Month: March 2015

ಕಣ್ಣಲ್ಲಿ ಕನಸೊಂದು …

ಕಣ್ಣಲ್ಲಿ ಕನಸೊಂದು
ಕಾದಿದೆ ನಿನಗೆಂದು
ಕಣ್ಣಿರ ಹನಿಯೊಂದು
ಬೇಡಿದೆ ದನಿಯೊಂದು
ಹೆಚ್ಚು ತಾಳೆನು
ವಿರಹದ ನೋವನು
ಒಮ್ಮೆ ಮುಡಿದಿಕೋ
ನೆನಪಿನ ಹೂವನು…

ಸದ್ದು ಮಾಡದೆ
ಮುದ್ದು ಮಾಡುತ
ಮದ್ದು ನೀಡು
ಹೃದಯ ಗಾಯಕೆ

ಹೆಚ್ಚು ಹೇಳದೆ
ಹುಚ್ಚು ಪ್ರೀತಿಗೆ
ಮೆಚ್ಚು ನೀನು
ಪ್ರಣಯ ಮಾಯೆಗೆ..

ಕಣ್ಣಲ್ಲಿ ಕನಸೊಂದು
ಕಾದಿದೆ ನಿನಗೆಂದು

ಕನಸಿನಲಿ ನಾನು ಬಂದು….

ಕನಸಿನಲಿ ನಾನು ಬಂದು
ಉಡಿಸುವೇನು ಸೀರೆಯೊಂದು
ಬೇಕಿದೆ ನಿನ್ನ ಅನುಮೋದನೆ.
ಹೊಸಭಾವ ಬರೆದ ಹಾಡು
ನಿನ್ನನ್ನೇ ಹೊಳುತಿದೆ ನೋಡು
ಬಾನೀಡು ಒಲವಿಗೊಂದು ಸ್ಪಷ್ಟನೆ …

ಈ ಜೀವವೇ ನಿನಗೆ ಅರ್ಪಿಸಲೇ
ಒಲವಹಾಡನು ಕಂಠಪಾಠ ಮಾಡಿ ಒಪ್ಪಿಸಲೇ
ನಿನಗೆಂದೇ ಕಾದಿರುವೆ ಪ್ರತಿ ಇರುಳ ಕನಸಿನಲಿ
ನೀನಿಲ್ಲದೇ ಮತ್ಯಾರೂ ಇಲ್ಲ ಈ ಮನಸಿನಲಿ

ಕಣ್ಣಿನಲ್ಲೆ ನಿನ್ನ ಕಟ್ಟಿಹಾಕಲೇ
ಹೃದಯದ ಬಾಗಿಲು ತಟ್ಟಿ ಹೋಗಲೇ
ಎಲ್ಲ ದಾರಿಯೂ ಕಾಯುತ್ತಿದೆ ನಿನಗೆ
ನೀ ಬಂದು ಹೊಸಜೀವ ನೀಡು ನನಗೆ ..

ಕನಸಿನಲಿ ನಾನು ಬಂದು
ಉಡಿಸುವೇನು ಸೀರೆಯೊಂದು …

ಕಣ್ಣಿನಲ್ಲೇ ಬಿಡಿಸು…

ಕಣ್ಣಿನಲ್ಲೇ ಬಿಡಿಸು
ಕನಸಿನ ಕಂತೆ
ಮನಸಲ್ಲೇ ನಡೆಸು
ನೆನಪಿನ ಸಂತೆ..
ಈ ಜೀವಕ್ಕೀಗ
ಬರೀ ನಿನ್ನದೇ ಚಿಂತೆ
ನಿನ್ನಲ್ಲಿಯೂ ಈಗ
ಸವಿಭಾವ ಬಂತೆ..

ಅನುರಾಗ ಬಂದಿದೆ
ಅಲೆಮಾರಿ ಹೃದಯಕೆ
ಅನುವಾದ ಬೇಕಿದೆ
ಅನುಬಂಧದ ಅನುಭವಕೆ..

ನಗುವ ಹೂವಿಗೊಂದು
ನಿನ್ನ ಹೆಸರಿಡಬೇಕಿದೆ
ಕರೆವ ಕೊರಳಿಗೊಂದು
ನಿನ್ನ ಉಸಿರುಬೇಕಿದೆ..

ಸಂತೋಷವೆಂದರೆ…

ಸಂತೋಷವೆಂದರೆ…

ಮೊನ್ನೆ ನನ್ನ ಒಬ್ಬ ಗೆಳೆಯ  ” Are you happy ” ? ಎಂದು ಕೇಳಿದ್ದ.. ನಾನು ಅದಕ್ಕೆ ಎರಡು ನಿಮಿಷ ಯೋಚಿಸಿ ಹೌದು ” Ya I am happy ಎಂದಿದ್ದೆ.. ಅಂದರೆ ನಾವು ಸಂತೋಷ ವಾಗಿ ಇದಿಯೋ ಇಲ್ವೋ ಅಂತ ಯೊಉಚನೆ ಮಾಡಿ ನವ್ವು ಉತ್ತರ ಕೊದುವಸ್ತು ನಾವು ಈ ಬದುಕಿನಲಿ ಕಳೆದು ಹೋಗಿದ್ದೇವೆ . ಅಥವಾ ಈ ಬದುಕಿನಲಿ ನಾವು ಕರಗಿ ಹೋಗಿದ್ದೇವೆ.

ನಮಗೆ ಗೆಲುವು ಸಂತೋಷ ಕೊಡುತ್ತದೆ ಅಂತ ತಿಳಿದುಕೊಳ್ಳುತ್ತಿವಿ ಆದರೆ ನಮಗೆ ಸೋಲು ಬಂದ ಮೇಲೆ ಆ ಸಂತೋಷ ಹಾರಿ ಹೋಗಿರುತ್ತದೆ.. ನಮೆಗೆನೋ ಸಿಕ್ಕರೆ ಸಂತ್ಹೊಷವೆನ್ನುತ್ತೇವೆ ಆದರೆ ಅದು ಸಿಕ್ಕರೆ ಮಾತ್ರ ಇಲ್ಲದಿದ್ದರೆ ಕಣ್ಣಿರೆ ಗತಿ

ಆಗಿದ್ದರೆ ನಿಜವಾದ ಸಂತೋಷವೆಂದರೆ ಏನು  ? ಯಾವುದು ನಮಗೆ ನಿಜವಾದ ಸಂತೋಷ ಕೊಡುತ್ತದೆ. ? ಯಾವುದರಿಂದ ನಮಗೆ ಸಂತೋಷ ಸಿಗುತ್ತದೆ ? ಅಸಲಿಗೆ ಸಂತೋಷ ಸಿಗುವುದೋ ? ಅಥವಾ ಅದು ಕೇವಲ ಒಂದು ಅನುಭವವೋ ? ನಾವು ಅನೇಕ ಬಾರಿ ನಮಗೆ ಗೊತ್ತಿಲ್ಲದ ಹಾಗೆನೆ ನಾವು ಸಂತೋಶವಾಗಿರುತ್ತೇವೆ.. ಅದು ನಮ್ಮೊಳಗಿನ ಸಂತೋಷ. ಅದಕ್ಕೆ ಕಾರಣ ನಾವು ಹುಡುಕಿಕೊಂಡು ಹೋಗಲ್ಲ ಆದರೆ ಅದು ತಂತಾನೆ ಅಗಿಬುಡುತ್ತದೆ.

ತುಂಬಾ ದಿನಗಳ ನಂತರ ನಿಮ್ಮ ನೇಟಿವ್ ಪ್ಲೇಸ್ ಹೋದರೆ ನಿಮ್ಮ ಮುಖ ಕಮಲದ ಹಾಗೆ ಅರಳುತ್ತದೆ. ನಿಮ್ಮ ಮನೆ ನೋಡಿದಕೂದಲೇ ನಿಮ್ಮ ಮನಸಿಗೆ ಅದೇನೋ ಖುಷಿ. ಮನೆಗೆ ಹೋದ ಮೇಲೆ ಅಮ್ಮ ಮಾಡಿದ ಅಡುಗೆ ಊಟ ಮಾಡಿದ ಕೂಡಲೇ ನಿಮ್ಮ ನಾಲಿಗೆ ಆಗುವ ಸಂತೋಷ ಹೇಳತೀರದು. ಹೀಗೆ ನಾವು ಸಂತೋಷಗಳನ್ನು ಹುಡುಕಿಕೊಂಡು ಹೋಗದಿದ್ದರೂ ಅದಾಗೇ ಅದೇ ನಿಮ್ಮನ್ನು ತಲುಪುತ್ತದೆ..

ನಿಮ್ಮ ಊರಿಗೆ ಹೋದಾಗ , ನಿಮ್ಮ ಬಾಲ್ಯದ ಗೆಳೆಯರೆಲ್ಲ ಸೇರಿ ಚಹಾ ಕುಡಿಯುವಾಗ ಆಗುವ ಸಂತೋಷವೇ ಬೇರೆ.

ಬಾಲ್ಯದ ನೆನೆಪು ಮಾದಿಕೊಲೂತ್ತ ಸಂಜೆಯ ಸವಿಯೋದು ಏನು ಚಂದ ಅಲ್ಲವೇ ? ಅದು ಒಂದು ಖುಷಿ.

ನೀವು ಯಾವುದು ಊರಿಗೆ ಹೋಗುವಾಗ ನಿಮ್ಮ ಮೊಬೈಲ್ ಫೋನಿನಲ್ಲಿ ಒಂದು ಚಂದದ ಹಾಡು ಬಂದರೆ ಅದನ್ನು ಕೇಳುತ್ತ ನೀವು ನಿಮ್ಮ ಕಲ್ಪನೆಯ ಲೋಕಕ್ಕೆ ಹೋಗಿಬಂದ ಮೇಲೆ ಆಗುವ ಖುಷಿ ಅಷ್ಟಿಷ್ಟಲ್ಲ.

ಕೆಲವೊಂದ ಅಚ್ಚರಿಯ ಜೋತೆಜೋತೀ ಸಿಗುವ ಖುಶಿಗಲೂ ಇವೆ.. ನೀವು ಪರೀಕ್ಷೆಯಲ್ಲಿ ತುಂಬಾ ಕೆಟ್ಟದಾಗಿ ಮಾಡಿರುತ್ತೀರಿ. ಆದರೆ ರಿಸಲ್ಟ್ಸ್ನಲ್ಲಿ ನಿಮಗೆ ಹೆಚ್ಚು ಅಂಕ ಬಂದಿರುತ್ತೆ ಅದು ನಿಮಗೆ ಅಚ್ಚರಿ ತರಸಿದ್ದರೂ ನಿಮಗೆ ಸಂತೋಷವಾಗಿರುತ್ತದೆ.

ನೀವು ಬೇರೆ ಊರಿಗೆ ಹೋದಾಗ ನಿಮ್ಮ ಸಂಗಡ ಒಬ್ಬರು ಜೊತೆಯಿದ್ದು ನೀವು ಹರಟಲು , ನಗಾಡಲು  ಮಾತಾಡಲು ಒಬ್ಬರು ಸಿಕ್ಕರೆ , ಹಾಗೂ ಅವರೂ ನಿಮಂತೆಯೇ ಇದ್ದಾರೆ ನಿಮಗೆ ಆಗುವ ಸಂತೋಷವೇ ಬೇರೆ.

ನಮಗೆ ಹೆಚ್ಚು ಖಿಷಿ ಕೊಡುವುದು ಒಳ್ಳೆ ಊಟ , ಒಳ್ಳೆ ನಿದ್ದೆ ಅಲ್ವ ?

ರಾತ್ರಿ ನಿಮ್ಮ ಹಾಸ್ಟಲ್ ನಲ್ಲಿ ಊಟವಿರುವುದಿಲ್ಲ ಆಗ ಆಚೆ ಕಡೆ ಒಳ್ಳೆ ಊಟ ಮಾಡಿ , ಒಂದು ಕಪ್ ಚಹಾ ಕುಡಿದು ಬಂದರೆ ನಿಮಗೆ ಸಿಗುವ ಸಂತೋಷವೇ ಬೇರೆ.

ನೀವು ದಾರಿಯಲ್ಲಿ ಹೋಗುವಾಗ ನಿಮಗೆ ಒಬ್ಬ ಭಿಕ್ಷುಕ ಕಂಡರೆ ನೀವು ಸ್ವಲ್ಪ ಸಹಾಯ ಮಾಡಿ ಹೋದರೆ ನಿಮ್ಮ ಮನಸಿಗೆ ನಿರಾಳವಾಗುತ್ತದೆ. ಈ ಬದುಕು ಸಣ್ಣ ಪುಟ್ಟ ಸಂತೋಷಗಳಿಂದಲೇ ಅತ್ಯಂತ ಸುಂದರವಾಗಿದೆ.

ಇಂತಹ ಸಣ್ಣ ಪುಟ್ಟಾ ಸಂತೋಷಗಳೇ ನಮ್ಮ ಮನಸನ್ನು ಯಾವಗಲು ಪುಟ್ಟ ಮಗುವಿನತರಇಡುತ್ತದೆ.

ನಮಗೆ ಇಷ್ಟವಾಗುವ ಒಂದು ಸಿನೆಮಾ ನೋಡಿದರೆ, ಅಚ್ಚು ಮೆಚ್ಚಿನ ಗಾಯಕನ ಎದುರುಗದೇನೆ ಸಿಕ್ಕರೆ , ಇರುಲಿನಲ್ಲಿ ಖಾಲಿ ಇರುವ ರೋಡಿನಲ್ಲಿ ಬೈಕಿನ ಮೇಲೆ ಅತೀ ವೇಗವಾಗಿ ಹೋಗುವಾಗ, ಮಳೆಬಂದು ನಿಂತು ಆ ಸಿಹಿನ್ ತಂಗಾಳಿಯಲಿ ಸುಮ್ಮನೆ ನಡೆಕೊಂಡುವಾಗ, ಕಡಲ ತೀರದ ಅಲೆಗಳ ಸದ್ದನ್ನು ಮೌನದಲ್ಲೇ ಆಲಿಸುತ್ತಿರುವಾಗ ಕಡಲಾ ಅಲೆಗಳು ಬಂದು ನಿಮ್ಮ ಪಾದ ಸವರಿದಾಗ , ನಿಮ್ಮನ್ನು ತಮ್ಮತ್ತ ಸೆಳೆದಂತೆ ಭಾಸವಾದಾಗ , ಕಡಲ ತೀರದಿ ನಡೆಯುತ್ತಾ ನೀವು ಬಿಟ್ಟ ಹೆಜ್ಜೆ ಗುರುತುಗಳು ಅಲೆಗಳು ಅಳಿಸುವುದನ್ನು ಕಂಡಾಗ,  ಮೊದಲ ಸಂಬಳದಲ್ಲಿ ಅಪ್ಪ ಅಮ್ಮನಿಗೆ ಉಡುಗೊರೆ  ಕೊಟ್ಟಾಗ , ಮೆಚ್ಚಿನ ಗೆಳೆಯ/ಗೆಳತಿಯ ಹುಟ್ಟುಹಬ್ಬವನ್ನು ಆಚರಿಸುವಾಗ, ದೂರದಲ್ಲಿರುವ ಸ್ನೇಹಿತೆ/ ಸ್ನೇಹಿತನೊಂದಿಗೆ  ಮಾತನಾಡುವಾಗ,  ಫೇಸ್ಬುಕ್ ನಲ್ಲಿ ನಿಮ್ಮ ಫೋಟೋ ಗೆ ಹೆಚ್ಚು ಹೆಚ್ಚಿ ಲೈಕ್ ಬಂದಾಗ, ನಿಮ್ಮ ಕೆಲಸ ಮೆಚ್ಚಿ ನಿಮ್ಮ ಮ್ಯಾನೇಜರ್ ಶಹಭಾಶ್ ಗಿರಿ ಕೊಟ್ಟಾಗ., ನಿಮ್ಮ ಗೆಳತಿಯೊಂದಿಗೆ ಬೈಕ್ನಲ್ಲಿ ಸುತ್ತುವಾಗ ,ಗೆಳೆಯರೊಂದಿಗೆ ಟ್ರಿಪ್ ಹೋದಾಗ, ಬಾಲ್ಯದ ಸ್ನೇಹಿತ ಧಿಡಿರನೆ ಬಸ್ ಸ್ಟಾಪ್ ನಲ್ಲಿ ಸಿಕ್ಕಾಗ ,

ಹೀಗೆ ಪುಟ್ಟ ಪುಟ್ಟ ಸಂತೋಷಗಳು ನಮ್ಮ ಬದುಕನ್ನೇ ಸುಂದರವಾಗಿಸುತ್ತವೆ. ನಮ್ಮಲ್ಲಿ ಎಷ್ಟೇ ದುಡ್ಡಿದ್ದರೂ, ಎಷ್ಟೋ ಬಂಗಲೆ ,ಕಾರಿದ್ದರೂ ಈ ಪುಟ್ಟ ಸಂತೋಷಗಳನ್ನು ನಾವು ಅನುಭವಿಸದಿದ್ದರೆ ಬದುಕು ವ್ಯರ್ಥ ವಾದಂತೆ. ಅದಕ್ಕೆ ಯಾವುದೇ ಬೆಲೆ ಬರುವುದಿಲ್ಲ. ಇಂತಹ ಪುಟ್ಟ ಸಂತೋಷಗಳು ನಿಮ್ಮದಾಗಲಿ .

ಮೊನ್ನೆ ಕೋಕಾಕೋಲ ಅವರ  Coca-Cola International Day of Happiness http://CokeURL.com/96jnc.

ವಿಡಿಯೋ ನೋಡಿದ ಮೇಲೆ ನನಗೆ ಸಂತೋಷವೆಂದರೆ ಏನು ಎಂಬ ಸಣ್ಣ ಪ್ರಶ್ನೆ ಹುಟ್ಟಿಕೊಂಡಿತು. ಅದಕ್ಕೆ ಬರೆದ ಲೇಖನವಿದು

ಎಲ್ಲ ಹೇಳುವೆ ನಾನು

ಎಲ್ಲ ಹೇಳುವೆ ನಾನು
ಕನಸಿನಲಿ ನೀ ಬಂದರೆ
ನಿನ್ನವನಲ್ಲವೇ ನಾನು
ಮತ್ತೇನು ತೊಂದರೆ…

ನಿನ್ನ ಕಣ್ಣನೋಟ ಸಾಕು
ನೂರು ವರುಷ ಬಾಳಲು
ನಿನ್ನ ಸಣ್ಣಹಠ ಬೇಕು
ಹೃದಯ ಹರುಷ ಹೇಳಲು…

ಮೌನದ ಭಾಷೆಯನು
ನಿನ್ನ ಕಣ್ಣಿನಲ್ಲೆ ಕಲಿಯಬಲ್ಲೆ
ಹೆಚ್ಚು ಮಾತಾಡಬೇಡ ನೀನು
ಮೌನದಲ್ಲೇ ನಿನ್ನ ಮನಸೆರಬಲ್ಲೆ

ಎಲ್ಲ ಹೇಳುವೆ ನಾನು
ಕನಸಿನಲಿ ನೀ ಬಂದರೆ

ಆ ದಿನಗಳು…

ಪ್ರತಿಯೊಬ್ಬ ಜೀವನದಲ್ಲೂ ಒಬ್ಬ ಗಾಡ್ ಫಾದರ್ ಇರ್ತಾನೆ. ಅಂದರೆ ಕಷ್ಟದ ದಿನಗಳಲ್ಲಿ ನಮ್ಮನ್ನು ಕೈ ಬಿಡದೇ ಕಷ್ಟದಿಂದ ನಮ್ಮನ್ನು ಪಾರು ಮಾಡಿ ಏನನ್ನು ಅಪೇಕ್ಷಿಸದೆ ನಮ್ಮ ಗೆಲುವನ್ನೇ ಮಾತ್ರ ಬಯಸುವ ವ್ಯಕ್ತಿಗಳವರು.
ಕೆಲವೊಬ್ಬರಿಗೆ ಅನೇಕ ಜನ ಗಾಡ್ ಫಾದರ್ ಆಗಿಬಿಡುತ್ತಾರೆ. ಅಶೋತೋದು ಒಳ್ಳೆಯ ಜನ ಅವರ ಜೀವನದಲ್ಲಿ ಬಂದು ಅವರಿಗೆ ಸಹಾಯ ಮಾಡಿರುತ್ತಾರೆ. ಕೆಲವೊಮ್ಮೆ ಅಂಥವರನ್ನು ನಾವು ಮರೆತು ಬಿಡುತ್ತೇವೆ. ಅಥವಾ ಅವ್ರು ತಮಗೆ ತಾವೇ ಕಣ್ಮರೆ ಆಗಿಬಿಡುತ್ತಾರೆ. ಆದರೆ ಅವರ ಸಹಾಯದಿಂದ ನಾವು ಅದೆಸ್ಟೋ ನಮ್ಮ ಜೀವನದಲ್ಲಿ ಮುಂದೆ ಬಂದಿರುತ್ತೇವೆ ,ಗೆಲುವನ್ನ ಕಂಡಿರುತ್ತೇವೆ. ಅಂಥವರನ್ನು ನೆನೆದು ಅವರಿಗೆ ನಾವು ಎಷ್ಟು ಥ್ಯಾಂಕ್ಸ್ ಹೇಳಿದರೂ ಅದು ಕಡಿಮೆಯೇ..

ನನ್ನ ಜೀವನದಲ್ಲೂ ನನಗೆ ಮೂರು ಜನ ಗಾಡ್ ಫಾದರ್ ಇದಾರೆ ಎಂದರೆ ತಪ್ಪಿಲ್ಲ. ಆ ಮೂರು ಜನ ನನಗೆ ಒಂದೊಂದು ಕ್ಷಣದಲ್ಲಿ ನನ್ನ ಜೀವನದಲ್ಲಿ ಬಂದು ನನ್ನ ಬದುಕಿಗೆ ಸುಂದರ ತೀರುವು ಕೊಟ್ಟ ವ್ಯಕ್ತಿಗಳವರು. ಅವರು ಮಾಡಿದ ಆ ಸಹಾಯವನ್ನು ನೆನೆಯುವ ಪುಟ್ಟ ಪ್ರಯತ್ನ ನನ್ನದು. ನನ್ನ ಅಣ್ಣ ನವೀನ ಸಜ್ಜನ್ ಹಾಗೂ ನನ್ನ ಗೆಳೆಯರಾದ ದೀಪಕ್ ಸಿ.

ಮೊದಲಿಗೆ ನನ್ನ ಅಣ್ಣನ ನವೀನ ನನಗೆ ಮಾಡಿದ ಸಹಾಯವನ್ನು ನೆನೆಯುತ್ತೇನೆ….
ಎಸ್.ಎಸ್.ಎಲ್.ಸಿ ಯಲ್ಲಿ ನಾನು ೯೫.೩೬ ಶೇ. ತೆಗೆದು ಸ್ಕೂಲಿಗೆ ಪ್ರಥಮ ಹಾಗೂ ತಾಲ್ಲೂಕಿಗೆ ದ್ವಿತೀಯ ಸ್ಥಾನ ಪಡೆದಿದ್ದೆ. ಆದರೆ ನನ್ನ ಮುಂದಿನ ಶಿಕ್ಷಣದ ಕುರಿತು ನನಗೆ ಹಾಗೂ ನನ್ನ ಪಾಲಕರಿಗೆ ಚಿಂತೆಯಾಗಿತ್ತು. ಕಾರಣ ನನ್ನ ಅಪ್ಪ ಒಬ್ಬ ರೈತರಾಗಿದ್ದು ನಮ್ಮ ಮನೆಯ ಮುಖ್ಯ ಆದಾಯ ಕೃಷಿಯಿಂದಲೇ ಬರುತ್ತಿತ್ತು. ಆದರೆ ಆಗ ಮೂರುವರುಷದ ಸತತ ಬರಗಾಲದಿಂದ ಹೊಲದಲ್ಲಿ ಬೆಳೆದ ಬೆಳೆಗಳು ಕೈಗೆ ಬರದೆ ನಾವು ಆರ್ಥಿಕ ಪರಿಸ್ಥಿತಿ ಅನುಭವಿಸಬೇಕಾಗಿತ್ತು. ಪರಸ್ಥಳಕ್ಕೆ ಹೋಗಿ ಓದುವ ಪರಿಸ್ಥಿತಿ ಇರಲಿಲ್ಲ ಹಾಗೂ ನಮ್ಮ ಊರಿನಲ್ಲಿ ಓದುವ ಒಳ್ಳೆಯ ಕಾಲೇಜು ಇರಲಿಲ್ಲ. ಆಗ ಈ ಪರಿಸ್ಥಿಯನ್ನೂ ತಾನಾಗೆ ಅರಿತು ನನ್ನ ಅಣ್ಣ ನವೀನ ನನ್ನನು ಮತ್ತು ನನ್ನ ಅಮ್ಮನನ್ನು ಧಾರವಾಡಕ್ಕೆ ಭೇಟಿಯಾಗಲು ಕರೆದ.
ನಾನು ಮತ್ತು ನನ್ನ ಅಮ್ಮ ಇಬ್ಬರೂ ಧಾರವಾಡಕ್ಕೆ ಹೋದೆವು. ನವೀನ ಅಣ್ಣ ನಮ್ಮೊಂದಿಗೆ ಹಲವು ಘಂಟೆ ಚರ್ಚಿಸಿ ನನ್ನ ಪಿಯುಸಿ ಕಾಲೇಜಿನ ಪೂರ್ತಿ ವೆಚ್ಚ ತಾನೇ ನೋಡಿಕೊಳ್ಳುವುದಾಗಿ ಘೋಷಿಸಿದ. ಅಲ್ಲದೆ ಧಾರವಾಡದ ಜೆ .ಎಸ್ . ಎಸ್ .ಕಾಲೇಜಿನಲ್ಲಿಯೇ ಓದಲು ತಿಳಿಸಿದ. ಅವನ ಮಾತು ನನಗೆ ಇನ್ನು ನೆನಪಿದೆ ” ನೀನು ಓದಿ ನಿನ್ನ ಅಮ್ಮನನ್ನು ಚೆನ್ನಾಗಿ ನೋಡಿಕೋ.. ನಿನ್ನ ಅಮ್ಮ ಬಹಳ ಕಷ್ಟ ಪಟ್ಟಿದ್ದಾರೆ” ಎಂದಿದ್ದ.
ಜೆ .ಎಸ್ . ಎಸ್ .ಕಾಲೇಜಿಗೆ ಸೇರಿಕೊಂಡೆ. ಅವನ ಮಾರ್ಗದಂತೆ ಕಷ್ಟ್ ಪಟ್ಟು ಓದಿದೆ . ದ್ವಿತೀಯ ಪಿಯುಸಿಯಲ್ಲಿ ಶೇ.೯೧ ಪಡೆದು ಕಾಲೇಜಿಗೆ ಆರನೇ ಸ್ಥಾನ ಪಡೆದಿದ್ದೆ!
ಅವನು ಸಹಾಯ ಮಾಡಿದಕ್ಕೆ ನಾನು ಒಂದು ಒಳ್ಳೆಯ ಕಾಲೇಜಿನಲ್ಲಿ ಓದಿದೆ. ಅವನ ಪ್ರೇರಣೆಯಿಂದ ನಾನು ಕಶು ಪಟ್ಟು ಓದಿ ಉತ್ತಮ ಅಂಕ ಗಳಿಸಿದೆ ಆ ಮೂಲಕ ಅವನ ನನ್ನ ಮೇಲಿನ ಭರವಸೆಯನ್ನು ಉಸಿ ಗೊಳಿಸಲಿಲ್ಲ.
ನವೀನ ಅಣ್ಣ ನಿನಗೆ ಅಂತರಾಳದ ಧನ್ಯವಾದಗಳು!

ಮೊತ್ತೊಂದು ಮರೆಯಲಾಗದ ಘಟನೆ ಆಗಿದ್ದು ನಾನು ಎಸ್.ಜೆ.ಸಿ.ಇನಲ್ಲಿ ವ್ಯಾಸಾಂಗ ಮಾಡುವಾಗ
ನಾನು ಮೂರನೇ ಸೆಮಿಸ್ಟರ್ ಇರುವಾಗ ಆಗೊಂದು ಹೀಗೊಂದು ಕವಿತೆ ಬರೆಯುತ್ತಿದೆ. ಅದನ್ನು ಕೂಡಿಡಲು ಒಂದು ಬ್ಲಾಗ್ ಬರೆಯುತ್ತಿದ್ದೆ. ನಾನು ಅದಾಗಲೇ ಜಿ.ಎಫ್.ಎ ಎಂಬ ಸಂಸ್ಥೆಯಲ್ಲಿ member ಆಗಿ ಕೆಲಸ ಮಾಡುತಿದ್ದೆ
.ದೀಪಕ್ ಸಿ ಅದರ ಫೌಂಡರ್ ಆಗಿದ್ದು ಅದೊಂದು ಸಾಮಾಜಿಕ ಕಳಕಳಿಯ ಸಂಸ್ಥೆಯಾಗಿತ್ತು.

ಅದೊಂದು ದಿನ ನಾನು ನನ್ನ ಬ್ಲಾಗ್ ಕೊಂಡಿಯನ್ನು ನಾನು ಅವರಿಗೆ ಮೆಸೇಜ್ ಮಾಡಿದ್ದೆ!. ಅವರು ತಕ್ಷಣ ನನಗೆ ಉತ್ತರ ಕೊಟ್ಟು ” ನನ್ನ ನಾಳೆ ಭೇಟಿಯಾಗು ,ಒಬ್ಬ ಕವಿಯ ಮನೆಗೆ ಹೋಗೋಣ ” ಎಂದು ತಿಳಿಸಿದರು.
ಮರುದಿನ ಅವರು ಹೇಳಿದಂತೆ ಅವರನ್ನು ಭೇಟಿಯಾದೆ. ಅವರು ತಮ್ಮ ಕಾರಿನಲ್ಲೇ ನನ್ನನ್ನು ಆ ಕವಿಯ ಮನೆಗೆ ಕರೆದುಕೊಂಡು ಹೋದರು.ದಾರಿಯ ಮಧ್ಯ ಅವರು ಒಂದು ಪ್ರಶ್ನೆ ಕೇಳಿದರು ” ನಿನಗೆ ಪುಸ್ತಕ ಬಿಡುಗಡೆ ಮಾಡುವ ಉದ್ದೇಶವಿದ್ದರೆ ನಮ್ಮ ಜಿ.ಎಫ್.ಎ ಸಂಸ್ಥೆ ಯಿಂದಲೇ ಬಿಡುಗಡೆ ಮಾಡೋಣ” ಎಂದರು. ನನಗೆ ಮಹದಾಶ್ಚರ್ಯ ! ಅಲ್ಲೊಂದು ,ಇಲ್ಲೊಂದು ಕವಿತೆ ಬರೆಯೋನಿಗೆ ಪುಸ್ತಕ ಬಿಡುಗಡೆ ಭಾಗ್ಯ ಬಂದರೆ ಎಷ್ಟು ಖುಷಿಯಾಗಬೇಡ !
“ಇನ್ನಸ್ಟು ಕವಿತೆಗಳನ್ನು ಬರಿ.ಅವುಗಳನ್ನು ಮುಂದಿನ ವರ್ಷದ ಸಂಸ್ಥೆಯ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡೋಣ ” ಎಂದು ಭರವಸೆ ಕೊಟ್ಟರು.
ಮಾತಿಗೆ ತಕ್ಕಂತೆ ಮರುವರ್ಷ ” ಎನ್ನ ತೊದಲು ನುಡಿಗಳು ” ನನ್ನ ಮೊದಲ ಕವನ ಸಂಕಲನದ ಬಿಡುಗಡೆ ಅದ್ದೂರಿಯಗಿ ಆಯಿತು. ನನಗೆ ” ಕವಿ ” ಪಟ್ಟ ಸಿಕ್ಕಿತು!
ನನ್ನಲ್ಲಿದ್ದ ಕವಿಯನ್ನು ಗುರುತಿಸಿ ನೀನು ಮಾಡಿದ ಸಹಾಯಕ್ಕೆ ಧನ್ಯವಾದಗಳು ದೀಪಕ್ ಸಿ.!

ಹೀಗೆ ಎಲ್ಲರು ಜೀವನದಲ್ಲೂ ಒಬ್ಬರು ಈ ರೀತಿ ಸಹಾಯ ಮಾಡಿರುತ್ತಾರೆ.
ಮೊನ್ನೆ Housing.com ಅವರ https://housing.com/. ವಿಡಿಯೋ ನೋಡಿದಾಗ ನನಗೆ ಈ ಘಟನೆ ನೆನಪಾಯಿತು.ನಿಮ್ಮ ಜೀವನದಲ್ಲಿನ ಅತ್ಯಂತ ಗೆಲುವಿನ ಸಮಯವನ್ನು ಮೊತ್ತೊಮ್ಮೆ ಮೆಲಕು ಹಾಕಿ ಹಾಗೂ ನಿಮ್ಮ ಜೀವನದ ಆ ಮರೆಯಲಾಗದ ನೆನಪನ್ನು ನೀವು ತಿಳಿಸಿ.

ನಾ ಶೂನ್ಯವಾದೆ

ನೀನು
ನಾ ಬರೆಯಲಾಗದ
ಕವನ!

ನಿನ್ನ ಕಣ್ಣಸನ್ನೆಗೆ
ನಾ ಶೂನ್ಯವಾದೆ
ನೀ ತುಂಬಲೇಬೇಕು ನಷ್ಟ
ನೀ ನನಗೆ ಇಷ್ಟ!

ನಿನ್ನದೇ ಹೃದಯವಿದು …

ನಿನ್ನದೇ ಹೃದಯವಿದು
ನಿನ್ನಿಂದೆ ಬರುತಿದೆ
ನೀ ಕರೆದುಕೊಂಡು ಹೋಗುವೆಯಾ ?
ಅನುಮಾನವಿರದ ಅನುರಾಗವಿದು
ನಿನ್ನ ಸನಿಹ ಬೇಡುತಿದೆ
ನೀ ಹೇಳಬೇಡ ವಿದಾಯ..

ಅರಳದೆ ಅಳುತಿವೆ ಹೊವುಗಳು
ಹೇಳತೀರದ ಎದೆಯ ನೋವುಗಳು
ತೆರೆದುಕೊಂಡಿವೆ ಬಾಳಪುಸ್ತಕದ ಪುಟಗಳು
ಎಲ್ಲ ಪುಟದಲ್ಲೂ ವಿರಹದ ಬರಹಗಳು
ಅನುಮಾನವಿರದ ಅನುರಾಗವಿದು
ನಿನ್ನ ಸನಿಹ ಬೇಡುತಿದೆ
ನೀ ಹೇಳಬೇಡ ವಿದಾಯ….

ಮಳೆಯಲಿ ನಾನು ನೆನೆಯುತ್ತಿರುವೆ …

ಮಳೆಯಲಿ ನಾನು ನೆನೆಯುತ್ತಿರುವೆ
ನೀ ಕೊಡೆ ಹಿಡಿಯಬಾರದೆ
ಮನದಲಿ ನಿನ್ನ ನೆನೆಯುತ್ತಿರುವೆ
ನೀನೊಮ್ಮೆ ಈ ಕಡೆ ಬರಬಾರದೆ…

ಮಳೆಯಲಿ ನಾನು ನೆನೆಯುತ್ತಿರುವೆ…..

ಸುರಿದ ಮಳೆಹನಿಗೆ ದನಿಯಾಗೋಣ
ಬೀಸಿದ ತಂಗಾಳಿಯ ತಬ್ಬಿಕೊಳ್ಳೋಣ
ನಡೆದಷ್ಟು ದೂರ ನೀ ನನಗೆ ಹತ್ತಿರ
ಮನದ ಎಲ್ಲ ಪ್ರಶ್ನೆಗೆ ನೀನಾಗು ಉತ್ತರ.

ಮಳೆಯಲಿ ನಾನು ನೆನೆಯುತ್ತಿರುವೆ ..

ಕಾಮನಬಿಲ್ಲನೆ ಮುಡಿಸುವೆ ನಿನಗೆ
ಹೂಗಳ ರಾಶಿಯ ಹೊದಿಸುವೆ ನಿನಗೆ
ನೆನೆದಷ್ಟು ನವಿರಾಗಲಿ ತನುವು
ನಡೆದಷ್ಟು ಹಗುರಾಗಲಿ ಮನವು..

ಸಿಂಗಪೋರ್ ನೂಡಲ್ಸ್…

ಸಿಂಗಪೋರ್ ನೂಡಲ್ಸ್…

ಚೀನಾ ,ಸಿಂಗಪೋರ್ ಊಟ ಮಾಡಲೆಂದೇ ನಾನಂದು ಹೋಟೆಲ್ ಗೆ ಹೋಗಿದ್ದೆ.. ಬೀಜಿಂಗ್ ಬೈಟ್ಸ್ ಹೋಟೆಲ್ ಅದು.
ಅಂದು ಶನಿವಾರ ಆದ್ದರಿಂದ ಹೋಟೆಲ್ ತುಂಬಾ ಜನರಿದ್ದರು. ಅಲ್ಲಲ್ಲಿ ಚೀನಾದಿಂದ ಬಂದಂತಿರುವ ಜನ ಕಾಣಿಸುತ್ತಿದ್ದರು.
ಟೇಬಲ್ ಸಿಗಲು ಕೆಲ ಹೊತ್ತು ಕಾಯಬೇಕಿತ್ತು. ಕೊನೆಗೂ ಟೇಬಲ್ ದೊರಕಿತು..
ಮೆನ್ಯುನಲಿ ಏನು ಆರ್ಡರ್ ಮಾಡಬೇಕೆಂದೇ ತಿಳಿಯಲಿಲ್ಲ. ಅಷ್ಟೊಂದು ವಿಧ ವಿಧವಾದ ತಿನಿಸುಗಳು . ಕೊನೆಗೆ
ಸಿಂಗಪೋರ್ ನೂಡಲ್ಸ್ ಆರ್ಡರ್ ಮಾಡಿದೆ. ನನ್ನ ಗೆಳಯನು ಕೂಡ ಅದೇ ಆರ್ಡರ್ ಮಾಡಿದ.
ಹತ್ತು ನಿಮಿಷದ ನಂತರ ನನಗೆ ಸಿಂಗಪೋರ್ ನೂಡಲ್ಸ್ ದೊರಕಿತು. ವಾಹ್! ಅದೇನು ನೂಡಲ್ಸ್.

foodie

ನಾನು ಮಾಮೂಲಿಯಾಗಿ ರಸ್ತೆ ಬದಿಯಲ್ಲಿ ಮಾಡುವ ನೂಡಲ್ಸ್ ತಿನ್ನುತಿದ್ದೆ. ಆದರೆ ಸಿಂಗಪೋರ್ ನೂಡಲ್ಸ್ ತನ ರುಚಿಯಿಂದ ನನ್ನನ್ನು ಮೂಖವಿಸ್ಮಿತ ಮಾಡಿತು.
ನೀವು ಆ ರುಚಿ ಸವಿಯಬೇಕೆ ? http://discover.stayfareast.com/ ಭೇಟಿ ನೀಡಿ ಆರ್ಡರ್ ಮಾಡಿ

//