Month: July 2015

ಮತ್ತೆ ಹುಟ್ಟಿ ಬನ್ನಿ ಕಲಾಂ ಸರ್!

ರಾಮೇಶ್ವರಂನಿಂದ ರಾಷ್ಟ್ರಪತಿಭವನದವರೆಗಿನ ನಿಮ್ಮ ಪಯಣ ನನ್ನಂಥ ಕೋಟ್ಯಂತರ ಯುವಕರಿಗೆ ಸ್ಫೂರ್ತಿಯಾಗಿದೆ ಸರ್.ನಿಮ್ಮ ಪುಸ್ತಕ ವಿಂಗ್ಸ್ ಆಫ್ ಫೈರ್ ಓದುವಾಗ ನನಗೆ ೧೫ ವರ್ಷ. ನಿಮ್ಮ ಆ ಪುಸ್ತಕ ಓದಿ ನಿಮ್ಮಂತೆಯೇ ಬದುಕಬೇಕು , ಈ ದೇಶಕ್ಕೆ ಒಬ್ಬ ಮಾದರಿಯಾಗಬೇಕೆಂದು ಅನಿಸಿದ್ದು ಸುಳ್ಳಲ್ಲ. ನಿಮ್ಮ ಬದುಕಿನ ಪುಟಗಳನ್ನೂ ತಿರುವಿಹಾಕುವಾಗ ಮೈಮೇಲೆ ನಿಮಿರಿ ನಿಲ್ಲುತ್ತಿದ್ದ ರೋಮಗಳೇ ಸಾಕ್ಷಿ !. ಎಲ್ಲಿಯ ರಾಮೇಶ್ವರಂ ಎಲ್ಲಿಯ ರಾಷ್ಟ್ರಪತಿ ಭವನ! ಒಂದು ಕಾಲದಲ್ಲಿ ಪೇಪರ್ ಹಾಕುತ್ತಿದ್ದ ನೀವು ಪ್ರೆಸಿಡೆಂಟ್ ಆಗುತ್ತಿರೆಂದರೆ ನಿಮ್ಮಲ್ಲಿನ ಆ ಕಿಚ್ಚು, ನೀವು ಕಂಡ ಕನಸುಗಳೇ ಕಾರಣ ಅಲ್ಲವೇ ಸಾರ್ !ನಿಜವಾದ ಕನಸಿನ ಅರ್ಥ ನೀವು ಸಾರ್ . ಓದಿಗಾಗಿ, ಹೊಟ್ಟೆಪಾಡಿಗಾಗಿ ಎಂದು ಸುಳ್ಳು ನೆಪ ಹೂಡಿ ಪರದೇಶಕ್ಕೆ ಹೋಗಿ ಪರದೇಶಿಯಾಗಿ ಹೋಗುವರು ಇರುವ ಈ ಕಾಲದಲ್ಲಿ
ಹುಟ್ಟಿದ ನಾಡಲ್ಲೇ, ಕನಸುಗಳನ್ನು ಕಾಣುತ್ತ , ವಿಜ್ಞಾನಿಯಾಗಿ, ದೇಶದ ಮೊದಲ ಪ್ರಜೆಯಾಗಿ, ಎಣಿಕೆಗೆ ಸಿಗಲಾರದ ವಿದ್ಯಾರ್ಥಿಗಳಿಗೆ ಗುರುವಾಗಿ, ನಂಬಿಕೆ, ಆತ್ಮವಿಶ್ವಾಸ ಕಳಕೊಂಡ ಅದೆಷ್ಟು ಮುಗ್ಧ ಮನಸುಗಳಿಗೆ ಪ್ರೇರಕ ಶಕ್ತಿಯಾಗಿ, ದೇಶದ ರತ್ನವಾಗಿ ಭಾರತದ ಮಣ್ಣಲ್ಲೇ ಮಣ್ಣಾದಿರಿ.ಈಡೀ ದೇಶವೇ ಕಣ್ಣೀರಿಟ್ಟು ನಿಮಗೆ ಅಂತಿಮ ನಮನ ಸಲ್ಲಿಸಿದೆ. ದೇಶದ ಮೇಲಿನ ನಿಮ್ಮ ಭಕ್ತಿ ಗೌರವ ನಮಗೆ ಸದಾ ಸ್ಪೂರ್ತಿದಾಯಕ ಸರ್ !ನಿಮ್ಮನ್ನು ಭೇಟಿ ಆಗುವ ನನ್ನ ಕನಸು ನನಸಾಗದೇ ಹೋಯಿತು ಕಲಾಂ ಸರ್. ದಯವಿಟ್ಟು ಮತ್ತೆ ಹುಟ್ಟಿ ಬನ್ನಿ..

ಕೊನೆಯದಾಗಿ,
ನಿಮ್ಮನ್ನು ಭೇಟಿಮಾಡುವ ನನ್ನಂಥಹ ಅದೆಷ್ಟೋ ವಿದ್ಯಾರ್ಥಿಗಳ ಕನಸು ಕನಸಾಗೆ ಉಳಿದಿದೆ. ದಯವಿಟ್ಟು ಮತ್ತೊಮ್ಮೆ ಹುಟ್ಟಿಬನ್ನಿ ! ಏಕೆಂದರೆ ನೀವೇ ಹೇಳಿದ್ದು

You have to dream before your dreams can come true

ಇಂತಿ ನಿಮ್ಮ
ದು:ಖತಪ್ತ ವಿದ್ಯಾರ್ಥಿ ಸಮೂಹ

ಐಟಿ ಐಟಿ ಕಣೋ ನಮ್ದು ಐಟಿ

ಐಟಿ ಐಟಿ ಕಣೋ ನಮ್ದು ಐಟಿ
ವಾರಕ್ಕೆ ಐದೇ ದಿನ ಡ್ಯೂಟಿ !
ವಾರದ ಕೊನೆಗೆ
ಹಾಕೊಂಡು ಮಲ್ಕೋ ನೈಂಟಿ !

ಆರು ಗಂಟೆಗೆ ಎದ್ದೇಳು
ಆಫೀಸಿಗೆ ಹೋಗೋದ್ರೊಳಗೆ ಎಂಟು ಕಾಲು
ಮಧ್ಯ ಒಂದು ತಾಸು ಟ್ರಾಫಿಕ್ ಗೋಳು
ಮುಕದಮೇಲೆ ಒಂದಿಂಚು ಧೂಳು !

ಫಿಕ್ಸ್ ಆಗದ bug
ಸದಾ ತುಂಬಿರುವ coffee mug
ಹೇಳದೆ ಬರುವ escalation
ಬಾರದೆ ಇರುವ promotion
ಒಂದೇ ವಾರಕ್ಕೆ ಖಾಲಿಯಾಗುವ
Sodexo coupon

PL,CL ಇದ್ದರೂ ರಜೆ ಕೊಡದ TLಗಳು
ಅರ್ಥವಾಗದ KTಗಳು
ಕೀಲಿ ಕೀಲಿ ಭಾಷೆ ಮಾತಾಡೋ Clientಗಳು
ಒಂದಕ್ಕೆ ಎರಡು ಮಾಡಿಕೊಡುವ Architectಗಳು

FridayLunchಗಳು TeamDinnerಗಳು
Postpone ಆಗ್ತಾನೆ ಇರುವ Partyಗಳು
ಆಫೀಸ್ selfieಗಳು fake smileಗಳು
Cheap Politicsಗಳು

Personal, Home loanಗಳು
taxtax ಸುಡಗಾಡು taxಗಳು
ಕೈಗೂ ಸಿಗದ salaryಗಳು
ಆಗೊಮ್ಮೆ ಈಗೊಮ್ಮೆ ಬರುವ
Onsite Opportunityಗಳು
ಅದನ್ನು ಕಸಿದುಕೊಳ್ಳುವ ನಮ್ಮ
ಬ್ಯಾಡ್ ಲಕ್ ಗಳು !!!

Sleepless Friday nightಗಳು
Barಗಳು,pubಗಳು,dance-floorಗಳು
ಮಲಗಿದ್ದವರನ್ನು ಬಡಿದೆಬ್ಬಿಸುವ Support callಗಳು
ಏನು ಮಾಡದಿದ್ದರೂ ತಂತಾನೆ ಸರಿಆಗುವ
Applicationಗಳು!!

ಐಟಿ ಐಟಿ ಕಣೋ ನಮ್ದು ಐಟಿ
ವಾರಕ್ಕೆ ಐದೇ ದಿನ ಡ್ಯೂಟಿ !

ಈ ಪ್ರೀತಿ….

ಧ್ಯಾನವೋ ಮೌನವೋ
ಸ್ನೇಹವೋ ಮೋಹವೋ
ಈ ಪ್ರೀತಿ …
ವಿರಹವೋ ವಿನಾಶವೋ
ಅತಿಶಯವೋ ಅತಿರೇಕವೋ
ಈ ಪ್ರೀತಿ .
ಬಂಧನವೋ ಬಿಡುಗಡೆಯೋ
ಕದನವೋ ಸಂಧಾನವೋ
ಈ ಪ್ರೀತಿ ..

ಕಾಡುವ ನೆನಪು
ಕಂಡ ಕನಸು
ಈ ಪ್ರೀತಿ

ಎಲ್ಲವನ್ನು ಹೇಳುವೆ….

ಎಲ್ಲವನ್ನು ಹೇಳುವೆ
ಮೌನದೊಳಗೆ
ನೀನೆ ನನ್ನವಳು
ಕೊನೆಯವರೆಗೆ….

ಐಟಿ ವಚನ – 4

ಸೋಮವಾರದಿಂದ ಶುಕ್ರವಾರದವರೆಗೆ
ಎಸಿ ಆಫೀಸಿನಲ್ಲಿ ಕೂಲಿ ಮಾಡಿ
ಶನಿವಾರ ,ರವಿವಾರ
ನಿನಗೆ ಇಷ್ಟ ಬಂದಂಗೆ ಕೊಳೆ ಮಾಡೆಂದ
– ಐಟಿತಜ್ಞ

ಮುಡಿಸುವೆ ಸ್ವಪ್ನದ ಹೂವನು..

ಮುಡಿಸುವೆ ಸ್ವಪ್ನದ ಹೂವನು
ಚೂರು ನೀ ಸಹಕರಿಸು
ನಿನ್ನ ಮೌನವೀಗ
ಅದೆಷ್ಟೇ ನೋವು ಕೊಟ್ಟರೂನು
ಅದೇ ಚಂದ
ಆ ನೋವನೆ ದಯಪಾಲಿಸು!

ಸರಳ ಸಾಲುಗಳು – ೮

೧.
ಪ್ರೀತಿಯಲ್ಲಿ
ಇರೋದು ಏನು ?
ಕಳಕೊಂಡ ಮೇಲೆ
ಉಳಿಯೋದು painu

೨.
ಮಾತಲ್ಲೇ ಮೋಹಿಸು ನೀನು
ಮೌನ ತಾಳಬೇಡ
ಕಣ್ಣಲ್ಲೆ ಕರುಣಿಸು ನೀನು
ಹೆಚ್ಚು ಕಾಡಬೇಡ!!

ನೀನು ಉಳಿದುಬಿಡು ನನ್ನೊಂದಿಗೆ
ನಾ ಬರೆದ ಕವಿತೆಯಂತೆ
ಎಂದೂ ಮರೆಯದ ಹಾಡಿನಂತೆ!

೩.
ನಿನ್ನ ನೆನೆದ ಕೂಡಲೇ
ಜಿನುಗುತಿವೆ ಕಣ್ಣೀರ ಹನಿಗಳು
ಬರೆದಂತಿದೆ ವಿರಹದ ಸಾಲುಗಳು
ಈ ಯಾತನೆಗೆ ಏನೆಂದು
ಹೆಸರಿಡಲಿ ನಿನ್ನ ಹೊರತು
ಒಲವಿನ ಹೂ ಅರಳುವುದೇ
ನಿನ್ನ ಮರೆತು ?

೪.
ಮನದ ಕಿರುತೆರೆಯ
ನಾಯಕಿ ನೀನು
ಹೃದಯ ಹಾಡಿಗೆ
ಗಾಯಕಿ ನೀನು

ನಿನ್ನ ಕನಸಿನ ಲೋಕಕೆ
ನಾಯಕ ನಾನು
ನೆನಪಿನ ನೌಕೆಗೆ
ನಾವಿಕ ನಾನು!

೫.
ಸವಿಗನಸುಗಳ ಕಣ್ಣಿಗೆ ಬಟ್ಟೆ ಕಟ್ಟಿ
ಒಂದಿಷ್ಟು ಸಿಹಿ ನೆನಪುಗಳ ಕೊಟ್ಟು
ನನ್ನ ಪ್ರೀತಿಗೆ ಕಹಿಯಾದಳು!
ಎದೆಯಲಿ ಎಂದೂ ಅಳಿಸದ ಸಹಿಯಾದಳು !

ವಿ.ಸೊ.:ಸುಮ್ಮನೆ ಗೀಚಿದ ಸಾಲುಗಳಿವು… ಅರ್ಥಹೀನವಾಗಿದ್ದರೆ ಕ್ಷಮಿಸಿಬಿಡಿ

ಸರಳ ಸಾಲುಗಳು – ೭

೧.
ಅವಳ ಮಾತು
ನನ್ನ ಮೌನ
ಮೂಡಿತು
ಪ್ರೇಮಕವನ!
ಖಾಲಿ ಮನಸಿಗೆ
ಒಲಿದಿದೆ ಕನಸು
ಶುರುವೀಗ ನವಜೀವನ !

೨.
ನನ್ನಲ್ಲಿ ನೀನ್ಯಾಕೆ
ಬಂದದ್ದು ಎನ್ನುವುದೇ
ನನ್ನ ಪ್ರಶ್ನೆ
ಕಣ್ಣಲ್ಲಿ ಕಣ್ಣಿಟ್ಟು
ನಗಬೇಡ ನಿನೀಗೆ
ಸುಮ್ ಸುಮ್ನೆ !

೩.
ಕಣ್ಣಲ್ಲಿ ಕನಸಲ್ಲಿ
ಕಂಡರೆ ನಿನೀಗೆ
ಉಳಿಯಲಿ ನಾಹೇಗೆ ?
ಕಣ್ಣ ಹನಿ
ಸಣ್ಣದನಿಯಲ್ಲಿ
ಏನೆಂದರೂ ನಾನಂತು ಮೌನಿ !
ನಿನ್ನ ಚೆಲುವು
ಈ ಒಲವು ಕಂಡು
ನಾನಂತು ನಿನ್ನ ಅಭಿಮಾನಿ !

೪.
ಕನಸಲಿ ಮಿಂದ ಮನಸು
ಮುಗಿಯಲಿ ನಿನ್ನ ಮುನಿಸು
ತಲ್ಲಣ ನನ್ನ ಧ್ಯಾನ
ಕಂಪನ ಈ ಮೌನ
ಪ್ರೀತಿಗೆ ಶರಣಾದೆನಾ
ಈ ಕ್ಷಣ..
ಸ್ವಪ್ನಗಳ ಸ್ಪಂದನ
ಭಾವಗಳ ಬಂಧನ
ನಗು ಅವಳದು ಚಂದನ
ಪ್ರೀತಿಗೆ ಅವಳೇ ಸಿಂಚನ!

೫.
ಪ್ರೇಮಿ ನಾನೀದಿನ
ಏನೋ ರೋಮಾಂಚನ
ಕಂಡ ಕನಸೆಲ್ಲವೂ
ನಿಜವಾದಂತಿದೆ ಈ ಕ್ಷಣ
ಸ್ವಪ್ನದ ಸಖಿ
ಆಗು ನೀ ಮುಖಾಮುಖಿ
ಹೊಳೆವ ನಯನ
ಬರೆಯಲು ಕವನ
ಹುಟ್ಟಿತು ಮೌನ!
ಭಾವತೀರಯಾನ!

Thank you!

My blog has now reached 5000 views milestone! 

Thank you so much for the support!

Keep Blogging! 🙂

Honey Diet – A sweeter alternative

ಮಕ್ಕಳಿಂದ ಹಿಡಿದು ವಯೋವ್ರುದ್ದರ ವರೆಗೆ ಪೌಷ್ಟಿಕ ಆಹಾರದ ಕುರಿತು ಜಾಗೃತಿವಹಿಸುತ್ತಾರೆ. ಪೌಷ್ಟಿಕ ಆಹಾರ ನಮ್ಮನ್ನು ಆರೋಗ್ಯವಾಗಿ ಇದಬಲ್ಲದು ಅಲ್ಲದೆ ನಮ್ಮಲ್ಲಿ ಒಂದು ಆರೋಗ್ಯವಾದ ಉಮ್ಮಸು ನಮ್ಮಲ್ಲಿ ತರುತ್ತದೆ.

ಪೌಷ್ಟಿಕ ಆಹಾರ ವೆಂದರೆ ಕೇವಲ ಸರಿಯಾದ ಸಮಯಕ್ಕೆ ತಿನ್ನುವುದಲ್ಲ. ತಿನ್ನುವ ಆಹಾರದಲ್ಲಿರುವ ಆರೋಗ್ಯವಾದ , ಸಮತೋಲನವಿರುವ ಡಯಟ್!

ಬೊಜ್ಜು, ಡಯಾಬಿಟಿಸ್, ಎದೆ ನೋವು  ಆಸ್ತಮಾ ಹೀಗೆ ಇಂದಿನ ಕಾಲದಲ್ಲಿ ಅನೇಕ ರೋಗಗಳು ನಮ್ಮ ಆಹಾರದಲ್ಲಿನ ಪೌಸ್ತಿಕ ಆಹಾರದ ಕೊರತೆಯಿಂದ ಬರುತ್ತಿವೆ. ನಮ್ಮ ಅಜ್ಜನ ಕಾಲದಲ್ಲಿ , ಜವಾರಿ ಆಹಾರಗಳನ್ನು ಬಳಸುತ್ತಿದ್ದರಿಂದ ಅವರಿಗೆ ಇಂದಿನ ಪೀಳಿಗೆಗಿಂತ ಹೆಚ್ಚು ಸದೃಡವಾಗಿದ್ದರು. ಹಿಂದ ಪೀಳಿಗೆಯವರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಜಾಗೃತರಾಗಿದ್ದರು. ಪಿಜ್ಜಾ , ಬರ್ಗರ್ ಅಂತಹ “ಜಂಕ್ ಫುಡ್” ಅಂದು ಇರಲಿಲ್ಲ. ಮುದ್ದೆ ರೊಟ್ಟಿ ನಾಟಿ ಸಾರು ಅವರ ಆರೋಗ್ಯದ ಹಾಗೂ ಸದೃಡ ಮೈಕಟ್ಟಿನ ಗುಟ್ತಾಗಿತ್ತು. ಆದರೆ ಇಂದಿನ ಪೀಳಿಗೆಯವರು ನನ್ನನ್ನು ಸೇರಿ . ಪಿಜ್ಜಾ ಬರ್ಗರ್ ಅಂತಹ ಜಂಕ್ ಫುಡ್ ಗಳಿಂದ ನಮ್ಮ ಆರೋಗ್ಯ ವನ್ನು ನಾವೇ ಕೆಡಿಸಿಕೊಲ್ಲುತ್ತಿದ್ದೇವೆ

ಅದರಿಂದಲೇ ನಮ್ಮ ಪೀಳಿಗೆವರಿಗೆ ಚಿಕ್ಕ ವಯಸ್ಸಿನಲ್ಲಿಯೇ ಹಲವು ಕಾಯಿಲೆ ಬರುತ್ತಿವೆ

ಆಗದರೆ ಒಳ್ಳೆಯ ಆಹಾರವೆಂದರೆ ಯಾವುದು ? ಯಾವುದು ನಮ್ಮನ್ನು ಆರೋಗ್ಯವಾಗಿ ಇದಬಲ್ಲದು ?ಪ್ರೊತಿಎನ್ಸ್ , ಕಾರ್ಬೋಹೈಡ್ರೇಟ್ಸ್ ,ಹೀಗೆ ಎಲ್ಲವು ಇರುವ ಆರೋಗ್ಯ ಆಹಾರ ನಮಗೆ ಬೇಕಿದೆ. ನಮ್ಮ ದೇಹ ಒಂದು ಇಂಜಿನ್ ನಂತೆ. ಒಂದು ಎಲ್ಲವು ಸರಿ ಇದ್ದ ಮೇಲೆಯೇ ಅದು ಸರಿಯಾಗಿ ಕೆಲಸ ಮಾಡಲು ಸಾಧ್ಯ!

ತರಕಾರಿಯಲ್ಲಿರುವ ವಿಟಮಿನ್, ಪೋಷಕಾಂಶಗಳು ನಮ್ಮನ್ನು ಆರೋಗ್ಯವಾಗಿಡುವಲ್ಲಿ ಪ್ರಮುಖಪಾತ್ರ ವಹಿಸುತ್ತದೆ. ಆದರೂ ಹೆಚ್ಚಿನವರು ತರಕಾರಿಯೆಂದರೆ ಮಾರು ದೂರ ಓಡಿ ಹೋಗುತ್ತಾರೆ. ಪ್ರತೀ ದಿನ ಮಾಂಸಾಹಾರ ಸೇವನೆ ಮಾಡುವವರಿಗಂತೂ ತರಕಾರಿ ಅಲರ್ಜಿ. ದೊಡ್ಡವರು ಹಾಗಿರಲಿ, ಮಕ್ಕಳು ಕೂಡ ತರಕಾರಿ ಎಂದರೆ ಮುಖ ಸಿಂಡರಿಸುತ್ತಾರೆ. ಮಕ್ಕಳಿಗೆ ಆರೋಗ್ಯಕರ ಆಹಾರ ಅಥವಾ ತರಕಾರಿಯುಕ್ತ ಆಹಾರ ತಿನ್ನಿಸುವುದು ಕಠಿಣ ಕೆಲಸ. ಇದರ ರುಚಿ ಅವರ ನಾಲಗೆಗೆ ಹಿಡಿಸುವುದಿಲ್ಲ ಮತ್ತು ತರಕಾರಿ ಪದಾರ್ಥ ಅಥವಾ ಆಹಾರ ನೋಡಿದ ಕೂಡಲೇ ನೋ ಎಂದು ಬೊಬ್ಬೆ ಹಾಕುತ್ತಾರೆ. ಮಕ್ಕಳಲ್ಲಿನ ಆನಾರೋಗ್ಯಕರ ಆಹಾರ ಕ್ರಮವನ್ನು ಬದಲಾಯಿಸುವುದು ಅತೀ ಮುಖ್ಯ. ಇಲ್ಲದೇ ಇದ್ದಲ್ಲಿ ಅವರು ಬೊಜ್ಜಿನಂತಹ ಗಂಭೀರ ಸಮಸ್ಯೆಗೆ ಒಳಗಾಗಬಹುದು ಮತ್ತು ತರಕಾರಿಯಲ್ಲಿರುವ ಪೋಷಕಾಂಶಗಳು ಅವರಿಗೆ ಸಿಗದೇ ಇರಬಹುದು. ತರಕಾರಿ ಆಹಾರಗಳನ್ನು ಸೇವಿಸಿ ಎಂದು ನಿಮ್ಮ ಮಕ್ಕಳನ್ನು ಒತ್ತಾಯಿಸಲು ಸಾಧ್ಯವಿಲ್ಲ. ಆದರೆ ತರಕಾರಿ ಪದಾರ್ಥಗಳನ್ನು ರುಚಿಕರವಾಗಿ ಮಾಡಿ ಬಡಿಸಿದರೆ ಆಗ ಮಕ್ಕಳು ಅದನ್ನು ತಿನ್ನಲು ಇಷ್ಟಪಡುತ್ತಾರೆ. ಮಕ್ಕಳು ಪೋಷಕಾಂಶ ಭರಿತವಾದ ಆಹಾರವನ್ನು ತಿಂದು ಆರೋಗ್ಯವಾಗಿ ಉಳಿಯುವಂತೆ ಮಾಡುವುದು ಹೆತ್ತವರಾದ ನಿಮ್ಮ ಕರ್ತವ್ಯ. ಯಾವತ್ತೂ ಮಕ್ಕಳಿಗೆ ಒತ್ತಾಯಪೂರ್ವಕವಾಗಿ ತರಕಾರಿ ತಿನ್ನಿಸಲು ಹೋಗಬೇಡಿ. ಯಾಕೆಂದರೆ ಇದರಿಂದ ಮಕ್ಕಳು ಮುಂದೆ ಯಾವತ್ತೂ ತಮ್ಮ ತಿನ್ನುವ ಅಭ್ಯಾಸವನ್ನು ಬದಲಾಯಿಸಲು ಸಾಧ್ಯವಿಲ್ಲ. ನಿಮ್ಮ ಮಕ್ಕಳು ತರಕಾರಿ ತಿನ್ನುವಂತೆ ಮಾಡುವ ಕೆಲವೊಂದು ರುಚಿಕರವಾದ ವಿಧಾನಗಳು ಇಲ್ಲಿವೆ.

ಕೇವಲ ಚಪಾತಿ ಕೊಟ್ಟರೆ ಮಕ್ಕಳು ಅದನ್ನು ತಿನ್ನುವುದು ಕಷ್ಟ. ಅದಕೋಸ್ಕರ ನೀವು ತರಕಾರಿಗಳನ್ನು ಬೇಯಿಸಿ, ಅದಕ್ಕೆ ಸ್ವಲ್ಪ ರುಚಿಕರವಾದ ಮಸಾಲೆ ಸೇರಿಸಿ ತದನಂತರ ಅದಕ್ಕೆ ಬೆಣ್ಣೆ ಹಾಕಿದ ಚಪಾತಿಗೆ ಹಾಕಿ ರೋಲ್ ಮಾಡಿ. ತರಕಾರಿಯೊಂದಿಗೆ ಮಕ್ಕಳಿಗೆ ಚಪಾತಿ ತಿನ್ನುವುದು ತುಂಬಾ ರುಚಿಕರವಾಗಿರುತ್ತದೆ
ಒಮೆಗಾ 3ಯನ್ನು ಹೊಂದಿರುವಂತಹ ಆಲಿವ್ ಆಯಿಲ್‌ನಿಂದ ನೀವು ತರಕಾರಿಯನ್ನು ಫ್ರೈ ಮಾಡಿ ಮತ್ತು ಅದು ಕುರುಕುರು ತಿಂಡಿಯಂತಾಗಲಿ. ಮಕ್ಕಳು ಕುರುಕಲು ತಿಂಡಿಯನ್ನು ತುಂಬಾ ಇಷ್ಟಪಡುತ್ತಾರೆಂದು ಅಧ್ಯಯನವೊಂದು ಹೇಳಿದೆ. ನೀವು ಫ್ರೆಂಚ್ ಫ್ರೈ, ಕ್ಯಾಬೇಜ್ ಅಥವಾ ಬ್ರಾಕೋಲಿಯನ್ನು ಫ್ರೈ ಮಾಡಿ ಮಕ್ಕಳಿಗೆ ನೀಡಬಹುದು. ಹಸಿ ತರಕಾರಿ ನೀಡಬೇಡಿ ಮಕ್ಕಳಿಗೆ ಯಾವತ್ತೂ ಹಸಿ ತರಕಾರಿಗಳನ್ನು ತಿನ್ನಿಸಲು ಹೋಗಬೇಡಿ. ಹಲವಾರು ಬಗೆಯ ತರಕಾರಿಗಳನ್ನು ಬೇಯಿಸಿ ಅದನ್ನು ಮಿಕ್ಸರ್ ಗೆ ಹಾಕಿ ಪೇಸ್ಟ್ ಮಾಡಿ. ಪೇಸ್ಟ್ ನ್ನು ಮತ್ತೆ ಬಿಸಿ ಮಾಡಿ ಅದಕ್ಕೆ ಜೀರಿಗೆ, ಬೆಣ್ಣೆ, ರುಚಿಗೆ ತಕ್ಕಷ್ಟು ಉಪ್ಪು, ಚೀಸ್ ನ ಕ್ಯೂಬ್ ಹಾಕಿ. ಇದನ್ನು ಸೂಪ್ ನಂತೆ ಬಟಾಟೆ ಫ್ರೈಯೊಂದಿಗೆ ನೀಡಿ.
ದಿನಕ್ಕೊಂದು ಸೇಬು ವೈದ್ಯರನ್ನು ದೂರವಿಡುತ್ತದೆ ಎಂಬುದೊಂದು ಸುಭಾಷಿತ. ದಿನಕ್ಕೆರಡು ಬಾಳೆಹಣ್ಣು ಸಹಾ ವೈದ್ಯರನ್ನು ದೂರವಿಡುವಲ್ಲಿ ಸಮರ್ಥವಾಗಿದೆ. ಏಕೆಂದರೆ ಬಾಳೆಹಣ್ಣಿನಲ್ಲಿ ಆರೋಗ್ಯಕ್ಕೆ ಪೂರಕವಾದ ಹಲವು ಪೋಷಕಾಂಶಗಳು, ಕರಗುವ ಮತ್ತು ಕರಗದ ನಾರು ಹಾಗೂ ಉತ್ತಮ ಪ್ರಮಾಣದ ಸಕ್ಕರೆ, ಖನಿಜಗಳೂ ಇವೆ. ಸೇಬಿಗಿಂತಲೂ ಬಾಳೆಹಣ್ಣನ್ನು ಆಯ್ದುಕೊಳ್ಳಲು ಇನ್ನೂ ಹಲವು ಕಾರಣಗಳಿವೆ. ಸುಲಭದರದಲ್ಲಿ ವರ್ಷಪೂರ್ತಿ ಎಲ್ಲೆಡೆ ಸಿಗುವ ಹಣ್ಣು ಎಂದರೆ ಬಾಳೆಹಣ್ಣು
ಒಂದು ವೇಳೆ ಊಟ ಸಿಗದಿದ್ದ ಪಕ್ಷದಲ್ಲಿ ಎರಡು ಬಾಳೆಹಣ್ಣು ತಿಂದು ಒಂದು ಲೋಟ ನೀರು ಕುಡಿದರೂ ಊಟದಿಂದ ಸಿಗುವಷ್ಟೇ ಶಕ್ತಿ ಸಿಗುವ ಕಾರಣ ಇದೊಂದು ಪರಿಪೂರ್ಣ ಫಲವಾಗಿದೆ. ಆದರೆ ಈ ಬಾಳೆಹಣ್ಣಿನ ಉಪಯೋಗ ತಿನ್ನುವ ಹೊರತಾಗಿಯೂ ಇದೆ ಎಂದರೆ ಆಶ್ಚರ್ಯವಾಗುತ್ತದೆ ಅಲ್ಲವೇ? ಹೌದು, ಸೊಳ್ಳೆ ಓಡಿಸಲು ಬಾಳೆಹಣ್ಣನ್ನು ಬಳಸಬಹುದು. ಬಾಳೆಹಣ್ಣಿನ ಸಿಪ್ಪೆಯ ಒಳಭಾಗವನ್ನು ಉಪಯೋಗಿಸಿ ಶೂ ಪಾಲಿಷ್ ಕೂಡ ಮಾಡಬಹುದು!

ಅಂತಹ ಆರೋಗ್ಯ ವಾದ ಡಯಟ್ ಅನ್ನು ಡಾಬರ್ ಕಂಪನಿ ತನ್ನ ಜೇನು ತುಪ್ಪದೊಂದಿಗೆ ನೀಡುತ್ತಿದೆ! http://www.daburhoney.com/  http://www.daburhoney.com/honey-benefits.aspx