Month: July 2016

ಮನದ ದೇವಿ ನೀನು

ಮನದ ದೇವಿ ನೀನು
ನಾನು ನಿನ್ನ ಭಕ್ತ.
ನಿನ್ನ ಧ್ಯಾನದಲ್ಲೇ
ನಾನು ಅನುರಕ್ತ

ಹೀಗೊಂದು ಸ್ವಪ್ನದ ಸಲ್ಲಾಪ…

ಅವನು ಅವಳ ಕೈಯನ್ನು ಹಿಡಿಯಲು ಒಪ್ಪಿಗೆ ಕೇಳಿದನು..
“ನನ್ನ ಕೈಹಿಡಿಯಲು ಯಾಕಿಷ್ಟು ಆತುರ ?”ಅಂತ ಕೇಳಿದಳು..
“ನಿನ್ನ ಕೈ ರೇಖೆಗಳು, ನನ್ನ ಕೈ ರೇಖೆಗಳು ಬೆಸೆಯಲಿ … ನಮ್ಮ ಬದುಕಿನ ಹಾಗೆ ” ಎಂದ.
ಅವಳ ಕಣ್ಣಲ್ಲಿ ನೀರಾಡಿತ್ತು…

“ಆ ಮೋಡಗಳಿಗೆ ಮುದ್ದಿಸಬೇಕು” ಎನಿಸಿದೆ ಎಂದನು..
“ಹೌದಾ ! ಬಲು ಚಂದ ನಿನ್ನ ಕಲ್ಪನೆ “ಎಂದಳು..
“ನಿನ್ನ ಕೆನ್ನೆಗಳೇ ಆ ಬೆಳ್ಳಿ ಮೋಡಗಳಂತೆ ಇದೆ ” ಎನ್ನುತ್ತಾ ಮುತ್ತಿಟ್ಟನು..
ಅವಳು ನಾಚಿ ನೀರಾದಳು … ಕವಿದ ಮೋಡ ಸುರಿದ ಮಳೆಯಂತೆ…

ನಿನ್ನ ಮೌನವೇ ಮುನ್ನುಡಿ !!

ಹೃದಯ ಬರೆದ ಕವನ ಸಂಕಲನಕೆ
ನಿನ್ನ ಮೌನವೇ ಮುನ್ನುಡಿ
ನಿನ್ನ ನೆನಪುಗಳೇ ಪರಿವಿಡಿ
ನಿನ್ನ ಕನಸುಗಳೇ ಪುಟವಿಡಿ

ನಾನು ಏಕೆ ಬರೆಯುತ್ತೇನೆ ?..

ನಾನು ಏಕೆ  ಬರೆಯುತ್ತೇನೆ ? ಸಾಹಿತ್ಯ ಓದುತ್ತೇನೆ ? ನನ್ನ ಭವಿಷ್ಯ ಗುರಿಗಳಿಗೆ ಎಷ್ಟು ನನ್ನ ಓದು ಪೂರಕವಾಗಬಹುದು ? ಹೀಗೆ ನನಗೆ ಕಾಡುವ ಪ್ರಶ್ನೆ ಒಂದೆರಡಲ್ಲ..
ನನ್ನ ಹಲವು ಗೆಳೆಯರು ಎಂಜಿನೀಯರಿಂಗ್ ಮುಗಿಸಿ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಪರದೇಶ ಹೋಗಿದ್ದರೆ, ಇನ್ನು ಕೆಲವು ಗೆಳೆಯರು ಎಂ ಟೆಕ್, ಎಂಬಿಎ ಇಲ್ಲಿಯೇ ಓದುತ್ತಿದ್ದರೆ.. ಇನ್ನುಕೆಲವರು ಪರೀಕ್ಷೆಯ ತಯಾರಿಯಲ್ಲಿದ್ದಾರೆ.
ಇನ್ನು ಅನೇಕ ಗೆಳೆಯರು ಸದಾ ತಮ್ಮ ಕೆಲಸದ ಮೇಲಿನ ಹೆಚ್ಚು ತಾಂತ್ರಿಕತೆಯ ಕುರಿತು ಹೆಚ್ಚು ಒನ್ಲೈನ್ ಇದ್ದು ಓದುತ್ತಿದ್ದರೆ…
ನಾನು ಮಾತ್ರ ಸಿಕ್ಕ ಸಮಯವೆಲ್ಲ ಒಂದು ಪುಸ್ತಕ , ಒಂದು ಪೆನ್ನು ಒಮ್ಮೆ ಬರೆಯುತ್ತ , ಮೊತ್ತೊಮ್ಮೆ ಓದುತ್ತ ನನ್ನ ಸಮಯವನ್ನು ಸಾಹಿತ್ಯಕ್ಕೆ ವಿನಿಯೋಗಿಸುತ್ತಿದ್ದೇನೆ.
ಕೆಲವರು ಬಂದು , ಯಾಕೆ ನಿನ್ನ ಸಮಯವನ್ನು ಕಥೆ ,ಕಾದಂಬರಿ ಓದುತ್ತ ಸಮಯ ಹಾಲು ಮಾಡುತ್ತ ಕೂಡುತ್ತಿ .. ಆಫೀಸಿನ ಬಗ್ಗೆ ಜಾಸ್ತಿ ಓದು ಅದೇ ನಿಜಾವಾಗಿ ಸಹಾಯಕ್ಕೆ ಬರೋದು ಅನ್ನುತ್ತಾರೆ ..
ಇನ್ನು ಕೆಲವರು ಇಪ್ಪತ್ತರ ಹರೆಯ ಓದುವುದಲ್ಲ .. ಓದುವುದಕ್ಕೆ ಮುಪ್ಪಿನ ಕಾಲವಿದೆ.. ಆಗ ಕಥೆ ಕವಿತೆ ಹೀಗೆ ಓದುತ್ತ ಸಮಯ ಕಳೆಯಬವುದು ಅಂತೆಲ್ಲ ಹೇಳುತ್ತಾರೆ…

ನನ್ನ ಇಷ್ಟದ ಹಾಗೂ ವಾಸ್ತವ ನಡುವೆ ಸಿಲುಕಿರುವೆ… ನಾನು ಮಾಡುತ್ತಿರುವುದು ಸರಿಯೋ ತಪ್ಪೋ ನನಗೆ ಅರಿವಿಲ್ಲ.. ಪರದೇಶದ ಆಸೆ ನನಗಿಲ್ಲ , ಭಾಷೆ ಹಾಗೂ ತಾಯ್ನಾಡಿನ ಪ್ರೀತಿ ಹೇಳಿಕೊಳ್ಳುವ ತೋರಿಕೊಳ್ಳುವ ಆಸೆಯೂ ನನಗಿಲ್ಲ… ನನ್ನ ಆರ್ಥಿಕ , ಮಾನಸಿಕ ಸ್ಥಿತಿಗತಿಗಳ ಬಗ್ಗೆ ನನಗೆ ಅರಿವಿದೆ. ಆದರೂ .

ಒಮ್ಮೆ ಅನಿಸೋದು ! ನಾನ್ಯಾಕೆ ಬರೆಯಬೇಕು ? ಓದಬೇಕು ? ಎಲ್ಲರಂತೆಯೇ ನಾನಿಲ್ಲವೇಕೆ ? ಸಾಹಿತ್ಯ ಗೀಳು ಯಾಕಿಷ್ಟು ನನಗೆ ?……….

ಬದುಕನ್ನೇ ಬರೆಯುತ್ತೇನೆ .. ಬದುಕುತ್ತ ಬರೆಯುತ್ತೇನೆ.. ಅಷ್ಟು ಮಾತ್ರ ಗೊತ್ತು

 

PS: ಬೇಸರ ,ಅವರಸರದಲ್ಲಿ ಬರೆದ ಪೋಸ್ಟ್ .. ಮಿಸ್ಟೇಕ್ಸ್ ಇದ್ದರೆ ಕ್ಷಮಿಸಿ 

ಸ್ವಪ್ನವ ಸ್ಪರ್ಶಿಸೊ ಸೋಜಿಗ ನೀನು …

ಸ್ವಪ್ನವ ಸ್ಪರ್ಶಿಸೊ
ಸೋಜಿಗ ನೀನು
ಕಣ್ಣಲ್ಲೇ ಕೊಲ್ಲುವ
ಮಾಂತ್ರಿಕ ನೀನು
ಯಾಕಿಷ್ಟು ಕಾಯೋದು ನಾನು
ಒಮ್ಮೆಲೇ ಸಿಗಬಾರದೇ ನೀನು !

ಹಿಡಿಯಲು ನೀನು ನನ್ನ ಕೈಯ
ಮರೆವೆನು ನಾನು ನನ್ನ ಮೈಯ
ವಿರಹದಿ ಮೂಡಿರಲು ಗಾಯ
ನಿನ್ನ ಕಂಡಕ್ಷಣವೇ ಮಾಯ!
ನಿನ್ನ ನೆನಪೇ ನನ್ನ ಉಳಿತಾಯ
ಅದನ್ನೂ ದೂಚು ಬಾ ಇನಿಯ…

ನಲ್ಮೆಯ ನೌಕೆಯ
ನಾವಿಕ ನೀನು
ವಿಸ್ಮಯ ಲೋಕದ
ನಾಯಕ ನೀನು
ಮತ್ತೆಷ್ಟು ಕಾಯೋದು ನಾನು
ನನ್ನಲ್ಲೇ ಸಿಗಬಾರದೇ ನೀನು !

ಸಂಜೆ…

ಒಂಟಿ ಹೃದಯಗಳನು
ಸುಮ್ಮನೆ ಸೋಕಿ
ತಂಪೆರದು ಹೋಗುವ
ತಂಗಾಳಿ!

ಅಪರಿಚಿತವರನ್ನು
ಪರಿಚಿತರನ್ನಾಗಿಸುವ
ಪಾರ್ಕಿನ ಮೂಲೆಯಲ್ಲಿನ
ಅಪರಿಚಿತ ಬೆಂಚು!

ಭಾವದ ಅಲೆಗಳು!

ಮುಂಗುರಳ ಸರಿಸಿ ನೀನು ನೋಡಿದರೆ ನನ್ನನು …

ಮುಂಗುರಳ ಸರಿಸಿ ನೀನು
ನೋಡಿದರೆ ನನ್ನನು
ಇರಬಹುದೇ ನಾನು
ಪ್ರೇಮಿಸದೇ ನಿನ್ನನು
ಮನಸಿನ ಅರಮನೆ
ಉದ್ಘಾಟಿಸು ನೀನು
ಕನಸಿನ ಸಿಂಹಾಸನ
ಆಲಂಕರಿಸು ನೀನು !
ಈ ಒಲವಿಗೆ ನೂತನ
ಆಯಾಮ ನೀನು
ನಿನ್ನ ಗುಲಾಮ ನಾನು..
ನಿನ್ನ ಗುಲಾಮ ನಾನು !!

ಮುಂಗುರಳ ಸರಿಸಿ ನೀನು
ನೋಡಿದರೆ ನನ್ನನು …

ಮೊದಲ ಸಲ ನಿನ್ನ ನೋಡಿದಾಗ
ಎಲ್ಲ ಖುಷಿಯೂ ಒಮ್ಮೆಲೇ
ಸಿಕ್ಕಂತಾಯಿತು ಹೃದಯಕ್ಕೆ
ಬಿಡದೆ ನೀ ಹೀಗೆ ಕಾಡಿದಾಗ
ಪ್ರತಿ ಕನಸಲ್ಲಿಯೂ ಹೂಮಳೆ
ಮತ್ತೇನು ಬೇಕು ಪ್ರಣಯಕ್ಕೆ ?

ಒಲವಿನ ನೂತನ ಆಯಾಮ ನೀನು
ನಿನ್ನ ಗುಲಾಮ ನಾನು
ನಿನ್ನ ಗುಲಾಮ ನಾನು