ಕಣ್ಣಿನಲ್ಲೇ ಬಿಡಿಸು
ಕನಸಿನ ಕಂತೆ
ಮನಸಲ್ಲೇ ನಡೆಸು
ನೆನಪಿನ ಸಂತೆ..
ಈ ಜೀವಕ್ಕೀಗ
ಬರೀ ನಿನ್ನದೇ ಚಿಂತೆ
ನಿನ್ನಲ್ಲಿಯೂ ಈಗ
ಸವಿಭಾವ ಬಂತೆ..
ಅನುರಾಗ ಬಂದಿದೆ
ಅಲೆಮಾರಿ ಹೃದಯಕೆ
ಅನುವಾದ ಬೇಕಿದೆ
ಅನುಬಂಧದ ಅನುಭವಕೆ..
ನಗುವ ಹೂವಿಗೊಂದು
ನಿನ್ನ ಹೆಸರಿಡಬೇಕಿದೆ
ಕರೆವ ಕೊರಳಿಗೊಂದು
ನಿನ್ನ ಉಸಿರುಬೇಕಿದೆ..