‘ದೇವರ ಹುಚ್ಚು’ ಜೋಗಿ ಅವರು ಬರೆದ ಕಾದಂಬರಿ
ಇಲ್ಲಿ ರಂಗನಾಥ ಮತ್ತು ರಾಜಶೇಖರ ಎಂಬ ಹೆಸರಿನ ಮುಖ್ಯ ಪಾತ್ರಗಳು. ರಂಗನಾಥ ಅಪ್ಪಟ ಬ್ರಾಹ್ಮಣನ ಮಗ.
ರಾಜಶೇಖರ ಕ್ಷೌರಿಕನ ಮಗ. ಅವರಿಬ್ಬರ ಮನೆ ಅಕ್ಕ ಪಕ್ಕದಲ್ಲೇ ಇದ್ದುದರಿಂದಲೇ ಸಹಜವಾಗಿಯೇ ಅವರಿಬ್ಬರೂ ಒಳ್ಳೆಯ ಸ್ನೇಹಿತರು. ಆದರೆ ವಿಚಾರಧಾರೆಯಲ್ಲಿ ಅವರಿಬ್ಬರ ನಡುವೆ ತುಂಬಾ ಅಂತರವಿತ್ತು .
ರಂಗನಾಥ ತಾನೊಬ್ಬ ಬ್ರಾಹ್ಮಣವಾಗಿದ್ದರೂ ಧರ್ಮದ ಪರಿಪಾಲನೆ, ದೇವರ ಇರುವಿಕೆಯ ಬಗ್ಗೆ ಸದಾ ತರ್ಕವೆತ್ತುತ್ತಿದ್ದ.
ದೇವರು ನಿಜವಾಗಲು ಇರುವನೇ ? ನಮ್ಮ ಬದುಕಿನ ಮೇಲೆ ನಿಯಂತ್ರವಿರುವ ಒಂದು ಶಕ್ತಿ ಇದೆಯೇ ? ನಿಜವಾಗಲು ಇಲ್ಲ ಎಂಬುದು ಅವನ ವಾದ. ಮನುಷ್ಯ ಸಂಬಂಧಗಳೇ ಸುಳ್ಳು ಎಂದು ಧಿಕ್ಕರಿಸಿವಷ್ಟು ಬಂಡ ಬ್ರಾಹ್ಮಣ ರಂಗನಾಥ.ಇವನ ಹುಚ್ಚು ತರ್ಕಗಳಿಗೆ ಒಮ್ಮೆಮ್ಮೆ ಮೌನದಿ ಸಮ್ಮತಿಸುತ್ತಿದ್ದ ಕೆಲುವೊಮ್ಮೆ ಅವನಿಗೆ ಸವಾಲೆಗೆದು ವಾದ ಮಾಡಲಾಗದೇ ವಿಫಲನಾಗುತ್ತಿದ್ದ ರಾಜಶೇಖರ.
ರಂಗನಾಥ ಸಾವನಪ್ಪುತ್ತಾನೆ. ಅದು ಆತ್ಮಹತ್ಯೆಯೋ ? ಅಥವಾ ಕೊಲೆಯೋ ? ಎಂದು ತನಿಖೆ ಮಾಡುವುದು ಪೋಲಿಸ್ ಅಧಿಕಾರಿಯಾದ ಅವನ ಸ್ನೇಹಿತ ರಾಜಶೇಖರ.
ಮುಂದೇನಾಯ್ತು ? ಪುಸ್ತಕ ಓದಿ 🙂
https://sapnaonline.com/devara-hucchu-jogi-ankita-pustaka-883142
ಜೋಗಿ ಹೇಳ್ತಾರೆ.. ನಾಸ್ತಿಕರೆಲ್ಲ ವೈರುಧ್ಯಗಳ ನಡುವೆ ಬದುಕಬೇಕು. ದೇವರಿಲ್ಲ ಎ೦ಬ ಪ್ರಶ್ನೆ ನಿರ೦ತರ ಕಾಡುತ್ತಿರುತ್ತದೆ. ಆಸ್ತಿಕರಿಗೆ ಉತ್ತರ ಸಿಕ್ಕಿರುತ್ತದೆ. ಈ ಕಾದ೦ಬರಿ ಓದಬೇಕು 🙂
ಹೌದು ಓದಲೇಬೇಕಾದ ಪುಸ್ತಕವದು 🙂