ಬದುಕೊಂದು ಕವನ ಸಂಕಲನ
ಹುಟ್ಟು ಮುನ್ನುಡಿ
ಸಾವು ಬೆನ್ನುಡಿ
ನಿಮ್ಮ ಹೆಸರೇ ಶೀರ್ಷಿಕೆ
ಕನಸುಗಳೇ ಪರಿವಿಡಿ
ದಿನಗಳೇ ಪುಟಗಳು
ಪ್ರತಿದಿನವೂ ಹೊಸ ಪದ್ಯಗಳು
ಪದ್ಯದ ಪದಗಳೇ ಅನುಭವಗಳು
ಭಾವಗಳೇ ಸಂಬಂಧಗಳು
ಪುಟಗಳು ತಿರುವಿದಂತೆ
ಬೆನ್ನುಡಿಗೆ ಸನಿಹ..
ಬೆನ್ನುಡಿಗೆ ಸನಿಹವಾದಂತೆ
ಮತ್ತೇ ಓದಬೇಕೆಂಬ ಹಂಬಲ
ಏನೂ ಮಾಡಲಾಗದ ಅಸಹಾಯಕತೆ!
‘ಅರ್ಪಣೆ’ ಅಡಿಯಲ್ಲಿ ಒಂದೆರಡು ಹೆಸರುಗಳು .
ಕಣ್ಣೀರು ಜಿನುಗಿಸುವ ಭಾವಗೀತೆಗಳು
ನಗಿಸುವ ಹನಿಗವನಗಳು
ಚಾಟಿಮಾತಿನ ತ್ರಿಪದಿಗಳು
ಮಾತು ಕಲಿಸಿದ ವಚನಗಳು!
ಕೊರಗುವ /ಕರಗುವ ಕಥೆ/ವ್ಯಥೆಗಳು
ಒಬ್ಬಬರದ್ದು ಒಂದೊಂದು ಪ್ರಕಾರಗಳು
ಹೊತ್ತಿಗೆ ಮೇಲೆ ಹೊದಿಸಿದ ವಿಧವಿಧ ಆಕಾರ/ವಿಕಾರಗಳು
ಆದರೆ….
ಈ ಹೊತ್ತಿಗೆಯನ್ನು ಮುದ್ರಿಸಿದವರು ಪಾಲಕರು
ಬರೆದವರು ಮಾತ್ರ “ದೇವರು”
ಇಡೀ ಬದುಕಿನ ಸರಕೆಲ್ಲವನ್ನು ಒಂದಲ್ಲಾ ಒಂದು ರೀತಿ ಒಟ್ಟುಗೂಡಿಸಿ ಲೇಖಕ, ಓದುಗ, ಮುದ್ರಕ, ಪ್ರಕಾಶಕ, ವರ್ತಕ, ಕೊಳ್ಳುಗ ಎಂಬೆಲ್ಲಾ ಸಮೀಕರಿಸಿದ ಪಾತ್ರಗಳ ಮೂಲಕ ಇಡೀ ಮುದ್ರಣ-ಪ್ರಕಟಣ ಜಗದ ಏಕಸ್ವಾಮ್ಯ ಒಡೆತನ ಪಡೆದುಕೊಂಡುಬಿಟ್ಟಿದ್ದೀರಿ. ಇನ್ನು ಎಷ್ಟು ಬೇಕಾದರು ಬರೆದುಕೊಂಡು, ಎಷ್ಟು ಬೇಕಾದರು ಮುದ್ರಿಸಿಕೊಂಡು ಮಾರಾಟ ನಡೆಸಬಹುದು.. ಹಾಗೆ ನೋಡಿ, ನಿಮ್ಮ ಮುದ್ರಣ ಪ್ರಕಟಣ ಸಂಸ್ಥೆಯಲ್ಲಿ ಹೊರಗಿನವರೂ ಮುದ್ರಿಸಬಹುದಾ ಅಂಥಾ.. ಹೊಸ ಬಿಜಿನೆಸ್ ಆದರೂ ಆಗಬಹುದು..
ಕವಿತೆಯ ಸಮೀಕರಣದ ಐಡಿಯಾ ಚೆನ್ನಾಗಿದೆ 🙂
ಸೊಗಸಾಗಿದೆ
ಧನ್ಯವಾದಗಳು 🙂
Reblogged this on ಭಾವಶರಧಿ and commented:
ಬದುಕೊಂದು ಕವನ ಸಂಕಲನ…
It’s very nice. I translated it into telugu.