ಭರವಸೆಯ(ಯೇ) ಬೆಳಕು..

ಈ ಬದುಕಿನ ಮೇಲೆ ನಮಗೆ ಭರವಸೆ ಇರಬೇಕು. ಯಾವುದೇ ಸಮಯದಲ್ಲೂ ಧೃತಿಗೆಡಬಾರದು. ಬದುಕು ನಮ್ಮನ್ನು ಅನೇಕ ಬಾರಿ ಪರೀಕ್ಷಿಸುತ್ತದೆ.ನಾವು ಆ ಪರೀಕ್ಷೆಯಲ್ಲಿ ಸೋತರೂ ಪರವಾಗಿಲ್ಲ ಆದರೆ ಅದರಿಂದ ದೂರವಾಗಬಾರದು. ಕಷ್ಟಗಳನ್ನು ಎದುರಿಸುತ್ತಲೇ ಬದುಕಿನ ಸೌಂದರ್ಯವನ್ನು ಸವೆಯಬೇಕು. ಆದರೆ ಕೆಲವೊಮ್ಮೆ ನಾವು ಎಷ್ಟೇ ಧೈರ್ಯವಂತರಿದ್ದರೂ ಬದುಕಿನ ಅನಿರೀಕ್ಷಿತ ಸವಾಲುಗಳಿಗೆ ನಾವು ಕುಂಗಿಬಿಡುತ್ತೇವೆ.ಎಷ್ಟೋ ಸಲ ನಾವು ನಮ್ಮ ಸವಾಲುಗಳಿಗೆ ಸೋತು ಸಾಯಲು ಕೂಡ ತಯಾರಾಗಿಬಿಡುತ್ತೇವೆ. ಆದರೆ ಸೋಲು ಬದುಕಿನ ಒಂದು ಭಾಗ. ಸೋಲನ್ನೇ ಕೊನೆವೆಂದುಕೊಂಡರೆ ನಾವು ಏನನ್ನು ಜಯಿಸಲು ಸಾಧ್ಯವಿಲ್ಲ.
ಏರು ಪೇರುಗಳನ್ನು ದಾಟಿ ಹೋಗುವುದೇ ಚಂದ .ಒಂದು ಯಶಸ್ಸಿಗೆ ಅದರದೇ ಆದ ತಯಾರಿ ಮಾಡಲೇಬೇಕು ಅಂದಾಗ ಮಾತ್ರ ಆ ಗೆಲುವು ಸಾಧ್ಯ. ಗೆಲ್ಲಲೆಂದೇ ಹೊರಟರೆ ಯಾವುದೂ ಅಡ್ಡಿಬರುವುದಿಲ್ಲ..
ನನ್ನ ಜೀವನದಲ್ಲಿ ಅಂತಹ ಸಣ್ಣ ಸವಾಲುಗಳಿಗೆ ಕುಗ್ಗಿ ಹೋಗಿದ್ದೆ. ಆದರೆ ಅದರಿಂದ ಹೊರಬಂದಾಗ ಮಾತ್ರ ನನ್ನಲ್ಲಿ ಹೊಸ ಭರವಸೆಯ ಬೆಳಕು ಮೂಡಿತ್ತು. ಎಲ್ಲದಕ್ಕೂ ಸವಾಲೆಸಗುವ ಶಕ್ತಿ ಮತ್ತೆ ನನ್ನಲ್ಲಿ ಬಂದಿತ್ತು. ಆ ಪುಟ್ಟ ಕಥೆ ಹೇಳ್ತೀನಿ ಕೇಳಿ …
ನನ್ನ ಇಂಜಿನಿಯರಿಂಗ್ ಕೊನೆಯ ವರ್ಷ ಅದು.. ನನ್ನದು ವಿದ್ಯುನ್ಮಾನ ಮತ್ತು ಸಂಪರ್ಕ ವಿಭಾಗ. ನನ್ನ ಗೆಳೆಯರೂ ಅದಾಗಲೇ ನನ್ನ ವಿಭಾಗಕ್ಕೆ ಸಂಬಂಧಕ್ಕೆ ಪಟ್ಟ ಕೆಲಸವಿರುವ ಸಂಸ್ಥೆಗಳಲ್ಲಿ ಉದ್ಯೋಗ ಪಡೆದುಕೊಂಡಿದ್ದರು. ನಾನು ಟಿ.ಸಿ.ಎಸ್ ಸಂಸ್ಥೆಯಲ್ಲಿ ಉದ್ಯೋಗ ಸಿಕ್ಕಿತ್ತು. ಆದರೆ ನನ್ನ ವಿಭಾಗಕ್ಕೆ ಕೊಂಚವಾದರೂ ಸಂಬಂಧವಿರುವ ಸಂಸ್ಥೆಗೆ ಸೇರಬೇಕು ಎಂಬುದು ನನ್ನ ಆಶಯವಾಗಿತ್ತು.ನಾನು ಒಟ್ಟು ೨೨ಕ್ಕಿಂತ ಹೆಚ್ಚು ಪರೀಕ್ಷೆ ಬರೆದಿದ್ದೆ. ಆದರೆ ಕೆಲಸ ಗಿಟ್ಟಿಸಲು ಸಾಧ್ಯವಾಗಲಿಲ್ಲ. ಮನಸು ಕುಗ್ಗುತ್ತ ಹೋಯಿತು. ನನ್ನ ಕೊನೆಯ ಸೆಮಿಸ್ಟರ್ ಅನ್ನು ಬರೀ ಚಿಂತೆಯಲ್ಲೇ ಕಳೆದಿದ್ದೆ..
ಕಾಲೇಜು ಮುಗಿಯಿತು. ಟಿ.ಸಿ.ಎಸ್ ಸಂಸ್ಥೆಗೆ ಹೋಗುವ ಎಲ್ಲ ತಯಾರಿ ಮಾಡಿದ್ದೆ. ಆದರೆ ಅದೊಂದು ದಿನ ಬೆಂಗಳೂರಿನ “ಶ್ನೈಡೆರ್ ಎಲೆಕ್ಟ್ರಿಕ್” ಸಂಸ್ಥೆಯಿಂದ ಕರೆ ಬಂತು. ಮರು ದಿನವೇ ಪರಿಕ್ಷೆವಿರುವುದಾಗೀ ತಿಳಿಯಿತು. ಆದರೆ ನನ್ನ ಹುಟ್ಟೂರಿನಿಂದ ೫೦೦ಕಿ.ಮೀ ದೂರವಿರುವ ಬೆಂಗಳೂರಿಗೆ ಹೋಗುವ ಯಾವುದೇ ಇಷ್ಟವಿರಲಿಲ್ಲ.
ಕೊನೆಗೆ ನನ್ನ ಅಮ್ಮನ ಒತ್ತಾಯಕ್ಕೆ ಮಣಿದು ಬೆಂಗಳೂರಿಗೆ ಬಂದೆ. ನನ್ನ ಅಣ್ಣನ ಮನೆ ದೂರವಿರುವುದರಿಂದ
ಬಸ್ ಸ್ಟಾಂಡ್ ನಲ್ಲಿಯೇ ನಿತ್ಯಕರ್ಮಗಳನ್ನು ಮುಗಿಸಿ ರೆಡಿಯಾಗಿ ಆಫೀಸಿನ ಕಡೆಗೆ ಹೊರಟೆ. (ಸ್ನಾನ ಮಾಡದೇ ಪರೀಕ್ಷೆ ಬರೆದಿರುವುದು ಅದೇ ಮೊದಲ ಸಲ 😉 ).

ಪರೀಕ್ಷೆ ಆರಂಭವಾಯಿತು . ಮೊದಲ ಸುತ್ತೂ ಮುಗಿಯಿತು. ಮೊದಲ ಸುತ್ತಿನಲ್ಲಿ ನಾನೇ ಅಧಿಕ ಅಂಕ ಪಡೆದಿದ್ದೆ.
ನಂತರ ಎರಡನೇ ಮೂರನೇ ಸುತ್ತು ಮುಗಿಯಿತು. ಅಷ್ಟೊತ್ತಿಗೆ ಸಮಯ ಸಂಜೆ ೭ ಘಂಟೆ. Results ಹೇಳುವ ಸಮಯ. ನನ್ನೆದೆ ಜೋರಾಗಿ ಬದೆದುಕೊಳ್ಳುತಿತ್ತು. ಒಟ್ಟು ೨೦ ಜನ ಕೊನೆಯ ಸುತ್ತಿನವರೆಗೆ ಬಂದಿದ್ದೆವು. ೨೦ರಲ್ಲಿ ೧೧ಜನ ತೆಗೆದುಕೊಳ್ಳುವುದಾಗಿ ಮೊದಲೇ ಗೊತ್ತಿತ್ತು.

ಮೊದಲಿಗೆ ೪ ಅನುತ್ತಿರ್ಣ ವಿದ್ಯಾರ್ಥಿಗಳನ್ನು ಹೊರ ಕಳಿಸಲಾಯಿತು. ನನಗೆ ಆಗ ಕೊಂಚ ಸಮಾಧಾನ. ಅದಾಗಿ ನನ್ನ ಹೆಸರೊಂದಿಗೆ ಇನ್ನೂ ೪ ವಿದ್ಯಾರ್ಥಿಗಳ ಹೆಸರು ಕೂಗಿ ನಾವೆಲ್ಲರೂ On Hold ಇಡಲಾಗಿದೆ. ಮೊತ್ತೊಮ್ಮೆ Interview ಮಾಡಲಾಗುತ್ತೆ ಎಂದು ನಮ್ಮನ್ನು ಹೊರಕಳಿಸಲಾಯಿತು. ನನ್ನ ಕಣ್ಣಲ್ಲಿ ಆಗ ನೀರಾಡಿತ್ತು.

ವಿಧಿಯಿಲ್ಲದೇ ನಾವು ೫ ಜನ ಆಚೆಕಡೆ ಮೊತ್ತೊಂದು ಪರೀಕ್ಷೆಗೆ ಕಾಯುತ್ತಿದ್ದೆವು ಅರ್ಧ ಘಂಟೆ ನಂತರ ನಮ್ಮನ್ನು ಒಂದು ಕೋಣೆಯೊಳಗೆ ಕರೆದು ಕೂರಿಸಲಾಯಿತು. ಅದು ನಮಗೆ ಕೊನೆಯ ಅವಕಾಶವಾಗಿತ್ತು. ನಮ್ಮ ಐದುಜನರಲ್ಲಿ ಒಬ್ಬರಿಗೆ ಮಾತ್ರ ಅವಕಾಶವಿತ್ತು.ಐದು ನಿಮಿಷದ ನಂತರ ಇಬ್ಬರು ಬಂದು ನಮ್ಮನ್ನು ಮಾತನಾಡಿಸತೊಡಗಿದರು. ನಾವೇಕೆ ಈ ಸಂಸ್ಥೆಯನ್ನು ಸೇರಬೇಕು ? ಹೆಚ್ಚು ಕೆಲಸವಿದ್ದರೆ ವಾರದ ಕೊನೆಗೂ ಆಫಿಸಿಗೆ ಬರಲು ಇಷ್ಟವಿದೆಯೇ ? ಅಂತಹ ಪ್ರಶ್ನೆಗಳನ್ನು ಕೇಳಿದರು  ನಾವೆಲ್ಲರೂ ಒಬ್ಬಬ್ಬಾರಾಗಿ ಉತ್ತರ ಕೊಟ್ಟೆವು.ಅವರು ಆಚೆ ಹೋದರು.
ನಮ್ಮಲ್ಲಿ ಯಾರು ಸೆಲೆಕ್ಟ್ ಆಗ್ತಾರೆ ಅನ್ನೋದೇ ದೊಡ್ಡ ಪ್ರಶ್ನೆಯಾಗಿತ್ತು.

ಐದು ನಿಮಿಷದ ನಂತರ ಹರ್ ಒಳಗೆ ಬಂದು ನನ್ನ ಬಿಟ್ಟು ಮಿಕ್ಕಿದ ಎಲ್ಲರನ್ನು ಆಚೆ ಕಳಿಸಿದರು.” Congrats Vinay! you are selected. Next monday you are joining us” ಎಂದು ಕೈಕುಲುಕಿದರು.
ಮರುಜನ್ಮ ಸಿಕ್ಕಷ್ಟೇ ಸಂತೋಷವಾಗಿತ್ತು. ಮತ್ತೆ ನನ್ನ ಕಣ್ಣಲ್ಲಿ ನೀರು ಬಂದಿತ್ತು ಈ ಬಾರಿ ಸಂತೋಷಕ್ಕೆ!

ಮೊನ್ನೆ Housing.com ಅವರ https://housing.com/lookup. Look Up ವಿಡಿಯೋ ನೋಡಿದಾಗ ನನಗೆ ಈ ಘಟನೆ ನೆನಪಾಯಿತು..

ಇಂದಿಗೆ ಒಂದೂವರೆ ವರ್ಷವಾಯಿತು ನಾನು ಶ್ನೈಡೆರ್ ಎಲೆಕ್ಟ್ರಿಕ್ ನಲ್ಲಿ ಕೆಲಸಮಾಡುತ್ತಿದ್ದೇನೆ. ಆದರೆ ಆ ದಿನದ ನೆನಪು ಮಾತ್ರ ಇನ್ನು ಹಸಿರಾಗಿದೆ.
ಹೀಗೆ ಅಂತಹ ಅನಿರೀಕ್ಷಿತ ತಿರುವುಗಳಿಂದಲೇ ನಮ್ಮ ಬದುಕು ಸುಂದರವಾಗುತ್ತ ಹೋಗುತ್ತದೆ.
ನಾಳೆಯಾ ಭರವಸೆಯ ದಿನಗಳು ನಮ್ಮದಾಗಬೇಕಾದರೆ ನಾವು ತಾಳ್ಮೆ ಕಾಪಾಡಿಕೊಳ್ಳಬೇಕು.
ಒಂದು ಸಣ್ಣ ಘಟನೆಗೆ ನಮ್ಮನ್ನು ಮತ್ತೆ ಗೆಲುವಿನ ಹತ್ತಿರ ಕರೆದೊಯ್ಯುತ್ತದೆ .

ನೀವು https://housing.com/lookup.ವಿಡಿಯೋ ನೋಡಿ. ನಿಮ್ಮ ಜೀವನದಲ್ಲಿನ ಅತ್ಯಂತ ಗೆಲುವಿನ ಸಮಯವನ್ನು ಮೊತ್ತೊಮ್ಮೆ ಮೆಲಕು ಹಾಕಿ ಹಾಗೂ ನಿಮ್ಮ ಜೀವನದ ಆ ಮರೆಯಲಾಗದ ನೆನಪನ್ನು ನೀವು ತಿಳಿಸಿ.ಆ ನೆನಪನ್ನು ಮೊತ್ತೊಮ್ಮೆ ಜೀವಿಸಿ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s