Month: January 2015

Quikr NXT

ಹಳೆ ವಸ್ತುಗಳ ಮಾರಾಟ ಇನ್ನು ಮತ್ತಷ್ಟು ಸುಲಭ..

ಕ಼್ವಿಕರ್ ಸಂಸ್ಥೆ ಹಳೆ ವಸ್ತುಗಳ ಮಾರಾಟಕ್ಕೆ ವಿನೂತನ ಆಯಾಮ ವದಗಿಸಿದೆ. ಒಂದು ಹಳೇ ವಸ್ತುವಿನ ಮಾರಟಕ್ಕೆ ಇನ್ನು ಮುಂದೆ ಕರೆ ಮಾಡುವ ಅವಶ್ಯಕತೆ ಇಲ್ಲ. ಕೇವಲ ನಿಮ್ಮ ಕೈಬೆರಳುಗಳಲ್ಲಿ ನಿಮ್ಮ ಹಳೇ ವಸ್ತುಗಳನ್ನು ಮಾರಬಹುದು !
ಕ಼್ವಿಕರ್ ಸಂಸ್ಥೆ ಇದಕ್ಕೆ ‘ ಕ಼್ವಿಕರ್ ನೆಕ್ಷ್ಟ್ ‘ ಎಂದು ನಾಮಕರಣ ಮಾಡಿದೆ.

ಗ್ರಾಹಕರಲ್ಲಿ ಮೂಡುವ ಪ್ರಶ್ನೆಗಳು
೧. ಕರೆ ಮಾಡದೆ ಹೇಗೆ ಹಳೇ ವಸ್ತುಗಳನ್ನು ಮಾರುವುದು ?
ಉತ್ತರ : ಮೊದಲಿಗೆ  http://www.quikr.com/  ಹೋಗಿ ನಿಮ್ಮದೊಂದು ಅಕೌಂಟ್ ಮಾಡಿಸಿ. ನಿಮ್ಮ ಹೆಸರಿನ ಜೊತೆ ನಿಮ್ಮ ಮೊಬೈಲ್ ನಂಬರ್ ಕೂಡ ಅದರಲ್ಲಿ ನಮೂದಿಸಿ. ನೀವು ಮಾರುವ ವಸ್ತು ಕೊಂಡುಕೊಳ್ಳುವವರು ನಿಮ್ಮ ಕ಼್ವಿಕರ್ ನೆಕ್ಷ್ಟ್ ನಲ್ಲಿ ಮೆಸೇಜ್ ಮಾಡುತ್ತಾರೆ. ಅಲ್ಲಿಗೆ ನೀವು ಕರೆ ಮಾಡದೆ ನಿಮ್ಮ ವಸ್ತು ಮಾರಬಹುದು

೨ .ನನ್ನ ನಂಬರ್ ಕ಼್ವಿಕರ್ ನಲ್ಲಿ ಸುರಕ್ಷಿತವೆ ?
ಉತ್ತರ : ಹೌದು. ಕ಼್ವಿಕರ್ ಸಂಸ್ಥೆ ಗ್ರಾಹಕರ ಮೊಬೈಲ್ ನಂಬರ್ ಸುರಕ್ಷಿತವಾಗಿಡುತ್ತದೆ.

ಹಳೆವಸ್ತುಗಳ ಮಾರಾಟ ಇನ್ನು ಸುಲಭ .. ನೀವು ಕೂಡ ಕ಼್ವಿಕರ್ ನೆಕ್ಷ್ಟ್ ಡೌನ್ಲೋಡ್ ಮಾಡಿ !

Asus Indibloggers Meet |Jan 30 2015 |

ಬರವಣಿಗೆಯಿಂದ ಬದಲಾವಣೆ ಸಾಧ್ಯ!

ಕಳೆದ ರವಿವಾರ ನಾನು ಆಫಿಸಲಿದ್ದೆ. ದೇವರು ವರ ಕೊಟ್ರು ಪುಜಾರಿ ಕೊಡಲಿಲ್ಲ ಅನ್ನೋಹಾಗೆ ನಮ್ಮ ಆಫಿಸಿಗೆ ರಜವಿದ್ದರೂ ಅನಿವಾರ್ಯ ಕಾರಣಕ್ಕಾಗಿ ಹೋಗಬೇಕಾಗಿತ್ತು. ತುಂಬಾ ಹಿಂಸೆಯಿಂದ ಕೆಲಸ ಮಾಡುತ್ತಿರುವಾಗ ನನಗೊಂದು ಮಿಂಚಾಚೆ ಬಂದಿತ್ತು. Indiblogger ಇಂದ . Indibloggers Meet  ಇದೆ ಜನೆವರಿ ೩೦ರಂದು ಐಟಿಸಿ ಹೋಟೆಲ್ ನಲ್ಲಿ ಎಂದು ಅದರಲ್ಲಿ ಬರೆದಿತ್ತು.. ನನಗೆ ಎಷ್ಟು ಖುಷಿಯಾಯಿತು ಎಂದರೆ ಅಂದು ಆಫಿಸಿಗೆ ಬಂದಿದ್ದರಿಂದಲೇ ಈ ಆಮಂತ್ರಣ ಬಂದಿರಬಹುದು ಎಂದು ನನ್ನ ಸಹದ್ಯೋಗಿಗಳಿಗೆ ಟ್ರೀಟ್ ಕೊಡಿಸಿದ್ದೆ 😀

ಜನೆವರಿ ೩೦ರಂದು ಸಂಜೆ ೫:೩೦ಕ್ಕೆ ಕಾರ್ಯಕ್ರಮ ಶುರುವಾಯಿತು. ಬಂದ ಎಲ್ಲ ಆಹ್ವಾನಿತರನ್ನು ಉತ್ತೇಜಿಸಲು
Indiblogger ತಂಡದಿಂದ ಸಂಗೀತ ಕಾರ್ಯಕ್ರಮವಿತ್ತು.. ರಾಯಲ್ ಹೋಟೆಲ್ ನಲ್ಲಿ ರಾಯಲ್ ವೆಲ್ಕಮ್ ಅನ್ನಬಹುದು ..

ಈ ಕಾರ್ಯಕ್ರಮವನ್ನು ಅಸುಸ್ ಸಂಸ್ತೆ ಆಯೋಜಿಸಿತ್ತು .ಸುಮಾರು ೨೦೦ ಬ್ಲೋಗ್ಗೆರ್ಸ್ ಬಂದಿದ್ದು ವಿಶೇಷ.
ಬರವಣಿಗೆ ನಂಬಿಕೊಂಡ ಬಹಳಷ್ಟು ಜನವನ್ನು ಭೇಟಿಯಾದ ಸಂತೋಷದೊಂದಿಗೆ ನನ್ನ ವೀಕೆಂಡ್ ಶುರು ಮಾಡಿದೆ ..

ಮಳೆಯಲಿ ಕೊಡೆ ಹಿಡಿದು…

ಮಳೆಯಲಿ ಕೊಡೆ ಹಿಡಿದು
ಹೊರಟವಳ ಜಡೆ ಕಂಡು
ಮನದ ಮುಗಿಲಲ್ಲಿ ಮುಂಗಾರು ಮಳೆ

ಹಸಿಯಾದ ನೆಲಕೆ ಬೀಳದಂತೆ
ಮೈತಬ್ಬಿದ ದುಪ್ಪಟ ಜಾರದಂತೆ
ಕೊಡೆ ಬಿಗಿ ಹಿಡಿದು
ಆಗೊಮ್ಮೆ ಇಗೊಮ್ಮೆ ಜಿಗಿದು
ತನ್ನ ಕಾಲ್ಗೆಜ್ಜೆ ಸದ್ದು ಮಾಡುವಾಗ
ಮಳೆ ಹನಿಗಳೂ ಅದರ ತಾಳಕ್ಕೆ ಕುಣಿದವು
ಅವಳಿಗೆ ಗೊತ್ತಾಗದಂತೆ ಅವಳ
ಪಾದ ತೊಳೆದವು!

ಮಳೆಯ ಹನಿಗಳೇ..

ಮಳೆಯ ಹನಿಗಳ ಸಾಲೆ
ನೀವೊದಿ ನಾ ಬರೆದ ಓಲೆ
ನನ್ನ ನಲ್ಲೆ ಕೇಳುವ ಹಾಗೆ
ನನ್ನಲ್ಲೇ ಅವಳು ಸೇರುವಾಗೆ

ಜೋರಾಗಿ ಸುರಿಯದಿರಿ
ಹೆಚ್ಚು ಅವಳ ನೆನಸದಿರಿ
ಆದರು ಸುರಿಯುತಿರಿ
ಅವಳು ಬಚ್ಚಿಟ್ಟ ಪ್ರೀತಿಯು ಕರಗಿ
ಹರಿದು ನನ್ನ ಸೇರುವಂತೆ ..
ನನ್ನನ್ನೇ ಹೀರುವಂತೆ

ಮಳೆಯ ಹನಿಗಳೇ
ನಾ ಬರೆದ ಸಾಲಿನೊಳಗೆ ಅವಿತಿದ್ದು
ಕಣ್ಣೀರೆಂದು ಅವಳಿಗೆ ಹೇಳದಿರಿ
ಅವಳನ್ನೂ ಅಳಿಸದಿರಿ
ಅವಳು ಅತ್ತರೆ
ನನ್ನ ಹೃದಯ ಅತ್ತಂತೆ

ದೇಶಪ್ರೇಮ

ಮಳೆಬಂದಾಗ
ರಾಷ್ಟಧ್ವಜ ನೆನೆಯದಂತೆ
ಕೊಡೆ ಹಿಡಿದವನ
‘ದೇಶಪ್ರೇಮ’ ಕಂಡು
ಭಾರತಾಂಬೆ ಮುಗುಳ್ನಕ್ಕಳಂತೆ!

ಓ ಪ್ರೀತಿಯೇ ..

ಇಡೀ ರಾತ್ರಿ ನಿನ್ನ ಕನಸು
ಸರಿ ಮಾಡು ನನ್ನ ಮನಸು
ಈ ಹೃದಯ ನಿನ್ನದೇ
ಬಾ ಬೇಗ ಸಂಚರಿಸು

ನಿನ್ನೆದೆಯ ವಾದ್ಯ ಹೊಮ್ಮಿಸಿದ
ಮನೋಹರ ಶ್ರುತಿಗೆ
ನನ್ನ ಹೃದಯ ಹೂ ಅರಳಿದೆ
ನಿನ್ನ ಮೌನ ಆಡಿದ ಮಾತಿಗೆ
ಹೊಸ ಪ್ರೇಮಕಾವ್ಯ ಬರಲಿದೆ

ಒಮ್ಮೆ ನೋಡು ನನ್ನ ಪಾಡು ..

ಒಮ್ಮೆ ನೋಡು ನನ್ನ ಪಾಡು
ನೀ ಮರೆಯಾಗುವ ಮುನ್ನ
ಒಮ್ಮೆ ಕೇಳು ಹೃದಯ ಗೋಳು
ನನ್ನ ನೀ ಮರೆಯುವ ಮುನ್ನ

ಕಣ್ಣಿಗೆ ಕಣ್ಣನಿಟ್ಟು
ಭಾವಕ್ಕೆ ಜೀವ ಕೊಟ್ಟು
ಎಲ್ಲ ಮರೆತು ಹೊರಟೆಯ..
ನಾಲ್ಕು ಹನಿ ಕಣ್ಣೀರ ಬಿಟ್ಟು
ನೂರು ನೆನಪುಗಳ ಕೊಟ್ಟು

ಒಮ್ಮೆ ನೋಡು ನನ್ನ ಪಾಡು
ನೀ ಮರೆಯಾಗುವ ಮುನ್ನ
ನನ್ನ ನೀ ಮರೆಯುವ ಮುನ್ನ

ಎದೆಯ ಮೇಲೆ ನಿನ್ನ ಬರವಣಿಗೆ
ಎದೆಯೊಳಗೆ ಪ್ರೀತಿಯ ಮೆರವಣಿಗೆ
ಎಲ್ಲ ಮರೆತು ಹೊರಟೆಯ
ನಾ ತಲುಪದ ಊರಿಗೆ
ಮೋಸವ ಮಾಡಿ ನನ್ನ ಪ್ರೀತಿಗೆ

ಒಮ್ಮೆ ನೋಡು
ನನ್ನ ಪಾಡು
ನೀ ಮರೆಯಾಗುವ ಮುನ್ನ
ನನ್ನ ನೀ ಮರೆಯುವ ಮುನ್ನ
ನನ್ನ ನೀ ಮರೆಯುವ ಮುನ್ನ

ಸರಳ ಸಾಲುಗಳು – ೮

೧.

ಕಥೆಯಾದರೂ ವ್ಯಥೆಯಾಗಿಯಾದರು
ಬಂದು ಸೇರು ನನ್ನ ಹೃದಯ ಪುಟದೊಳಗೆ
ನನ್ನ ಉಸಿರನ್ನೇ ತುಂಬುವೆ
ಪ್ರತಿ ಪುಟದ ಸಾಲಿನೊಳಗೆ
ನಿನಗೆ ನಾ ಬರೆದ ಪದಗಳೇ
ನನ್ನ ಕಣ್ಣೀರ ಸಂತ್ಯೆಸಿವೆ…

೨.
ನಾ ಬರೆದ ಕವನದ ಸಾಲುಗಳಲ್ಲಿ
ಹೃದಯದ ನೋವಿದೆ
ಮೊದಲ ಪ್ರೀತಿಯ ಸಾವಿದೆ

೩.
ಹೃದಯ ಕಾರಾಗೃಹದಲ್ಲಿ
ಬಂಧನವಾಗಿದ್ದ ಮಾತುಗಳು
ಕಣ್ಣೀರಾಗಿ ಬಿಡುಗಡೆ ಹೊಂದಿವೆ
೪.
ಸಾವಿರ ಮಾತಿದ್ದರೂ
ಮೌನ ಮಾತಾಯಿತು
ಈ ಘಳಿಗೆ ..
ಪದಗಳಿಗೆ ಹದವಿದ್ದರೂ
ಮಾತು ಮೌನವಾಯಿತು
ಎದೆಯೊಳಗೆ..

ಭಾವದತೀರದಲ್ಲಿ

ಭಾವದತೀರದಲ್ಲಿ
ತೀರದ ದಾಹವಿದೆ
ಮಾಯದ ಗಾಯದಲ್ಲಿ
ನೋವಿನ ಮೋಹವಿದೆ..

]

ನಾನೊಬ್ಬ ಕಲಾವಿದ

ನಾನು ಕಲಾದೇವಿಯ ಆರಾಧಕ
ನನ್ನ ಸ್ವಕಪೊಲಕಲ್ಪನೆಯ ಕುಂಚಗಳಿಗೆ
ಭಾವನೆಗಳ ಬಣ್ಣವ ಲೇಪಿಸಿ
ಚಿತ್ರಿಸಿದ ಭಾವಚಿತ್ರ
ನನ್ನ ಕ್ರಿಯಾಶೀಲತೆಯ ಪ್ರತೀಕ

ನನ್ನದು ಬಣ್ಣದ ಲೋಕವೆಂದು
ಹೀಯಾಲಿಸಬೇಡಿ..
ಬಣ್ಣ ಹಚ್ಚಿ ನಟಿಸುವರು ನೀವಲ್ಲವೇ ?
ನಿಮ್ಮ ಮುಖವಾಡದ ಬಣ್ಣವನ್ನು
ನನ್ನ ಚಿತ್ರದಲ್ಲಿ ತೆರೆದಿಡುತ್ತೇನೆ
ನನ್ನ ಮೌನದ ಮಾತನ್ನು
ಚಿತ್ರದೊಂದಿಗೆ ಮಾತನಾಡಿಸುತ್ತೇನೆ..

ಬಣ್ಣವಿರದಿದ್ದರೆ ನನ್ನ ರಕ್ತದೊಂದಿಗೆ
ನೀರಿರದಿದ್ದರೆ ನನ್ನ ಕಣ್ಣೀರಿನೊಂದಿಗೆ
ಚಿತ್ರ ಬಿಡಿಸುತ್ತೇನೆ
ಹೃದಯದ ಭಾರ ಇಳಿಸುತ್ತೇನೆ

ನಾನು ಭಾವಜೀವಿ
ನಾನು ಸ್ವಪ್ನಜೀವಿ
ನಾನು ಧ್ಯೇಯಜೀವಿ
ಕನಸುಗಳ ಲೋಕದಲ್ಲಿ
ನಾನು ಚಿರಂಜೀವಿ!