ಕವಿತೆಯೆಂದರೆ ಹಾಗೇ..
ಬೆನ್ನುತಟ್ಟುವ ತಂದೆಯಂತೆ
ಕಣ್ಣೊರೆಸುವ ತಾಯಿಯಂತೆ!
ಕವಿತೆಯೆಂದರೆ ಹಾಗೇ..
ಬೆನ್ನುತಟ್ಟುವ ತಂದೆಯಂತೆ
ಕಣ್ಣೊರೆಸುವ ತಾಯಿಯಂತೆ!
ಕವಿ ಮನಸಿಗೆ
ಹಿಡಿದ ಕನ್ನಡಿ..
ಮಳೆಯಲಿ ನನ್ನ ಜೊತೆ ನಾಲ್ಕು ಹೆಜ್ಜೆ ಹಾಕಿ
ಮರಳಿ ಅವಳ ಮನೆಗೆ ಹೋಗುವಾಗ
ನನ್ನತ್ತ ತಿರುಗಿ ತಿರುಗಿ
ಅವಳು ನೋಡುವ ಪರಿ !
ನಡುಗುವ ಚಳಿಯಲ್ಲೂ
ಹೃದಯ ಸುಡುವ ವಿರಹ !
ನಾವಿಬ್ಬರು ಜೊತೆಗೆ ನಡೆಯುವಾಗ
ನನ್ನ ಕೈಯನ್ನು ಅವಳು ಹಿಡಿದಾಗ
ಆ ಕ್ಷಣ ನನಗಾದ ರೋಮಾಂಚನ
ಅದುಕುತ್ತರವಾದ ಅವಳ ಮುದ್ದು ಮೌನ!
ಕವಿತೆ ಎಂದರೆ ಹಾಗೇ.
ಭಾವನದಿಗೆ
ಕಟ್ಟಿದ
ಆಣೆಕಟ್ಟು..
ಕನಸಿನ ಮಳೆಯಲಿ
ಹೂಬಿಸಿಲು ಬಂದು
ಮೂಡುವ ಕಾಮನಬಿಲ್ಲು..
ನನ್ನವಳನ್ನು ನೆನೆದಾಗಲೆಲ್ಲ
ಎದೆಯಲಿ ಬೀಸುವ
ಸಿಹಿ ತಂಗಾಳಿ…
ಕಹಿಯಾದ ನೆನಪನ್ನು ಮರೆಯುತ
ಸಿಹಿಯಾದ ಕನಸನ್ನು ಕಾಣುತ
ನನ್ನಲ್ಲೇ ಉಳಿದುಬಿಡು ನೀನು
ನಿನ್ನವನಲ್ಲವೇ ನಾನು..?
ಅತಿಯಾದ ಪ್ರೀತಿ ತೋರುತ
ಹಿತವಾದ ಮಾತು ಆಡುತ
ನಿನ್ನಲ್ಲೇ ಉಳಿದುಬಿಡಲೇ ನಾನು
ನನ್ನವಳಲ್ಲವೇ ನೀನು..
ಬೆರಳಲ್ಲಿ ಸಾಲೊಂದು ಬರೆಯುತ
ಇರುಳಲ್ಲಿ ಕನಸೊಂದು ಕರೆಯುತ
ಕಣ್ಣಲ್ಲೇ ಕರೆದುಬಿಡು ನೀನು
ಬರದೆ ಇರುವೆನೇನೆ ನಾನು
ನನ್ನವಳಲ್ಲವೇ ನೀನು..
ಕರೆ ನೀನು
ತಡ ಮಾಡದೆ
ನಿನ್ನ ಕನಸಿಗೆ..
ಬರುವೆ ನಾನು
ನಿನಗೂ ಹೇಳದೆ
ನಿನ್ನ ಮನಸಿಗೆ..
ಕರೆ ನೀನು ತಡ ಮಾಡದೆ
ನಿನ್ನ ಮೌನವನ್ನು ಕದ್ದಾಲಿಸುವೆ
ನಿನ್ನ ಮನದಲ್ಲೇ ಅವಿತು
ನೀ ನಕ್ಕರೆ ನಾನೂ ನಗುವೆ
ನಿನ್ನ ಗಲ್ಲಗುಳಿಯಲ್ಲೇ ಕುಳಿತು
ಕರೆ ನೀನು ತಡ ಮಾಡದೆ
ಎಷ್ಟು ಬರೆದರೂ ಮುಗಿಯುತಿಲ್ಲ
ಪ್ರೇಮದ ಹಾಡು ನಿರಂತರ
ಮೌನವೇ ಪ್ರೀತಿಯ ಭಾಷೆ
ಬೇಕಿಲ್ಲ ಅದುಕೆ ಭಾಷಾಂತರ
ಕಣ್ಣ ಮುಂದೆ ನೀನು ಬಂದೆ
ನಿನ್ನ ಹಿಂದೆ ನಾನು ಬಂದೆ
ನನಗಾಗಿ ನೀನೇನು ತಂದೆ
ಜೀವವೇ ನಿನ್ನದು ಇನ್ನ್ಮುಂದೆ
ಕಣ್ಣ ಮುಂದೆ ನೀನು ಬಂದೆ ..
ಕಣ್ಣನೋಟದಲ್ಲೇ ಪ್ರಣಯ ಮೂಡುತಿದೆ
ಸಣ್ಣದನಿಯಲ್ಲೇ ಹೃದಯ ಹಾಡುತಿದೆ
ನಿನ್ನಕಿರುಬೆರಳಿಗೆ ಬೆಸುಗೆಯಾಗಲಿ ನನ್ನ ಬೆರಳು
ನನ್ನ ನೆರಳಿಗೂ ಜೊತೆಯಾಗಲಿ ನಿನ್ನ ನೆರಳು
ಕಣ್ಣ ಮುಂದೆ ನೀನು ಬಂದೆ ..
ಇನ್ನೂ ಸನಿಹ ಬರಬಹುದೇ ನಾನು
ಬಂದರೆ ಸುಮ್ಮನಿರಬಹುದೇ ನೀನು
ಸಿಹಿತುಟಿಗೆ ಮುತ್ತು ಕೊಡಬಹುದೇ ನಾನು
ಮುತ್ತು ಕೊಟ್ಟ ಮೇಲೆ ಉಳಿಯಬಹುದೇ ನೀನು!
ಇನಿಯ ಓ ಇನಿಯ
ನಿನದೇ ಈ ಹೃದಯ
ಬಂದು ನೀ ಸನಿಹ
ಛೇಡಿಸು ಈ ವಿರಹ
ಒಂದೇ ಮಾತಲಿ ಹೇಳುವೆನು
ನೀನಿನ್ನೂ ನನ್ನವನು
ನಿನಗಾಗಿ ಕಾದಿರುವೆನು
ತರುವೆಯಾ ಕನಸೊಂದನು..
ಮನದ ಕಿರುತೆರೆ ನಾಯಕ ನೀನು
ಪ್ರೇಮಸ್ವರಕೆ ಹಾಡುವ ಗಾಯಕಿ ನಾನು
ಕಣ್ಣ ಮುಂದೆ ನೀನೊಮ್ಮೆ ಬರಬೇಕಿದೆ ಇನ್ನು
ನಿನ್ನ ನೋಡಿ ಮುಗುಳ್ನಗಬೇಕಿದೆ ನಾನು
ಏನು ಹೇಳಲಿ ಒಲವೇ
ನಿನ್ನ ಕುರಿತು
ಹಾಡುತಿರಲು ನೀನು
ನನ್ನೆದೆಯಲಿ ಕುಳಿತು..
ನಿನ್ನ ಕಣ್ಣಸನ್ನೆಗೆ ಸೊನ್ನೆಯಾಗಿರುವೆನು
ಮುಂಗುರಳ ಸರಿಸುವ ಬೆರಳಾಗುವೆನು
ತರಲೇ ಹೊಸಗನಸೊಂದನು
ಮುಡಿಸಲೇ ನೆನಪಿನ ಹೂವಂದನು
ನೀನೆಂದರೆ ನಾನು
ನಾನೆಂದರೆ ನೀನು
ನಾವೆಂದರೆ ಪ್ರೀತಿಯಲ್ಲವೇನು
ಪ್ರೀತಿಯಲ್ಲೇ ನಾವಿಲ್ಲವೇನು..
ಏನು ಹೇಳಲಿ ಒಲವೇ..
ಏನು ಬೇಕು ಕೇಳು
ಎಲ್ಲ ಕೊಡುವೆನು
ಒಮ್ಮೆ ಹೇಳಿನೋಡು
ಜೀವ ಬಿಡುವೆನು
ಕೊನೆ ಉಸಿರಿನಲ್ಲೂ
ನಿನ್ನ ಹೆಸರನ್ನೇ ಜಪಿಸುವೆನು
ನಿನ್ನಿಂದ ದೂರಮಾಡುವ
ದೇವರನ್ನು ಒಮ್ಮೆ ಶಪಿಸುವೇನು
ಏನು ಹೇಳಲಿ ಒಲವೇ..