Day: March 15, 2015

ಆ ದಿನಗಳು…

ಪ್ರತಿಯೊಬ್ಬ ಜೀವನದಲ್ಲೂ ಒಬ್ಬ ಗಾಡ್ ಫಾದರ್ ಇರ್ತಾನೆ. ಅಂದರೆ ಕಷ್ಟದ ದಿನಗಳಲ್ಲಿ ನಮ್ಮನ್ನು ಕೈ ಬಿಡದೇ ಕಷ್ಟದಿಂದ ನಮ್ಮನ್ನು ಪಾರು ಮಾಡಿ ಏನನ್ನು ಅಪೇಕ್ಷಿಸದೆ ನಮ್ಮ ಗೆಲುವನ್ನೇ ಮಾತ್ರ ಬಯಸುವ ವ್ಯಕ್ತಿಗಳವರು.
ಕೆಲವೊಬ್ಬರಿಗೆ ಅನೇಕ ಜನ ಗಾಡ್ ಫಾದರ್ ಆಗಿಬಿಡುತ್ತಾರೆ. ಅಶೋತೋದು ಒಳ್ಳೆಯ ಜನ ಅವರ ಜೀವನದಲ್ಲಿ ಬಂದು ಅವರಿಗೆ ಸಹಾಯ ಮಾಡಿರುತ್ತಾರೆ. ಕೆಲವೊಮ್ಮೆ ಅಂಥವರನ್ನು ನಾವು ಮರೆತು ಬಿಡುತ್ತೇವೆ. ಅಥವಾ ಅವ್ರು ತಮಗೆ ತಾವೇ ಕಣ್ಮರೆ ಆಗಿಬಿಡುತ್ತಾರೆ. ಆದರೆ ಅವರ ಸಹಾಯದಿಂದ ನಾವು ಅದೆಸ್ಟೋ ನಮ್ಮ ಜೀವನದಲ್ಲಿ ಮುಂದೆ ಬಂದಿರುತ್ತೇವೆ ,ಗೆಲುವನ್ನ ಕಂಡಿರುತ್ತೇವೆ. ಅಂಥವರನ್ನು ನೆನೆದು ಅವರಿಗೆ ನಾವು ಎಷ್ಟು ಥ್ಯಾಂಕ್ಸ್ ಹೇಳಿದರೂ ಅದು ಕಡಿಮೆಯೇ..

ನನ್ನ ಜೀವನದಲ್ಲೂ ನನಗೆ ಮೂರು ಜನ ಗಾಡ್ ಫಾದರ್ ಇದಾರೆ ಎಂದರೆ ತಪ್ಪಿಲ್ಲ. ಆ ಮೂರು ಜನ ನನಗೆ ಒಂದೊಂದು ಕ್ಷಣದಲ್ಲಿ ನನ್ನ ಜೀವನದಲ್ಲಿ ಬಂದು ನನ್ನ ಬದುಕಿಗೆ ಸುಂದರ ತೀರುವು ಕೊಟ್ಟ ವ್ಯಕ್ತಿಗಳವರು. ಅವರು ಮಾಡಿದ ಆ ಸಹಾಯವನ್ನು ನೆನೆಯುವ ಪುಟ್ಟ ಪ್ರಯತ್ನ ನನ್ನದು. ನನ್ನ ಅಣ್ಣ ನವೀನ ಸಜ್ಜನ್ ಹಾಗೂ ನನ್ನ ಗೆಳೆಯರಾದ ದೀಪಕ್ ಸಿ.

ಮೊದಲಿಗೆ ನನ್ನ ಅಣ್ಣನ ನವೀನ ನನಗೆ ಮಾಡಿದ ಸಹಾಯವನ್ನು ನೆನೆಯುತ್ತೇನೆ….
ಎಸ್.ಎಸ್.ಎಲ್.ಸಿ ಯಲ್ಲಿ ನಾನು ೯೫.೩೬ ಶೇ. ತೆಗೆದು ಸ್ಕೂಲಿಗೆ ಪ್ರಥಮ ಹಾಗೂ ತಾಲ್ಲೂಕಿಗೆ ದ್ವಿತೀಯ ಸ್ಥಾನ ಪಡೆದಿದ್ದೆ. ಆದರೆ ನನ್ನ ಮುಂದಿನ ಶಿಕ್ಷಣದ ಕುರಿತು ನನಗೆ ಹಾಗೂ ನನ್ನ ಪಾಲಕರಿಗೆ ಚಿಂತೆಯಾಗಿತ್ತು. ಕಾರಣ ನನ್ನ ಅಪ್ಪ ಒಬ್ಬ ರೈತರಾಗಿದ್ದು ನಮ್ಮ ಮನೆಯ ಮುಖ್ಯ ಆದಾಯ ಕೃಷಿಯಿಂದಲೇ ಬರುತ್ತಿತ್ತು. ಆದರೆ ಆಗ ಮೂರುವರುಷದ ಸತತ ಬರಗಾಲದಿಂದ ಹೊಲದಲ್ಲಿ ಬೆಳೆದ ಬೆಳೆಗಳು ಕೈಗೆ ಬರದೆ ನಾವು ಆರ್ಥಿಕ ಪರಿಸ್ಥಿತಿ ಅನುಭವಿಸಬೇಕಾಗಿತ್ತು. ಪರಸ್ಥಳಕ್ಕೆ ಹೋಗಿ ಓದುವ ಪರಿಸ್ಥಿತಿ ಇರಲಿಲ್ಲ ಹಾಗೂ ನಮ್ಮ ಊರಿನಲ್ಲಿ ಓದುವ ಒಳ್ಳೆಯ ಕಾಲೇಜು ಇರಲಿಲ್ಲ. ಆಗ ಈ ಪರಿಸ್ಥಿಯನ್ನೂ ತಾನಾಗೆ ಅರಿತು ನನ್ನ ಅಣ್ಣ ನವೀನ ನನ್ನನು ಮತ್ತು ನನ್ನ ಅಮ್ಮನನ್ನು ಧಾರವಾಡಕ್ಕೆ ಭೇಟಿಯಾಗಲು ಕರೆದ.
ನಾನು ಮತ್ತು ನನ್ನ ಅಮ್ಮ ಇಬ್ಬರೂ ಧಾರವಾಡಕ್ಕೆ ಹೋದೆವು. ನವೀನ ಅಣ್ಣ ನಮ್ಮೊಂದಿಗೆ ಹಲವು ಘಂಟೆ ಚರ್ಚಿಸಿ ನನ್ನ ಪಿಯುಸಿ ಕಾಲೇಜಿನ ಪೂರ್ತಿ ವೆಚ್ಚ ತಾನೇ ನೋಡಿಕೊಳ್ಳುವುದಾಗಿ ಘೋಷಿಸಿದ. ಅಲ್ಲದೆ ಧಾರವಾಡದ ಜೆ .ಎಸ್ . ಎಸ್ .ಕಾಲೇಜಿನಲ್ಲಿಯೇ ಓದಲು ತಿಳಿಸಿದ. ಅವನ ಮಾತು ನನಗೆ ಇನ್ನು ನೆನಪಿದೆ ” ನೀನು ಓದಿ ನಿನ್ನ ಅಮ್ಮನನ್ನು ಚೆನ್ನಾಗಿ ನೋಡಿಕೋ.. ನಿನ್ನ ಅಮ್ಮ ಬಹಳ ಕಷ್ಟ ಪಟ್ಟಿದ್ದಾರೆ” ಎಂದಿದ್ದ.
ಜೆ .ಎಸ್ . ಎಸ್ .ಕಾಲೇಜಿಗೆ ಸೇರಿಕೊಂಡೆ. ಅವನ ಮಾರ್ಗದಂತೆ ಕಷ್ಟ್ ಪಟ್ಟು ಓದಿದೆ . ದ್ವಿತೀಯ ಪಿಯುಸಿಯಲ್ಲಿ ಶೇ.೯೧ ಪಡೆದು ಕಾಲೇಜಿಗೆ ಆರನೇ ಸ್ಥಾನ ಪಡೆದಿದ್ದೆ!
ಅವನು ಸಹಾಯ ಮಾಡಿದಕ್ಕೆ ನಾನು ಒಂದು ಒಳ್ಳೆಯ ಕಾಲೇಜಿನಲ್ಲಿ ಓದಿದೆ. ಅವನ ಪ್ರೇರಣೆಯಿಂದ ನಾನು ಕಶು ಪಟ್ಟು ಓದಿ ಉತ್ತಮ ಅಂಕ ಗಳಿಸಿದೆ ಆ ಮೂಲಕ ಅವನ ನನ್ನ ಮೇಲಿನ ಭರವಸೆಯನ್ನು ಉಸಿ ಗೊಳಿಸಲಿಲ್ಲ.
ನವೀನ ಅಣ್ಣ ನಿನಗೆ ಅಂತರಾಳದ ಧನ್ಯವಾದಗಳು!

ಮೊತ್ತೊಂದು ಮರೆಯಲಾಗದ ಘಟನೆ ಆಗಿದ್ದು ನಾನು ಎಸ್.ಜೆ.ಸಿ.ಇನಲ್ಲಿ ವ್ಯಾಸಾಂಗ ಮಾಡುವಾಗ
ನಾನು ಮೂರನೇ ಸೆಮಿಸ್ಟರ್ ಇರುವಾಗ ಆಗೊಂದು ಹೀಗೊಂದು ಕವಿತೆ ಬರೆಯುತ್ತಿದೆ. ಅದನ್ನು ಕೂಡಿಡಲು ಒಂದು ಬ್ಲಾಗ್ ಬರೆಯುತ್ತಿದ್ದೆ. ನಾನು ಅದಾಗಲೇ ಜಿ.ಎಫ್.ಎ ಎಂಬ ಸಂಸ್ಥೆಯಲ್ಲಿ member ಆಗಿ ಕೆಲಸ ಮಾಡುತಿದ್ದೆ
.ದೀಪಕ್ ಸಿ ಅದರ ಫೌಂಡರ್ ಆಗಿದ್ದು ಅದೊಂದು ಸಾಮಾಜಿಕ ಕಳಕಳಿಯ ಸಂಸ್ಥೆಯಾಗಿತ್ತು.

ಅದೊಂದು ದಿನ ನಾನು ನನ್ನ ಬ್ಲಾಗ್ ಕೊಂಡಿಯನ್ನು ನಾನು ಅವರಿಗೆ ಮೆಸೇಜ್ ಮಾಡಿದ್ದೆ!. ಅವರು ತಕ್ಷಣ ನನಗೆ ಉತ್ತರ ಕೊಟ್ಟು ” ನನ್ನ ನಾಳೆ ಭೇಟಿಯಾಗು ,ಒಬ್ಬ ಕವಿಯ ಮನೆಗೆ ಹೋಗೋಣ ” ಎಂದು ತಿಳಿಸಿದರು.
ಮರುದಿನ ಅವರು ಹೇಳಿದಂತೆ ಅವರನ್ನು ಭೇಟಿಯಾದೆ. ಅವರು ತಮ್ಮ ಕಾರಿನಲ್ಲೇ ನನ್ನನ್ನು ಆ ಕವಿಯ ಮನೆಗೆ ಕರೆದುಕೊಂಡು ಹೋದರು.ದಾರಿಯ ಮಧ್ಯ ಅವರು ಒಂದು ಪ್ರಶ್ನೆ ಕೇಳಿದರು ” ನಿನಗೆ ಪುಸ್ತಕ ಬಿಡುಗಡೆ ಮಾಡುವ ಉದ್ದೇಶವಿದ್ದರೆ ನಮ್ಮ ಜಿ.ಎಫ್.ಎ ಸಂಸ್ಥೆ ಯಿಂದಲೇ ಬಿಡುಗಡೆ ಮಾಡೋಣ” ಎಂದರು. ನನಗೆ ಮಹದಾಶ್ಚರ್ಯ ! ಅಲ್ಲೊಂದು ,ಇಲ್ಲೊಂದು ಕವಿತೆ ಬರೆಯೋನಿಗೆ ಪುಸ್ತಕ ಬಿಡುಗಡೆ ಭಾಗ್ಯ ಬಂದರೆ ಎಷ್ಟು ಖುಷಿಯಾಗಬೇಡ !
“ಇನ್ನಸ್ಟು ಕವಿತೆಗಳನ್ನು ಬರಿ.ಅವುಗಳನ್ನು ಮುಂದಿನ ವರ್ಷದ ಸಂಸ್ಥೆಯ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡೋಣ ” ಎಂದು ಭರವಸೆ ಕೊಟ್ಟರು.
ಮಾತಿಗೆ ತಕ್ಕಂತೆ ಮರುವರ್ಷ ” ಎನ್ನ ತೊದಲು ನುಡಿಗಳು ” ನನ್ನ ಮೊದಲ ಕವನ ಸಂಕಲನದ ಬಿಡುಗಡೆ ಅದ್ದೂರಿಯಗಿ ಆಯಿತು. ನನಗೆ ” ಕವಿ ” ಪಟ್ಟ ಸಿಕ್ಕಿತು!
ನನ್ನಲ್ಲಿದ್ದ ಕವಿಯನ್ನು ಗುರುತಿಸಿ ನೀನು ಮಾಡಿದ ಸಹಾಯಕ್ಕೆ ಧನ್ಯವಾದಗಳು ದೀಪಕ್ ಸಿ.!

ಹೀಗೆ ಎಲ್ಲರು ಜೀವನದಲ್ಲೂ ಒಬ್ಬರು ಈ ರೀತಿ ಸಹಾಯ ಮಾಡಿರುತ್ತಾರೆ.
ಮೊನ್ನೆ Housing.com ಅವರ https://housing.com/. ವಿಡಿಯೋ ನೋಡಿದಾಗ ನನಗೆ ಈ ಘಟನೆ ನೆನಪಾಯಿತು.ನಿಮ್ಮ ಜೀವನದಲ್ಲಿನ ಅತ್ಯಂತ ಗೆಲುವಿನ ಸಮಯವನ್ನು ಮೊತ್ತೊಮ್ಮೆ ಮೆಲಕು ಹಾಕಿ ಹಾಗೂ ನಿಮ್ಮ ಜೀವನದ ಆ ಮರೆಯಲಾಗದ ನೆನಪನ್ನು ನೀವು ತಿಳಿಸಿ.