ನಮ್ಮ ಬದುಕಿನಲ್ಲಿ
ಅತೀ ಮುಖ್ಯ ಕೆಲಸವೆಂದರೆ
“ಅತೀ ಮುಖ್ಯವಾದ ಕೆಲಸ ಹುಡುಕುವುದು”
ನಿನ್ನ ನೆನೆಯಬಾರದೆಂದು
ಎಷ್ಟೇ ಅಂದುಕೊಂಡರೂ
ನಿನ್ನನ್ನೇ ನೆನೆಯುತಿರುವೆ
ಕಣ್ಣಿರಿನಿಂದ ಕೆನ್ನೆ ನೆನೆಸುತ
ಧರ್ಮವೆಂದರೆ
ಹುಟ್ಟಿ ಬಾಳಿ ಪಶ್ಚಾತ್ತಾಪವಿಲ್ಲದೆ ಸಾಯುವುದು
ಒಬ್ಬ ವೈರಿಯನ್ನು ಕ್ಷಮಿಸುವುದುಕ್ಕಿಂತ
ಒಬ್ಬ ಗೆಳೆಯನನ್ನು ಕ್ಷಮಿಸುವುದು ಕಷ್ಟ
ತೆರೆದಿಡು ಕೈಗಳನ್ನು
ನಿನ್ನ ಕೈಹಿಡಿದು ನಡೆಸಬೇಕಾದರೆ
ಮೌನವೊಂದೆ ಭಗವಂತನ ಭಾಷೆ
ಮಿಕ್ಕಿದ್ದೆಲ್ಲ ಅದರ ಕಳಪೆ ತರ್ಜುಮೆ (ಅನುವಾದ )
ನಿನ್ನನ್ನೇ ನೀನು ಒಂದು ಜೀವಂತ ಕವಿತೆಯನ್ನಾಗಿಸು
ಪ್ರತಿ ಉಳಿಪೆಟ್ಟಿಗೂ ನೋವು ಅಂದರೆ ಶೀಲೆ ಆಗುವುದೆಂತು ?
ನಾನು ಕತ್ತಲಿನ ಗುಲಾಮನಲ್ಲ
ನಾನು ಬೆಳಕಿನ ಗುಲಾಮ
Reblogged this on ಭಾವಶರಧಿ and commented:
ರೂಮಿ ಕವನಗಳು…