ಸಂಭ್ರಮವೋ ಈ ಪಯಣ
ಧನ್ಯವೋ ಈ ಜೀವನ !ಎಲ್ಲೋ ಹುಟ್ಟಿ ಎಲ್ಲೆಲ್ಲೊ ಹರಿದು
ಕೌತಕ ಕವನಕೆ ಸಾಲೊಂದ ಬರೆದು
ಸೇರಿವೆ ಕಡಲನು ನದಿಗಳ ಸಾಲು
ಅಲ್ಲೂ ಇದೆ ಅನ್ಯೋನ್ಯದ ಬಾಳು !ಸಂಭ್ರಮವೋ ಈ ಪಯಣ
ಧನ್ಯವೋ ಈ ನಯನನಗುತಿದೆ ನೋಡ ನೀಲಿ ಬಾನು
ಅಳುತಿದೆ ಮೋಡ ಕಾರಣವೇನು?
ಸುರಿವ ಮಳೆಗೆ ಕರಗಿಬಿಡಲೇನು
ನಾನು ಒಮ್ಮೆ ನದಿಯಾಗಬಿಡಲೇನುಸಂಭ್ರಮವೋ ಈ ಪಯಣ
ಧನ್ಯವೋ ನಾನೀದಿನ
ಅಲೆಗಳು- ಕಡಲುತೊಟ್ಟ ಬಳೆಗಳು
ಗುಟ್ಟುಬಿಟ್ಟು ಕೊಡದ ಕಾಡುಗಳು
ಗೂಡು ಬಿಟ್ಟು ಬಂದ ಹಕ್ಕಿಗಳು
ಎಣಿಸಿದರೂ ಕಮ್ಮಿಯಾಗದ ಚುಕ್ಕಿಗಳುಸಂಭ್ರಮವೋ ಈ ಪಯಣ
ಧನ್ಯವೋ ನಾನೀದಿನ
ಧನ್ಯವೋ ಈ ಜೀವನ !

ಎಲ್ಲೋ ಹುಟ್ಟಿ ಎಲ್ಲೆಲ್ಲೊ ಹರಿದು
ಕೌತಕ ಕವನಕೆ ಸಾಲೊಂದ ಬರೆದು
ಸೇರಿವೆ ಕಡಲನು ನದಿಗಳ ಸಾಲು
ಅಲ್ಲೂ ಇದೆ ಅನ್ಯೋನ್ಯದ ಬಾಳು !
Beautiful lines:) ತುಂಬಾ ಚೆನ್ನಾಗಿದೆ 🙂
Thank you 🙂