನಾನು ನನ್ನ ಸಾವು ಅನಾಥವಾಗಬಾರದು ಎಂಬ ಕಳಕಳಿ ಇತ್ತು.” ಕಷ್ಟದಿ ಹರಿಸಿದ ಬೆವರಿಗೆ ಈ ಭೂಮಿ ಮೇಲೆ ಬೆಲೆಯಿದೆ ಎಂಬ ನಂಬಿಕೆ ಇತ್ತು .
ನಾನು ಹಿಂದೂ (ಲಕ್ಷಮ್ಮ ), ಮುಸ್ಲಿಂ (ಇಕ್ಬಾಲ್ ), ಕ್ರೈಸ್ತ (ಜೋಸೆಫ್ ) ,ಸಿಖ್ (ಗುರುನಾಥ್ ಸಿಂಗ್ ಆಶ್ರಮ)
ಧರ್ಮದ ಮನೆಯಲ್ಲಿ ,ಆಶ್ರಮದಲ್ಲಿ ಬೆಳೆದಿದ್ದೇನೆ. ನನಗೆ ಯಾವ ಧರ್ಮದ ಹಂಗೂ ಇಲ್ಲ . ಒಬ್ಬ ಅನಾಥನಿಗೆ ಯಾವ ಧರ್ಮ ಯಾವ ಜಾತಿ ಅಲ್ಲವೇ ?

ಈಗ ನನಗೆ ೩೦ ವರ್ಷ. ” ಹೊಸಬೆಳಕು” ಎಂಬ ಅನಾಥಾಶ್ರಮ ಕಟ್ಟಿಸಿದ್ದೇನೆ. ಶಾರದ ನನ್ನ ಮುದ್ದಿನ ಮಡದಿ. ಆಶ್ರಮದ ಎಲ್ಲ ಮಕ್ಕಳೂ ನನ್ನ ಮಕ್ಕಳೇ .ನನ್ನ ಅನಾಥಾಶ್ರಮದ ಮಕ್ಕಳಿಗೆ ಯಾವ ಜಾತಿಯೂ ಇಲ್ಲ ,ಧರ್ಮವೂ ಇಲ್ಲ. ಎಲ್ಲ ಮಕ್ಕಳಿಗೂ ಒಂದು ಕನಸು ಇದೆ. ಒಂದು ಗುರಿ ಇದೆ. ಬೇಕಿದ್ದರೆ ” ಕನಸು ” ಅವರ ಧರ್ಮವೆನ್ನಬಹುದು.

ಕೊನೆಯಲ್ಲಿ ಒಂದು ಮಾತು
ದೇವರು ನಿಮಗೆ ಅಪ್ಪ ,ಅಮ್ಮ ,ಅಕ್ಕ ,ತಂಗಿ , ಅಣ್ಣ ,ತಮ್ಮ ಬಂಧು ಬಳಗವನ್ನು ಕೊಟ್ಟಿದ್ದಾನೆ. ನೀವು ಧನ್ಯರು.
ನೆನಪಿರಲಿ ಎಲ್ಲರು ಇದ್ದೂ ನೀವು ಅನಾಥರಾಗಬೇಡಿ.

ಇಂತಿ
ಒಬ್ಬ ಅನಾಥ
ಅಲ್ಲ ಅಲ್ಲ
ನಿಮ್ಮೊಳಗೊಬ್ಬ

ಚಿತ್ರ ಕೃಪೆ : Google images

ಮೂಕ ಅಪ್ಪ | ಕಿವುಡ ಮಗ

ಒಬ್ಬ ಮೂಕ ಅಪ್ಪ
ತನ್ನ ಸತ್ತ ಕಿವುಡ
ಮಗನ ಹೆಣದ ಮುಂದೆ
ಬಿಕ್ಕಳಿಸುತ್ತಾ ಬಿಕ್ಕಳಿಸುತ್ತಾ
ಅಳುತಿದ್ದರೆ
ಎಂತಹವರನ್ನು ‘ಮೂಕ’ವನ್ನಾಗಿಸುತ್ತಿತ್ತು
ಸತ್ತ ಮಗನ ಕಿವಿ ಕೇಳುವಂತಿತ್ತು!

ಸರಳ ಸಾಲುಗಳು – 4

೧.
‘ಹಸಿವು’
ಎಲ್ಲವನ್ನೂ
ಕಲಿಸುವ
ಗುರು..
೨.
ನಮಗೆ ವಿದ್ಯೆ ಕಲಿಸೋದು ಶಿಕ್ಷಣ
ಬುದ್ಧಿ ಕಲಿಸೋದು ಜೀವನ
ನೆನಪಿರಲಿ
ವಿದ್ಯೆ ಒಕ್ಕಾಲು ;ಬುದ್ಧಿ ಮುಕ್ಕಾಲು
೩.
ಚಡಪಡಿಸಿ
ಬರೆದ ಕವಿತೆಯೊಂದು
ಎದೆಯ ಗಾಯವ
ಗುಣಪಡಿಸಿದೆ…
೪.
ಎಳೆ ಎಳೆಯಾಗಿ ಬಂದ ಅವಳ ನೆನಪಿಗೆ
ನನ್ನ ಹೃದಯ ಕೊಲೆಯಾಗಿದೆ
೫.
ನನ್ನ ಅರ್ಥವಿರದ
ಪದಗಳಲಿ ಬರ್ಬರವಾಗಿ
ಹತ್ಯೆಯಾದ ‘ಕವಿತೆ’ ಯೇ
ನನ್ನ ಕ್ಷಮಿಸಿ ಬಿಡು!