ಒಮ್ಮೆಮ್ಮೆ ಅನಿಸುವುದು
ಬದುಕು ಸುಳ್ಳು
ಸಾವು ಸತ್ಯ!
ಎಷ್ಟೇ ತಡೆದರೂ ಉಳಿಸಿಕೊಳ್ಳಲಾಗದ
ಕಣ್ಣೀರಿನ ಹನಿಗಳು..
ಗಲ್ಲದ ಮೇಲೆ ಹರಿದು ಹೋದಮೇಲೆ
ಎಲ್ಲಿಂದಲೋ ಬಂದ ಸಣ್ಣ ಧೈರ್ಯ…
ಮತ್ತದೇ ಭಯ…
ಎಷ್ಟು ಬೇಡಿಕೊಂಡರು ಏನನ್ನು
ಕೇಳದ,
ಎಷ್ಟು ಬೈದರೂ ಏನನ್ನು
ಮಾಡದ,
ಕಣ್ಣಿಗೂ ಕಾಣದ ದೇವರ ಎಂಬ ಸಣ್ಣ ನಂಬಿಕೆಯೊಂದೇ
ರಾತ್ರಿ ನಿದ್ದೆಗೆ ಆಸರೆ..
ಒಮ್ಮೆಲೇ ಬಂದು ಆವರಿಸಿ
ಎದೆಯನ್ನು ಆಕ್ರಮಿಸುವ
ಏಕಾಂತಕ್ಕೆ ಕಾರಣವೇ ಇಲ್ಲ …
ಬಿರುಗಾಳಿಯಂತೆ ಬಂದು
ಮಾನಸ ಗಂಗೋತ್ರಿಯಲ್ಲಿ
ತ್ಸುನಾಮಿ ಯನ್ನೇ ಎಬ್ಬಿಸಿ
ನೀಡುವ ನೋವು ಅಷ್ಟಿಷ್ಟಲ್ಲ…
ಇವೆಲ್ಲ ಒಣ ವೇದಾಂತ ಬಿಟ್ಟು
ಇರೊವಷ್ಟು ದಿನ ನಗು ನಗುತ
ಬದುಕು ಎಂದು ಬೈಯುವ
– ನನ್ನೊಳಗಿನ ನನಗರಿಯದವ..
Super super super