ಭಾವದತೀರದಲ್ಲಿ
ತೀರದ ದಾಹವಿದೆ
ಮಾಯದ ಗಾಯದಲ್ಲಿ
ನೋವಿನ ಮೋಹವಿದೆ..
]
ಭಾವದತೀರದಲ್ಲಿ
ತೀರದ ದಾಹವಿದೆ
ಮಾಯದ ಗಾಯದಲ್ಲಿ
ನೋವಿನ ಮೋಹವಿದೆ..
]
ನಾನು ಕಲಾದೇವಿಯ ಆರಾಧಕ
ನನ್ನ ಸ್ವಕಪೊಲಕಲ್ಪನೆಯ ಕುಂಚಗಳಿಗೆ
ಭಾವನೆಗಳ ಬಣ್ಣವ ಲೇಪಿಸಿ
ಚಿತ್ರಿಸಿದ ಭಾವಚಿತ್ರ
ನನ್ನ ಕ್ರಿಯಾಶೀಲತೆಯ ಪ್ರತೀಕ
ನನ್ನದು ಬಣ್ಣದ ಲೋಕವೆಂದು
ಹೀಯಾಲಿಸಬೇಡಿ..
ಬಣ್ಣ ಹಚ್ಚಿ ನಟಿಸುವರು ನೀವಲ್ಲವೇ ?
ನಿಮ್ಮ ಮುಖವಾಡದ ಬಣ್ಣವನ್ನು
ನನ್ನ ಚಿತ್ರದಲ್ಲಿ ತೆರೆದಿಡುತ್ತೇನೆ
ನನ್ನ ಮೌನದ ಮಾತನ್ನು
ಚಿತ್ರದೊಂದಿಗೆ ಮಾತನಾಡಿಸುತ್ತೇನೆ..
ಬಣ್ಣವಿರದಿದ್ದರೆ ನನ್ನ ರಕ್ತದೊಂದಿಗೆ
ನೀರಿರದಿದ್ದರೆ ನನ್ನ ಕಣ್ಣೀರಿನೊಂದಿಗೆ
ಚಿತ್ರ ಬಿಡಿಸುತ್ತೇನೆ
ಹೃದಯದ ಭಾರ ಇಳಿಸುತ್ತೇನೆ
ನಾನು ಭಾವಜೀವಿ
ನಾನು ಸ್ವಪ್ನಜೀವಿ
ನಾನು ಧ್ಯೇಯಜೀವಿ
ಕನಸುಗಳ ಲೋಕದಲ್ಲಿ
ನಾನು ಚಿರಂಜೀವಿ!
ದೇವರಂಥ ಅಮ್ಮನನ್ನು
ವೃದ್ಧಾಶ್ರಮಕ್ಕೆ ಸೇರಿಸಿ
ಪ್ರತಿವಾರ ತಪ್ಪದೇ
ದೇವಸ್ತಾನಕ್ಕೆ ಹೋಗುವ
ಮಗನು ಆಸ್ತಿಕನಾಗುವುದುಂಟೆ ?
ಅವಳು ಹೂ
-ಬಿಸಿಲಿಗೆ ನಿಂತು
ಬೆವರಿಳಿಸುವಾಗ
ನನ್ನ ಹೃದಯ ನರಳಿತು
ಆ ನೇಸರನಿಗೆ ಅಡ್ಡಾಗಿ
ಮಧುಮೇಘ ಬಂದು
ಅವಳಿಗೆ ನೆರಳಾಯಿತು
ನನ್ನ ಹೃದಯ ನಲಿಯಿತು..
೧.
ಏನು ಬರೆಯಬೇಕೆಂದರೂ
ಅವಳು ನೆನಪಾಗುತ್ತಾಳೆ
ಬರೆಯುವುದಕ್ಕೆ ನೆಪವಾಗುತ್ತಳೆ
೨.
ಹುಡುಕಿದರೂ ಸಿಗದವಳನ್ನು
ಹುಡುಕುತ್ತಿದೆ ಹೃದಯ ..
೩.
ಅವಳಿಗೆಂದೇ ಬರೆದ ಹಾಡಿಗೆ
ಶೀರ್ಷಿಕೆ ಹುಡುಕುತ್ತಿದ್ದೇನೆ.
ಅವಳ ಹೆಸರಿನ ಶೀರ್ಷಿಕೆಯಡಿ
ಇನ್ನೂ ಬರೆಯುತ್ತಲೇ ಇದ್ದೇನೆ
೪.
ಎಲ್ಲರಿಂದಲೂ ನನ್ನನ್ನು ದೂರ ಮಾಡಿ
ಅವಳು ನನ್ನಿಂದ ದೂರವಾದಳು ..
೧.
ಎಲ್ಲ ಹೇಳುವ ನಿನ್ನ ಕಣ್ಣು
ಇಂದೇಕೋ ಮೌನವಾಗಿದೆ
ಉಸಿರಿದ್ದೂ ಈ ಜೀವ ಶವವಾಗಿದೆ
೨.
ನೀ ಬರುವ ದಾರಿ ಕಾದು ಕಾದು
ನನ್ನ ಹೃದಯ ಸತ್ತು ಹೋಗಿದೆ
ಬರದೆ ನಿನಗೆ ಕೊಳೆತ ವಾಸನೆ ?
ನಿನ್ನ ನೆನಪುಗಳ ಜೊತೆ
ನನ್ನ ಹೃದಯವನ್ನು ಉಗಿಯಲು
ಒಮ್ಮೆ ಬರಬಾರದೇ ನೀನು
೩.
ಬಿಟ್ಟು ಹೋದ ಹುಡುಗಿಯ
ನೆನೆದು ಅತ್ತರೆ ಕಣ್ಣೀರು ಬರುತ್ತೆ ..
ಹುಡುಗಿ ಬರಲ್ಲ ..
೪.
ಅವಳನ್ನು ಮರೆತು ಬಿಡಬೇಕೆಂಬುದನ್ನೇ
ಮರೆಯುತ್ತಿದೆ ನನ್ನ ಮನಸು