Month: July 2015

Surf faster with UC Browser!

ಕ್ರಿಕೆಟ್ ಯಾರು ತಾನೇ ನೋಡಲ್ಲ ? ಭಾರತದಲ್ಲಿ ರಾಷ್ಟ್ರ ಕ್ರೀಡೆಗಿಂತ ಹೆಚ್ಚು ಪೂಜಿಸುವ ಆಗುವ ಜನಪ್ರಿಯ ಕ್ರೀಡೆ ಎಂದರೆ ಅದು ಕ್ರಿಕೆಟ್. ಹರೆಯದ ಹುಡುಗ ಹುಡುಗಿಯರಿಂದ ಹಿಡಿದು ವಯೋವ್ರುದ್ದ್ರವರೆಗೆ ಕ್ರಿಕೆಟ್ ತುಂಬಾ ಪ್ರಿಯ.
ನನಗೂ ಕ್ರಿಕೆಟ್ ಅಂದರೆ ತುಂಬಾ ಇಷ್ಟ. ಚಿಕ್ಕ ವಯಸ್ಸಿನಿಂದ ಹಿಡಿದು ಇಲ್ಲಿಯರೆಗೂ ಅದರ ಕ್ರೇಜ್ ಇನ್ನು ಹೋಗಿಲ್ಲ ಹೋಗುವದಿಲ್ಲ ಅಂತ ಕಾಣುತ್ತೆ. ಟೆಸ್ಟ್ ಕ್ರಿಕೆಟ್ ಇರಲಿ ಏಕ ದಿನ ಪಂದ್ಯವಿರಲಿ , ಕ್ರಿಕೆಟ್ ಅನ್ನು ಒಂದು ಧರ್ಮದಂತೆ ಭಾರತದಲ್ಲಿ ನಂಬಲಾಗಿದೆ.

ನಾನು ಚಿಕ್ಕ ವಯಸ್ಸಿನಲ್ಲಿ ಕೆಲವು ಸಲ ಶಾಲೆ ತಪ್ಪಿಸಿ ಕ್ರಿಕೆಟ್ ನೋಡಿದ್ದುಂಟು ಅದಕ್ಕೆ ಅಪ್ಪನಿಂದ ಏಟು ಪಡೆದ ನೆನಪು ಇನ್ನು ಇದೆ. ಕ್ರಿಕೆಟ್ ನಮಗೆ ಅತೀ ಆನಂದ ಕೊಡುವ , ನಮ್ಮಲ್ಲಿ ಒಂದು ಉತ್ತೇಜನ ಶಕ್ತಿ. ಶಾಲೆಯ ಎಲ್ಲ ಪಂದ್ಯಾವಳಿಯಲ್ಲಿ ಕ್ರಿಕೆಟ್ಗೆ ಹೆಚ್ಚಿನ ಪ್ರಾಮುಕ್ಯತೆ ಕೊಡಲಾಗುತ್ತಿತ್ತು.

ಕ್ರಿಕೆಟ್ ಪಂದ್ಯಾವಳಿ ನಡೆಯುವಾಗ ಕೆಲವು ಸಲ ನಾನು ನನ್ನದೇ ಆದ ಕೆಲಸದಲ್ಲಿ ತೊಡಗಿದ್ದರೂ ಪ್ರತಿ ಒವರ್ ನ ರನ್ ಅಥವಾ ಎಷ್ಟು ವಿಕೆಟ್ ಪತನ ಗೊಂಡಿತು ಹೀಗೆ ಅದರ ಮಾಹಿತಿ ಸಿಗಲೇ ಬೇಕು ಇಲ್ಲದಿದ್ದರೆ ನನ್ನ ಕಾರ್ಯದಲ್ಲಿ ನಾನು ಕಾಂಸೆನ್ತ್ರರ್ತೆ ಮಾಡಲು ಅಸಾಧ್ಯ!

ಕ್ರಿಕೆಟ್ ಪಂದ್ಯಾವಳಿ ನಡೆಯುವಾಗ , ಎಲ್ಲರ ಪ್ರಾಬ್ಲಮ್ ಇದೆ. ನಮ್ಮ ಕೆಲಸದಲ್ಲಿ ನಾವು ತೊಡಗಿದ್ದರೂ ನಮಗೆ ಕ್ರಿಕೆತ
ಪಂದ್ಯಾವಳಿಯ ಮಾಹಿತಿ ಗೊತ್ತಾಗಲೇ ಬೇಕು. ಅದಕಂತೆ ಇತ್ತಿಚೆಗೆ ಹಲವು ಆಪ್ ಗಳು ಬಂದಿದ್ದು , ಅದು ನಮಗೆ ಕೊಂಚ ಕಾಲ ನಮ್ಮ ಉದ್ರೆಗಗಕ್ಕೆ ಬ್ರೇಕ್ ಕೊಡುತ್ತೆ. ನಮ್ಮ ದೈನಂದಿನ ಕಾರ್ಯಗಳಿಗೆ ಧಕ್ಕೆ ಬಾರದೆ ಕ್ರಿಕೆಟ್ ನೋಡುವ ಹುಚ್ಚು ಎಲ್ಲರದ್ದು. ಹಲವರು ಅನೇಕ ಪವಾಡ , ಸಾಹಸ, ದುಸ್ಸಾಹಸ ಮಾಡಿ ತಮ್ಮ ನೆಚ್ಚಿನ ಕ್ರೀಡೆಯ ಮಾಹಿತಿ ಪಡೆಯುತ್ತಾರೆ.

ಕಾಲೇಜಿನಲ್ಲಿ, ಶಾಲೆಯ ಮಕ್ಕಳು ತಮ್ಮ ನೆಚ್ಚಿನ ಆಟಗಾರನ ಬ್ಯಾಟಿಂಗ್ ಮಾಡುವಾಗ ಕ್ಲಾಸಿನಲ್ಲಿ ಹೇಳುವ ಪಾಠಕ್ಕಿಂತ ಕ್ರಿಕೆಟ್ ಮೇಲಿನ ವ್ಯಾಮೋಹವೇ ಹೆಚ್ಚಾಗಿ ಕೆಲ ವಿದ್ಯಾರ್ತಿಗಳು ಶಾಲೆ /ಕಾಲೇಜಿಗೆ ಚಕ್ಕರ್ ಹಾಕಿ ತಮ್ಮ ಮನೆಗೂ ಹೋಗಲಾರದೆ , ಗೆಳೆಯರ ಮನೆಯಲ್ಲೇ ಉಳಿದು ಪಂದ್ಯ ನನತರ ಮನೆಗೆ ಹೋಗುವ ಉದಾರಣೆ ಸಿಗುತ್ತವೆ

ಇನ್ನು ಆಫಿಸಿನಲ್ಲಿ ಕೆಲಸ ಮಾದುವರದ್ದು ಹೇಳತೀರದು. ಕೆಲವರಿಗೆ /ಅಂದು ಕೆಲಸ ಮಾಡಲು ಮನಸೇ ಇರುವುದಿಲ್ಲ ಆದರೂ ಒತ್ತಾಯ ಪೂರ್ವಕವಾಗಿ ಆಫಿಸಿಗೆ ಬಂದು ಕೆಲಸ ಮಾಡದೆ ತಮ್ಮ ಗಣಕ ಯಂತ್ರದಲ್ಲೇ ಪಂದ್ಯ ವಿಕ್ಷಿಸುತ್ತಾರೆ. ಇನ್ನ್ನು ಕೆಲವರು ತಮ್ಮ ಮನೆಗ್ಯಲ್ಲಿ ಯಾರಿಗೋ ಹುಷಾರಿಲ್ಲ , ಇಲ್ಲ ತಮ್ಮ ಮನೆಯಲ್ಲಿ ಅರ್ಜೆಂಟ್ ಕೆಲಸವಿದೆ ಎಂದು ನೆಪ ಹೇಳಿ ಆಫಿಸಿನಿಂದ ಮನೆಗೆ ಹೊರಡುತ್ತಾರೆ

ಕೆಲವರ ಮನೆಯಲ್ಲಿ ಎಲ್ಲರು ಪಂದ್ಯ ವಿಕ್ಸಿಸುವಾಗ ಧಿಡಿರನೆ ದೂರದ ಸಂಬಂಧಿಗಳು ಬಂದು ಬಿಡುತ್ತಾರೆ
ಅವರೊಂದಿಗೆ ಕುಶುಲೋಪರಿ ಮಾಡುವದೊರಳಗೆ ನಮ್ಮ ನೆಚ್ಚಿನ ಆಟಗಾರನ ಆಟ ಮುಗಿದು ಹೋಗಿರುತ್ತದೆ
ಕ್ರಿಕೆಟ್ ಪಂದ್ಯಾವಳಿ ನಡೆಯುವಾಗ ಯಾವ ಸಂಭಂದಿಗಳು ನಮಗೆ ಬೆದವಾಗಿಬಿದುತ್ತಾರೆ.

ಕೆಲವು ಸಲ ಉತ್ತಮ ಪಂದ್ಯವಾಗಬೇಕಾದರೆ ನಾವು ಒಂದು ಊರಿನಿಂದ ಇನ್ನೊಂದು ಊರಿಗೆ ಹೋಗುತ್ತಿರುತ್ತೇವೆ ಆಗ ನಮ್ಮ ಮನಸ್ಸು ಕೇವಲ ಕ್ರಿಕೆಟ್ ಸ್ಕೋರಿಗೆ ಬಡಿದುಕೊಲ್ಳುತ್ತಿರುತ್ತದೆ. ಕೆಲವು ಸಲ ನಮ್ಮ ಹತ್ತಿರವಿದ್ದ ಮೊಬೈಲ್ ನ ಬ್ಯ್ತರಿ ಆಗಿದ್ದರೆ ಪಕ್ಕದವರಿಂದ ಕೇಳಿ ಸ್ಕೋರ್ ನೋಡುವ ಹುಚ್ಚು !

ಒಂದು ದಶಕದ ಹಿಂದೆ ನಾವು ಪಂದ್ಯವನ್ನು ಕೇವಲ ಟಿವಿಯಲ್ಲಿ ಮಾತ್ರ ನೋಡಬೇಕಗುತ್ತಿತ್ತು ಆದರೆ ನಾವು ನಮ್ಮ ಮೊಬಿಲ್ಲಿನಲ್ಲು ಇಂದು ಪಂದ್ಯ ವೀಕ್ಷಿಸಬಹುದು. ಕೆಲವರು ಇಂದಿಗೂ ರೇಡಿಯೋ ಕೇಳುತ್ತಾರೆ. ಪ್ರಯಾಣ ಮಾಡುತ್ತಿರುವಾಗ ರೇಡಿಯೋ ನಮಗೆ ಆಸರೆ.

ಸಚಿನ್ ತೆಂಡೂಲ್ಕರ್ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ ಅವರ ಬ್ಯಾಟಿಂಗ್ ನೋಡಲು ಹಿಡೀ ಜಗತ್ತೇ ಕಾಡು ಕುಲಿತ್ತಿರುತ್ತದೆ. ಕೆಲವು ಸಲಿ ಸಚಿನ್ ಬ್ಯಾಟಿಂಗ್ ನೋಡುವಾಗಲೇ ಕರೆಂಟ್ ಹೋಗಿಬಿಟ್ಟರೆ ಮನೆಯಲ್ಲಿ ರುದ್ರನರ್ತನ ಕೂಡಲೇ ವಿದ್ಯುತ್ ಘಟಕದವರಿಗೆ ಕರೆ ಮಾಡಿ ಅವರ ಜನ್ಮ ಜಾಲಾಡುವರಿದ್ದಾರೆ, ಕೆಲವರು ರೇಡಿಯೋ ಮೊರೆಹೋಗುತ್ತಾರೆ.

ಹೊಸ ಹೊಸ ತಂತಜ್ಞಾನದಿಂದ ಇಂದು ನಮಗೆ ಎಲ್ಲೇ ಕುಳಿತರು ಯಾವುದೇ ಕ್ರೀಡೆಯ ಮಾಹಿತಿ ಕ್ಷಣ ಮಾತ್ರದಲ್ಲೇ ಸಿಗುತ್ತದೆ. ಮೊಬೈಲ್ ನಲ್ಲಿ ಹಲವು ಆಪ್ ಬಂದಿವೆ. ಯಾವುದೇ ವ್ಯಪ್ತಿಯಲ್ಲಿದ್ದರು ನೀವು ನಿಮ್ಮ ನೆಚ್ಚಿನ ಕ್ರೀಡೆಯ ಬಗ್ಗೆ
ಕ್ಷಣಮಾತ್ರದಲ್ಲೇ ಮಾಹಿತಿ ಬಡೆಯಬಹುದು. ಅಂತಹ ತಂತಜ್ಞಾನಗಳಲ್ಲಿ UC ಬ್ರೌಸರ್ ಒಂದು.
ನಿಮ್ಮ ಮೊಬೈಲಿನ ಬ್ರೋಸರ್ ಅದು. ನಿಮ್ಮ ಮೊಬೈಲಿನಲ್ಲಿ ನೀವು ಅತಿವೇಗದಲ್ಲಿ ಮಾಹಿತಿ ಪದೆಯಳಲು
UC Browser, ಸಹಕಾರಿಯಾಗಲಿದೆ. ಹಾಗೂ ಇದರಲ್ಲಿ ಕ್ರಿಕೆಟ್ ಕ್ರೀಡೆಗೆಯಂತಲೆ ಒಂದು ಅಂಶವಿದ್ದು ನೀವು ಅದರ ಸದುಪಯೋಗ ಪಡೆದುಕೊಳ್ಳಬಹುದು. ಇನ್ನು ಮುಂದೆ ನೀವು ಕ್ರಿಕೆಟ್ ನ ಮಾಹಿತಿ ಅತಿವೇಗವಾಗಿ ಪಡೆಯಬಹುದು
ಈ ಬ್ರೌಸರ್ ಎಲ್ಲ ಮೊಬೈಲ್ ಗಳಿಗೂ ಲಭ್ಯವಿದೆ.

ನೀವು ಈ ಬ್ರೋಸೆರ್ ನ http://www.ucweb.com/  ನಮೂದಿಸಿದ ಲಿಂಕ್ ನಲ್ಲಿ ಪದೆಯಬುದು. ನೀವು ನಿಜವಾದ ಕ್ರಿಕೆಟ್ ಅಭಿಮಾನಿಯಾಗಿದ್ದಾರೆ ಈ ಬ್ರೌಸರ್ ನ ಡೌನ್ಲೋಡ್ ಮಾಡಿ http://www.ucweb.com/English/UCbrowser/cricket.html ಅದರ ಸದುಪಯೋಗ ಪಡೆದುಕೊಳ್ಳಿ
ಕ್ರಿಕೆಟ್ ಒಂದೇ ಅಲ್ಲದೆ ಇನ್ನಿತರ ಕ್ರೀಡೆಯ ಮಾಹಿತಿ ಕೂಡ ನೀವು ಪಡೆದುಕೊಳ್ಳಬಹದು

ಕವಿತೆ ಮಾತಾಡಿದಾಗ….

ನಾ ಬರೆದ ಕವನಗಳನ್ನು ಬರೆದಕೂಡಲೇ ನನ್ನ ಸ್ನೇಹಿತರಿಗೆ ಓದಿ ಹೇಳುವ ಖಾಯಾಲಿ ನನಗೆ ಇನ್ನು ಇದೆ .
ಕೆಲವೊಮ್ಮೆ ಮಧ್ಯರಾತ್ರಿಯಲ್ಲೂ ಕರೆ ಮಾಡಿ ಅವರಿಗೆ ಪೀಡಿಸಿದ್ದುಂಟು. ಬರೆಯುವಾಗ ಆಗುವ ಖುಷಿಗಿಂತ ಅದನ್ನು ಓದಿ ಹೇಳುವಾಗ ಆಗುವ ಸಂತೋಷ ನನ್ನೊಳಗಿನ ಕವಿಗೆ ತುಂಬಾ ಇಷ್ಟ.
ನಾ ಬರೆದ ಕೆಲವು ಕವನಗಳಿಗೆ ಧ್ವನಿ ಕೊಡುವ ಪುಟ್ಟ ಪ್ರಯತ್ನ ಮಾಡಿದ್ದೇನೆ ! ನನ್ನ ಕರ್ಕಶ ಧ್ವನಿಗೆ ಕ್ಷಮಿಸಿ !
ಈ ಪ್ರಯತ್ನ ಹೇಗಿದೆ ಅಂತ ಕಾಮೆಂಟ್ ಮಾಡಿ 🙂

ಅಜ್ಜಿ ಮತ್ತು ರಮೇಶ

ಭಾವಶರಧಿ

ಬೆಂಗಳೂರು ಎಂಬ ಮಹಾನಗರದಲ್ಲಿ ಒಂದು ಚಿಕ್ಕ ಕುಟುಂಬ. ಅಪ್ಪ,ಅಮ್ಮ ಇಬ್ಬರು ಮಕ್ಕಳು.

ಅಪ್ಪನದು ಸರ್ಕಾರಿ ನೌಕರಿ. ಅಮ್ಮ House Wife.ಮೊದಲನೇ ಮಗ ರಮೇಶ. ನಗರದ ಪ್ರತಿಷ್ಟಿತ ಐಟಿ ಕಂಪನಿಯಲ್ಲಿ ಅವನಿಗೆ ಮೈತುಂಬ ಕೆಲಸ ಕೈತುಂಬ ಸಂಬಳ. ಎರಡನೇ ಮಗ ಕೃಷ್ಣ. ಸರ್ಕಾರಿ ಕೆಲಸದಲ್ಲಿ ಸಂಬಳ ಜೊತೆ ಗಿಂಬಳವನ್ನೂ ಪಡೆಯುತ್ತಿದ್ದ.

ರಮೇಶ ಸಮಾಜಮುಖಿಯಾಗಿದ್ದ. ದುಡ್ಡಿಗಿಂತ ಗುಣ ,ಸಹಾಯ ಮನೋಭಾವ ಮುಖ್ಯ ಎಂಬ ಅರಿವು ಅವನಿಗಿತ್ತು. ದಾರಿಯಲ್ಲಿ ಭಿಕ್ಷೆ ಬೇಡಿದವರಿಗೆ ಎಂದೂ ದುಡ್ಡಿಲ್ಲ ಎಂದವನಲ್ಲ. ಚಿಲ್ಲರೆ ಇಲ್ಲದದಿದ್ದರೂ ಜೇಬಿನಲ್ಲಿ ಎಷ್ಟು ಇರುತ್ತಿತ್ತೋ ಅಷ್ಟನ್ನೂ ಕೊಡುವಷ್ಟು ಕಲಿಯುಗದ ಕರ್ಣ. ಆದರೆ ಅವನ ತಮ್ಮ ಕೃಷ್ಣ ಅದಕ್ಕೆ ಸ್ವಲ್ಪ ವಿರೋಧ ಸ್ವಭಾವದವನು.ನಾವು ಕಷ್ಟ ಪಟ್ಟು ಬೆವರು ಸುರಿಸಿ ದುಡಿದ ಹಣವನ್ನು ಸಲೀಸಾಗಿ ಮೊತ್ತೊಬ್ಬರಿಗೆ ಭಿಕ್ಷೆ ನೆಪದಲ್ಲಿ ಕೊಡುವವನು ಅವನಾಗಿರಲಿಲ್ಲ. ಅವನದು ತುಂಬಾ ಕ್ಯಾಲ್ಕ್ಯುಲೇಟೆಡ್ ಮೈಂಡ್ .ಹಾಗಂತ ಅವನು ಕೆಟ್ಟವನಾಗಿರಲಿಲ್ಲ ಸಹಾಯ ಮನೋಭಾವ ಕಡಿಮೆ ಅಷ್ಟೇ.

ಅವರಿಬ್ಬರ ನಡುವೆ ಆಗಾಗ ದುಡ್ಡಿನ ಬಗ್ಗೆ ,ಚಾರಿಟಿ ಬಗ್ಗೆ ಚರ್ಚೆಗಳಾಗುತ್ತಿದ್ದವು. ಕೆಲವು ಸಲ ಅವು ವಿಕೋಪಕ್ಕೆ ತಿರುಗಿ ಅಣ್ಣ ತಮ್ಮಂದಿರ ಕಾದಾಟಕ್ಕೂ ಕಾರಣವಾಗಿ ಮನೆಲಿದ್ದ ಕೆಲವು ವಸ್ತುಗಳು ಪುಡಿ ಪುಡಿಯಾಗುತ್ತಿದ್ದವುರಮೇಶ ದಿನವೂ ತನ್ನ ಆಫೀಸಿಗೆ ಹೋಗುವಾಗ ದಾರಿಯಲಿ ಸಹಾಯ ಕೇಳಿದರೆ . ಭಿಕ್ಷೆ ಬೇಡಿದರೆ ಅವರಿಗೆ ಸಹಾಯ ಮಾಡಿ ಹೋಗುತ್ತಿದ್ದ. ತಿಂಗಳಿಗೆ ಸಾವಿರಾರು ಗಳಿಸುವ ನಾವು ದಿನಕ್ಕೆ ಒಂದು ರೂಪಾಯಿಯಾದರೂ ಕೊಟ್ಟು ಮೊತ್ತೊಬ್ಬರ ಒಂದು ಹೊತ್ತಿಗೆ ಆಗದಿದ್ದರೂ ಒಂದು ತುತ್ತಿಗೆ ಆಗುವಷ್ಟು ಸಹಾಯ ಮಾಡುವುದರಲ್ಲಿ ತೃಪ್ತಿ ಇದೆ ಎಂದು ಅವನು ನಂಬಿದ್ದ.

ಈಗೆ…

View original post 362 more words