Month: December 2014

My 2014 in Blogging!

The WordPress.com stats helper monkeys prepared a 2014 annual report for this blog.

Here’s an excerpt:

A San Francisco cable car holds 60 people. This blog was viewed about 1,700 times in 2014. If it were a cable car, it would take about 28 trips to carry that many people.

Click here to see the complete report.

Please Save!

ಗರ್ಭದಲ್ಲಿ ಹೆಣ್ಣು ಮಗುವಂದು ಹುಟ್ಟುತ್ತಿದೆ ಎಂದು ತಿಳಿಯುತ್ತಲೇ ನಾಳೆ ಆ ಹೆಣ್ಣುಮಗು ತಮಗೆ ಹೊರೆ ಆಗುತ್ತದೆಯೆಂದು ತಮಗೆ ಜನ್ಮಕೊಟ್ಟವಳು ಒಬ್ಬ ‘ಹೆಣ್ಣು’ ಎಂಬುವದನ್ನು ಮರೆತು ಆ ಮಗುವಿನ ಹತ್ಯೆ ಮಾಡುವ ತಂದೆ ತಾಯಿಗಳಿದ್ದಾರೆ.. ಅದಕ್ಕೆ ಪೂರಕವಾಗಿ ತಮ್ಮ ವೃತ್ತಿಗೆ ಮೋಸವೆಸಗುವ ವೈದ್ಯರಿದ್ದಾರೆ…
ಈ ಚಿಂತನೆಯೊಂದಿಗೆ ನನ್ನ ಗೆಳೆಯ Deepu ಒಂದು ಕಿರುಚಿತ್ರ ಮಾಡಿದ್ದಾನೆ.
ಈ ಕಿರುಚಿತ್ರ ಹಲವು ಪ್ರಶಸ್ತಿಗಳನ್ನು ಬಾಚಿಕೊಂಡಿದ್ದು ಸಾಮಾಜಕ್ಕೆ ಒಳ್ಳೆಯ ಮೆಸೇಜ್ ಕೊಟ್ಟಿದೆ
ನೀವು ನೋಡಿ share ಮಾಡಿ

ಇಳಿ ಸಂಜೆಯ ತಿಳಿ ಮೌನ…

ಕಡಲ ಮುಂದೆ
ನನ್ನ ಹೆಗಲಿಗೆ ನೀನು ಒರಗಿ
ಕೂತಿದ್ದನ್ನು ನೆನೆದು
ಹೃದಯ ಕೊರಗುತ್ತಿದೆ ..
ಪ್ರಾಣ ಬಿಡುವವರೆಗೂ
ನೀನು ಬಿಡುಅಂದರೂ ಬಿಡಲೊಲ್ಲೆ ಎಂದು
ನನ್ನ ಕೈ ಬೆರೆಳುಗಳ ಜೊತೆ ನಿನ್ನ ಕೈ
ಬೆಸೆಯುತ್ತಿದ್ದನು ನೆನೆದು ಕಣ್ಣೀರು ಜಿನುಗುತ್ತಿದೆ .

ಇಳಿ ಸಂಜೆಯ
ತಿಳಿ ಮೌನದಲ್ಲಿ
ನೀನು ಆಡಿದ ಮಾತುಗಳನ್ನೆಲ್ಲಾ
ಅಲೆಗಳು ಕೂಗಿ ಹೇಳಿದಂತಿದೆ ..
ದಡದಲ್ಲಿ ನಾವಿಬ್ಬರೂ
ಜೊತೆಗೆ ನಡೆದಾಡಿದ ಗುರುತನ್ನು
ಅಳಿಸಲು ಅಲೆಗಳು ಮರೆತಂತಿದೆ ..

ನಾನೇಕೆ ನಿನ್ನ ಬಳಿ ಬಂದೆ
ನೀನ್ಯಾಕೆ ನನ್ನ ಬಿಟ್ಟು ಹೋದೆ
ಎಂಬ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಿದ್ದರೆ
ಎದೆಗೆ ಯಾರೋ ತಿವಿದಂತಿದೆ
ಆ ನೋವಿನಲ್ಲೇ ಬರೆದ ಸಾಲುಗಳಿಂದಲೇ
ನಾನು ‘ಕವಿ’ಯಾದಂತಿದೆ.
– ಸಜ್ಜನ

ಎದೆಗಾರಿಕೆ

‘ಹೆದರಿಕೆ’ಯನ್ನು ಎದುರಿಸಿ ಹೆದರಿಸುವುದೇ ಎದೆಗಾರಿಕೆ !

ಬದುಕು

ಯಾರ ಸಿದ್ಧಾಂತಗಳಿಗೂ
ಯಾರ ಪ್ರಮೇಯಗಳಿಗೂ
ನಿಲುಕದ ಸಿಲುಕದ
ಬಗೆಹರಿಯದ ಬಗೆಹರಿಸದ
ಲೆಕ್ಕ – ಬದುಕು!
ಎಷ್ಟೇ ಕೂಡಿಸಿ ಕಳೆದರೂ
ಎಷ್ಟೇ ಗುಣಿಸಿ ಭಾಗಿಸಿದರೂ
ಬದುಕಿನ ಮೊತ್ತ
ಕೇವಲ ‘ಶೂನ್ಯ’!.
ಬದುಕೇ ಶೂನ್ಯವಾ ?
ಶೂನ್ಯವೇ ಬದುಕಾ?
ಅಥವಾ
ಅವೆರಡರ ದ್ವಂದಕ್ಕೆ
ಸಿಲುಕಿ ನಲುಗುವುದು ಬದುಕಾ ?
ಉತ್ತರ ಹುಡುಕುವುದೇ ಬದುಕಿರಬಹುದು!

ದೇವರ ಹುಚ್ಚು

‘ದೇವರ ಹುಚ್ಚು’ ಜೋಗಿ ಅವರು ಬರೆದ ಕಾದಂಬರಿ
ಇಲ್ಲಿ ರಂಗನಾಥ ಮತ್ತು ರಾಜಶೇಖರ ಎಂಬ ಹೆಸರಿನ ಮುಖ್ಯ ಪಾತ್ರಗಳು. ರಂಗನಾಥ ಅಪ್ಪಟ ಬ್ರಾಹ್ಮಣನ ಮಗ.
ರಾಜಶೇಖರ ಕ್ಷೌರಿಕನ ಮಗ. ಅವರಿಬ್ಬರ ಮನೆ ಅಕ್ಕ ಪಕ್ಕದಲ್ಲೇ ಇದ್ದುದರಿಂದಲೇ ಸಹಜವಾಗಿಯೇ ಅವರಿಬ್ಬರೂ ಒಳ್ಳೆಯ ಸ್ನೇಹಿತರು. ಆದರೆ ವಿಚಾರಧಾರೆಯಲ್ಲಿ ಅವರಿಬ್ಬರ ನಡುವೆ ತುಂಬಾ ಅಂತರವಿತ್ತು .
ರಂಗನಾಥ ತಾನೊಬ್ಬ ಬ್ರಾಹ್ಮಣವಾಗಿದ್ದರೂ ಧರ್ಮದ ಪರಿಪಾಲನೆ, ದೇವರ ಇರುವಿಕೆಯ ಬಗ್ಗೆ ಸದಾ ತರ್ಕವೆತ್ತುತ್ತಿದ್ದ.
ದೇವರು ನಿಜವಾಗಲು ಇರುವನೇ ? ನಮ್ಮ ಬದುಕಿನ ಮೇಲೆ ನಿಯಂತ್ರವಿರುವ ಒಂದು ಶಕ್ತಿ ಇದೆಯೇ ? ನಿಜವಾಗಲು ಇಲ್ಲ ಎಂಬುದು ಅವನ ವಾದ. ಮನುಷ್ಯ ಸಂಬಂಧಗಳೇ ಸುಳ್ಳು ಎಂದು ಧಿಕ್ಕರಿಸಿವಷ್ಟು ಬಂಡ ಬ್ರಾಹ್ಮಣ ರಂಗನಾಥ.ಇವನ ಹುಚ್ಚು ತರ್ಕಗಳಿಗೆ ಒಮ್ಮೆಮ್ಮೆ ಮೌನದಿ ಸಮ್ಮತಿಸುತ್ತಿದ್ದ ಕೆಲುವೊಮ್ಮೆ ಅವನಿಗೆ ಸವಾಲೆಗೆದು ವಾದ ಮಾಡಲಾಗದೇ ವಿಫಲನಾಗುತ್ತಿದ್ದ ರಾಜಶೇಖರ.

ರಂಗನಾಥ ಸಾವನಪ್ಪುತ್ತಾನೆ. ಅದು ಆತ್ಮಹತ್ಯೆಯೋ ? ಅಥವಾ ಕೊಲೆಯೋ ? ಎಂದು ತನಿಖೆ ಮಾಡುವುದು ಪೋಲಿಸ್ ಅಧಿಕಾರಿಯಾದ ಅವನ ಸ್ನೇಹಿತ ರಾಜಶೇಖರ.
ಮುಂದೇನಾಯ್ತು ? ಪುಸ್ತಕ ಓದಿ 🙂

https://sapnaonline.com/devara-hucchu-jogi-ankita-pustaka-883142

ಸರಳ ಸಾಲುಗಳು -5

೧.
ನಿನ್ನನು ಮರೆತು ಬಿಡೋಣ
ಅನ್ನುವಷ್ಟರಲ್ಲಿ
ಹೃದಯದಲ್ಲಿ ನಿನ್ನ ನೆನಪುಗಳ
ಪಥಸಂಚಲನ !

೨.
ನಿನ್ನ ನೆನಪುಗಳನ್ನು
ಹೊದ್ದು ಮಲಗಿದ್ದ ನನಗೆ
ಆಸರೆಯಾಗಿದ್ದು ಗಲ್ಲದ ಮೇಲೆ
ಹರಿದಾಡಿದ ನಾಲ್ಕು ಕಣ್ಣೀರ ಸಾಲುಗಳು

೩.
ನೀನಾಡಿದ ಮಾತುಗಳೆನ್ನಲ್ಲಾ
ನಾನು ಸಂಗ್ರಹಿಸಿದ್ದೇನೆ.
ಒಂದು ಹೊತ್ತಿಗೆ ಹೊರತರಿಲಿದ್ದೇನೆ
“ಮೌನದೊಳಗಿನ ಮಾತುಗಳು ” ಎಂಬ
ಶೀರ್ಷಿಕೆಯಡಿ


ಅವಳ ಮೌನದೊಳಗೆ
ನನ್ನ ಮಾತು ಕೇಳಿಸಲೇ ಇಲ್ಲ
ಅಷ್ಟು ಸದ್ದು ಮಾಡಿತ್ತು ಅವಳ ಮೌನ !

ಕರುಣಾಳು ಬಾ ಬೆಳಕೆ

ಪುಸ್ತಕ : ಕರುಣಾಳು ಬಾ ಬೆಳಕೆ
ಲೇಖಕರು : ಗುರುರಾಜ ಕರಜಗಿ
ಪುಟಗಳು :೨೦೦
ಬೆಲೆ : ೧೨೫

ಡಾ .ಗುರುರಾಜ ಕರಜಗಿ ಅವರ ‘ಕರುಣಾಳು ಬಾ ಬೆಳಕೆ ‘ಹೊತ್ತಿಗೆಯು ನೂರು ಬೆಳಕಿನ ಕಥೆಗಳನ್ನು ಹೊತ್ತು ನಮ್ಮ ಮನದ ಅಂಧಕಾರವನ್ನು ನಂದಿಸುತ್ತದೆ. ಇಲ್ಲಿ ಬರುವ ಪ್ರತಿ ಕಥೆಯು ಮಾನವೀಯ ಮೌಲ್ಯಗಳನ್ನು ಮನ ಮುಟ್ಟುವಂತೆ ಹೆಣೆಯಲಾಗಿದೆ.ಚಿಕ್ಕ ಕಥೆಗಳಿದ್ದರೂ ಚೊಕ್ಕವಾಗಿ ನೀತಿ ಪಾಠವನ್ನು ಓದುಗರಿಗೆ ತಲುಪಿಸಲು ಲೇಖಕರು ಸಫಲರಾಗಿದ್ದಾರೆ.

ಇಲ್ಲಿ ಪ್ರಸ್ತುತವಾಗಿರುವ ಕಥೆಗಳು ಲೇಖಕರ ಅನುಭವದಿಂದ ,ಅನುಭಾವಿಗಳಿಂದ,ಅನುವಾದದಿಂದ ಬಂದಿದೆ.
ಪ್ರಜಾವಾಣಿಯಲ್ಲಿ ಬರುತಿರುವ ಇವರ ಲೇಖನಗಳು ಜನರ ಮೆಚ್ಚುಗೆಗೆ ಪಾತ್ರವಾಗಿದ್ದಲ್ಲದೇ ಹಲವಾರು ಜೀವನದಲ್ಲಿ ಇವರ ಕಥೆಗಳು ಪ್ರಭಾವಬೀರಿದೆ. ಇಲ್ಲಿರುವ ಕಥೆಗಳು ಬರೀ ಕಥೆಗಳಾಗದೇ ಕೃತಿಗಳಾಗಿವೆ ಅಲ್ಲದೆ ಓದುಗರ ಚಿಂತನೆಗೆ ,ಕನಸುಗಳಿಗೆ ದಾರಿದೀಪವಾಗಿದೆ

‘ಕರುಣಾಳು ಬಾ ಬೆಳಕೆ’ಒಟ್ಟು ಐದು ಭಾಗಗಳಲ್ಲಿ  ಹೊರಬಂದಿವೆ. ನಾನೀಗ ಭಾಗ-೧ ಮುಗಿಸಿದ್ದೇನೆ. ನೀವೂ ಓದಿ ಹೊಸ ಬೆಳಕನ್ನು ನಿಮ್ಮ ಮನದಮನೆಗೆ ಆಹ್ವಾನಿಸಿ !

https://sapnaonline.com/shop/Author/gururaj-karajagi

ಗಳಿಕೆ

ಮುನ್ನುಡಿ