ಕಣ್ಣಲ್ಲಿ ಕನಸೊಂದು
ಕಾದಿದೆ ನಿನಗೆಂದು
ಕಣ್ಣಿರ ಹನಿಯೊಂದು
ಬೇಡಿದೆ ದನಿಯೊಂದು
ಹೆಚ್ಚು ತಾಳೆನು
ವಿರಹದ ನೋವನು
ಒಮ್ಮೆ ಮುಡಿದಿಕೋ
ನೆನಪಿನ ಹೂವನು…
ಸದ್ದು ಮಾಡದೆ
ಮುದ್ದು ಮಾಡುತ
ಮದ್ದು ನೀಡು
ಹೃದಯ ಗಾಯಕೆ
ಹೆಚ್ಚು ಹೇಳದೆ
ಹುಚ್ಚು ಪ್ರೀತಿಗೆ
ಮೆಚ್ಚು ನೀನು
ಪ್ರಣಯ ಮಾಯೆಗೆ..
ಕಣ್ಣಲ್ಲಿ ಕನಸೊಂದು
ಕಾದಿದೆ ನಿನಗೆಂದು