Day: August 16, 2015

ರಾತ್ರಿಯಾಗಿದೆ …

ಮನದ ಕಿರುತೆರೆಯ ಹಿಂದೆ
ಮರೆಯಲ್ಲಿದ್ದ ಮರೆಯಲಾಗದ
ಒಂದಿಷ್ಟು ನೆನಪುಗಳೊಂದಿಗೆ
ಅಂಗಳದಲಿ ಬೆಳದಿಂಗಳನು
ಕಂಗಳಿಗೆ ಕರುಣಿಸುತ ಕೂತಾಗ
ಒಮ್ಮೆಲೇ ಬೀಸಿ
ತಬ್ಬಲಿ ಹೃದಯವ ತಬ್ಬಿಕೊಳ್ಳುವ
ಸಿಹಿತಂಗಾಲಿ!
ಚಳಿಯಲಿ ನಡುಗುವ ನೆನಪುಗಳಿಗೆ
ಕವಿತೆಯಾಗಲಿ ಕಂಬಳಿ !