Month: January 2015

ಆಸ್ತಿಕ ?

ದೇವರಂಥ ಅಮ್ಮನನ್ನು
ವೃದ್ಧಾಶ್ರಮಕ್ಕೆ ಸೇರಿಸಿ
ಪ್ರತಿವಾರ ತಪ್ಪದೇ
ದೇವಸ್ತಾನಕ್ಕೆ ಹೋಗುವ
ಮಗನು ಆಸ್ತಿಕನಾಗುವುದುಂಟೆ ?

ಒಂದು ಮುಂಜಾನೆ..

ಅವಳು ಹೂ
-ಬಿಸಿಲಿಗೆ ನಿಂತು
ಬೆವರಿಳಿಸುವಾಗ
ನನ್ನ ಹೃದಯ ನರಳಿತು
ಆ ನೇಸರನಿಗೆ ಅಡ್ಡಾಗಿ
ಮಧುಮೇಘ ಬಂದು
ಅವಳಿಗೆ ನೆರಳಾಯಿತು
ನನ್ನ ಹೃದಯ ನಲಿಯಿತು..

ಸರಳ ಸಾಲುಗಳು – 7

೧.
ಏನು ಬರೆಯಬೇಕೆಂದರೂ
ಅವಳು ನೆನಪಾಗುತ್ತಾಳೆ
ಬರೆಯುವುದಕ್ಕೆ ನೆಪವಾಗುತ್ತಳೆ

೨.
ಹುಡುಕಿದರೂ ಸಿಗದವಳನ್ನು
ಹುಡುಕುತ್ತಿದೆ ಹೃದಯ ..

೩.
ಅವಳಿಗೆಂದೇ ಬರೆದ ಹಾಡಿಗೆ
ಶೀರ್ಷಿಕೆ ಹುಡುಕುತ್ತಿದ್ದೇನೆ.
ಅವಳ ಹೆಸರಿನ ಶೀರ್ಷಿಕೆಯಡಿ
ಇನ್ನೂ ಬರೆಯುತ್ತಲೇ ಇದ್ದೇನೆ

೪.
ಎಲ್ಲರಿಂದಲೂ ನನ್ನನ್ನು ದೂರ ಮಾಡಿ
ಅವಳು ನನ್ನಿಂದ ದೂರವಾದಳು ..

ಸರಳ ಸಾಲುಗಳು – 6

 ೧.
ಎಲ್ಲ ಹೇಳುವ ನಿನ್ನ ಕಣ್ಣು
ಇಂದೇಕೋ ಮೌನವಾಗಿದೆ
ಉಸಿರಿದ್ದೂ ಈ ಜೀವ ಶವವಾಗಿದೆ

೨.
ನೀ ಬರುವ ದಾರಿ ಕಾದು ಕಾದು
ನನ್ನ ಹೃದಯ ಸತ್ತು ಹೋಗಿದೆ
ಬರದೆ ನಿನಗೆ ಕೊಳೆತ ವಾಸನೆ ?
ನಿನ್ನ ನೆನಪುಗಳ ಜೊತೆ
ನನ್ನ ಹೃದಯವನ್ನು ಉಗಿಯಲು
ಒಮ್ಮೆ ಬರಬಾರದೇ ನೀನು

೩.
ಬಿಟ್ಟು ಹೋದ ಹುಡುಗಿಯ
ನೆನೆದು ಅತ್ತರೆ ಕಣ್ಣೀರು ಬರುತ್ತೆ ..
ಹುಡುಗಿ ಬರಲ್ಲ ..

೪.
ಅವಳನ್ನು ಮರೆತು ಬಿಡಬೇಕೆಂಬುದನ್ನೇ
ಮರೆಯುತ್ತಿದೆ ನನ್ನ ಮನಸು

ಹೊಸಬೆಳಕು ನೀ ಬಂದರೆ…

ಹೊಸಬೆಳಕು ನೀ ಬಂದರೆ
ಹೊಸಬದುಕು ನೀನು ಜೊತೆಯಾದರೆ
ಸಾಕೀ ವಿರಹ ನೀ ಬಾರೆ ಸನಿಹ
ಜೀವವೇ ಕೊಡುವೆ
ನೀ ಬೇಡುವುದಾದರೆ..

ಏನು ಬೇಕು
ಎಲ್ಲ ಕೇಳು
ನಿನ್ನ ಅಪ್ಪಿ ನಾ ಕೊಡುವೆ
ಏನೇ ಆಗಲಿ
ಏನೇ ಹೋಗಲಿ
ನಿನ್ನನ್ನೇ ನಾ ಒಪ್ಪಿಕೊಳ್ಳುವೆ .

ನನ್ನಲ್ಲಿ ನೀನೇ ಇರುವೆ
ಕಂಡಲ್ಲಿ ನೀನೇ ಸಿಗುವೆ
ಏನಿದು ಹೊಸ ಭಾವ ಮೂಡಿದೆ
ಈ ಭಾವಕೊಂದು ಜೀವ ನೀಡು
ಮರು ಮಾತನಾಡದೆ..

ಕಡಲ ತೀರದಿ ನಿಂತು ..

ನಿದ್ದೆಗೆ ಜಾರು ನೀನು
ನನಗೂ ಹೇಳದಂತೆ
ಕನಸಲ್ಲಿ ಕರೆ ನೀನು
ನಾನೇ ಬರುವಂತೆ

ಪ್ರೀತಿಸು ಒಮ್ಮೆ ನನ್ನ
ನನ್ನ ನಾನೇ ಮರೆಯುವಂತೆ
ಮೋಹಿಸು ಒಮ್ಮೆ ನನ್ನ
ಹೊಸ ಹಾಡು ಬರೆಯುವಂತೆ

ಕಡಲ ತೀರದಿ ನಿಂತು
ಅಲೆಗಳ ಜೊತೆ ಮಾತಿಗಿಳಿಯೋಣ
ಒಂದೊಂದು ಅಲೆಗಳಿಗೂ
ನಮ್ಮ ಪ್ರೀತಿ ಹಂಚೋಣ

ಏನು ಹೇಳಲಿ
ಏನು ಕೇಳಲಿ
ಒಂದೊಂದು ತಿಳಿಯುತ್ತಿಲ್ಲ
ಈ ಪ್ರೀತಿಯಿಂದಲೇ ಎಲ್ಲ ಹೀಗೆ
ನನ್ನ ಲೇಖನಿಯೂ ಮೂಡುತ್ತಿಲ್ಲ..

ಮೌನ ಒಂದೇ ನಿನ್ನ ಭಾಷೆ…

ಮೌನ ಒಂದೇ ನಿನ್ನ ಭಾಷೆ
ನಾ ಹೇಗೆ ತಿಳಿಯುವುದು
ಕಣ್ಣಲ್ಲಿ ಕಣ್ಣಿಡು ನೀನು
ಈ ಜೀವ ಉಳಿಯುವುದು

ನಿನ್ನ ಕಂಗಳು ನೋಡಿ
ಬೆಳದಿಂಗಳನು ಸುಳ್ಳು ಎನ್ನಬಹುದು
ನಿನ್ನ ನೋಡಲು,ಖುದ್ದಾಗಿ ಮುದ್ದಿಸಲು
ಚಂದಮಾಮ ಬರಬಹುದು…

ಇದು ಯಾವ ಸ್ನೇಹ
ಇದು ಯಾವ ಮೋಹ
ಹೇಗೆ ಹೇಳುವುದು
ಒಮ್ಮೆಮ್ಮೆ ಇದು ಪ್ರೀತಿ ಅನಿಸುವುದು

ಏನೇ ಅಂದರೂ
ಏನೇ ಬಂದರೂ
ಈ ಸ್ವಪ್ನ ನಿಜವಲ್ಲ
ನನ್ನಾಣೆ ನಂಬು ನನ್ನ
ನನ್ನ ಪ್ರೀತಿ ಸುಳ್ಳಲ್ಲ

ನನ್ನ ಪುಸ್ತಕ ಬಿಡುಗಡೆ ಸಮಾರಂಭ

ನನ್ನ ಎರಡನೆಯ ಪುಟ್ಟ ಪ್ರಯತ್ನ ,ನನ್ನ ಕವನ ಸಂಕಲನ ” ಭಾವಶರಧಿ ” ಪುಸ್ತಕ ಬಿಡುಗಡೆ ಸಮಾರಂಭ ಇದೇ ಜನೆವರಿ ೧೧ರಂದು ಧಾರವಾಡದ ಕನ್ನಡ ಸಾಹಿತ್ಯ ಪರಿಷತ್ ನಲ್ಲಿ ನಡೆಯಲಿದೆ.
ಡಾ. ಎಸ್.ಎಂ.ವೃಷಭೇಂದ್ರಸ್ವಾಮಿ, ನಿವೃತ್ತ ಪ್ರಾಧ್ಯಾಪಕರು ,ಕವಿವಿ ,ಧಾರವಾಡ ಅವರು ಅಧ್ಯಕ್ಷತೆ ವಹಿಸಲಿದ್ದಾರೆ
ಡಾ. ಲಿಂಗರಾಜ ಅಂಗಡಿ ,ಜಿಲ್ಲಾಧ್ಯಕ್ಷರು ,ಕನ್ನಡ ಸಾಹಿತ್ಯ ಪರಿಷತ್ತು ಧಾರವಾಡ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ

ತಾವು ಬಂದು ನನ್ನ ಈ ಪುಟ್ಟ ಪ್ರಯತ್ನಕ್ಕೆ ಸಾಕ್ಷಿಯಾಗಬೇಕೆಂದು ವಿನಂತಿಸಿಕೊಳ್ಳುತ್ತೇನೆ

ನಿಮ್ಮವನೇ
ವಿನಯಕುಮಾರ್ .