ಗಡಿನಾಡಿನಲ್ಲಿ
ತನ್ನ ನರನಾಡಿಗಳನ್ನು
ಬಿಗಿ ಹಿಡಿದು
ಸಾವನ್ನು ಕೈಯಲ್ಲೇ ಹಿಡಿದು
ಯುದ್ದಕ್ಕೆ ಎದೆಯೊಡ್ಡಿ ನಿಂತು
ತನ್ನ ನೆತ್ತರನ್ನು ದೇಶಕ್ಕೆ ಅರ್ಪಿಸುವ
ಯೋಧನ ಮೇಲೆ..
ಹೊಲಗದ್ದೆಗಳಲ್ಲಿ
ಬಿಸಿಲು ಮಳೆಗೆ ಜಗ್ಗದೆ
ಮಾಡಿದ ಸಾಲಕ್ಕೆ ಬಗ್ಗದೆ
ಬೆಳೆದ ಬೆಳೆಗೆ
ತನ್ನ ಬೆವರನ್ನೇ ಹರಿಸಿ
ತಾನೂ ಹಸಿವಿನಿಂದ ಬಳಲಿದರೂ
ಜಗಕೆ ಅನ್ನನೀಡುವ
ಅನ್ನದಾತನ ಮೇಲೆ
ಶಾಲಾಕಾಲೇಜಿನಲ್ಲಿ
ಕಪ್ಪುಹಲಗೆಯ ಮೇಲೆ ಬರೆಯುತ್ತಾ
ಖಾಲಿ ತೆಲೆಯೊಳಗೆ ಅಕ್ಷರ ತುಂಬುತ್ತಾ
ವಿದ್ಯೆ ಜೊತೆಗೆ ಬುದ್ಧಿ ಕಲಿಸುವ
ಒಬ್ಬ ವಿದ್ಯಾರ್ಥಿ ‘ಗುರಿ’ಗೆ ಗುರುವಾಗುವ
ಶಿಕ್ಷಕನ ಮೇಲೆ ..
ಹಣಕ್ಕಿಂತ ಜೀವಕ್ಕೆ ಬೆಲೆ ಕೊಡುವ ವೈದ್ಯನ ಮೇಲೆ
ಗೆದ್ದರೂ ಸೋತರೂ ಕೈಬಿಡದ ಗೆಳೆಯನ ಮೇಲೆ
ಮಾತು ಕಲಿಸಿದ ಮಾತೃಭಾಷೆ ಮೇಲೆ
ಎಲ್ಲವನ್ನೂ ಕೊಟ್ಟ ತಂದೆ -ತಾಯಿಯ ಮೇಲೆ
ಈ ದೇಶದ ಮೇಲೆ
ಗೌರವವಿದೆ..
ನನಗೆ ಗೌರವವಿದೆ
ಕೃತಜ್ಞತೆಯ ಮಹಾಪೂರ ಹರಿದಿದೆ… ಒಳ್ಳೆಯ ಸಾಲುಗಳು
ಧನ್ಯವಾದಗಳು ಸರ್ 🙂