ಬದುಕೊಂದು ಕವನ ಸಂಕಲನ…
ಬದುಕೊಂದು ಕವನ ಸಂಕಲನ
ಹುಟ್ಟು ಮುನ್ನುಡಿ
ಸಾವು ಬೆನ್ನುಡಿ
ನಿಮ್ಮ ಹೆಸರೇ ಶೀರ್ಷಿಕೆ
ಕನಸುಗಳೇ ಪರಿವಿಡಿ
ದಿನಗಳೇ ಪುಟಗಳು
ಪ್ರತಿದಿನವೂ ಹೊಸ ಪದ್ಯಗಳು
ಪದ್ಯದ ಪದಗಳೇ ಅನುಭವಗಳು
ಭಾವಗಳೇ ಸಂಬಂಧಗಳು
ಪುಟಗಳು ತಿರುವಿದಂತೆ
ಬೆನ್ನುಡಿಗೆ ಸನಿಹ..
ಬೆನ್ನುಡಿಗೆ ಸನಿಹವಾದಂತೆ
ಮತ್ತೇ ಓದಬೇಕೆಂಬ ಹಂಬಲ
ಏನೂ ಮಾಡಲಾಗದ ಅಸಹಾಯಕತೆ!
‘ಅರ್ಪಣೆ’ ಅಡಿಯಲ್ಲಿ ಒಂದೆರಡು ಹೆಸರುಗಳು .
ಕಣ್ಣೀರು ಜಿನುಗಿಸುವ ಭಾವಗೀತೆಗಳು
ನಗಿಸುವ ಹನಿಗವನಗಳು
ಚಾಟಿಮಾತಿನ ತ್ರಿಪದಿಗಳು
ಮಾತು ಕಲಿಸಿದ ವಚನಗಳು!
ಕೊರಗುವ /ಕರಗುವ ಕಥೆ/ವ್ಯಥೆಗಳು
ಒಬ್ಬಬರದ್ದು ಒಂದೊಂದು ಪ್ರಕಾರಗಳು
ಹೊತ್ತಿಗೆ ಮೇಲೆ ಹೊದಿಸಿದ ವಿಧವಿಧ ಆಕಾರ/ವಿಕಾರಗಳು
ಆದರೆ….
ಈ ಹೊತ್ತಿಗೆಯನ್ನು ಮುದ್ರಿಸಿದವರು ಪಾಲಕರು
ಬರೆದವರು ಮಾತ್ರ “ದೇವರು”
Badukondu jaali mara , hattalu agadu , iliyalu agadu, bahala husharagirabeku…
ಬದುಕೊಂದು ಕವನ ಸಂಕಲನ…..
ತುಂಬಾ ಅರ್ಥವತ್ತಾದ ಕವನ….
ಮುನ್ನುಡಿ, ಹಿನ್ನುಡಿ, ಬೆನ್ನುಡಿಗಳ
ಅರ್ಥಪೂರ್ಣ ಸಮ್ಮೇಳನ
👌👌👌👌👌👌👍👍👍
💐💐💐💐💐💐💐💐💐💐