ಕಳೆದ ಒಂದು ವರುಷದಿಂದ ನಂಗೆ ನೋವುಗಳೇ ಹೆಚ್ಚು. ಅಪ್ಪನ ಸತತ ಅನಾರೋಗ್ಯ, ಆರ್ಥಿಕ ದುಸ್ಥಿತಿ, ವಯಸ್ಸಾದರೂ ಕಷ್ಟ ಕಡಿಮೆ ಅಗಲ್ಲಿಲ್ಲ ನನ್ನ ಅಮ್ಮನಿಗೆ ಅನ್ನುವ ನೋವು ಅದರ ನಡುವೆ ನನ್ನ ಆಫಿಸಿನಲ್ಲಿ ನನಗೆ ಆದ ಕೆಲವು ಹಿನ್ನಡೆಗಳು ನನ್ನನ್ನು ಮಾನಸಿಕವಾಗಿ ಬಹಳಷ್ಟು ಕುಗ್ಗಿಸಿವೆ.
ಅದರಲ್ಲೂ ಪ್ರಾಣ ಸ್ನೇಹಿತರು ಅಂತ ಗುರುತಿಸಿಕೊಂಡವರು ಕಷ್ಟ ದಿನಗಳಲ್ಲಿ ಒಬ್ಬರೂ ಬರದೆ ಇದ್ದಾಗ ಆಗುವ ನೋವು ಸಾಮನ್ಯದಲ್ಲ.
ಇರುವ ಒಬ್ಬ ಮಗ ನಾನು, ಅಪ್ಪ ಅಮ್ಮ ಮುಂದೆ ಕಣ್ಣೀರು ಹಾಕಲು ಆಗುವುದಿಲ್ಲ. ನಾನೇ ಅತ್ತು ಧೈರ್ಯ ಗೆಟ್ಟರೆ, ಅವರಿಗೆ ಧೈರ್ಯ ಹೇಳುವರಾರು ? ಬಿಡಿ..
ತೀರ ಒಬ್ಬಂಟಿಗ ಅನ್ನಿಸಿದಾಗಲೆಲ್ಲ ನನ್ನಷ್ಟಕ್ಕೆ ನಾನೇ ಅತ್ತು, ಧೈರ್ಯ ತುಂಬಿಸಿಕೊಂಡು ಮತ್ತೆ ಮುಂದೆ ನಡೆಯುತಿದ್ದೇನೆ. ಕಷ್ಟಗಳು ಬಂದರೆ ತಾನೆ ಸುಖದ ನಿಜವಾದ ಅರ್ಥ ತಿಳಿಯುವುದು…
ಅಂತಹ ನಲಿವಿನ ದಿನಗಳ ನಿರೀಕ್ಷೆಯಲ್ಲಿ ……
ಬರವಣಿಗೆಯಲ್ಲೇ ನನ್ನ ನೋವು ಹಂಚಿಕೊಳ್ಳುವ ಮನಸಾಯ್ತು .ಅದಕ್ಕಾಗಿ ಈ ಪೋಸ್ಟ್ ..
ನೋವು, ಹತಾಷೆಗಳು ಜೀವನದುದ್ದಕ್ಕೂ ನೆರಳಿನಂತೆ ಮತ್ತುನಮ್ಮ ಮೇಲೆ ವಿಜೃಂಭಿಸಲು ಸನ್ನಾಹಿಯಾದಂತೆ ಅನಿಸುತ್ತದೆ. ಅಂಥವಕ್ಕೆಲ್ಲ ವಿಚಲಿತವಾಗದ ಅಗಾಧ ಪ್ರೇರಕ ಶಕ್ತಿ ನಿಮ್ಮೊಳಗೆ ಕ್ರಿಯಾಶೀಲವಾಗಿದೆ ಎಂದು ನಿಮ್ಮ ಈ ಬರಹ ತಿಳಿಸಿಕೊಡುತ್ತಿದೆ. ಎಲ್ಲ ಹಾರೈಕೆಗಳೂ ಸದಾ ನಿಮ್ಮೊಡನೆ ಇದೆ.
Dhanyavaadagalu sir 🙂
ಇದುವರೆವಿಗೂ ಇದ್ದ ನೋವು, ಕಷ್ಟಗಳು ಈ ಪುಟದ ಮೇಲೆ ಭಟ್ಟಿ ಇಳಿದು ಖಾಲಿಯಾದವಲ್ಲ ? ಇನ್ನು ಹೊಸ ಸ್ಪೂರ್ತಿಯಿಂದ ಮುಂದಿನದನ್ನು ಎದುರಿಸಿ. ಒಂದೆ ಒಂದು ನೆನಪಿನಲ್ಲಿಡಿ – ಪ್ರತಿಯೊಬ್ಬರ ಸಂಚಿಯಲ್ಲು ಅವರವರ ಪಾಲಿನ ಕಷ್ಟದ ಬುತ್ತಿ ಇದ್ದೆ ಇರುತ್ತದೆ ಹೀಗಾಗಿ ನೀವು ಏಕಾಂಗಿಯಲ್ಲ ಈ ಜಗದೇ ಎನ್ನುವ ಅರಿವು ಹೆಚ್ಚಿನ ಬಲ ನೀಡಲಿ. ಶುಭ ಹಾರೈಕೆ.
Thanks Nagesh!
Nannanu vayaktikavaagi ballavarallavaadaru samaadhanada saalugalige dhanyavaadagalu 🙂
ವಿನಯ್, ಈ ಬರಹ ಓದಿ ಬೇಜಾರಾಯ್ತು. ಆದಷ್ಟು ಬೇಗ ಎಲ್ಲಾ ಕಷ್ಟಗಳು ನಿವಾರಣೆಯಾಗಲಿ ಅನ್ನೋದು ನನ್ನ ಹಾರೈಕೆ.
Whenever I feel low, I read this poem. ಅಡಿಗರ ಈ ಕವನ ನನ್ನ ಬದುಕಿನ ಭಾವಗೀತೆ. Posting this with the hope of making you feel better.
ನಿನಗೆ ನೀನೇ, ಗೆಳೆಯ, ನಿನಗೆ ನೀನೇ!
ಅವರಿವರ ನಂಬುಗೆಯ ಮಳಲ ರಾಶಿಯ ಮೇಲೆ
ಬಾಳಮನೆಯನು ಮುಗಿಲಿಗೆತ್ತರಿಸಲಿಹೆಯಾ?
ನಿನಗೆ ನೀನೇ, ಗೆಳೆಯ, ನಿನಗೆ ನೀನೇ!
ಮನ ಸಿಡಿದು ಹೋಳಾಗುತಿರುವ ವೇಳೆ
ಕನಸುಗಳ ಗುಳ್ಳೆಗಳು ಒಡೆದೊಡೆದು ಬೀಳೆ
ಜನುಮದೀ ರಂಗಣದಿ ಕಾಲುಗಳು ಸೋಲೆ
ನಿನಗೆ ನೀನೇ, ಗೆಳೆಯ, ನಿನಗೆ ನೀನೇ!
ಚೆಲುವಿಕೆಯ ಹುಚ್ಚೊಳೆದೆ ಕೊಚ್ಚಿ ಹೋಗುತಿರೆ
ಒಲವು ವಿರಹದ ಬೆಂಕಿಯಲಿ ಬೇಯುತಿರೆ
ಗೆಳೆತನಕೆ ಹುಳಿ ಬಂದು ಹೆಪ್ಪುಗಟ್ಟುತಿರೆ
ನಿನಗೆ ನೀನೇ, ಗೆಳೆಯ, ನಿನಗೆ ನೀನೇ!
Thanks for Madhu! Really adigara saalugalu nanna vaastava sthitige Tumba hattiravaagide
Thanks for sharing!
ನಿನ್ನ ಜೀವನ ನೌಕೆಯ ಅಂಬಿಗನೂ ನೀನೇ, ಪಯಣಿಗನೂ ನೀನೇ. ಧೈರ್ಯವಾಗಿರಿ 🙂
Nimma jeevanakke nive sarati.. Sukha kinta dukha manushyanannu pakva golisutte.. Yavdu shaswata valla.. Ellavu badalagutte.. Dairya vagiri.. Nimma nagu nimma tande tayige novanna maresutte.. Change is the only constant thing.. Snehatarilla anna bedi.. Nimma odugaragi navugalu nimma snehitare.. Endedigu nimage joteyagi irutteve..
ಮಗನೆ ನೆಂಟರು ಮನೆಗೆ ಬಂದರೆ ಎಷ್ಟು ದಿನ ಇರುತ್ತಾರೆ ಹೇಳು? ಹಾಗೆ ಈ ನೋವು ಕಷ್ಟ. ಬಂದ ಹಾಗೆ ಸ್ವಲ್ಪ ತೊಂದರೆ ಕೊಟ್ಟು ಹೋಗುತ್ತದೆ. ದೃತಿಗೆಡದಿರು. ನ್ಯಾಯ ಮಾಗ೯ದಲ್ಲಿ ನಡೆ. ದೇವರಲ್ಲಿ ಮೊರೆ ಇಡು. ನಾನು ಓದುತ್ತಿರುವ ನಿನ್ನ ಮೊದಲ ಬ್ಲಾಗ್ ಬರಹ. ನೋವಿನ ಹಿಂದೆ ನಲಿವಿದೆ. ಮುಂದಿನ ಬರಹ ನಲಿವಿರಲಿ.
ಬದುಕಿನ ಹಾದಿಯಲ್ಲಿ
ನೋವೆ ನಲಿವಿನ ಅಡಿಪಾಯ,,,,
ಅಪ್ಪನ ಹಾಗು ಅಮ್ಮನ ಜೊತೆ ಇಷ್ಟೊಂದು ಆತ್ಮೀಯತೆ,
ಅವರು ಆದಷ್ಟು ಬೇಗ ಗುಣಮುಖರಾಗಲಿ,,,,,
ನಲಿವು ಮತ್ತೆ ಹುಟ್ಟಿಕೊಳ್ಳಲಿ,,,,, ನಿಮ್ಮ ಹೃದಯದಲ್ಲಿ,,,,,
ಬೇಸರಗೊಳ್ಳಬೇಡಿ,,,,,, ಇಡಿ ಜಗತ್ತಿನ ಸೌಂದರ್ಯ ನಿಮ್ಮ ಜೊತೆಗಿದೆ.
There is always another side for life. If it is sad today definitely happy side should come and vice versa. But it is we has to be patient.
ದುಖ ಬಂದಾಗ ಕುಗ್ಗದಿರು, ಸುಖ ಬಂದಾಗ ಹಿಗ್ಗದಿರು 🙂
Because nothing is permanent in this life.