ಸಂತೋಷವೆಂದರೆ…
ಮೊನ್ನೆ ನನ್ನ ಒಬ್ಬ ಗೆಳೆಯ ” Are you happy ” ? ಎಂದು ಕೇಳಿದ್ದ.. ನಾನು ಅದಕ್ಕೆ ಎರಡು ನಿಮಿಷ ಯೋಚಿಸಿ ಹೌದು ” Ya I am happy ಎಂದಿದ್ದೆ.. ಅಂದರೆ ನಾವು ಸಂತೋಷ ವಾಗಿ ಇದಿಯೋ ಇಲ್ವೋ ಅಂತ ಯೊಉಚನೆ ಮಾಡಿ ನವ್ವು ಉತ್ತರ ಕೊದುವಸ್ತು ನಾವು ಈ ಬದುಕಿನಲಿ ಕಳೆದು ಹೋಗಿದ್ದೇವೆ . ಅಥವಾ ಈ ಬದುಕಿನಲಿ ನಾವು ಕರಗಿ ಹೋಗಿದ್ದೇವೆ.
ನಮಗೆ ಗೆಲುವು ಸಂತೋಷ ಕೊಡುತ್ತದೆ ಅಂತ ತಿಳಿದುಕೊಳ್ಳುತ್ತಿವಿ ಆದರೆ ನಮಗೆ ಸೋಲು ಬಂದ ಮೇಲೆ ಆ ಸಂತೋಷ ಹಾರಿ ಹೋಗಿರುತ್ತದೆ.. ನಮೆಗೆನೋ ಸಿಕ್ಕರೆ ಸಂತ್ಹೊಷವೆನ್ನುತ್ತೇವೆ ಆದರೆ ಅದು ಸಿಕ್ಕರೆ ಮಾತ್ರ ಇಲ್ಲದಿದ್ದರೆ ಕಣ್ಣಿರೆ ಗತಿ
ಆಗಿದ್ದರೆ ನಿಜವಾದ ಸಂತೋಷವೆಂದರೆ ಏನು ? ಯಾವುದು ನಮಗೆ ನಿಜವಾದ ಸಂತೋಷ ಕೊಡುತ್ತದೆ. ? ಯಾವುದರಿಂದ ನಮಗೆ ಸಂತೋಷ ಸಿಗುತ್ತದೆ ? ಅಸಲಿಗೆ ಸಂತೋಷ ಸಿಗುವುದೋ ? ಅಥವಾ ಅದು ಕೇವಲ ಒಂದು ಅನುಭವವೋ ? ನಾವು ಅನೇಕ ಬಾರಿ ನಮಗೆ ಗೊತ್ತಿಲ್ಲದ ಹಾಗೆನೆ ನಾವು ಸಂತೋಶವಾಗಿರುತ್ತೇವೆ.. ಅದು ನಮ್ಮೊಳಗಿನ ಸಂತೋಷ. ಅದಕ್ಕೆ ಕಾರಣ ನಾವು ಹುಡುಕಿಕೊಂಡು ಹೋಗಲ್ಲ ಆದರೆ ಅದು ತಂತಾನೆ ಅಗಿಬುಡುತ್ತದೆ.
ತುಂಬಾ ದಿನಗಳ ನಂತರ ನಿಮ್ಮ ನೇಟಿವ್ ಪ್ಲೇಸ್ ಹೋದರೆ ನಿಮ್ಮ ಮುಖ ಕಮಲದ ಹಾಗೆ ಅರಳುತ್ತದೆ. ನಿಮ್ಮ ಮನೆ ನೋಡಿದಕೂದಲೇ ನಿಮ್ಮ ಮನಸಿಗೆ ಅದೇನೋ ಖುಷಿ. ಮನೆಗೆ ಹೋದ ಮೇಲೆ ಅಮ್ಮ ಮಾಡಿದ ಅಡುಗೆ ಊಟ ಮಾಡಿದ ಕೂಡಲೇ ನಿಮ್ಮ ನಾಲಿಗೆ ಆಗುವ ಸಂತೋಷ ಹೇಳತೀರದು. ಹೀಗೆ ನಾವು ಸಂತೋಷಗಳನ್ನು ಹುಡುಕಿಕೊಂಡು ಹೋಗದಿದ್ದರೂ ಅದಾಗೇ ಅದೇ ನಿಮ್ಮನ್ನು ತಲುಪುತ್ತದೆ..
ನಿಮ್ಮ ಊರಿಗೆ ಹೋದಾಗ , ನಿಮ್ಮ ಬಾಲ್ಯದ ಗೆಳೆಯರೆಲ್ಲ ಸೇರಿ ಚಹಾ ಕುಡಿಯುವಾಗ ಆಗುವ ಸಂತೋಷವೇ ಬೇರೆ.
ಬಾಲ್ಯದ ನೆನೆಪು ಮಾದಿಕೊಲೂತ್ತ ಸಂಜೆಯ ಸವಿಯೋದು ಏನು ಚಂದ ಅಲ್ಲವೇ ? ಅದು ಒಂದು ಖುಷಿ.
ನೀವು ಯಾವುದು ಊರಿಗೆ ಹೋಗುವಾಗ ನಿಮ್ಮ ಮೊಬೈಲ್ ಫೋನಿನಲ್ಲಿ ಒಂದು ಚಂದದ ಹಾಡು ಬಂದರೆ ಅದನ್ನು ಕೇಳುತ್ತ ನೀವು ನಿಮ್ಮ ಕಲ್ಪನೆಯ ಲೋಕಕ್ಕೆ ಹೋಗಿಬಂದ ಮೇಲೆ ಆಗುವ ಖುಷಿ ಅಷ್ಟಿಷ್ಟಲ್ಲ.
ಕೆಲವೊಂದ ಅಚ್ಚರಿಯ ಜೋತೆಜೋತೀ ಸಿಗುವ ಖುಶಿಗಲೂ ಇವೆ.. ನೀವು ಪರೀಕ್ಷೆಯಲ್ಲಿ ತುಂಬಾ ಕೆಟ್ಟದಾಗಿ ಮಾಡಿರುತ್ತೀರಿ. ಆದರೆ ರಿಸಲ್ಟ್ಸ್ನಲ್ಲಿ ನಿಮಗೆ ಹೆಚ್ಚು ಅಂಕ ಬಂದಿರುತ್ತೆ ಅದು ನಿಮಗೆ ಅಚ್ಚರಿ ತರಸಿದ್ದರೂ ನಿಮಗೆ ಸಂತೋಷವಾಗಿರುತ್ತದೆ.
ನೀವು ಬೇರೆ ಊರಿಗೆ ಹೋದಾಗ ನಿಮ್ಮ ಸಂಗಡ ಒಬ್ಬರು ಜೊತೆಯಿದ್ದು ನೀವು ಹರಟಲು , ನಗಾಡಲು ಮಾತಾಡಲು ಒಬ್ಬರು ಸಿಕ್ಕರೆ , ಹಾಗೂ ಅವರೂ ನಿಮಂತೆಯೇ ಇದ್ದಾರೆ ನಿಮಗೆ ಆಗುವ ಸಂತೋಷವೇ ಬೇರೆ.
ನಮಗೆ ಹೆಚ್ಚು ಖಿಷಿ ಕೊಡುವುದು ಒಳ್ಳೆ ಊಟ , ಒಳ್ಳೆ ನಿದ್ದೆ ಅಲ್ವ ?
ರಾತ್ರಿ ನಿಮ್ಮ ಹಾಸ್ಟಲ್ ನಲ್ಲಿ ಊಟವಿರುವುದಿಲ್ಲ ಆಗ ಆಚೆ ಕಡೆ ಒಳ್ಳೆ ಊಟ ಮಾಡಿ , ಒಂದು ಕಪ್ ಚಹಾ ಕುಡಿದು ಬಂದರೆ ನಿಮಗೆ ಸಿಗುವ ಸಂತೋಷವೇ ಬೇರೆ.
ನೀವು ದಾರಿಯಲ್ಲಿ ಹೋಗುವಾಗ ನಿಮಗೆ ಒಬ್ಬ ಭಿಕ್ಷುಕ ಕಂಡರೆ ನೀವು ಸ್ವಲ್ಪ ಸಹಾಯ ಮಾಡಿ ಹೋದರೆ ನಿಮ್ಮ ಮನಸಿಗೆ ನಿರಾಳವಾಗುತ್ತದೆ. ಈ ಬದುಕು ಸಣ್ಣ ಪುಟ್ಟ ಸಂತೋಷಗಳಿಂದಲೇ ಅತ್ಯಂತ ಸುಂದರವಾಗಿದೆ.
ಇಂತಹ ಸಣ್ಣ ಪುಟ್ಟಾ ಸಂತೋಷಗಳೇ ನಮ್ಮ ಮನಸನ್ನು ಯಾವಗಲು ಪುಟ್ಟ ಮಗುವಿನತರಇಡುತ್ತದೆ.
ನಮಗೆ ಇಷ್ಟವಾಗುವ ಒಂದು ಸಿನೆಮಾ ನೋಡಿದರೆ, ಅಚ್ಚು ಮೆಚ್ಚಿನ ಗಾಯಕನ ಎದುರುಗದೇನೆ ಸಿಕ್ಕರೆ , ಇರುಲಿನಲ್ಲಿ ಖಾಲಿ ಇರುವ ರೋಡಿನಲ್ಲಿ ಬೈಕಿನ ಮೇಲೆ ಅತೀ ವೇಗವಾಗಿ ಹೋಗುವಾಗ, ಮಳೆಬಂದು ನಿಂತು ಆ ಸಿಹಿನ್ ತಂಗಾಳಿಯಲಿ ಸುಮ್ಮನೆ ನಡೆಕೊಂಡುವಾಗ, ಕಡಲ ತೀರದ ಅಲೆಗಳ ಸದ್ದನ್ನು ಮೌನದಲ್ಲೇ ಆಲಿಸುತ್ತಿರುವಾಗ ಕಡಲಾ ಅಲೆಗಳು ಬಂದು ನಿಮ್ಮ ಪಾದ ಸವರಿದಾಗ , ನಿಮ್ಮನ್ನು ತಮ್ಮತ್ತ ಸೆಳೆದಂತೆ ಭಾಸವಾದಾಗ , ಕಡಲ ತೀರದಿ ನಡೆಯುತ್ತಾ ನೀವು ಬಿಟ್ಟ ಹೆಜ್ಜೆ ಗುರುತುಗಳು ಅಲೆಗಳು ಅಳಿಸುವುದನ್ನು ಕಂಡಾಗ, ಮೊದಲ ಸಂಬಳದಲ್ಲಿ ಅಪ್ಪ ಅಮ್ಮನಿಗೆ ಉಡುಗೊರೆ ಕೊಟ್ಟಾಗ , ಮೆಚ್ಚಿನ ಗೆಳೆಯ/ಗೆಳತಿಯ ಹುಟ್ಟುಹಬ್ಬವನ್ನು ಆಚರಿಸುವಾಗ, ದೂರದಲ್ಲಿರುವ ಸ್ನೇಹಿತೆ/ ಸ್ನೇಹಿತನೊಂದಿಗೆ ಮಾತನಾಡುವಾಗ, ಫೇಸ್ಬುಕ್ ನಲ್ಲಿ ನಿಮ್ಮ ಫೋಟೋ ಗೆ ಹೆಚ್ಚು ಹೆಚ್ಚಿ ಲೈಕ್ ಬಂದಾಗ, ನಿಮ್ಮ ಕೆಲಸ ಮೆಚ್ಚಿ ನಿಮ್ಮ ಮ್ಯಾನೇಜರ್ ಶಹಭಾಶ್ ಗಿರಿ ಕೊಟ್ಟಾಗ., ನಿಮ್ಮ ಗೆಳತಿಯೊಂದಿಗೆ ಬೈಕ್ನಲ್ಲಿ ಸುತ್ತುವಾಗ ,ಗೆಳೆಯರೊಂದಿಗೆ ಟ್ರಿಪ್ ಹೋದಾಗ, ಬಾಲ್ಯದ ಸ್ನೇಹಿತ ಧಿಡಿರನೆ ಬಸ್ ಸ್ಟಾಪ್ ನಲ್ಲಿ ಸಿಕ್ಕಾಗ ,
ಹೀಗೆ ಪುಟ್ಟ ಪುಟ್ಟ ಸಂತೋಷಗಳು ನಮ್ಮ ಬದುಕನ್ನೇ ಸುಂದರವಾಗಿಸುತ್ತವೆ. ನಮ್ಮಲ್ಲಿ ಎಷ್ಟೇ ದುಡ್ಡಿದ್ದರೂ, ಎಷ್ಟೋ ಬಂಗಲೆ ,ಕಾರಿದ್ದರೂ ಈ ಪುಟ್ಟ ಸಂತೋಷಗಳನ್ನು ನಾವು ಅನುಭವಿಸದಿದ್ದರೆ ಬದುಕು ವ್ಯರ್ಥ ವಾದಂತೆ. ಅದಕ್ಕೆ ಯಾವುದೇ ಬೆಲೆ ಬರುವುದಿಲ್ಲ. ಇಂತಹ ಪುಟ್ಟ ಸಂತೋಷಗಳು ನಿಮ್ಮದಾಗಲಿ .
ಮೊನ್ನೆ ಕೋಕಾಕೋಲ ಅವರ Coca-Cola International Day of Happiness http://CokeURL.com/96jnc.
ವಿಡಿಯೋ ನೋಡಿದ ಮೇಲೆ ನನಗೆ ಸಂತೋಷವೆಂದರೆ ಏನು ಎಂಬ ಸಣ್ಣ ಪ್ರಶ್ನೆ ಹುಟ್ಟಿಕೊಂಡಿತು. ಅದಕ್ಕೆ ಬರೆದ ಲೇಖನವಿದು