ಕರೆ ನೀನು
ತಡ ಮಾಡದೆ
ನಿನ್ನ ಕನಸಿಗೆ..
ಬರುವೆ ನಾನು
ನಿನಗೂ ಹೇಳದೆ
ನಿನ್ನ ಮನಸಿಗೆ..
ಕರೆ ನೀನು ತಡ ಮಾಡದೆ
ನಿನ್ನ ಮೌನವನ್ನು ಕದ್ದಾಲಿಸುವೆ
ನಿನ್ನ ಮನದಲ್ಲೇ ಅವಿತು
ನೀ ನಕ್ಕರೆ ನಾನೂ ನಗುವೆ
ನಿನ್ನ ಗಲ್ಲಗುಳಿಯಲ್ಲೇ ಕುಳಿತು
ಕರೆ ನೀನು ತಡ ಮಾಡದೆ
ಎಷ್ಟು ಬರೆದರೂ ಮುಗಿಯುತಿಲ್ಲ
ಪ್ರೇಮದ ಹಾಡು ನಿರಂತರ
ಮೌನವೇ ಪ್ರೀತಿಯ ಭಾಷೆ
ಬೇಕಿಲ್ಲ ಅದುಕೆ ಭಾಷಾಂತರ