Day: June 7, 2015

ಸಂತೋಷವೆಂದರೆ…!

ಮೊನ್ನೆ ನನ್ನ ಒಬ್ಬ ಗೆಳೆಯ ” Are you happy ” ? ಎಂದು ಕೇಳಿದ್ದ.. ನಾನು ಅದಕ್ಕೆ ಎರಡು ನಿಮಿಷ ಯೋಚಿಸಿ “ಹೌದು Ya I am happy ಎಂದಿದ್ದೆ “.. ಅಂದರೆ ನಾವು ಸಂತೋಷವಾಗಿದಿವೋ ಇಲ್ವೋ ಅಂತ ಯೋಚನೆ ಮಾಡಿ ಉತ್ತರ ಕೊಡುವಷ್ಟು ನಾವು ಈ ಬದುಕಿನಲಿ ಕಳೆದು ಹೋಗಿದ್ದೇವೆ ಅಥವಾ ಈ ಬದುಕಿನಲಿ ನಾವು ಕರಗಿ ಹೋಗಿದ್ದೇವೆ.ನಮಗೆ ಗೆಲುವು ಸಂತೋಷ ಕೊಡುತ್ತದೆ ಅಂತ ತಿಳಿದುಕೊಳ್ಳುತ್ತಿವಿ ಆದರೆ ನಮಗೆ ಸೋಲು ಬಂದ ಮೇಲೆ ಆ ಸಂತೋಷ ಹಾರಿ ಹೋಗಿರುತ್ತದೆ.. ನಮೆಗೆನೋ ಸಿಕ್ಕರೆ ಸಂತೋಷವೆನ್ನುತ್ತೇವೆ ಆದರೆ, ಅದು ಸಿಕ್ಕರೆ ಮಾತ್ರ ಖುಷಿ ಇಲ್ಲದಿದ್ದರೆ ಕಣ್ಣಿರೆ ಗತಿ.

ಆಗಿದ್ದರೆ ನಿಜವಾದ ಸಂತೋಷವೆಂದರೆ ಏನು ? ಯಾವುದು ನಮಗೆ ನಿಜವಾದ ಸಂತೋಷ ಕೊಡುತ್ತದೆ. ? ಅಸಲಿಗೆ ಸಂತೋಷ ಸಿಗುವುದೋ ? ಅಥವಾ ಅದು ಕೇವಲ ಒಂದು ಅನುಭವವೋ ? ನಾವು ಅನೇಕ ಬಾರಿ ನಮಗೆ ಗೊತ್ತಿಲ್ಲದ ಹಾಗೆನೆ ನಾವು ಸಂತೋಶವಾಗಿರುತ್ತೇವೆ.. ಅದು ನಮ್ಮೊಳಗಿನ ಸಂತೋಷ.ಅದು ತಂತಾನೆ ಆಗುವ ಸುಂದರ ಅನುಭವ.

ತುಂಬಾ ದಿನಗಳ ನಂತರ ನಿಮ್ಮ ನೇಟಿವ್ ಪ್ಲೇಸ್ ಹೋದರೆ ನಿಮ್ಮ ಮುಖ ಕಮಲದ ಹಾಗೆ ಅರಳುತ್ತದೆ. ನಿಮ್ಮ ಮನೆ ನೋಡಿದ ಕೂಡಲೇ ನಿಮ್ಮ ಮನಸಿಗೆ ಅದೇನೋ ಖುಷಿ. ಮನೆಗೆ ಹೋದ ಮೇಲೆ ಅಮ್ಮ ಮಾಡಿದ ಅಡುಗೆ ಊಟ ಮಾಡಿದ ಕೂಡಲೇ ನಿಮ್ಮ ನಾಲಿಗೆ ಆಗುವ ಸಂತೋಷ ಹೇಳತೀರದು. ಹೀಗೆ ಕೆಲವು ಸಂತೋಷಗಳನ್ನು ಹುಡುಕಿಕೊಂಡು ಹೋಗದಿದ್ದರೂ ಅದಾಗೇ ಅದೇ ನಿಮ್ಮನ್ನು ತಲುಪುತ್ತದೆ..ನಿಮ್ಮ ಊರಿಗೆ ಹೋದಾಗ , ನಿಮ್ಮ ಬಾಲ್ಯದ ಗೆಳೆಯರೆಲ್ಲ ಸೇರಿ ಚಹಾ ಕುಡಿಯುವಾಗ ಆಗುವ ಸಂತೋಷವೇ ಬೇರೆ.
ಬಾಲ್ಯದ ನೆನೆಪು ಮಾಡಿಕೊಳ್ಳುತ್ತಾ ಸಂಜೆಯ ಸವಿಯೋದು ಏನು ಚಂದ ಅಲ್ಲವೇ ? ಅದು ಒಂದು ಖುಷಿ.

ನೀವು ಯಾವೊದೋ ಊರಿಗೆ ಪ್ರಯಾಣಿಸುವಾಗ ನಿಮ್ಮ ಮೊಬೈಲ್ ಫೋನಿನಲ್ಲಿ ಒಂದು ಚಂದದ ಹಾಡು ಬಂದರೆ ಅದನ್ನು ಕೇಳುತ್ತ ನೀವು ನಿಮ್ಮ ಕಲ್ಪನೆಯ ಲೋಕಕ್ಕೆ ಹೋಗಿಬಂದ ಮೇಲೆ ಆಗುವ ಖುಷಿ ಅಷ್ಟಿಷ್ಟಲ್ಲ.
ಕೆಲವೊಂದು ಸಂತೋಷದ ಕ್ಷಣಗಳು ಅಚ್ಚರಿಯ ಜೋತೆ ಜೊತೆಯಲ್ಲೇ ಸಿಗುತ್ತವೆ.
ನೀವು ಪರೀಕ್ಷೆಯಲ್ಲಿ ತುಂಬಾ ಕೆಟ್ಟದಾಗಿ ಮಾಡಿರುತ್ತೀರಿ. ಆದರೆ ರಿಸಲ್ಟ್ಸ್ನಲ್ಲಿ ನಿಮಗೆ ಹೆಚ್ಚು ಅಂಕ ಬಂದಿರುತ್ತೆ ಅದು ನಿಮಗೆ ಅಚ್ಚರಿ ತರಸಿದ್ದರೂ ನಿಮಗೆ ಸಂತೋಷವಾಗಿರುತ್ತದೆ.

ನಮಗೆ ಇಷ್ಟವಾಗುವ ಒಂದು ಸಿನೆಮಾ ನೋಡಿದಾಗ, ಮೆಚ್ಚಿನ ಗಾಯಕನ ಹಾಡು ಕೇಳುವಾಗ,ರಾತ್ರಿ ಖಾಲಿ ಇರುವ ರೋಡಿನಲ್ಲಿ ಬೈಕಿನ ಮೇಲೆ ಅತೀ ವೇಗವಾಗಿ ಹೋಗುವಾಗ, ಮಳೆಬಂದು ನಿಂತ ಮೇಲೆ ಆ ಸಿಹಿ ತಂಗಾಳಿಯಲ್ಲಿ ಒಂದು ವಾಕ್ ಹೋಗುವಾಗ,ಕಡಲ ತೀರದ ಅಲೆಗಳ ಸದ್ದನ್ನು ಮೌನದಲ್ಲೇ ಆಲಿಸುತ್ತಿರುವಾಗ ಕಡಲಾ ಅಲೆಗಳು ಬಂದು ನಿಮ್ಮ ಪಾದ ಸವರಿದಾಗ , ನಿಮ್ಮನ್ನು ತಮ್ಮತ್ತ ಸೆಳೆದಂತೆ ಭಾಸವಾದಾಗ , ಕಡಲ ತೀರದಿ ನಡೆಯುತ್ತಾ ನೀವು ಬಿಟ್ಟ ಹೆಜ್ಜೆ ಗುರುತುಗಳು ಅಲೆಗಳು ಅಳಿಸುವುದನ್ನು ಕಂಡಾಗ, ಮೊದಲ ಸಂಬಳದಲ್ಲಿ ಅಪ್ಪ ಅಮ್ಮನಿಗೆ ಉಡುಗೊರೆ ಕೊಟ್ಟಾಗ , ಮೆಚ್ಚಿನ ಗೆಳೆಯ/ಗೆಳತಿಯ ಹುಟ್ಟುಹಬ್ಬವನ್ನು ಆಚರಿಸುವಾಗ, ದೂರದಲ್ಲಿರುವ ಸ್ನೇಹಿತೆ/ ಸ್ನೇಹಿತನೊಂದಿಗೆ ಮಾತನಾಡುವಾಗ, ಫೇಸ್ಬುಕ್ ನಲ್ಲಿ ನಿಮ್ಮ ಫೋಟೋ ಗೆ ಹೆಚ್ಚು ಲೈಕ್ ಬಂದಾಗ, ನಿಮ್ಮ ಕೆಲಸ ಮೆಚ್ಚಿ ನಿಮ್ಮ ಮ್ಯಾನೇಜರ್ ಶಹಭಾಶ್ ಗಿರಿ ಕೊಟ್ಟಾಗ., ನಿಮ್ಮ ಗೆಳತಿಯೊಂದಿಗೆ ಬೈಕ್ನಲ್ಲಿ ಸುತ್ತುವಾಗ ,ಗೆಳೆಯರೊಂದಿಗೆ ಟ್ರಿಪ್ ಹೋದಾಗ, ಬಾಲ್ಯದ ಸ್ನೇಹಿತ ಧಿಡಿರನೆ ಬಸ್ ಸ್ಟಾಪ್ ನಲ್ಲಿ ಸಿಕ್ಕಾಗ ,ದಾರಿಯಲ್ಲಿ ಭಿಕ್ಷುಕನಿಗೆ ನಿಮಗೆ ಕೈಲಾದಷ್ಟು ಸಹಾಯ ಮಾಡಿದಾಗ, ಆಗುವ ಸಂತೋಷಕ್ಕೆ ಎಲ್ಲಿದೆ ಹೋಲಿಕೆ ಅಲ್ಲವೇ ?

ಹೀಗೆ ಪುಟ್ಟ ಪುಟ್ಟ ಸಂತೋಷಗಳು ನಮ್ಮ ಬದುಕನ್ನೇ ಸುಂದರವಾಗಿಸುತ್ತವೆ. ಇಂತಹ ಸಣ್ಣ ಪುಟ್ಟಾ ಸಂತೋಷಗಳೇ ನಮ್ಮ ಮನಸನ್ನು ಯಾವಾಗಲು ಪುಟ್ಟ ಮಗುವಿನತರ ಇಡುತ್ತವೆ . ನಮ್ಮಲ್ಲಿ ಎಷ್ಟೇ ದುಡ್ಡಿದ್ದರೂ, ಎಷ್ಟೋ ಬಂಗಲೆ ,ಕಾರುಗಳಿದ್ದರೂ ಈ ಪುಟ್ಟ ಸಂತೋಷಗಳನ್ನು ನಾವು ಅನುಭವಿಸದಿದ್ದರೆ ಬದುಕು ವ್ಯರ್ಥವಾದಂತೆ. ಅದಕ್ಕೆ ಯಾವುದೇ ಬೆಲೆ ಇರುವುದಿಲ್ಲ .ಇಂತಹ ಸಂತೋಷಗಳು ನಮ್ಮದಾಗಬೇಕಿದೆ

ನಿನ್ನ ಕಣ್ಣೇ ಕಾಡಿದೆ….

ನಿನ್ನೆ ನಾ ನಿನ್ನ ನೋಡಿದೆ
ಇನ್ನೂ ನಿನ್ನ ಕಣ್ಣೇ ಕಾಡಿದೆ..
ಕೇಳು, ಹೃದಯ ಹಾಡಿದೆ
ನನ್ನ ಜೀವ ನಿನ್ನೆ ಬೇಡಿದೆ
ಮೊದಲ ಪ್ರೀತಿ ಶುರುವಾಗಿದೆ
ಮಧುರ ಭಾವ ನನಗಾಗಿದೆ
ಕಾಡಿದ ಕಣ್ಣುಗಳಿಗೆ ಕಾಡಿಗೆ ಹಚ್ಚಬೇಕಿದೆ
ಹಾಗೇ, ಗಲ್ಲದ ಮೇಲೊಂದು ದೃಷ್ಟಿಬೊಟ್ಟು ಇಡಬೇಕಿದೆ.

ಮೊದಲ ನೋಟಕೆ
ಮರುಜನ್ಮ ಪಡೆದಿರುವೆ
ನಾ ಮರುಳನಾಗುವ ಮುನ್ನ
ಮನ ಸೇರು ಮನದರಸಿ…

ಬೀಸಿದ ಗಾಳಿಗೆ
ತಾಕಿದೆ ನಿನ್ನ ಮುಂಗುರುಳು
ಸರಿ ಮಾಡಿ ನಾಚಿತೇ
ನಿನ್ನ ಕೈಬೆರಳು..?

ಕನಸೋ ನನಸೋ
ಈ ಕ್ಷಣ ಮುಗಿಯದಿರಲಿ
ನಿನ್ನ ಕಣ್ಣುಗಳು ಹೀಗೆ
ನನ್ನನ್ನೇ ನೋಡುತಿರಲಿ..

ಮೊದಲ ಪ್ರೀತಿಯ ಮಧುರ ಕ್ಷಣಗಳು – ೧

ಮಳೆಹನಿಗಳಷ್ಟೇ ಸಾಕ್ಷಿಯಾಗಿದ್ದ ಕ್ಷಣಗಳವು. ಬೀಸಿದ ಗಾಳಿಗೆ ಅವಳ ಕಣ್ಣಿಗೆ ಅಡ್ಡ ಬಂದಮುಂಗುರುಳನ್ನು ಸರಿಸುತ್ತ, ಅವಳು ನನ್ನತ್ತ ನೋಡುವಾಗಲೆಲ್ಲ ಎದೆಯೊಳಗೆ ಯಾರೋ ಸಹಿ ಮಾಡಿದಂತಾಗುತ್ತಿತ್ತು. ಅವಳ ತುಟಿಗಳು ನನಗೆ ಏನೋ ಹೇಳಲು ಆತುರಿಸುತ್ತಿದ್ದವು ಎನ್ನುಸುತ್ತಿತ್ತು ಆದರೆ ಅವಳು ಮಾತ್ರ ಮೌನದ ಮಾತಾಗಿದ್ದಳು. ಅವಳು ನನ್ನ ಪ್ರೀತಿಯನ್ನು ಒಪ್ಪುವಳೇ ? ಅಥವಾ ಇರುವ ಸ್ನೇಹವನ್ನೂ ತ್ಯಜಿಸಿ ನನ್ನಿಂದ ದೂರವಾಗುವಳೋ ಎಂಬ ಭಯ ನನಗೆ ಕಾಡುತ್ತಿತ್ತು.ಕಳೆದ ಹತ್ತು ನಿಮಿಷಗಳ ಕಾಲ ನಮ್ಮ ಕಣ್ಣುಗಳಷ್ಟೇ ಮಾತಾಡಿದ್ದವು.
ಕೊನೆಗೂ ಏನೋ ಹೇಳಲು ಹತ್ತಿರ ಬಂದಳು. ಅವಳ ಕಣ್ಣುಗಳಷ್ಟೇ ನಾನು ನೋಡುತಲಿದ್ದೆ.
ಅವಳ ಹೃದಯದ ಬಡಿತ ನನಗೂ ಕೆಳುವಂತಿತ್ತು. ಕೊನೆಗೂ ಮೌನ ಮುರಿದು ನನ್ನ ಕೈಬೆರಳುಗಳನ್ನು ಬಿಗಿ ಹಿಡಿದು
ಗದ್ಗತಿತಳಾಗಿ ‘ಐ ಲವ್ ಯೂ ‘ಎಂದೂ ಹೇಳಿಯೇ ಬಿಟ್ಟಳು!
ನದಿಗಳು ಸಮುದ್ರ ಸೇರಿದಂತೆ ,ಮೊಗ್ಗು ಹೂವಾಗಿ ಜೇನಾದಂತೆ, ಇರುಳಿಗೆ ಬೆಳದಿಂಗಳು ಜೊತೆಯದಂತೆ ನನ್ನ ಹೃದಯ ಸಂಭ್ರಮಿಸಿತ್ತು!

ಆ ಕ್ಷಣಗಳು ಇನ್ನು ಬಾಕಿಇವೆ….

ಆಸೆ

ಆಸೆ ಆಕಾಶದಷ್ಟು ಇರಲಿ
ಸೂರ್ಯ ,ಚಂದಿರ ಆಗದಿದ್ದರೂ ಪರವಾಗಿಲ್ಲ
ಸಾವಿರ ನಕ್ಷತ್ರಗಳಲ್ಲಿ ಒಬ್ಬರಾಗಿ ಮಿನುಗೋಣ,,

ಐಟಿವಚನ -2

ಮುಂದೆ ಹೊಡೆಯುತಿರಲು ‘customer’
ಹಿಂದೆ ಒದೆಯುತಿರಲು ‘Manager’
Centreಲ್ಲಿ ಸಾಯುವನನ್ನು
‘Developer’ ಎನ್ನೆಂದ ಐಟಿತಜ್ಞ!