ಬದುಕಿನಲಿ ಬೀಸಿದ
ಬಿರುಗಾಳಿಗೆ ಸಿಕ್ಕು
ಅಲೆದಾಡಿ ,ಪರದಾಡಿ
ಬೇಡಿ, ಕಾಡಿ
ನಗು ಕಾಣದೆ
ಬೇರೆಯವರಿಗೆ ಹಾಸ್ಯವಾಗಿ
ಜೀವನದ ಬಗ್ಗೆ ಅಸಹ್ಯವಾಗಿ
ಹರಿದ ಕಂಬನಿಯಲ್ಲೇ
ಜೀವ ತಣಿಸುತ್ತಾ
ಬದುಕಿಗೆ ಶರಣಾಗತಿಯಾಗಿ
ಯಾಕೆ ಹುಟ್ಟಿಸಿದೆ ಪರಮಾತ್ಮ ವೆಂದು
ಯಾರೋ ಕಟ್ಟಿಸಿದ ಮರದ ಕಟ್ಟೆಗೆ
ಮಲಗಿದವನ
ಎಂದಿಗೂ ಚಪ್ಪಲಿ ನೋಡದ
ಆತನ ಕಾಲುಗಳು
ಅವನ ವ್ಯಥೆ ಹೇಳಿವೆ ಮತ್ತು
ದೇವರಲ್ಲಿ ಒಂದು ಪ್ರಶ್ನೆ ಕೇಳಿವೆ
” ಬದುಕನ್ನು ಸವೆದಿದ್ದು ಇನ್ನೂ ಸಾಕು
ಬದುಕು ಸವಿಯೋದೆಂದು ?”
ದೇವರೇ ಉತ್ತರಿಸಬೇಕು !