Day: June 12, 2015

ಇರುಳೇ ಹೆದರಬೇಡ

ಹಗಲಿನ ಅಂತ್ಯಕ್ಕೆ
ಸಂಜೆ ಬಿಕ್ಕಿದೆ!
ಇರುಳೇ ಹೆದರಬೇಡ
ಬೆಳದಿಂಗಳು ಮಿಕ್ಕಿದೆ!

ನಿಜವಾಗಲು ಅಪ್ಪ ಅಂದರೆ ಆಕಾಶ !

“This father’s day, I am expressing my love towards my dad by participating in the #HugYourDad activity at BlogAdda in association with Vicks.” are you! ?

ಒಬ್ಬ ಮಗನಾಗಿ ಅಪ್ಪನಿಗೆ ಎಷ್ಟು ಧನ್ಯನಾಗಿದ್ದರು ಸಾಲದು. ಎಷ್ಟು ಥ್ಯಾಂಕ್ಸ್ ಹೇಳಿದರೂ ಸಾಲದು. ಆದರೂ ಅಪ್ಪನ ಕುರಿತು ಬರೆಯಬೇಕೆಂಬ ಆಸೆ. ಅಪ್ಪನ ಪ್ರೀತಿ ಬಗ್ಗೆ ನಾಲ್ಕು ಸಾಲುಗಳಾದರೂ ಬರೆಯಬೇಕೆಂಬ ಹೆಬ್ಬಯಕೆ.
ಬಾಲ್ಯದ ಪುಟಗಳಿಂದ ನೆನಪಿಂದ ಹೊತ್ತಿಗೆ ಶುರುಮಾಡೋಣ

ನಾನು ಒಬ್ಬನೇ ಮಗ. ನನಗೆ ತಂಗಿ ಅಕ್ಕ ಅಣ್ಣ ತಮ್ಮ ಯಾರೂ ಇಲ್ಲ. ಅಪ್ಪ ಅಮ್ಮನ ಪೂರ್ತಿ ಪ್ರೀತಿ ನನ್ನ ಮೇಲೆಯೇ!
ನಾನು ಕೇಳಿದ್ದು ನನಗೆ ತಾನಾಗೆ ಸಿಗುತ್ತಿತ್ತು. ಬಾಲ್ಯದಲ್ಲಿ ನಾನು ನಿಜವಾಗಲು ರಾಜಕುಮಾರ!
ನನ್ನ ಅಪ್ಪ ಒಬ್ಬ ರೈತ. ಬೆಳೆದ ಬೆಳೆ ಬಂದಮೇಲೆ ಅಪ್ಪ ನನಗೆ ಏನಾದರೂ ಉಡುಗೊರೆ ತರುತ್ತಿದ್ದರು.
ಪ್ರತಿಸಲನು ನನಗೆ ಅದು ಒಂದು ಸುರ್ಪ್ರಿಸೆ! ಕಾರಣ ಅವರು ಏನು ತರುತ್ತರೆವೆಂದು ಹೇಳುತ್ತಿರಲಿಲ್ಲ.

ಒಂದು ರಾತ್ರಿ ಅಪ್ಪ ಪಕ್ಕದ ಊರಿಗೆ ಹೋಗಿದ್ದರು. ಅವರು ಬರುವ ದಾರಿಯನ್ನೇ ಕಾಯುತ್ತಿದ್ದೆ. ತಡ ರಾತ್ರಿ ಬಂದರು. ಅಷ್ಟೊತ್ತಿಗೆ ನಾನು ಮಲಗಿದ್ದೆ . ಆದರೂ ನನನ್ನು ಎಬ್ಬಿಸಿ ಆಚೆ ಕರೆದುಕೊಂಡು ನನಗಾಗಿ ತಂದ ಸೈಕಲ್ ತೋರಿಸಿದ್ದರು! ತುಂಬಾ ಖುಷಿಯಿಂದ ನನ್ನ ಅಪ್ಪನ್ನು ತಬ್ಬಿಕೊಂಡಿದ್ದೆ ! ಅದು ಬಾಲ್ಯದ ಒಂದು ಸುಂದರ ನೆನಪು !

ಅಪ್ಪನ ಬೈಕಿನ ಮೇಲೆ ಕೂತು,ಅಪ್ಪನನ್ನು ಬಿಗಿಹಿಡಿದು ಶಾಲೆಗೇ ಹೋದ ದಿನಗಳವು. ಹಲವು ಸಾರಿ ಅಪ್ಪನ ಬೈಕಿನ ಮೇಲೆ ನನ್ನ ಗೆಳೆಯರನ್ನು ಕೂರಿಸಿಕೊಂಡ ಹೋಗಿದ್ದುಂಟು. ಅಪ್ಪನ ಬೈಕ್ ಮೇಲೆ ಹೋಗುವ ಕ್ಷಣಗಳು ಇಂದಿಗೂ ಜೀವಂತ!.

ನನ್ನ ಅಪ್ಪನಿಗೆ ನಾನು ಹೆಚ್ಚು ತ್ರಾಸು ತೆಗೆದುಕೊಂಡು ಕೆಲಸವಾಗಲಿ . ಓದುವದಾಗಲಿ ಇಷ್ಟವಾಗುತ್ತಿರಲಿಲ್ಲ. ಅನೇಕ ಬಾರಿ ಅಮ್ಮ ನನಗೆ ಓದಿಸಲು ಕೂತಾಗ ಅಪ್ಪನ ನೆಪ ಹೇಳಿ ತಪ್ಪಿಸಿಕೊಂಡಿದ್ದು ನೆನಪಿದೆ.
ನನಗೆ ಅಪ್ಪ ಅಷ್ಟೆಲ್ಲ ಪ್ರೀತಿಸುತ್ತಿದ್ದರೂ ಅವರ ಮೇಲೆ ನನಗೆ ಅಷ್ಟೇ ಗೌರವ ಜೊತೆಗೆ ಅಷ್ಟೇ ಭಯವಿತ್ತು. ಕೇವಲ ಅವರ ಧ್ವನಿಯಲ್ಲೇ ನಾನು ಹೆದರಿ ನೀರಾಗುತ್ತಿದ್ದೆ!. ಎಷ್ಟೋ ಬಾರಿ ಅವರಿಗೆ ಕೋಪ ತರಿಸಿದ್ದೇನೆ!. ಅನೇಕ ಬಾರಿ ಅವರು ನನಗೆ ಹೊಡೆದ ಘಟನೆಗಳಾಗಿವೆ.!

ನನ್ನ ಅಪ್ಪ ಶಾಲೆಯ ಯಾವುದೇ ಕಾರ್ಯಕ್ರಮಕ್ಕೆ ಅಷ್ಟೊಂದು ಬರುತ್ತಿರಲಿಲ್ಲ. ಆದರೆ ಬಂದಾಗಲೆಲ್ಲ ನನ್ನ ಬಗ್ಗೆ ನನ್ನ ಸ್ನೇಹಿತರ ಬಳಿ ಕೇಳುತ್ತಿದ್ದರು. ಅವರಿಗೆ ಐಸ್ಕ್ರೀಂ ಎಲ್ಲ ಕೊಡಿಸಿ ಅವರಿಗೂ ಗೆಳೆಯರಾಗುತ್ತಿದ್ದರು.
ನನ್ನ ಅಪ್ಪ ಒಂದು ದಿನವೂ ಓದು , ಬರಿ ಎಂದು ಹೇಳಿದವರಲ್ಲ ಆದರೆ ಬದುಕಿನ ಪಾಠಗಳನ್ನೂ ಪ್ರತಿದಿನವೂ ಹೇಳಿಕೊಡುತ್ತಿದ್ದರು.ಅವರಿಗೆ ದುಡ್ಡು , ಅಂತಸ್ತು ಗಿಂತ ಮನುಷ್ಯತ್ವ ಮುಖ್ಯ ಎಂಬುದನ್ನು ನನಗೆ ಅನೇಕ ಬಾರಿ ಹೇಳುತ್ತಿದ್ದರು!

ನನ್ನ ಗೆಳೆಯರೆಲ್ಲ ನನ್ನ ಮನೆಗೆ ಬರುತ್ತಿದ್ದರು. ಕೆಲವು ಸಲ ನನ್ನ ಮನೆಉಯಲ್ಲೆ ರಾತ್ರಿ ಉಳಿದು ಕೊಂಡು ಮರುದಿನ ಹೋಗುತ್ತಿದ್ದರು. ಆಗ ನನ್ನ ಅಪ್ಪನೇ ಊಟ ಬಡಿಸುವುದರಿಂದ ಹಿಡಿದು
ಹಾಸಿಗೆ ಹಾಸುವುವರೆಗೂ ಅವರೇ ಮಾಡುತಿದ್ದರು. ಗೆಳೆತನ ಒಂದು ಆಳದ ಮರ ಇದ್ದ ಹಾಗೆ ಅದನ್ನು ಯಾವಗಲು ಕಾಪಾಡಿಕೋ ಎಂದು ಹೇಳುತ್ತಾರೆ ನನ್ನ ಅಪ್ಪ !. ನನ್ನ ಗೆಳೆಯರು ನನಗಿಂತ ನನ್ನ ಅಪ್ಪನನ್ನೇ ಹೆಚ್ಚು ಇಷ್ಟಪಡುತ್ತಿದ್ದರು.

ಚಿಕ್ಕವಯಸ್ಸಿನಲ್ಲಿ ನನಗೆ ಏನಾದರು ಸಾಧಿಸಬೇಕೆಂಬ ಆಸೆ ಇತ್ತು . ಒಂದು ದಿನ ನನ್ನ ಅಮ್ಮನನ್ನು ಕೇಳಿದೆ. ನಾನು ಏನಾದರೂ ಸಾಧನೆ ಮಾಡಬೇಕು ಎಂದು. ಆಗ ನನ್ನ ಅಮ್ಮ ಹತ್ತನೇ ತರಗತಿಯಲ್ಲಿ ಹೆಚ್ಚು ಅಂಕ ಗಳಿಸಿ ಈಡೀ ಊರಿಗೆ ಮೊದಲ ಸ್ಥಾನ ಪಡಿ ಆಗ ನಿಮ್ಮ ಅಪ್ಪನಿಗೆ ಇನ್ನು ಹೆಚ್ಚು ಸಂತೋಷವಾಗುತ್ತೆ ಎಂದು ಹೇಳಿದ್ದಳು!
ಹತ್ತನೇ ತರಗತಿಯಲ್ಲಿ ನಾನು ೯೫.೩೬ ಪ್ರತಿಶತ ಪಡೆದು ಜಿಲ್ಲಾಕ್ಕೆ ೪ನೇ ಸ್ಥಾನಪಡೆದೆ ! ಆಗ ನನ್ನ ಅಪ್ಪನ ಖುಷಿ ಹೇಳತೀರದು! ಅದೇ ಖುಷಿಯಲ್ಲಿ ಅವರು ನನಗೆ ಕೈಗಡಿಯಾರ ತಂದಿದ್ದರು!

ಬಾಲ್ಯ ಕೊಟ್ಟ ಅತೀ ಸುಂದರ ನೆನಪುಗಳಲ್ಲಿ ಅಪ್ಪನ ಜೊತೆ ಆಡಿದ ಕ್ರಿಕೆಟ್ ಆಟ. ನನ್ನ ಗೆಳೆಯರೊಂದಿಗೆ ಆಡುವಾಗ ನನ್ನ ಅಪ್ಪನು ಬಂದು ನಮ್ಮ ಜೊತೆ ಆಡುತ್ತಿದರು. ಅವರು ಬೌಲಿಂಗ್ ಮಾಡುತ್ತಿದ್ದರು ನಾನು ಬ್ಯಾಟಿಂಗ್ ಮಾಡುತ್ತಿದ್ದೆ. ಕ್ರಿಕೆಟ್ ಆಡಿದ ಖುಷಿಗಿಂತ ಅಪ್ಪನ ಜೊತೆ ಆಟ ಆಡಿದ ಖುಷಿನೆ ಜಾಸ್ತಿ
ಮೊದಲೇ ಹೇಳಿದಂತೆ, ಅಪ್ಪ ಒಂದು ಆಕಾಶದಂತೆ! ಎಷ್ಟೋ ಕೆಲಸಗಳು ಇದ್ದರು, ಸಂಸಾರದ ಜವಾಬ್ದಾರಿ ಇದ್ದರೂ ಅದನ್ನು ನಮ್ಮ ಮುಂದೆ ತೋರಿಸದೆ ಬಾಲ್ಯದ ಪುಸ್ತಕಕೆ ಅಪ್ಪನ ಪಾತ್ರ ಬಹುಮುಖ್ಯವಾಗಿದೆ!
ಅಪ್ಪ ನಿನಗೆ ನನ್ನ ಧನ್ಯವಾದಗಳು ! ನಿಮ್ಮ ಮಗನಾಗಿ ಹುಟ್ಟಿದ್ದು ನನ್ನ ಪುಣ್ಯ!