Month: June 2015

ಮೌನ ಹನಿಗಳು – ೨

ಈ ಜಗತ್ತು
ಒಂದು ಕ್ಷಣ ಮೌನವಾಗಲಿ
ಆ ಮೌನ ಪದವಾಗಲಿ
ಪದ ಹದವಾಗಲಿ
ಸೋಲಿರದ ಸಾಲಾಗಲಿ
ತ್ರಾಸಿರದ ಪ್ರಾಸವಿರಲಿ
ಪದಗಳಿಗೆ ಜೀವಬಂದು
ಹೊಸಭಾವ ತಂದು
ಕವಿತೆಯಾಗಲಿ
ಈ ಜಗತ್ತು
ಕವಿತೆಯಾಗಲಿ!
ಒಂದುಕ್ಷಣ ಮೌನವಾಗಲಿ !

ಮೌನ ಹನಿಗಳು – ೧

ಮೌನವೇ ಮೌನವೇ ಮಾತಾಡು
ಮೌನದಿ ಕೇಳು ಮೌನ ಬರೆದ ಹಾಡು!
ಮೌನಗಳ ಮಿಲನದಲಿ
ಮಾತು ಹುಟ್ಟಿತೇ
ಮಾತಿನಿಂದಲೇ ಮೌನ
ಅಸುನೀಗಿತೆ ?

ಮಾತು ಮೌನವಾದಾಗ
ಮೌನ ಮಾತಾದಾಗ
ಕವಿತೆ ಹುಟ್ಟಿತೇ ?
ಹದವಿರದ ಪದಗಳಲಿ
ಕವಿತೆ ಪ್ರಾಣಬಿಟ್ಟಿತೇ

ಕವಿಯಾದೆ

ನಿನಗಾಗಿ ನೂರಾರು ಕವಿತೆಗಳನು ಬರೆದು ನಾ ಕವಿಯಾದೆ
ಬರೀ ನಿನ್ನ ಮೌನವನ್ನೇ ಆಲಿಸಿ ನಿನ್ನ ಮನಮುಗಿಲಿಗೆ ರವಿಯಾದೆ!

ನಾ ಪ್ರೇಮಿಯಾದೆ

ಕವಿಯಾದೆ, ಕವಿತೆಯಾದೆ
ಮೌನವಾದೆ, ಮೌನದ ಮಾತದೆ
ಹಾಡದೆ ,ವಿರಹದ ಸಾಲಾದೆ
ಸನಿಹವಾದೆ, ಸಂಕಲನವಾದೆ
ಪ್ರೀತಿಯಾದೆ, ನಿನ್ನ ಪ್ರೀತಿಸಿ – ಪ್ರೇಮಿಯಾದೆ
ನಾ ಪ್ರೇಮಿಯಾದೆ

ಪ್ರಶ್ನೆ! ?

ನನ್ನದವೆಂದುಕೊಂಡಿದ್ದೆಲ್ಲ ನನ್ನದಾಗಲಿಲ್ಲ
ನನ್ನವುದಲ್ಲವೆಂದುಕೊಂಡಿದ್ದೆಲ್ಲ ನನ್ನದಾಯಿತಲ್ಲ
ಯಾವುದು ನನ್ನದು ? ಯಾವುದು ಅಲ್ಲ ?
ನಾನು ಯಾರು ? ನನಗೆ ಯಾರು ?
ಯಾರಿಗೇ ನಾನು ?
ಈ ಪ್ರಶ್ನೆಗಳು ಯಾರವು ?
ಉತ್ತರ ಯಾರದು ?
ನಾನು ಪ್ರಶ್ನೆಯೇ ?
ನಾನೇ ಉತ್ತರವೇ ?
ಉಳಿದುಕೊಂಡಿದ್ದು ಸತ್ಯವೋ ?
ಕಳೆದುಕೊಂಡಿದ್ದು ಸತ್ಯವೋ ?
ಯಾವುದು ಮಿಥ್ಯ ?!

ಪ್ರಶ್ನೆ ಹುಟ್ಟಿತು
ಉತ್ತರ ಮಣ್ಣಾಯಿತು!

NRI ನಾನ್ ರಿಟರ್ನಿಂಗ್ ಇಂಡಿಯನ್..

ಸಂತೋಷ್ ಅವರು ಬರೆದಿದ್ದು ! ಮನಸ್ಸಿಗೆ ತುಂಬಾ ಹಿಡಿಸಿದ ಲೇಖನ !

ಒಡಲಾಳ

ಸುಂದರ ಸವಿ ಸಂಜೆ, ತಂಗಾಳಿ, ವರ್ಷಧಾರೆ ಮನಸ್ಸಿಗೆ ಉಲ್ಲಾಸ ಮೂಡಿಸಿತ್ತು. Nescafe ಕಾಫೀ ಕುಡಿತಾ, ಕಿಟಕಿನಲ್ಲಿ ಮಳೆನ ನೋಡ್ತಾ ಕೂತ ನನಗೇಕೋ ಗೊತಿಲ್ಲ, ಕವಿ ಹೃದಯ ಮನಸನ್ನ ಕೆಣಕಿ ಹೀಯಾಳಿಸುತಿತ್ತು, ಪ್ರಕೃತಿ ರಮ್ಯತೆ ವರ್ಣಿಸಲು ಪದಪುಂಜ ಹೆಕ್ಕಿ ಪದಾನ್ವೇಷನಗೆ ಪ್ರೇರೇಪಿಸಿತ್ತು.

ಹೂವಿನ ಮೂಗಲ್ನಗುವಾಗಿ
ಮುಗಿಯದ ಮಾತಾಗಿ
ಕಾಡುವ ಮೌನವಾಗಿ
ಮರೆಯದ ನೆನಪಾಗಿ
ಬಾ ಮಳೆಯೇ ಬಾ, ಜೀವ ಜಲವಾಗಿ ಬಾ..

Scotland ನಲ್ಲಿ ಮಳೆನೇ ಹಾಗೆ, ಜಡಿ ಮಳೆ, ನಮ್ ಊರು ಕಳಸಾಪುರದ್ ಮಳೆ ನೆನಪ್ಸತ್ತೆ. ಅಮ್ಮನ ಪ್ರೀತಿ, ಚಿಕ್ಕಮಂಗಳೂರು ಕಾಫೀ, ನಮ್ಮೂರು ಮಳೆ ಇವಗಳ ನೆನಪುಗಳು ಸಾಗರದಾಚೆ ಕೊಂಡೈಯತ್ತೆ, ಕಳಸಾಪುರದಲಿ ನನ್ನ್ ಬಾಲ್ಯ ನೆನಾಪಿಗ್ಬರತ್ತೆ.

ಕಳಸಾಪುರ ನಮ್ಮೂರು ಚಿಕ್ಕಮಂಗಳೂರ್ ನಿಂದ 21 kms ದೂರ ಇದೆ. ನಾನ್ ಇರೋ Aberdeen ನಿಂದ 8000 ಮೈಲಿ ದೂರ ಇರೋ ಒಂದ್ ಸಣ್ಣ ಪಟ್ಟಣ. ಈ ಎರಡು ಊರ್ಗಳ್ ಮಧ್ಯ ಇರೋ similarities ಆಂದ್ರೆ ಮಳೆ ಮತ್ತೆ ನೆನಪುಗಳು.

ಬೆಟ್ಟದ ತುದಿಯಲ್ಲಿ,
ಮಲೆನಾಡ ಮಡಿಲಲ್ಲಿ
ಪ್ರಕೃತಿಯ ಸೆಲೆಯಾಗಿ
ಯಗಚಿಗೆ ತವರಾಗಿ
ಒಂದಿದೆ ಊರು, ನಮ್ಮೂರು ಅದು ನಮ್ಮೂರು..

Coffee estate ನಲ್ಲಿ ಕಣ್ಣ ಮುಚ್ಚಾಲೆ, ಬೆಟ್ಟ ಸುತ್ತಿ ಕಾಡು ಮೇಡು ಅಲ್ದು ಭದ್ರಾ ನಧಿ ಈಜಿ, ಕಲಾಸೇಶ್ವರ ದೇವಸ್ಥಾನಕ್ಕ್ ಹೋಗೋದು ರುಡಿಯಗಿತ್ತು. ಅಪ್ಪನ ಜೊತೆಗೆ estate ನಲ್ಲಿ jeep ride, ಅಬ್ಬಾ ಎಂತ ಮಜಾ. iPad, smart phone ಮತ್ತೆ internet, ಅಷ್ಟೇ ಯಾಕೆ power supply ಕೂಡ ಇರ್ಲಿಲ್ಲ. ಆದ್ರೆ ಅವತಿದ್ದ ಖುಷಿಗೆ ಬೆಲೆ…

View original post 321 more words

ಐಟಿವಚನ -3

ಹತ್ತು ವರ್ಷದ Home Loan ಮಾಡಿ
ಐದು ವರ್ಷದ Car Loan ಮಾಡಿ
ಎರಡು ವರ್ಷದ Personal Loan ಮಾಡಿ
ಸಾಲ ತೀರ್ಸೋಕೆ ,ಸಾಯೋವರೆಗೆ ದುಡಿಯೆಂದ
-ಐಟಿತಜ್ಞ

ಮೌನ….

ಮೌನ ಒಂದು ಮೂಕ ಭಾವ
ಜೀವವಿರದ ಪದಗಳ ಸಮೂಹ
ಎಲ್ಲವ ಹೇಳುವ ಹೃದಯದ ಭಾಷಣ
ಪದಗಳೇ ಇರದ ಕವನ
ಪದಗಳಲ್ಲಿರದ ತಾಜಾತನ
ಒಂಟಿ ಜೀವದ ,
ಒಂಟಿ ಭಾವ ತೊಟ್ಟ ಆಭರಣ!

ಏಕೆ ಹೀಗಾಯಿತು …

ಏಕೆ ಹೀಗಾಯಿತು
ಎದೆಯಲಿ ಕವಾಯಿತು
ಮೊದಲ ಪ್ರೀತಿ ಇನ್ನು ಶುರುವಾಯಿತು….

ಚೂಡಿದಾರ ಧರಿಸಿ
ಮುಂಗುರಳ ಸರಿಸಿ
ದೀಪದ ಕಣ್ಣುಗಳಲ್ಲಿ
ಹೊಂಬೆಳಕ ಹರಿಸಿ
ಕದ್ದು ನೋಡುತಿಹಳು
ಹೃದಯ ಕದ್ದಿರುವಳು 😉

ನೀನಿರದ ಸಮಯ…

ನೀನಿರದ ಸಮಯ
ಅನಾಥವಾಯಿತು ಹೃದಯ
ಬಾ ಬೇಗ ನನ್ನ ಇನಿಯ ..

ನೀ ಬರೋ ದಾರಿಯಲಿ
ದೀಪಗಳ ಸಾಲು.
ಬೆಳಕಿನ ಪಲ್ಲಕ್ಕಿಯಲ್ಲಿ
ನಗುನಗುತ ಬಾ ನನ್ನ ಸನಿಹ
ಅಳಿಸು ಬಾ ವಿರಹದ ಬರಹ …

ಬರಿದಾಗಿದೆ ಮನದ ಮುಗಿಲು
ರವಿ ಇರದೇ ಹೇಗೆ ಹಗಲು .
ನೀನಾಗು ಇರುಳ ಕನಸು
ನನ್ನ ಮೌನ ಒಮ್ಮೆ ಆಲಿಸು
ಈ ಹೃದಯ ನೀ ಸ್ವಿಕರಿಸು

ನೀನಿರದ ಸಮಯ
ಅನಾಥವಾಯಿತು ಹೃದಯ
ಬಾ ಬೇಗ ನನ್ನ ಇನಿಯ ..