ಸರಳ ಸಾಲುಗಳು – ೭

೧.
ಅವಳ ಮಾತು
ನನ್ನ ಮೌನ
ಮೂಡಿತು
ಪ್ರೇಮಕವನ!
ಖಾಲಿ ಮನಸಿಗೆ
ಒಲಿದಿದೆ ಕನಸು
ಶುರುವೀಗ ನವಜೀವನ !

೨.
ನನ್ನಲ್ಲಿ ನೀನ್ಯಾಕೆ
ಬಂದದ್ದು ಎನ್ನುವುದೇ
ನನ್ನ ಪ್ರಶ್ನೆ
ಕಣ್ಣಲ್ಲಿ ಕಣ್ಣಿಟ್ಟು
ನಗಬೇಡ ನಿನೀಗೆ
ಸುಮ್ ಸುಮ್ನೆ !

೩.
ಕಣ್ಣಲ್ಲಿ ಕನಸಲ್ಲಿ
ಕಂಡರೆ ನಿನೀಗೆ
ಉಳಿಯಲಿ ನಾಹೇಗೆ ?
ಕಣ್ಣ ಹನಿ
ಸಣ್ಣದನಿಯಲ್ಲಿ
ಏನೆಂದರೂ ನಾನಂತು ಮೌನಿ !
ನಿನ್ನ ಚೆಲುವು
ಈ ಒಲವು ಕಂಡು
ನಾನಂತು ನಿನ್ನ ಅಭಿಮಾನಿ !

೪.
ಕನಸಲಿ ಮಿಂದ ಮನಸು
ಮುಗಿಯಲಿ ನಿನ್ನ ಮುನಿಸು
ತಲ್ಲಣ ನನ್ನ ಧ್ಯಾನ
ಕಂಪನ ಈ ಮೌನ
ಪ್ರೀತಿಗೆ ಶರಣಾದೆನಾ
ಈ ಕ್ಷಣ..
ಸ್ವಪ್ನಗಳ ಸ್ಪಂದನ
ಭಾವಗಳ ಬಂಧನ
ನಗು ಅವಳದು ಚಂದನ
ಪ್ರೀತಿಗೆ ಅವಳೇ ಸಿಂಚನ!

೫.
ಪ್ರೇಮಿ ನಾನೀದಿನ
ಏನೋ ರೋಮಾಂಚನ
ಕಂಡ ಕನಸೆಲ್ಲವೂ
ನಿಜವಾದಂತಿದೆ ಈ ಕ್ಷಣ
ಸ್ವಪ್ನದ ಸಖಿ
ಆಗು ನೀ ಮುಖಾಮುಖಿ
ಹೊಳೆವ ನಯನ
ಬರೆಯಲು ಕವನ
ಹುಟ್ಟಿತು ಮೌನ!
ಭಾವತೀರಯಾನ!

2 comments

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s