ಎಲ್ಲ ಹೇಳುವೆ ನಾನು
ಕನಸಿನಲಿ ನೀ ಬಂದರೆ
ನಿನ್ನವನಲ್ಲವೇ ನಾನು
ಮತ್ತೇನು ತೊಂದರೆ…
ನಿನ್ನ ಕಣ್ಣನೋಟ ಸಾಕು
ನೂರು ವರುಷ ಬಾಳಲು
ನಿನ್ನ ಸಣ್ಣಹಠ ಬೇಕು
ಹೃದಯ ಹರುಷ ಹೇಳಲು…
ಮೌನದ ಭಾಷೆಯನು
ನಿನ್ನ ಕಣ್ಣಿನಲ್ಲೆ ಕಲಿಯಬಲ್ಲೆ
ಹೆಚ್ಚು ಮಾತಾಡಬೇಡ ನೀನು
ಮೌನದಲ್ಲೇ ನಿನ್ನ ಮನಸೆರಬಲ್ಲೆ
ಎಲ್ಲ ಹೇಳುವೆ ನಾನು
ಕನಸಿನಲಿ ನೀ ಬಂದರೆ