ಅವಳೊಂದು ಸುಂದರ ಸುಳ್ಳು
ನನ್ನೆದೆಯ ಚುಚ್ಚುವ ಮುಳ್ಳು
ನಾನು ಸೋತಾಗ ನಕ್ಕು
ಗೆದ್ದಾಗ ನನ್ನ ಬಿಟ್ಟು ಹೋದವಳು..
ನನ್ನ ಏಕಾಂತಕ್ಕೆ
ವೈರಾಗ್ಯ ಕೊಡಿಸಿ
ನನ್ನ ಏಕಾಂಗಿ ಮಾಡಿ
ಮೊತ್ತೊಬ್ಬರ ಪ್ರೇಮಾಂಗಿಯಾದವಳು
ಬಾಳದಾರಿಯಲಿ ಅಕಸ್ಮಾತ್ ಸಿಕ್ಕು
ನನ್ನೊಂದಿಗೆ ನಾಲ್ಕು ಹೆಜ್ಜೆ ಹಾಕಿ
ದಾರಿ ತಪ್ಪಿಸಿ ಮರೆಯಾದವಳು..
ಕತ್ತಲೆಯ ಬಾಳಿನಲಿ
ಹಣತೆ ಹಿಡಿದು ಬಂದು
ಬೆಳಕಿನ ಆಸೆ ಹುಟ್ಟಿಸಿ
ಹಣತೆಯನ್ನು ಅವಳೇ ಆರಿಸಿ
ನನ್ನ ಬದುಕಿಗೆ ಕತ್ತಲಾದವಳು..
ಅವಳನ್ನು ಮತ್ತೆ ಪ್ರೀತಿಸಿವುದು
ಅಮಾವಾಸ್ಯೆ ರಾತ್ರಿಯಲಿ
ಚಂದಿರ ಕಾಣಲು ನಿಂತಂತೆ
ನೀರಿರದ ಬಾವಿಯಲ್ಲಿ
ಪ್ರತಿಬಿಂಬ ನೋಡಲು ಕೂತಂತೆ
ಸಮುದ್ರದ ಮಧ್ಯದೊಳಗೆ
ತೀರವ ಹುಡುಕಿದಂತೆ
ಶಾಯಿಯಿರದ ಲೇಖನಿಯಲ್ಲಿ
ಕವನ ಬರೆದಂತೆ.!
ನಗುವ ಮನದ ಭಾವಕೆ ಮಿಡಿವ ಹೃದಯ ನಾನಾಗಬೇಕೆಂಬ ಆಸೆಗೆ ನೀವೇ ಪ್ರೇರಣೆಯಾಗುತ್ತೀರಿ ಎಂಬುದೊಂದೇ ನನ್ನ ಬಯಕೆ.