ನಿನ್ನೆ ನಾ ನಿನ್ನ ನೋಡಿದೆ
ಇನ್ನೂ ನಿನ್ನ ಕಣ್ಣೇ ಕಾಡಿದೆ..
ಕೇಳು, ಹೃದಯ ಹಾಡಿದೆ
ನನ್ನ ಜೀವ ನಿನ್ನೆ ಬೇಡಿದೆ
ಮೊದಲ ಪ್ರೀತಿ ಶುರುವಾಗಿದೆ
ಮಧುರ ಭಾವ ನನಗಾಗಿದೆ
ಕಾಡಿದ ಕಣ್ಣುಗಳಿಗೆ ಕಾಡಿಗೆ ಹಚ್ಚಬೇಕಿದೆ
ಹಾಗೇ, ಗಲ್ಲದ ಮೇಲೊಂದು ದೃಷ್ಟಿಬೊಟ್ಟು ಇಡಬೇಕಿದೆ.
ಮೊದಲ ನೋಟಕೆ
ಮರುಜನ್ಮ ಪಡೆದಿರುವೆ
ನಾ ಮರುಳನಾಗುವ ಮುನ್ನ
ಮನ ಸೇರು ಮನದರಸಿ…
ಬೀಸಿದ ಗಾಳಿಗೆ
ತಾಕಿದೆ ನಿನ್ನ ಮುಂಗುರುಳು
ಸರಿ ಮಾಡಿ ನಾಚಿತೇ
ನಿನ್ನ ಕೈಬೆರಳು..?
ಕನಸೋ ನನಸೋ
ಈ ಕ್ಷಣ ಮುಗಿಯದಿರಲಿ
ನಿನ್ನ ಕಣ್ಣುಗಳು ಹೀಗೆ
ನನ್ನನ್ನೇ ನೋಡುತಿರಲಿ..