Month: September 2016

ಕವಿತೆ ಎಂದರೆ ಹಾಗೇ.

ಕವಿತೆ-ಎಂದರೆ-ಹಾಗೇ-2

ಭಾವಶರಧಿ

ಕವಿ ಮನಸಿಗೆ
ಹಿಡಿದ ಕನ್ನಡಿ..

ಮಳೆಯಲಿ ನನ್ನ ಜೊತೆ ನಾಲ್ಕು ಹೆಜ್ಜೆ ಹಾಕಿ
ಮರಳಿ ಅವಳ ಮನೆಗೆ ಹೋಗುವಾಗ
ನನ್ನತ್ತ ತಿರುಗಿ ತಿರುಗಿ
ಅವಳು ನೋಡುವ ಪರಿ !

ನಡುಗುವ ಚಳಿಯಲ್ಲೂ
ಹೃದಯ ಸುಡುವ ವಿರಹ !

ನಾವಿಬ್ಬರು ಜೊತೆಗೆ ನಡೆಯುವಾಗ
ನನ್ನ ಕೈಯನ್ನು ಅವಳು ಹಿಡಿದಾಗ
ಆ ಕ್ಷಣ ನನಗಾದ ರೋಮಾಂಚನ
ಅದುಕುತ್ತರವಾದ ಅವಳ ಮುದ್ದು ಮೌನ!

View original post

ಕವಿತೆ ಎಂದರೆ ಹಾಗೇ..

ಕವಿತೆ ಎಂದರೆ ಹಾಗೇ…

ಕವಿತೆ ಎಂದರೆ ಹಾಗೇ…

View original post

ಬದುಕು

ಬದುಕು..

ಭಾವಶರಧಿ

ಬದುಕು
ಕಾಡಿನಷ್ಟೇ ನಿಗೂಢ
ನಾಡಿನಷ್ಟೇ ಬೆತ್ತಲೆ!

View original post

ಮುಕ್ತ ಮುಕ್ತ ..!

ಮುಕ್ತ-ಮುಕ್ತ

ಭಾವಶರಧಿ

FotorCreated

View original post

ಮೋದಿಯವರೇ.. ನಮಗೂ ಒಸಿ ಅಚ್ಛೇ ದಿನ ಕೊಡಿ ಸ್ವಾಮಿ! ನಾವೂ ಭಾರತದವರೇ…

ಪ್ರೀತಿಯ ಕಮಲ ಪಕ್ಷವೇ….
ಕಳೆದ ವಿಧಾನಸಭೆ ಹಾಗೂ ಲೋಕಸಭಾ ಚುನಾವಣೆಯಲ್ಲಿ ಮೋದಿಯನ್ನು ಕರೆಸಿ ಕನ್ನಡಿಗರಿಗೆ ” ಒಳ್ಳೆಯ ದಿನಗಳು ಇನ್ಮುಂದೆ ” ಎಂದು ಅವರಿಂದ ಭಾಷಣ ಕೊಡಿಸಿ, ರಾಜ್ಯದ ಜನರಿಗೆ ಹುಸಿ ನಂಬಿಕೆ ಕೊಟ್ಟಿರಿ.
ರಾಜ್ಯದ ಜ್ವಲಂತ ಸಮಸ್ಯಗಳಿಗೆ ಪರಿಹಾರ ಕೊಡುಸುತ್ತಿರಿ ಎಂದು ನಂಬಿ ( ನಿಮ್ಮನ್ನಲ್ಲ, ಮೋದಿಯವರನ್ನ ನಂಬಿ ) ಲೋಕಸಭೆ ಚುನಾವಣೆಯಲ್ಲಿ 17 ಸಂಸದರನ್ನು ಗೆಲ್ಲಿಸಿದ ಕನ್ನಡಿಗರಿಗೆ ನೀವು ಕೊಡುವ ಬೆಲೆ ಇದೇನಾ ?
ನೀರಿನ ವಿಷಯಕ್ಕೆ ಆ ಡುಮ್ಮಿ (ಮಮ್ಮಿ ಅನ್ನಲೂ ಅವಳು ಯೋಗ್ಯಳಲ್ಲ )ಕನ್ನಡಿಗರನ್ನ ಪದೇ ಪದೇ ಕೆಣುಕುತ್ತ ನಮ್ಮ ರಾಜ್ಯದ ರೈತರಿಗೆ ಮಾಡುತ್ತಿರುವ ಅನ್ಯಾಯ ನಿಮಗೆ ಕಾಣುಸಿತ್ತಿಲ್ಲವೇ ?
ರೈತರ ಮೇಲೆ ಪ್ರಮಾಣ ಮಾಡಿ ಸಿಎಂ ಆದರೊಬ್ಬರು ಇಂದು ಅವ್ರಿಗೆ ತಮ್ಮ ರಾಜಕೀಯದ ಹೀತಾಸಕ್ತಿಯೇ ಮುಖ್ಯವಾಯಿತು ಹೊರತು ರಾಜ್ಯದ ರೈತರ ಸಮಸ್ಯೆ ಅಲ್ಲ .. ಇನ್ನೊಬ್ರು ಪೇಪರ್ ನಲ್ಲಿ ತಮ್ಮ ರಾಜಾರೋಷ ತೋರಿಸುವ , ಮೋದಿಯವರಿಗೆ ನಿಕಟವರ್ತಿ ಎಂದೇ ಬಿಂಬಿತವಾದ ಸಿಂಹ ಅವರಿಗೆ ಕೂಡ ರೈತರ ಕೂಗು ಕೇಳಿಸುತ್ತಿಲ್ಲ ಅನ್ಸುತ್ತೆ
ಉತ್ತರ ಕರ್ನಾಟಕದ ಮಹಾದಾಯಿ ಯೋಜನೆ ಸಮಸ್ಯೆ ಹಾಗೂ ಕಾವೇರಿ ನೀರಿನ ಸಮಸ್ಯೆಯನ್ನ ದಯವಿಟ್ಟು ದಯವಿಟ್ಟು ಮೋದಿಯವರಿಗೆ ತಲುಪಿಸಿ ರಾಜ್ಯಕ್ಕೆ ನ್ಯಾಯ ಒದಗಿಸಿ
ಮೋದಿಯವರೇ .. ನಮಗೂ ಒಸಿ ಅಚ್ಛೇ ದಿನ ಕೊಡಿ ಸ್ವಾಮಿ .. ನಾವೂ ಭಾರತದವರೇ..

ನಾನೊಬ್ಬ ಅನಾಥ

ನಾನೊಬ್ಬ ಅನಾಥ

ಭಾವಶರಧಿ

ನಾನು ಆರು ತಿಂಗಳು ಕೂಸಿದ್ದಾಗ ನನ್ನ ಹಡೆದವ್ವ ನನ್ನನ್ನು ಬಡತನದ ತೊಟ್ಟಿಲಲ್ಲಿ ನನ್ನ ತೂಗಲು ಇಚ್ಚಿಸದೆ ಮೆಜೆಸ್ಟಿಕ್ ಬಸ್ ನಿಲ್ದಾಣದ ಮೂಲೆಯಲ್ಲಿನ ಒಂದು ಕಸದ ತೂಟ್ಟಿಯಲ್ಲಿ ನನ್ನ ಬಿಟ್ಟು ಅವಳು ತನ್ನ ಜೀವವನ್ನೇ ಬಿಟ್ಟಳಂತೆ!.

ಕಂಕುಳಲ್ಲಿ ಎಂಟು ತಿಂಗಳ ಮಗಳಿದ್ದರೂ ಕಸದ ತೊಟ್ಟಿಲಲ್ಲಿ ಎಡಬಿಡದೆ ಅಳುತ್ತಿದ್ದ ನನ್ನ ಎತ್ತಿಕೊಂಡು ಮುದ್ದಿಸಿ ತನ್ನ ಎದೆ ಹಾಲು ಕೊಟ್ಟು ಸಂತೈಸಿ ತನ್ನ ಮಗನಂತೆ ಮೂರು ವರ್ಷಗಳ ಕಾಲ ನನ್ನ ಸಾಕಿದ ನನ್ನ ಸಾಕವ್ವನ ಹೆಸರು ಲಕ್ಷಮ್ಮ .ಅವಳದ್ದು ಬ್ರಾಹ್ಮಣ ಜಾತಿ. ಎಷ್ಟೇ ಆದರೂ ನಾನು ಬೀದಿ ಮಗುವಲ್ಲವೇ ಲಕ್ಷಮ್ಮನ ಗಂಡನಿಗೆ ನಾನೆಂದರೆ ಇಷ್ಟವಿರಲಿಲ್ಲ . ನನ್ನನ್ನು ಹೊಡೆಯುವುದು ,ಬೈಯುವುದು ಮಾಮೂಲಿ ಆಗಿತ್ತು. ಆದರೂ ಒಂದು ದಿನ ಅವನು ಲಕ್ಷಮ್ಮನ ಜೊತೆ ಜಗಳವಾಡಿ ಅವಳಿಗೆ ಹೊಡೆದು ನನಗೆ ನಿದ್ದೆ ಮಾತ್ರೆ ಕೊಟ್ಟು ಬೆಂಗಳೂರಿನಿಂದ ಚೆನ್ನೈಗೆ ಹೋಗುತ್ತಿದ್ದ ಬಸ್ಸಿನಲ್ಲಿ ನನ್ನ ಕೂರಿಸಿ ಹೊರಟು ಹೋಗಿದ್ದ .

ಕಣ್ಣು ಬಿಟ್ಟರೆ ಇಕ್ಬಾಲ್ ಎನ್ನುವರ ಮನೆಯಲಿದ್ದೆ . ಬಸ್ಸಿನಲ್ಲಿ ಸತ್ತಂತೆ ಮಲಗಿದ್ದ ನನ್ನನ್ನು ಎತ್ತುಕೊಂಡು ಮನೆಗೆ ತಂದಿದ್ದರು.ಇಕ್ಬಾಲ್ ಗೆ ಮಕ್ಕಳಿರಲಿಲ್ಲ ಹೆಂಡತಿ ತೀರಿಹೋಗಿದ್ದರು.ಆಟೋರಿಕ್ಷಾ ಅವರ ಜೀವನೋಪಾಯ.
ಅವರದ್ದು ಮುಸ್ಲಿಂ ಧರ್ಮವಾಗಿದ್ದರೂ ನನ್ನನ್ನು ಎಂದಿಗೂ ಮಸೀದಿಗೆ ಕರೆದುಕೊಂಡು ಹೋದವರಲ್ಲ. ಮನೆಯಲ್ಲಿಯೇ ಎಲ್ಲ ಧರ್ಮದ ದೇವರುಗಳ ಫೋಟೋ ಇಟ್ಟಿದ್ದರು. ಯಾವ ದೇವರ ಮೇಲಾದರೂ ನಂಬಿಕೆ ಇಡು ಆದರೆ ಮಾನವೀಯತೆ ಮಾತ್ರ ಮರಿಬೇಡ ಎಂಬ ಭೋದನೆ ಅವರದ್ದು. ನಿಜವಾದ ಅಪ್ಪನ ಪ್ರೀತಿ ಸಿಕ್ಕಿದ್ದು ಅವರಿಂದಲೇ.
ಆಗ ಆರು ವರ್ಷ ನನಗೆ .ಒಂದು ದಿನ ರಸ್ತೆ ಅಪಘಾತದಲ್ಲಿ…

View original post 302 more words

ರೂಮಿ ಕವನಗಳು -2

ರೂಮಿ ಕವನಗಳು…

ಭಾವಶರಧಿ

ನಮ್ಮ ಬದುಕಿನಲ್ಲಿ
ಅತೀ ಮುಖ್ಯ ಕೆಲಸವೆಂದರೆ
“ಅತೀ ಮುಖ್ಯವಾದ ಕೆಲಸ ಹುಡುಕುವುದು”

ನಿನ್ನ ನೆನೆಯಬಾರದೆಂದು
ಎಷ್ಟೇ ಅಂದುಕೊಂಡರೂ
ನಿನ್ನನ್ನೇ ನೆನೆಯುತಿರುವೆ
ಕಣ್ಣಿರಿನಿಂದ ಕೆನ್ನೆ ನೆನೆಸುತ

ಧರ್ಮವೆಂದರೆ
ಹುಟ್ಟಿ ಬಾಳಿ ಪಶ್ಚಾತ್ತಾಪವಿಲ್ಲದೆ ಸಾಯುವುದು

ಒಬ್ಬ ವೈರಿಯನ್ನು ಕ್ಷಮಿಸುವುದುಕ್ಕಿಂತ
ಒಬ್ಬ ಗೆಳೆಯನನ್ನು ಕ್ಷಮಿಸುವುದು ಕಷ್ಟ

ತೆರೆದಿಡು ಕೈಗಳನ್ನು
ನಿನ್ನ ಕೈಹಿಡಿದು ನಡೆಸಬೇಕಾದರೆ

ಮೌನವೊಂದೆ ಭಗವಂತನ ಭಾಷೆ
ಮಿಕ್ಕಿದ್ದೆಲ್ಲ ಅದರ ಕಳಪೆ ತರ್ಜುಮೆ (ಅನುವಾದ )

 ನಿನ್ನನ್ನೇ ನೀನು ಒಂದು ಜೀವಂತ ಕವಿತೆಯನ್ನಾಗಿಸು

ಪ್ರತಿ ಉಳಿಪೆಟ್ಟಿಗೂ ನೋವು ಅಂದರೆ ಶೀಲೆ ಆಗುವುದೆಂತು ?

ನಾನು ಕತ್ತಲಿನ ಗುಲಾಮನಲ್ಲ
ನಾನು ಬೆಳಕಿನ ಗುಲಾಮ

View original post

ಮತ್ತೆ ಕವಿಯಾಗುವ ಆಸೆ

ಮತ್ತೆ ಕವಿಯಾಗುವ ಆಸೆ

ಭಾವಶರಧಿ

ಮತ್ತೆ ಕವಿಯಾಗುವ ಆಸೆ
ನನ್ನೊಳಗಿನ ಉಸಿರಾಡುವ ಯೋಚನೆಗಳಿಗೆ
ಮಾತು ಕಲಿಸಿ
ಬದುಕಿದ್ದು ಸತ್ತಂತಿರುವ ನನ್ನೊಳಗಿನ ಅದೆಸ್ಟೋ
ಕನಸುಗಳಿಗೆ ಜೀವ ಕೊಡಿಸಿ.

ಸೇರಬಹುದೇ ನಾನು ಕವನದೊಳು ? ಕರಗಬಹುದೇ ನಾನು ?
ಕರಗಿ ಕವಿತೆಯಾಗಬಹುದೇ ನಾನು

View original post

ಮೊದಲ ಪ್ರೀತಿಯ ಮಧುರ ಕ್ಷಣಗಳು – ೧

#throwback

ಭಾವಶರಧಿ

ಮಳೆಹನಿಗಳಷ್ಟೇ ಸಾಕ್ಷಿಯಾಗಿದ್ದ ಕ್ಷಣಗಳವು. ಬೀಸಿದ ಗಾಳಿಗೆ ಅವಳ ಕಣ್ಣಿಗೆ ಅಡ್ಡ ಬಂದಮುಂಗುರುಳನ್ನು ಸರಿಸುತ್ತ, ಅವಳು ನನ್ನತ್ತ ನೋಡುವಾಗಲೆಲ್ಲ ಎದೆಯೊಳಗೆ ಯಾರೋ ಸಹಿ ಮಾಡಿದಂತಾಗುತ್ತಿತ್ತು. ಅವಳ ತುಟಿಗಳು ನನಗೆ ಏನೋ ಹೇಳಲು ಆತುರಿಸುತ್ತಿದ್ದವು ಎನ್ನುಸುತ್ತಿತ್ತು ಆದರೆ ಅವಳು ಮಾತ್ರ ಮೌನದ ಮಾತಾಗಿದ್ದಳು. ಅವಳು ನನ್ನ ಪ್ರೀತಿಯನ್ನು ಒಪ್ಪುವಳೇ ? ಅಥವಾ ಇರುವ ಸ್ನೇಹವನ್ನೂ ತ್ಯಜಿಸಿ ನನ್ನಿಂದ ದೂರವಾಗುವಳೋ ಎಂಬ ಭಯ ನನಗೆ ಕಾಡುತ್ತಿತ್ತು.ಕಳೆದ ಹತ್ತು ನಿಮಿಷಗಳ ಕಾಲ ನಮ್ಮ ಕಣ್ಣುಗಳಷ್ಟೇ ಮಾತಾಡಿದ್ದವು.
ಕೊನೆಗೂ ಏನೋ ಹೇಳಲು ಹತ್ತಿರ ಬಂದಳು. ಅವಳ ಕಣ್ಣುಗಳಷ್ಟೇ ನಾನು ನೋಡುತಲಿದ್ದೆ.
ಅವಳ ಹೃದಯದ ಬಡಿತ ನನಗೂ ಕೆಳುವಂತಿತ್ತು. ಕೊನೆಗೂ ಮೌನ ಮುರಿದು ನನ್ನ ಕೈಬೆರಳುಗಳನ್ನು ಬಿಗಿ ಹಿಡಿದು
ಗದ್ಗತಿತಳಾಗಿ ‘ಐ ಲವ್ ಯೂ ‘ಎಂದೂ ಹೇಳಿಯೇ ಬಿಟ್ಟಳು!
ನದಿಗಳು ಸಮುದ್ರ ಸೇರಿದಂತೆ ,ಮೊಗ್ಗು ಹೂವಾಗಿ ಜೇನಾದಂತೆ, ಇರುಳಿಗೆ ಬೆಳದಿಂಗಳು ಜೊತೆಯದಂತೆ ನನ್ನ ಹೃದಯ ಸಂಭ್ರಮಿಸಿತ್ತು!

ಆ ಕ್ಷಣಗಳು ಇನ್ನು ಬಾಕಿಇವೆ….

View original post

ಒಂದಿಷ್ಟು ಪ್ರೇಮ ಹನಿಗಳು – 2

ಅರಳಿದ ಹೂವು ನಕ್ಕಂತ ನಗು ನಿನ್ನದು..
ಸುರಿದ ಮಳೆಗೆ ಕುಣಿಯುವ ನವಿಲಂತೆ
ನಿನ್ನ ನಯನವು..
ಎಳೆಬಿಸಿಲು ಎಲ್ಲೆಲ್ಲೂ ನಿನ್ನ ಹುಡುಕಿ
ಕೊನೆಗೆ ನಿನ್ನ ಕೆನ್ನೆ ಮೇಲೆ ಬಿದ್ದಂತಿದೆ..
ಮುಂಜಾನೆಯ ಮಂಜಿನ ಹಾಗೆ ಹಿತವಾಗಿದೆ..
ನಿನ್ನ ಮುಗುಳ್ನಗೆಗೆ ಈ ಮುಂಜಾವೆ ಪ್ರಾಯೋಜಿತ
ನೀ ನಕ್ಕರೆ ಭುವಿಯೇ ನಕ್ಕಂತೆ…..

ಏಕೆ ಬೇಜಾರು ನಿನಗೆಂದೇ
ಬರೆಯುವೆ ಮೊತ್ತೊಂದು ಸಾಲು..
ಸಾವಿರ ನನ್ನ ಕವಿತೆಗಿಂತ
ನಿನ್ನ ಮುದ್ದು ಮೌನವೇ ಎಲ್ಲಕಿಂತ ಮಿಗಿಲು.. ನನ್ನೆದೆಯ ಮುಗಿಲು..
ಕನಸಿನ ಮನೆಗೆ ಬಾಗಿಲು..
ಇರಲಿ ಆ ತುಂಟು ಕೋಪ ಎಂದಿಗೂ ನನ್ನೊಂದಿಗೆ ಹೀಗೆ
ಪ್ರತಿಕ್ಷಣವೂ ನನ್ನದೆಯಲಿ ಮೂಡುತಿರುವ ನಿನ್ನ ದಿವ್ಯ ಮೊಗದ ಹಾಗೆ
ಬೇರೇನು ಬೇಕು ನನಗೆ ಸ್ನೇಹ ನದಿಯ ಬಿಟ್ಟು
ನಿನಾದರೆ ಕಡಲು, ತೀರವೇ ನನ್ನ ಹೃದಯ
ಅಪ್ಪಿಕೋ ನನ್ನನು, ಅಲೆಯು ತೀರವನ್ನು ಅಪ್ಪಳಿಸುವಂತೆ…