ಕಳೆದ ಒಂದು ವರುಷದಿಂದ ನಂಗೆ ನೋವುಗಳೇ ಹೆಚ್ಚು. ಅಪ್ಪನ ಸತತ ಅನಾರೋಗ್ಯ, ಆರ್ಥಿಕ ದುಸ್ಥಿತಿ, ವಯಸ್ಸಾದರೂ ಕಷ್ಟ ಕಡಿಮೆ ಅಗಲ್ಲಿಲ್ಲ ನನ್ನ ಅಮ್ಮನಿಗೆ ಅನ್ನುವ ನೋವು ಅದರ ನಡುವೆ ನನ್ನ ಆಫಿಸಿನಲ್ಲಿ ನನಗೆ ಆದ ಕೆಲವು ಹಿನ್ನಡೆಗಳು ನನ್ನನ್ನು ಮಾನಸಿಕವಾಗಿ ಬಹಳಷ್ಟು ಕುಗ್ಗಿಸಿವೆ.
ಅದರಲ್ಲೂ ಪ್ರಾಣ ಸ್ನೇಹಿತರು ಅಂತ ಗುರುತಿಸಿಕೊಂಡವರು ಕಷ್ಟ ದಿನಗಳಲ್ಲಿ ಒಬ್ಬರೂ ಬರದೆ ಇದ್ದಾಗ ಆಗುವ ನೋವು ಸಾಮನ್ಯದಲ್ಲ.
ಇರುವ ಒಬ್ಬ ಮಗ ನಾನು, ಅಪ್ಪ ಅಮ್ಮ ಮುಂದೆ ಕಣ್ಣೀರು ಹಾಕಲು ಆಗುವುದಿಲ್ಲ. ನಾನೇ ಅತ್ತು ಧೈರ್ಯ ಗೆಟ್ಟರೆ, ಅವರಿಗೆ ಧೈರ್ಯ ಹೇಳುವರಾರು ? ಬಿಡಿ..
ತೀರ ಒಬ್ಬಂಟಿಗ ಅನ್ನಿಸಿದಾಗಲೆಲ್ಲ ನನ್ನಷ್ಟಕ್ಕೆ ನಾನೇ ಅತ್ತು, ಧೈರ್ಯ ತುಂಬಿಸಿಕೊಂಡು ಮತ್ತೆ ಮುಂದೆ ನಡೆಯುತಿದ್ದೇನೆ. ಕಷ್ಟಗಳು ಬಂದರೆ ತಾನೆ ಸುಖದ ನಿಜವಾದ ಅರ್ಥ ತಿಳಿಯುವುದು…
ಅಂತಹ ನಲಿವಿನ ದಿನಗಳ ನಿರೀಕ್ಷೆಯಲ್ಲಿ ……
ಬರವಣಿಗೆಯಲ್ಲೇ ನನ್ನ ನೋವು ಹಂಚಿಕೊಳ್ಳುವ ಮನಸಾಯ್ತು .ಅದಕ್ಕಾಗಿ ಈ ಪೋಸ್ಟ್ ..