Day: June 14, 2015

ನೀನಿರದ ಸಮಯ…

ನೀನಿರದ ಸಮಯ
ಅನಾಥವಾಯಿತು ಹೃದಯ
ಬಾ ಬೇಗ ನನ್ನ ಇನಿಯ ..

ನೀ ಬರೋ ದಾರಿಯಲಿ
ದೀಪಗಳ ಸಾಲು.
ಬೆಳಕಿನ ಪಲ್ಲಕ್ಕಿಯಲ್ಲಿ
ನಗುನಗುತ ಬಾ ನನ್ನ ಸನಿಹ
ಅಳಿಸು ಬಾ ವಿರಹದ ಬರಹ …

ಬರಿದಾಗಿದೆ ಮನದ ಮುಗಿಲು
ರವಿ ಇರದೇ ಹೇಗೆ ಹಗಲು .
ನೀನಾಗು ಇರುಳ ಕನಸು
ನನ್ನ ಮೌನ ಒಮ್ಮೆ ಆಲಿಸು
ಈ ಹೃದಯ ನೀ ಸ್ವಿಕರಿಸು

ನೀನಿರದ ಸಮಯ
ಅನಾಥವಾಯಿತು ಹೃದಯ
ಬಾ ಬೇಗ ನನ್ನ ಇನಿಯ ..

ಮತ್ತೆ ಸಂಜೆಯಾಗಿದೆ..

ಮತ್ತೆ ಸಂಜೆಯಾಗಿದೆ..
ಅದೇ ನೀರವ ಮೌನ
ಆವರಿಸಿದೆ ಮನ.
ನೆನಪುಗಳು ಮುಳ್ಳಾಗಿ
ಎದೆಯನ್ನು ಚುಚ್ಚಿವೆ
ಬರೆದ ಕವನವನ್ನು
ಕಣ್ಣೀರೆ ಹನಿಗಳೇ ಅಳಿಸಿವೆ!