ಸ್ವಪ್ನವ ಸ್ಪರ್ಶಿಸೊ
ಸೋಜಿಗ ನೀನು
ಕಣ್ಣಲ್ಲೇ ಕೊಲ್ಲುವ
ಮಾಂತ್ರಿಕ ನೀನು
ಯಾಕಿಷ್ಟು ಕಾಯೋದು ನಾನು
ಒಮ್ಮೆಲೇ ಸಿಗಬಾರದೇ ನೀನು !
ಹಿಡಿಯಲು ನೀನು ನನ್ನ ಕೈಯ
ಮರೆವೆನು ನಾನು ನನ್ನ ಮೈಯ
ವಿರಹದಿ ಮೂಡಿರಲು ಗಾಯ
ನಿನ್ನ ಕಂಡಕ್ಷಣವೇ ಮಾಯ!
ನಿನ್ನ ನೆನಪೇ ನನ್ನ ಉಳಿತಾಯ
ಅದನ್ನೂ ದೂಚು ಬಾ ಇನಿಯ…
ನಲ್ಮೆಯ ನೌಕೆಯ
ನಾವಿಕ ನೀನು
ವಿಸ್ಮಯ ಲೋಕದ
ನಾಯಕ ನೀನು
ಮತ್ತೆಷ್ಟು ಕಾಯೋದು ನಾನು
ನನ್ನಲ್ಲೇ ಸಿಗಬಾರದೇ ನೀನು !