ಕಡಲ ಮುಂದೆ
ನನ್ನ ಹೆಗಲಿಗೆ ನೀನು ಒರಗಿ
ಕೂತಿದ್ದನ್ನು ನೆನೆದು
ಹೃದಯ ಕೊರಗುತ್ತಿದೆ ..
ಪ್ರಾಣ ಬಿಡುವವರೆಗೂ
ನೀನು ಬಿಡುಅಂದರೂ ಬಿಡಲೊಲ್ಲೆ ಎಂದು
ನನ್ನ ಕೈ ಬೆರೆಳುಗಳ ಜೊತೆ ನಿನ್ನ ಕೈ
ಬೆಸೆಯುತ್ತಿದ್ದನು ನೆನೆದು ಕಣ್ಣೀರು ಜಿನುಗುತ್ತಿದೆ .
ಇಳಿ ಸಂಜೆಯ
ತಿಳಿ ಮೌನದಲ್ಲಿ
ನೀನು ಆಡಿದ ಮಾತುಗಳನ್ನೆಲ್ಲಾ
ಅಲೆಗಳು ಕೂಗಿ ಹೇಳಿದಂತಿದೆ ..
ದಡದಲ್ಲಿ ನಾವಿಬ್ಬರೂ
ಜೊತೆಗೆ ನಡೆದಾಡಿದ ಗುರುತನ್ನು
ಅಳಿಸಲು ಅಲೆಗಳು ಮರೆತಂತಿದೆ ..
ನಾನೇಕೆ ನಿನ್ನ ಬಳಿ ಬಂದೆ
ನೀನ್ಯಾಕೆ ನನ್ನ ಬಿಟ್ಟು ಹೋದೆ
ಎಂಬ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಿದ್ದರೆ
ಎದೆಗೆ ಯಾರೋ ತಿವಿದಂತಿದೆ
ಆ ನೋವಿನಲ್ಲೇ ಬರೆದ ಸಾಲುಗಳಿಂದಲೇ
ನಾನು ‘ಕವಿ’ಯಾದಂತಿದೆ.
– ಸಜ್ಜನ
ಜೊತೆಗೆ ನಡೆದಾಡಿದ ಗುರುತನ್ನು
ಅಳಿಸಲು ಅಲೆಗಳು ಮರೆತಂತಿದೆ …….ಆಕೆಯ ಒಡನಾಟದ ಈ ಸಾಲುಗಳು ಭವಾಂಜಲಿ ಯಾಗಿ ಭಾವ ತನ್ಮಯತೆ ಯಲ್ಲಿ ಭಾವ ಶರಧಿ ಯಲ್ಲಿ ತೇಲಿ ಬಂದಿದೆ….!!!! 🙂
ಕವಿತೆ ತುಂಬಾ ಚೆನ್ನಾಗಿದೆ.ನನ್ನ ಮನ ಹರಣ ಮಾಡಿತು
tumba thanks 🙂
Ni toredamele e eli sanje mouna onde joteyagide….