ಹೊಸ ಬೆಳಕು…

ನಾವೆಲ್ಲರೂ ನಮ್ಮೊಳಗೇ ಒಂದು ಸಲ ಸತ್ತು ಬದುಕಬೇಕು. ಮತ್ತೆ ಹುಟ್ಟಿ ಹೊಸಬರಾಗಬೇಕು. ನೂತನ ಕನಸನ್ನು
ನನಸಾಗಿಸಲು. ಹಳೆ ನೆನಪು ಮರೆತು ಮತ್ತೆ ಜೀವಿಸಲು. ಅಂತಹ ಸಮಯದಲ್ಲಿ ನಮ್ಮ ಎದೆಯಲ್ಲಿ ಹೊಸದೊಂದು ಬೆಳೆಕು ಸಂಚರಿಸುತ್ತದೆ. ಅಂಧಕಾರದಿಂದ ಹೊರತಂದ ಬೆಳಕದು. ಅಂತ ಬೆಳಕು ನಮ್ಮದಾಗಬೇಕಾದರೆ ನಮ್ಮಲ್ಲಿ ಕ್ರಾಂತಿ ಮೂಡಬೇಕು. ಒಂದು ಸಂಚಲನ ಉಂಟಾಗಬೇಕು ಆವಾಗ ಮಾತ್ರ ನಾವು ಹೊಸಬರಾಗಲು ಸಾಧ್ಯ ಹಾಗೂ ಏನಾದರೂ ಸಾಧಿಸಲು ಸಾಧ್ಯ.

ನನ್ನ ಜೀವನದಲ್ಲಿ ನಾನು ಅನುಭವಿಸಿದ ಒಂದು ಸಣ್ಣ ಅನುಭವವನ್ನು ಇಲ್ಲಿ ತೆರೆದಿಡುತ್ತೇನೆ.

ನಾನಾಗ ಪಿಯುಸಿಯಲ್ಲಿ ಓದುತ್ತಿದ್ದೆ. ಅದೇ ಮೊಟ್ಟ ಮೊದಲ ಬಾರಿಗೆ ನಾನು ಮನೆ ಬಿಟ್ಟು ಸ್ವಲ್ಪ ದೂರದ ಧಾರವಾಡದ
ವಿದ್ಯಾಗಿರಿಯ ಜೆ.ಎಸ್.ಎಸ್. ಕಾಲೇಜಿಗೆ ಸೇರಿಕೊಂಡಿದ್ದೆ. ನಮ್ಮ ಸಂಬಂಧಿಕರ ಮನೆಯಿದ್ದರೂ ಓದುವ ವಾತವರಹಣವಿರುವ ಹಾಸ್ಟೆಲ್ ನಲ್ಲಿ ಇದ್ದೆ. ಮೊದಲು ನಾಲ್ಕು ತಿಂಗಳು ಅಲ್ಲಿನ ಊಟ ,ವಸತಿ ಸೌಕರ್ಯ ಎಲ್ಲವೂ ಇಷ್ಟವಾಯಿತು. ಹೊಸ ಗೆಳೆಯರು, ಸುಂದರ ಕ್ಯಾಂಪಸ್ ಎಲ್ಲವೂ ಸುಂದರವಾಗಿತ್ತು. ಮನೆಯಿಂದ ಅದೇ ಮೊದಲ ಸಲ ಹೊರಬಂದಿದ್ದರೂ ಮನೆಯ ನೆನಪು ಬಾರದ ಹಾಗೆ ಗೆಳೆಯರೊಂದಿಗೆ ಆರಮಾಗಿದ್ದೆ.

ಅದಾಗಿ ಆರು ತಿಂಗಳ ನಂತರ ಮೊದಲ ಬಾರಿಗೆ ನನಗೆ ಹೋಂ ಸಿಕ್ಕ್ನೆಸ್ಸ್ ಕಾಡಲು ಆರಂಭವಾಯಿತು. ಕಾಲೇಜಿನಿಂದ ಬಂಡ ಮೇಲೆ ದಿನವೂ ಏನೋ ನೆಗೆಟಿವ್ ವಿಚಾರಗಳು ಬರುತಿದ್ದವು. ಕಣ್ಣೀರೂ ತಂತಾನೆ ಹರಿಯುತಿತ್ತು. ಮೊದಮೊದಲು ಅದೂ ಸಹಜವಂತ ನಾನು ನಿರ್ಲಕ್ಷಿಸಿದೆ. ಆದರೆ ಅದೊಂದಿನ ನನಗೆ ಅರಿಯದ ಹಾಗೆ
ಕಾಲೇಜು ಬಿಟ್ಟು ಊರಿಗೆ ಹೊಡಿಹೊಗೋಣ ಅನ್ನುವಷ್ಟು ಬೇಜಾರಾಗುತ್ತಿತ್ತು. ಮನೆಗೆ ಕರೆ ಮಾಡಿ ಅಪ್ಪ ಅಮ್ಮನ ಜೊತೆ ಮಾತಾಡುತ್ತ ಅಳತೊಡಗಿದೆ. ನನ್ನ ಅಮ್ಮ ಗಾಬರಿಗೊಂಡು ಮರುದಿನವೇ ಧಾರವಾಡಕ್ಕೆ ಬಂದರು. ಕಾಲೇಜಿಗೆ ರಜಾ ಹಾಕಿ ನಮ್ಮ ಸಂಬಧಿಕರ ಮನೆಗೆ ಹೋದೆ. ಮನೆಯಲ್ಲಿಯೇ ನಾಲ್ಕು ದಿನವಿದ್ದು ಮನೆಯಿಂದಲೇ ಕಾಲೇಜಿಗೆ ಪ್ರಯಾಣಿಸತೊಡಗಿದೆ

೧೫ ದಿನ ಕಳೆಯಿತು. ಅಮ್ಮ ಊರಿಗೆ ವಾಪಸ್ಸಾದರು. ಮತ್ತೆ ನಾನು ಹಾಸ್ಟೆಲ್ ಗೆ ಬಂದೆ. ಒಂದೆರಡು ದಿನ ಕಳೆದ ಮೇಲೆ ಮತ್ತದೇ ನೆಗೆಟಿವ್ ವಿಚಾರಗಳು ಮತ್ತೆ ಅಳು . ನನ್ನ ಅಪ್ಪ ಮತ್ತು ಅಮ್ಮನಿಗೆ ಮತ್ತೆ ಗಾಬರಿ.
ನನ್ನ ಅಪ್ಪ ನಾನು ಈ ರೀತಿ ಹಿಂಸೆ ಪಡುತಿರುವುದು ನೋಡಿ, ಕಾಲೇಜ್ ಬಿಟ್ಟು ಬಂದು ಬಿಡು ಪರವಾಗಿಲ್ಲ. ನನಗೆ ನಿನ್ನ ಖುಷಿ ಮುಖ್ಯ ಎನ್ನುತ್ತಿದ್ದರು. ಮತ್ತೆ ನನ್ನ ಅಮ್ಮ ಧಾರವಾಡಕ್ಕೆ ಬಂದರು. ನಾನು ಮನೆಗೆ ಹೋದೆ. ಆದರೆ ಅಳು ನಿಲ್ಲಲಿಲ್ಲ. ಮನೆಯವರಿಗೆಲ್ಲ ಗಾಬರಿ. ಮತ್ತೆ ಒಂದು ವಾರ ಕಾಲೇಜಿಗೆ ರಜೆ ಹಾಕಿದೆ. ಅಮ್ಮನ ಜೊತೆ ಕಾಲ್ ಕಳೆದೆ . ಆದರೂ ನನ್ನ ಮನಸ್ಸು ಕುಗ್ಗಿತ್ತು. ಕೊನೆಗೆ ನನ್ನ ಅಮ್ಮ ನನ್ನ ಕರೆದುಕೊಂಡು ಒಬ್ಬ ಭವಿಷ್ಯ, ಜ್ಯೋತಿಷ್ಯ ಹೇಳುವ ವ್ಯಕ್ತಿಯ ಕಡೆ ಕರೆದುಕೊಂಡರು. ಮೊದಲಿಗೆ ಅದು ಮಂತ್ರವಾದಿ ಮನೆಎಂದುಕೊಂಡಿದ್ದೆ.!

ಅವರು ನನಗೆ ಕೆಲವು ಪ್ರಶ್ನೆಗಳು ಕೇಳಿದರು. ನಾನು ಉತ್ತರ ಕೊಟ್ಟೆ. ” ನೀನು ಭವಿಷ್ಯ ಬಗ್ಗೆ ತುಂಬಾ ವಿಚಾರ ಮಾಡುತ್ತಿ, ಅದಕಾಗಿ ನಿನಗೆ ಈ ರೀತಿ ನೆಗೆಟಿವ್ ವಿಚಾರಗಳು ಬರುತ್ತಿರುವುದು ಹಾಗೂ ನಿನ್ನ ಮನಸು ಅನತಹ ವಿಚಾರದಿಂದಲೇ ಕುಗ್ಗಿ ಹೋಗಿರುವುದು ” ಅಂದರು. ನಂತರ ಒಂದಿಷ್ಟು ಕುಂಕುಮ ಮತ್ತು ಒಂದು ದಾರವನ್ನು ನನ್ನ ಕೈಗೆ ಕಟ್ಟಿದರು. ಅಮ್ಮ ನನ್ನು ಮಾತೆ ಮನೆಗೆ ಮರಳಿದೆವು
ಅಮ್ಮ ನನಗೆ ಒಂದು ಮಾತು ಹೇಳಿದರು ” ಎಷ್ಟೋ ಮಂದಿಗೆ ಓದಲು ಅವಕಾಶವಿಲ್ಲ , ಈರಲು ಮನೆಯೆ ಇಲ್ಲ, ಆದರೂ ಅಂತಹ ಅಡೆತಡೆಗಳ ಮಧ್ಯ ಎಷ್ಟು ಹುಡುಗರು ಜೀವನ ಸಾಗಿಸುತ್ತಿದ್ದಾರೆ. ನಿನಗೆ ಎಲ್ಲವೂ ಸೌಲಭ್ಯವಿದೆ. ಒಳ್ಳೆಯ ಕಾಲೇಜು ಸಿಕ್ಕಿದೆ. ಇದರ ಪ್ರಯೋಜನ ತೆಗೆದು ಕೊಂದು ನಿನ್ನ ಜೀವನದಲ್ಲಿ ಮುಂದೆ ಬಾ. ಇಲ್ಲವಾದರೆ ಹೇಳು ನಾಳೆ ಇಬ್ಬರೂ ಮನೆಗೆ ಹೋಗೋಣ. ” ಎಂದು ಕಣ್ಣೀರಿಟ್ಟಳು
ಆ ಕ್ಷಣ ನನಗೆ ಇನ್ನು ನೆನಪಿದೆ.
ಅದೇ ಕೊನೆ ನಾನೆಂದು ಅಳಬಾರದು. ಧೈರ್ಯದಿಂದಲೇ ವಾಪಸ್ಸೂ ಹೋಗಬೇಕೆಂದು ನಿರ್ಧರಿಸಿದೆ. ಅದರಂತೆ ನನ್ನ ಅಮ್ಮ ಊರಿಗೆ ಹೊರಟರು. ನಾನು ಪುನಃ ಹಾಸ್ಟಲ್ ಗೆ ಹೋದೆ. ಒಂದು ದಿನವೂ ನಾನು ಅಳಲಿಲ್ಲ . ಅಂತ ನೆಗಟಿವ್ ವಿಚಾರಗಳು ಒಮ್ಮೆಯೂ ಮರಳಿಲ್ಲ. ಓದುವದೊಂದೇ ನನ್ನ ಗುರಿಯಾಯಿತು. ಪ್ರಥಮ ಪಿಯುಸಿಯಲ್ಲಿ ಶೇ. ೯೦%.
ಗಳಿಸಿದೆ. ಮರುವರ್ಷ ದ್ವಿತೀಯ ಪಿಯುಸಿಯಲ್ಲಿ ಶೇ.೯೧% ಗಳಿಸಿ ಕಾಲೇಜಿಗೆ ಆರನೇ ಸ್ಥಾನಕ್ಕೆ ಬಂದೆ.
ಕಾಲೇಜಿನ ತೋಪ್ಪೆರ್ಸ್ ಲಿಸ್ಟ್ ನಲ್ಲಿ ನನ್ನ ಫೋಟೋದೊಂದಿಗೆ ನನ್ನ ಹೆಸರು ಹಾಕಲಾಗಿತ್ತು
ಮಾತೆ ನನ್ನ ಅಮ್ಮ ಹೇಳಿದ ಮಾತು ನೆನಪಾಯಿತು ” ನಿನ್ನ ಭವಿಷ್ಯ ನಿನ್ನ ಕೈಯಲ್ಲಿದೆ”. 🙂

ಹೀಗೆ ನಮಗೆಲ್ಲರಿಗೂ ಒಂದಲ್ಲ ಒಂದು ಅಡೆತಡೆಗಳು ಬರುತ್ತವೆ. ನಾವು ಅವುಗಳನ್ನು ಮೀರಿ ಬದುಕಿನಲಿ ನಮ್ಮ ಗುರಿಗಾಗಿ ಹೋರಾಡಬೇಕು. ಸಣ್ಣ ಸಣ್ಣ ಗೆಲುವನ್ನು ಒಗ್ಗೂಡಿಸಿ ಬದುಕಿನ ದೊಡ್ಡ ಗುರಿಗಾಗಿ ಶ್ರಮಿಸಬೇಕು.

ಮೊನ್ನೆ Housing.com  https://housing.com/. ಅವರ Look Up.ವಿಡಿಯೋ ನೋಡಿದ ಮೇಲೆ . ಈ ಘಟನೆ ನೆನಪಾಯಿತು.
ನಾಳೆಯಾ ಭರವಸೆಯ ದಿನಗಳು ನಮ್ಮದಾಗಬೇಕಾದರೆ ನಾವು ತಾಳ್ಮೆ ಕಾಪಾಡಿಕೊಳ್ಳಬೇಕು.
ಒಂದು ಸಣ್ಣ ಘಟನೆಗೆ ನಮ್ಮನ್ನು ಮತ್ತೆ ಗೆಲುವಿನ ಹತ್ತಿರ ಕರೆದೊಯ್ಯುತ್ತದೆ .
ನಿಮ್ಮ ಜೀವನದಲ್ಲಿನ ಅತ್ಯಂತ ಗೆಲುವಿನ ಸಮಯವನ್ನು ಮೊತ್ತೊಮ್ಮೆ ಮೆಲಕು ಹಾಕಿ ಹಾಗೂ ನಿಮ್ಮ ಜೀವನದ ಆ ಮರೆಯಲಾಗದ ನೆನಪನ್ನು ನೀವು ತಿಳಿಸಿ.ಆ ನೆನಪನ್ನು ಮೊತ್ತೊಮ್ಮೆ ಜೀವಿಸಿ.


Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s