Honey Diet – A sweeter alternative

ಮಕ್ಕಳಿಂದ ಹಿಡಿದು ವಯೋವ್ರುದ್ದರ ವರೆಗೆ ಪೌಷ್ಟಿಕ ಆಹಾರದ ಕುರಿತು ಜಾಗೃತಿವಹಿಸುತ್ತಾರೆ. ಪೌಷ್ಟಿಕ ಆಹಾರ ನಮ್ಮನ್ನು ಆರೋಗ್ಯವಾಗಿ ಇದಬಲ್ಲದು ಅಲ್ಲದೆ ನಮ್ಮಲ್ಲಿ ಒಂದು ಆರೋಗ್ಯವಾದ ಉಮ್ಮಸು ನಮ್ಮಲ್ಲಿ ತರುತ್ತದೆ.

ಪೌಷ್ಟಿಕ ಆಹಾರ ವೆಂದರೆ ಕೇವಲ ಸರಿಯಾದ ಸಮಯಕ್ಕೆ ತಿನ್ನುವುದಲ್ಲ. ತಿನ್ನುವ ಆಹಾರದಲ್ಲಿರುವ ಆರೋಗ್ಯವಾದ , ಸಮತೋಲನವಿರುವ ಡಯಟ್!

ಬೊಜ್ಜು, ಡಯಾಬಿಟಿಸ್, ಎದೆ ನೋವು  ಆಸ್ತಮಾ ಹೀಗೆ ಇಂದಿನ ಕಾಲದಲ್ಲಿ ಅನೇಕ ರೋಗಗಳು ನಮ್ಮ ಆಹಾರದಲ್ಲಿನ ಪೌಸ್ತಿಕ ಆಹಾರದ ಕೊರತೆಯಿಂದ ಬರುತ್ತಿವೆ. ನಮ್ಮ ಅಜ್ಜನ ಕಾಲದಲ್ಲಿ , ಜವಾರಿ ಆಹಾರಗಳನ್ನು ಬಳಸುತ್ತಿದ್ದರಿಂದ ಅವರಿಗೆ ಇಂದಿನ ಪೀಳಿಗೆಗಿಂತ ಹೆಚ್ಚು ಸದೃಡವಾಗಿದ್ದರು. ಹಿಂದ ಪೀಳಿಗೆಯವರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಜಾಗೃತರಾಗಿದ್ದರು. ಪಿಜ್ಜಾ , ಬರ್ಗರ್ ಅಂತಹ “ಜಂಕ್ ಫುಡ್” ಅಂದು ಇರಲಿಲ್ಲ. ಮುದ್ದೆ ರೊಟ್ಟಿ ನಾಟಿ ಸಾರು ಅವರ ಆರೋಗ್ಯದ ಹಾಗೂ ಸದೃಡ ಮೈಕಟ್ಟಿನ ಗುಟ್ತಾಗಿತ್ತು. ಆದರೆ ಇಂದಿನ ಪೀಳಿಗೆಯವರು ನನ್ನನ್ನು ಸೇರಿ . ಪಿಜ್ಜಾ ಬರ್ಗರ್ ಅಂತಹ ಜಂಕ್ ಫುಡ್ ಗಳಿಂದ ನಮ್ಮ ಆರೋಗ್ಯ ವನ್ನು ನಾವೇ ಕೆಡಿಸಿಕೊಲ್ಲುತ್ತಿದ್ದೇವೆ

ಅದರಿಂದಲೇ ನಮ್ಮ ಪೀಳಿಗೆವರಿಗೆ ಚಿಕ್ಕ ವಯಸ್ಸಿನಲ್ಲಿಯೇ ಹಲವು ಕಾಯಿಲೆ ಬರುತ್ತಿವೆ

ಆಗದರೆ ಒಳ್ಳೆಯ ಆಹಾರವೆಂದರೆ ಯಾವುದು ? ಯಾವುದು ನಮ್ಮನ್ನು ಆರೋಗ್ಯವಾಗಿ ಇದಬಲ್ಲದು ?ಪ್ರೊತಿಎನ್ಸ್ , ಕಾರ್ಬೋಹೈಡ್ರೇಟ್ಸ್ ,ಹೀಗೆ ಎಲ್ಲವು ಇರುವ ಆರೋಗ್ಯ ಆಹಾರ ನಮಗೆ ಬೇಕಿದೆ. ನಮ್ಮ ದೇಹ ಒಂದು ಇಂಜಿನ್ ನಂತೆ. ಒಂದು ಎಲ್ಲವು ಸರಿ ಇದ್ದ ಮೇಲೆಯೇ ಅದು ಸರಿಯಾಗಿ ಕೆಲಸ ಮಾಡಲು ಸಾಧ್ಯ!

ತರಕಾರಿಯಲ್ಲಿರುವ ವಿಟಮಿನ್, ಪೋಷಕಾಂಶಗಳು ನಮ್ಮನ್ನು ಆರೋಗ್ಯವಾಗಿಡುವಲ್ಲಿ ಪ್ರಮುಖಪಾತ್ರ ವಹಿಸುತ್ತದೆ. ಆದರೂ ಹೆಚ್ಚಿನವರು ತರಕಾರಿಯೆಂದರೆ ಮಾರು ದೂರ ಓಡಿ ಹೋಗುತ್ತಾರೆ. ಪ್ರತೀ ದಿನ ಮಾಂಸಾಹಾರ ಸೇವನೆ ಮಾಡುವವರಿಗಂತೂ ತರಕಾರಿ ಅಲರ್ಜಿ. ದೊಡ್ಡವರು ಹಾಗಿರಲಿ, ಮಕ್ಕಳು ಕೂಡ ತರಕಾರಿ ಎಂದರೆ ಮುಖ ಸಿಂಡರಿಸುತ್ತಾರೆ. ಮಕ್ಕಳಿಗೆ ಆರೋಗ್ಯಕರ ಆಹಾರ ಅಥವಾ ತರಕಾರಿಯುಕ್ತ ಆಹಾರ ತಿನ್ನಿಸುವುದು ಕಠಿಣ ಕೆಲಸ. ಇದರ ರುಚಿ ಅವರ ನಾಲಗೆಗೆ ಹಿಡಿಸುವುದಿಲ್ಲ ಮತ್ತು ತರಕಾರಿ ಪದಾರ್ಥ ಅಥವಾ ಆಹಾರ ನೋಡಿದ ಕೂಡಲೇ ನೋ ಎಂದು ಬೊಬ್ಬೆ ಹಾಕುತ್ತಾರೆ. ಮಕ್ಕಳಲ್ಲಿನ ಆನಾರೋಗ್ಯಕರ ಆಹಾರ ಕ್ರಮವನ್ನು ಬದಲಾಯಿಸುವುದು ಅತೀ ಮುಖ್ಯ. ಇಲ್ಲದೇ ಇದ್ದಲ್ಲಿ ಅವರು ಬೊಜ್ಜಿನಂತಹ ಗಂಭೀರ ಸಮಸ್ಯೆಗೆ ಒಳಗಾಗಬಹುದು ಮತ್ತು ತರಕಾರಿಯಲ್ಲಿರುವ ಪೋಷಕಾಂಶಗಳು ಅವರಿಗೆ ಸಿಗದೇ ಇರಬಹುದು. ತರಕಾರಿ ಆಹಾರಗಳನ್ನು ಸೇವಿಸಿ ಎಂದು ನಿಮ್ಮ ಮಕ್ಕಳನ್ನು ಒತ್ತಾಯಿಸಲು ಸಾಧ್ಯವಿಲ್ಲ. ಆದರೆ ತರಕಾರಿ ಪದಾರ್ಥಗಳನ್ನು ರುಚಿಕರವಾಗಿ ಮಾಡಿ ಬಡಿಸಿದರೆ ಆಗ ಮಕ್ಕಳು ಅದನ್ನು ತಿನ್ನಲು ಇಷ್ಟಪಡುತ್ತಾರೆ. ಮಕ್ಕಳು ಪೋಷಕಾಂಶ ಭರಿತವಾದ ಆಹಾರವನ್ನು ತಿಂದು ಆರೋಗ್ಯವಾಗಿ ಉಳಿಯುವಂತೆ ಮಾಡುವುದು ಹೆತ್ತವರಾದ ನಿಮ್ಮ ಕರ್ತವ್ಯ. ಯಾವತ್ತೂ ಮಕ್ಕಳಿಗೆ ಒತ್ತಾಯಪೂರ್ವಕವಾಗಿ ತರಕಾರಿ ತಿನ್ನಿಸಲು ಹೋಗಬೇಡಿ. ಯಾಕೆಂದರೆ ಇದರಿಂದ ಮಕ್ಕಳು ಮುಂದೆ ಯಾವತ್ತೂ ತಮ್ಮ ತಿನ್ನುವ ಅಭ್ಯಾಸವನ್ನು ಬದಲಾಯಿಸಲು ಸಾಧ್ಯವಿಲ್ಲ. ನಿಮ್ಮ ಮಕ್ಕಳು ತರಕಾರಿ ತಿನ್ನುವಂತೆ ಮಾಡುವ ಕೆಲವೊಂದು ರುಚಿಕರವಾದ ವಿಧಾನಗಳು ಇಲ್ಲಿವೆ.

ಕೇವಲ ಚಪಾತಿ ಕೊಟ್ಟರೆ ಮಕ್ಕಳು ಅದನ್ನು ತಿನ್ನುವುದು ಕಷ್ಟ. ಅದಕೋಸ್ಕರ ನೀವು ತರಕಾರಿಗಳನ್ನು ಬೇಯಿಸಿ, ಅದಕ್ಕೆ ಸ್ವಲ್ಪ ರುಚಿಕರವಾದ ಮಸಾಲೆ ಸೇರಿಸಿ ತದನಂತರ ಅದಕ್ಕೆ ಬೆಣ್ಣೆ ಹಾಕಿದ ಚಪಾತಿಗೆ ಹಾಕಿ ರೋಲ್ ಮಾಡಿ. ತರಕಾರಿಯೊಂದಿಗೆ ಮಕ್ಕಳಿಗೆ ಚಪಾತಿ ತಿನ್ನುವುದು ತುಂಬಾ ರುಚಿಕರವಾಗಿರುತ್ತದೆ
ಒಮೆಗಾ 3ಯನ್ನು ಹೊಂದಿರುವಂತಹ ಆಲಿವ್ ಆಯಿಲ್‌ನಿಂದ ನೀವು ತರಕಾರಿಯನ್ನು ಫ್ರೈ ಮಾಡಿ ಮತ್ತು ಅದು ಕುರುಕುರು ತಿಂಡಿಯಂತಾಗಲಿ. ಮಕ್ಕಳು ಕುರುಕಲು ತಿಂಡಿಯನ್ನು ತುಂಬಾ ಇಷ್ಟಪಡುತ್ತಾರೆಂದು ಅಧ್ಯಯನವೊಂದು ಹೇಳಿದೆ. ನೀವು ಫ್ರೆಂಚ್ ಫ್ರೈ, ಕ್ಯಾಬೇಜ್ ಅಥವಾ ಬ್ರಾಕೋಲಿಯನ್ನು ಫ್ರೈ ಮಾಡಿ ಮಕ್ಕಳಿಗೆ ನೀಡಬಹುದು. ಹಸಿ ತರಕಾರಿ ನೀಡಬೇಡಿ ಮಕ್ಕಳಿಗೆ ಯಾವತ್ತೂ ಹಸಿ ತರಕಾರಿಗಳನ್ನು ತಿನ್ನಿಸಲು ಹೋಗಬೇಡಿ. ಹಲವಾರು ಬಗೆಯ ತರಕಾರಿಗಳನ್ನು ಬೇಯಿಸಿ ಅದನ್ನು ಮಿಕ್ಸರ್ ಗೆ ಹಾಕಿ ಪೇಸ್ಟ್ ಮಾಡಿ. ಪೇಸ್ಟ್ ನ್ನು ಮತ್ತೆ ಬಿಸಿ ಮಾಡಿ ಅದಕ್ಕೆ ಜೀರಿಗೆ, ಬೆಣ್ಣೆ, ರುಚಿಗೆ ತಕ್ಕಷ್ಟು ಉಪ್ಪು, ಚೀಸ್ ನ ಕ್ಯೂಬ್ ಹಾಕಿ. ಇದನ್ನು ಸೂಪ್ ನಂತೆ ಬಟಾಟೆ ಫ್ರೈಯೊಂದಿಗೆ ನೀಡಿ.
ದಿನಕ್ಕೊಂದು ಸೇಬು ವೈದ್ಯರನ್ನು ದೂರವಿಡುತ್ತದೆ ಎಂಬುದೊಂದು ಸುಭಾಷಿತ. ದಿನಕ್ಕೆರಡು ಬಾಳೆಹಣ್ಣು ಸಹಾ ವೈದ್ಯರನ್ನು ದೂರವಿಡುವಲ್ಲಿ ಸಮರ್ಥವಾಗಿದೆ. ಏಕೆಂದರೆ ಬಾಳೆಹಣ್ಣಿನಲ್ಲಿ ಆರೋಗ್ಯಕ್ಕೆ ಪೂರಕವಾದ ಹಲವು ಪೋಷಕಾಂಶಗಳು, ಕರಗುವ ಮತ್ತು ಕರಗದ ನಾರು ಹಾಗೂ ಉತ್ತಮ ಪ್ರಮಾಣದ ಸಕ್ಕರೆ, ಖನಿಜಗಳೂ ಇವೆ. ಸೇಬಿಗಿಂತಲೂ ಬಾಳೆಹಣ್ಣನ್ನು ಆಯ್ದುಕೊಳ್ಳಲು ಇನ್ನೂ ಹಲವು ಕಾರಣಗಳಿವೆ. ಸುಲಭದರದಲ್ಲಿ ವರ್ಷಪೂರ್ತಿ ಎಲ್ಲೆಡೆ ಸಿಗುವ ಹಣ್ಣು ಎಂದರೆ ಬಾಳೆಹಣ್ಣು
ಒಂದು ವೇಳೆ ಊಟ ಸಿಗದಿದ್ದ ಪಕ್ಷದಲ್ಲಿ ಎರಡು ಬಾಳೆಹಣ್ಣು ತಿಂದು ಒಂದು ಲೋಟ ನೀರು ಕುಡಿದರೂ ಊಟದಿಂದ ಸಿಗುವಷ್ಟೇ ಶಕ್ತಿ ಸಿಗುವ ಕಾರಣ ಇದೊಂದು ಪರಿಪೂರ್ಣ ಫಲವಾಗಿದೆ. ಆದರೆ ಈ ಬಾಳೆಹಣ್ಣಿನ ಉಪಯೋಗ ತಿನ್ನುವ ಹೊರತಾಗಿಯೂ ಇದೆ ಎಂದರೆ ಆಶ್ಚರ್ಯವಾಗುತ್ತದೆ ಅಲ್ಲವೇ? ಹೌದು, ಸೊಳ್ಳೆ ಓಡಿಸಲು ಬಾಳೆಹಣ್ಣನ್ನು ಬಳಸಬಹುದು. ಬಾಳೆಹಣ್ಣಿನ ಸಿಪ್ಪೆಯ ಒಳಭಾಗವನ್ನು ಉಪಯೋಗಿಸಿ ಶೂ ಪಾಲಿಷ್ ಕೂಡ ಮಾಡಬಹುದು!

ಅಂತಹ ಆರೋಗ್ಯ ವಾದ ಡಯಟ್ ಅನ್ನು ಡಾಬರ್ ಕಂಪನಿ ತನ್ನ ಜೇನು ತುಪ್ಪದೊಂದಿಗೆ ನೀಡುತ್ತಿದೆ! http://www.daburhoney.com/  http://www.daburhoney.com/honey-benefits.aspx

4 comments

      1. indiblogger alli contest bere idya ? i didnt know…. Ella sariyage ide… IT Jeevnad bagge nimge gotalva

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s