ಮುನ್ನುಡಿಯ ದಾಂಗುಡಿ…

ನನ್ನ ಎರಡನೇ ಕವನ ಸಂಕಲನ “ಭಾವಶರಧಿ”ಗೆ ಮುನ್ನುಡಿ ಬರೆದು ನನಗೆ ಆಶೀರ್ವಾದ ಮಾಡಿ ಹಾಗೂ ನನ್ನ ಪುಟ್ಟ ಪ್ರಯತ್ನಕ್ಕೆ ಆಶೀರ್ವಾದ ಕವಚ ಹೊದಿಸಿದ ಶ್ರೀ.ವೃಷಭೇಂದ್ರಸ್ವಾಮಿ ಅವರಿಗೆ ನನ್ನ ಹೃದಯತುಂಬಾ ಧನ್ಯವಾದಗಳು. ಇಂದು ಅವರು ನಮ್ಮೊಂದಿಗೆ ಇಲ್ಲ. ಆದರೆ ಅವರು  ಸಾಹಿತ್ಯ ಶಿಖರವೆರಿದರೂ ನನ್ನಂಥ ಅನೇಕ ಕಾವ್ಯಾಸಕ್ತರಿಗೆ ಪ್ರೇರಕ ಶಕ್ತಿ ಯಾಗಿ ಸದಾ ನಮ್ಮ ಜೊತೆ ಇರುತ್ತಾರೆ.
ಅವರು ಬರೆದು ಕೊಟ್ಟ ಮುನ್ನುಡಿ ಇಲ್ಲಿದೆ!

ಮುನ್ನುಡಿಯ ದಾಂಗುಡಿ
‘ಜೀವಯಾನ’ದಿಂದ ‘ಶರಧಿಯಾನ’, ಮುಂದೆ ‘ಆಕಾಶಯಾನ’ : ಸಾಗು
ಸಜ್ಜನ್ – ಡಾ. ಎಸ್.ಎಂ.ವೃಷಬೇಂದ್ರಸ್ವಾಮಿ,
‘ಜೀವನ ಎಂಬ ಸಮುದ್ರದಲ್ಲಿ ಪುಟ್ಟ ಮೀನು ನೀನು.
ಆಳದ ಚಿಂತೆ ಬೇಡ ನಿನಗೆ, ಸುಮ್ಮನೆ ಈಜು ನೀನು’ ಎಂಬ ‘ಎನ್ನ ತೊದಲು
ನುಡಿಗಳು’ ಕವನ ಸಂಕಲನದಿಂದ ‘ಆತ್ಮಗತ ಭಾವಗೀತೆ’ಯಲ್ಲಿಯೇ, ಈ ‘ಭಾವಶರದಿ
ಎಂಬ ಕವಿ-ಕಾವ್ಯ-ಭಾವ-ಚಿಂತನ-ಜೀವನ-ವಿಲಾಸ-ವಿಹಾರ-ವಿಷಾದ-ಭಕ್ತಿ-ಪ್ರೇಮ-ಸ್ನೇಹ-
ಪ್ರೀತಿಯ ತೆರೆತೆರೆಗಳ ವಿಲಾಸ, ಹೊಳೆಹೊಳೆವ ಬಣ್ಣ ಬಣ್ಣದ ಮೀನುಗಳ ಈಜಾಟದ
ಮೋಡಿ-ಮಾಯೆಯ ಸಕೃದ್ದರ್ಶವಿದೆ. ಈ ಪ್ರಥಮ ಕವನ ಸಂಕಲಮ ‘ಎನ್ನ ತೊದಲು
ನುಡಿ’ಗಳಲ್ಲಿಯೇ ಪ್ರತಿಭೆಯ ಕಿರಣದ ಭರವಸೆ ಮೂಡಿಸಿದೆ. ಚಿ. ವಿನಯ ಸಜ್ಜನರ ಇದೀಗ
ಭಾವಶರಧಿ ಎಂಬ ಸಮುದ್ರಕ್ಕೆ ಇಳಿದಿದರೆ….. ಇಲ್ಲಿನ ಕವಿ-ಕಾವ್ಯ-ಪ್ರತಿಭೆಯ ಪ್ರಖರ ಬೆಳಕಿನ
ವಿವಿಧ ವಿಲಾಸ-ವಿನ್ಯಾಸಗಳ ಅಭಿವ್ಯಕ್ತಿಯಲ್ಲ. ಸಹಜ, ಸಲೀಲ ಶೈಲಿಯಲ್ಲಿ ತಿಳಿ ನೀರಿನಲ್ಲಿ
ಎಳೆಮೀನು ತಿಳ್ಳಿಯಾಡುವ ತೆರೆದ ರಚನೆಗಳಲ್ಲಿ ಪ್ರಖರತೆಯಿದೆ, ಪ್ರಬುದ್ಧತೆಯತ್ತ ನಡೆದ
ಹೆಜ್ಜೆಯ ಗುರುತುಗಳು ಕಾಣುತ್ತಿವೆ. …….ಹಾ………….ಜೈ…….ಸೈ……. ವಿನಯ……..ಸಾಗು ಮುಂದೆ
ಮುಂದೆ… ನೂರು ಕನಸುಗಳು ಭರವಸೆಯ ಬದುಕಿನ ಪರಿ-ಪರಿಯ ಚಿಂತನೆಗಳ ಕಾವ್ಯ
ತುಂಗಭದ್ರೆ… ತುಂಬಿ ಹರಿದು ಕನ್ನಡ ಕಾವ್ಯ ಶರಧಿಯನ್ನು ಸೇರಿ… ಬದುಕು ಸಾರ್ಥಕವಾಯಿತೆಂಬ
ತೃಪ್ತಿ ನಿಮ್ಮದಾಗಲಿ, ನಿಮ್ಮಂಥ ‘ಗ್ರಾಮೀಣ ಕಿರು ಪ್ರತಿಭೆ’ಗಳ ವಿಕಾಸಕ್ಕೆ ಪ್ರೇರಣೆ ನೀಡಿ……. ಕುರಿ
ತೋಡದಿದ್ದರೂ, ಕಾವ್ಯ ಪರಿಣತಿಯನ್ನು ಪಡೆದ ಕನ್ನಡಿಗರ ಜನಮಾನಸಕ್ಕೆ ‘ಆನಂದ ಆದರ್ಶ
ನಿದರ್ಶನ’ವಾಗುವ ನಿಮ್ಮ ಕಾವ್ಯ ರಚನಾ ವಿಲಾಸ, ಜೀವನ ವಿಕಾಸವಾದಂತೆಲ್ಲ ಪರಿಪಕ್ವವಾಗಿ
ಮೂಡಿಬರಲೆಂದು ತುಂಬು ಹೃದಯದಿಂದ ಹಾರೈಸುತ್ತೇನೆ. ಈ ‘ಸಹೃದಯ’ ಈ ಸಾಹಿತ್ಯದ
ಸಂತ ! ! !
ತಾರುಣ್ಯದ ಕನಸುಗಾರ ಕವಿ
ಸಾವಿರ ಕನಸುಗಳನ್ನು ಹೊತ್ತ ನೌಕೆಗೆ ನಾನು ನಾವಿಕನಾದೆ.
ಬಿರುಗಾಗಳಿಗೆ ಬಗ್ಗಲಿಲ್ಲ, ದೈತ್ಯ ಅಲೆಗಳಿಗೆ ಜಗ್ಗಲಿಲ್ಲ….. ಮುಂತಾಗಿ ನಡೆದ ಈ
‘ಸರದಾರ’ ಅಹಂಗೆ ಒಳಗಾಗದೆ ತನ್ನ ಸ್ವಭಾವ ಸಹಜ ‘ವಿನಯ’ದಿಂದಲೇ ಬದುಕಿ
‘ಇರಲಿ ನಮ್ಮ ಕನಸುಗಳು ಕಡಲ ಅಲೆಗಳ ಹಾಗೆ !
ಇಂದಲ್ಲ ನಾಳೆ ಮುಟ್ಟಲೇಬೇಕು ಗೆಲವೆಂಬ ತೀರವನು’ (ಹಂಬಲ) ಎಂಬ ಭರವಸೆಯಿಂದ
‘ಕಾವ್ಯಯಾನ’ ಮುಂದುವರೆಸಿರುವರು. ತಾರುಣ್ಯದ ಭಕ್ತಿ, ಪ್ರೀತಿ, ಪ್ರೇಮ, ವಿರಹ ವಿಲಾಸಗಳ
ಮಲ್ಲಿಗೆ ಹೂಗಳ ಕಂಪು-ಸೊಂಪು ಇಲ್ಲಿನ ಅನೇಕ ಕವಿತೆ-ಚುಟುಕಗಳಲ್ಲಿ ಸಹೃದಯನಿಗೆ
ಮುದ ನೀಡುತ್ತವೆ.
‘ಆಕಾಶದಲ್ಲಿನ ನಕ್ಷತ್ರ ಎಣಿಸುತ್ತ I ಬೆಳದಿಂಗಳ ಬೆಳಕನ್ನು ಸವಿಯುತ್ತ I
ಜೋಡಿಯಾದುವು ನನ್ನ ಕಣ್ಣರೆಪ್ಪೆಗಳು I ಶುರುವಾದವು ಸಣ್ಣ ಕನಸುಗಳು’ I
ನಿಜ, ಇಲ್ಲಿಗೇ ನಿಲ್ಲದೆ ನಿಜ ಜೀವನದ ಪಾಡುಗಳಲ್ಲಿ ಹೆತ್ತವರು, ಬಡತನ,
ಅಳು-ನಗು-ವಿರಸ-ವಿಷಾದ ಕಣ್ಣೀರು – ಕುಣಿವ ಕಾಂಚಾಣದೊಡನೆ ಪ್ರಕೃತಿ ವೈಭವದ
ಕೆಲವು ಚಿತ್ರಣಗಳು ಈ ಭಾವಶರಧಿಯಲ್ಲಿವೆ. ಇಷ್ಟೇ ಅಲ್ಲದೆ ಬದುಕು-ಜೀವನ-ಆಶಯ-
ಹಂಬಲಗಳಿಂದ ಚಿಂತನಶೀಲ ಭಾವನೆಗಳನ್ನು ಕಂಡಿದ್ದಾನೆ ಈ ಕವಿ.
‘ಸತ್ಯದರ್ಶನ ತೋರುವ ಹೊಸ ಬೆಳಕಿನ ನಿರೀಕ್ಷೆಯಲ್ಲೇ I
ಉಸಿರು ಬಿಗಿಹಿಡಿದು ನಿಂತಿದೆ ನನ್ನ ಬದುಕು (ಭವಿಷ್ಯ)’ ಎಂಬ ಒಳ ಬೆಳಕಿನ
ಚಿಂತನೆಯೊಡನೆ ಈ ಜಗತ್ತಿನ ಮಾಯಾಲೋಕದ ವಿವರ – ವಿನ್ಯಾಸಗಳನ್ನು ಚಿತ್ರಿಸಿ,
‘ಎಲ್ಲಿದೆ ಬಣ್ಣವಿಲ್ಲದ ಬದುಕು I ಎಲ್ಲಿದೆ ಅಂಧತ್ವ ದೂರ ಮಾಡುವ ಬೆಳಕು I
ಎಲ್ಲಿದೆ ಎಲ್ಲ ತಿಳಿಸುವ ಪುಸ್ತಕ I ಎಲ್ಲಿದೆ ಎಲ್ಲ ಬುದ್ದೀ ಇರುವ ಮಸ್ತಕ I
ಎಲ್ಲಿದೆ ಎಲ್ಲ ಮಿರುವ ಎತ್ತರ I ಎಲ್ಲಿದೆ ಇಲ್ಲಿ ಎಲ್ಲ ಪ್ರಶ್ನೆಗೆ ಉತ್ತರ?? – ನಿಜ
ಈ ಬದುಕೇ ಪ್ರಶ್ನೆಗಳ ಆಗರ, ಉತ್ತರ ಹುಡುಕುವುದೇ ಜೀವ-ಜೀವನದ ‘ಸಾಧನೆ’…. ಹೀಗೆ
ಈ ವಿನಯಕುಮಾರ ಆಧುನಿಕ ‘ಯಂತ್ರ-ತಂತ್ರ-ಮಂತ್ರ ಜ್ಞಾನ’ದ ವಿದ್ಯಾರ್ಥಿಯಾದರೂ,
ವಿಶೇಷವೆಂಬಂತೆ ‘ಆತ್ಮಶೋಧ-ಜೀವನಶೋಧ-ಪರಿಸರಶೋಧದ’ ಕಾವ್ಯಲೋಕ
ವಿಹಾರಿಯಾಗಿರುವುದು ಅಚ್ಚರಿಯ ಅಷ್ಟೇ ಮೆಚ್ಚುಗೆಯ ಸಂಗತಿ, ಅಭಿನಂದನೀಯ ವಿಚಾರ,
ತರುಣ ತರುಣಿಯರಿಗೆ ‘ಅನುಕರಣೀಯ’ ಮಾದರಿ….. ‘ಹರುಕುಚೊಣ್ಣ-ಮುರುಕಲು ಗಡ್ಡ,
ಅಲ್ಲದೆ ಬಾಚ್-ಬಣ್ಣ-ಕ್ರೀಮ್‍ಗಳಿಗಾಗಿ’ ಕ್ರೀಮಿಸುವ …. ಪಾಶ್ಚಾತ್ಯೀಕರಣದ ‘ಕುರಿಗಳು
ಸಾರ್ ಕುರಿಗಳಾಗಿರುವ’ ಯುವ ಪೀಳಿಗೆಗೆ ಈ ವಿನಯ ಒಬ್ಬ ಗುರು !! ಇರಲಿ.
ಕವಿಗೆ ಕಿಮಿಮಾತುಗಳೆರಡು…..
ಚಿ. ವಿನಯಕುಮಾರ ಸಜ್ಜನ್….. ಕವಿ-ಕಾವ್ಯ-ಕಲೆ-ಸಾಹಿತ್ಯ ಒಂದು ಜಗತ್ತಿನ
ಕೆಲವೇ ಜೀವಿಗಳಲ್ಲಿ ಪ್ರವಹಿಸುವ ‘ಅಂತರಗಂಗೆ’ – ಅದನ್ನು ಕಾಣುವ ಕಾಣಿಸುವ
ಕೈ…ಕಣ್ಣು…ಕಿವಿ…ಗಳಿಗೆ ಸದಾ ಎಚ್ಚರ ಚೈತನ್ಯ ಶಕ್ತಿಯ ನಿರಂತರ ಉಪಾಸಿಗೆ ಬೇಕು. ನಿತ್ಯ
ವಿಸ್ತಾರಗೊಳ್ಳುತ್ತಿರುವ ನಮ್ಮ ಭೌತಿಕ-ತಾಂತ್ರಿಕ-ಆಧ್ಯಾತ್ಮಿಕ ವಿಶಾಲ ಪ್ರಪಂಚದ ಅನುಸಂಧಾನ
ಇರಬೇಕು… ಆಗ… ಈ ‘ಪ್ರತಿಭೆಯ ಅಂತರಗಂಗೆ-ಭಾಷಾ ರೀತಿಯ ಭಾವ ಗಂಗೆಯಾಗಿ’
ಮೂಡಿ ಬರುತ್ತದೆ. …. ಅದು ಅಂದಂದಿನ ಚಿತ್ರಣವಷ್ಟೇ ಆಗಿದೆ. ಅವುಗಳ ಒಳತೋಟಿಯ
ನಿತ್ಯ ನಿರಂತರ ಚಿರಂತನ ಕೃತಿಯಾಗಿ ಮೈದಾಳುತ್ತದೆ. ಅದನ್ನೇ ಕಲೋಪಸನೆ… ತಪಸ್ಸು
ಎನ್ನುವರು. ಅನುಭವಿಗಳು, ಅನುಭಾವಿಗಳು!!
ವಿನಯ್ ಈಗ ನೀನು ‘ತೋದಲು ನುಡಿ’ ದಾಟಿ ‘ಭಾವಸಮುದ್ರ’ಕ್ಕೆ
ಇಳಿದಿದ್ದೀಯೆ. ಇವೆಲ್ಲವಕ್ಕೂ ಮಿಗಿಲಾದ ‘ಆಕಾಶಯಾನ, ಚಂದ್ರ-ಮಂಗಳ ಗ್ರಹಯಾನ’,
ಅಂತೆಯೇ ಮನಸ್ಸಿನ ಆಳ, ಚಿಂತನೆಯ ವಿಸ್ತಾರ, ಅಧ್ಯಾತ್ಮ ವಿಕಾಸದತ್ತ ನಿಮ್ಮ ‘ಕಾವ್ಯಯಾನ’
ಸಾಗಲಿ. ಅತೀ ನಿವಯ ಬೇಡ. ಅಳುಕು ಬೇಡ. ಜಗತ್ತಿನ ಮಹಾಸಾಧನೆಗಳು ಆಗಿರುವುದೇ…
ಇಂಥ ಗರಿಕೆಯಿಂದ ಗೌರಿಶಂಕರ ಸೂತ್ರದಿಂದ … ಅಲ್ಲವೆ ? ಶುಭಮಸ್ತು.
ಕೊನೆಯದಾಗಿ ‘ಶಿಕ್ಷಣದ ಪೋಷಣೆಯ ಜೊತೆಗೆ ವ್ಯಕ್ತಿತ್ವ ನಿರ್ಮಿಸುವ ಶಿಕ್ಷಕ’ನೆಂಬ
ಗೌರವ ಸ್ಥಾನದಲ್ಲಿರುವ ನಮ್ಮ ‘ವಿದ್ಯಾಪೋಷಕ ಸಂಸ್ಥೆ’ಗೆ ನೀವು ನೀಡುವ ಕಿರುಕಾಣಿಕೆ ಈ
ಕವನ ಸಂಗ್ರಹವಾದರೂ ಅದೂ ನಿನ್ನಂಥ ನೂರಾರು ಫಲಾನುಭವಿ ಮಿತ್ರರಿಗೆ ಸತ್‍ಪ್ರೇರಕ.
ಅದರ ಸ್ಥಾಪಕ ಗುರು ಮಿತ್ರ ದಾನಿಗಳಿಗೆ ಸಾರ್ಥಕವೆಂಬ ಕಾಯಕ ತೃಪ್ತಿ.
ಅಲ್ಲವೇ ವಿನಯ್ ? ಇದು ಅತ್ಯುಕ್ತಿಯಲ್ಲ, ಸದಭಿಮಾನದ ಮುನ್ನುಡಿ-ದಾಂಗುಡಿ….
ಅಲ್ಲವೆ?
ಎಸ್. ವೃಷಬೇಂದ್ರಸ್ವಾಮಿ, ಧಾರವಾಡ.
ಶಿವಪ್ರಸಾದ, ಕಲ್ಯಾಣ ನಗರ, ಧಾರವಾಡ, ದೂರವಾಣಿ : 0836-2448570

3 comments

  1. ಎಲ್ಲಾ ಬರಹಗಾರರಿಗೆ ಈ ಮುನ್ನುಡಿ ಆಶೀರ್ವಾದದಂತಿದೆ.
    ‘ಆಕಾಶದಲ್ಲಿನ ನಕ್ಷತ್ರ ಎಣಿಸುತ್ತ I ಬೆಳದಿಂಗಳ ಬೆಳಕನ್ನು ಸವಿಯುತ್ತ I
    ಜೋಡಿಯಾದುವು ನನ್ನ ಕಣ್ಣರೆಪ್ಪೆಗಳು I ಶುರುವಾದವು ಸಣ್ಣ ಕನಸುಗಳು’ I

    ತುಂಬಾ ಚೆನ್ನಾಗಿ ಹೇಳಿದ್ದಾರೆ.

    1. ಧನ್ಯವಾದಗಳು, ಆ ಪದ್ಯ ನನ್ನ ಭಾವಶರಧಿ ಕವನ ಸಂಕಲನದ “ಮಾಯಾಲೋಕ “ಪದ್ಯದಿಂದ ಆಯ್ದು ಆ ಪದ್ಯದಲ್ಲಿರುವ ನನಗೂ ತಿಳಿಯದಿರುವ ಕೆಲವು ಸೂಕ್ಷ್ಮಗಳನ್ನೂ ತೋರಿಸಿಕೊಟ್ಟಿದ್ದಾರೆ.ಆದರಿಂದಲೇ ಅವರು ಕವಿ ಕಾಣದ್ದನ್ನೂ ಕಾಣುವರ ಸಾಲಿನಲ್ಲಿ ಮೊದಲಿಗರಾಗುತ್ತಾರೆ 🙂

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s